ಬ್ರೇಕಿಂಗ್ ನ್ಯೂಸ್
12-05-23 02:39 pm Source: news18 ಸಿನಿಮಾ
'ದಿ ಕೇರಳ ಸ್ಟೋರಿ' ಸಿನಿಮಾಕ್ಕೆ ಬಿಜೆಪಿ ಬೆಂಬಲ ವ್ಯಕ್ತಪಡಿಸಿದರೆ, ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ಭಾರತೀಯ ಜನತಾ ಪಕ್ಷದ ನೇತೃತ್ವದ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಸರ್ಕಾರಗಳು 'ದಿ ಕೇರಳ ಸ್ಟೋರಿ' ಸಿನಿಮಾವನ್ನು ತೆರಿಗೆ ಮುಕ್ತಗೊಳಿಸಿ ಎಂದು ಈಗಾಗ್ಲೇ ಘೋಷಿಸಿವೆ.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ಚಲನಚಿತ್ರವನ್ನು ಬೆಂಬಲಿಸಿದ್ದಾರೆ ಮತ್ತು ಇತರ ರಾಜ್ಯಗಳು ಇದನ್ನು ಅನುಸರಿಸಲು ಕರೆ ನೀಡಿದ್ದಾರೆ. ಆದಾಗ್ಯೂ, ಬಂಗಾಳ ಮತ್ತು ತೆಲಂಗಾಣದಲ್ಲಿ ಆಡಳಿತಾರೂಢ ತೃಣಮೂಲವು ಕೋಮು ಸೌಹಾರ್ದತೆ ಕಾರಣ ನೀಡಿ ಚಿತ್ರ ಪದರ್ಶನವನ್ನು ರದ್ದು ಗೊಳಿಸಿವೆ.
ಪರ-ವಿರೋಧದ ನಡುವೆ ಚಲನಚಿತ್ರವನ್ನು ತೆರಿಗೆ-ಮುಕ್ತಗೊಳಿಸಿದ ಮೊದಲ ರಾಜ್ಯ ಮಧ್ಯಪ್ರದೇಶವಾಗಿದೆ. ಇನ್ನೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕೂಡ ರಾಜ್ಯದಲ್ಲಿ ಚಿತ್ರಕ್ಕೆ ಇದೇ ರೀತಿಯ ವಿನಾಯಿತಿ ನೀಡಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಸುಮಾರು ಸಿನಿಮಾಗಳಿಗೆ ಈ ರೀತಿ ತೆರಿಗೆ ವಿನಾಯಿತಿಯನ್ನು ಸರ್ಕಾರಗಳು ಘೋಷಣೆ ಮಾಡುತ್ತವೆ. ಕಳೆದ ವರ್ಷ ಬಿಡುಗಡೆಯಾಗಿದ್ದ ವಿವೇಕ್ ಅಗ್ನಿಹೋತ್ರಿ ಅವರ 'ದಿ ಕಾಶ್ಮೀರ್ ಫೈಲ್ಸ್ ಸಿನಿಮಾಕ್ಕೂ ಸಹ ರಾಜಕೀಯ ಬೆಂಬಲ ವ್ಯಕ್ತವಾಗಿದ್ದು, ಬಹುತೇಕ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೇ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ತೆರಿಗೆ ಮುಕ್ತ ಸಿನಿಮಾ ಎಂದು ಘೋಷಣೆ ಮಾಡಲಾಗಿತ್ತು.
ಏನಿದು 'ತೆರಿಗೆ ಮುಕ್ತ' ಸಿನಿಮಾ ?
ಒಂದು ಸಿನಿಮಾವನ್ನು ತೆರಿಗೆ ಮುಕ್ತಗೊಳಿಸಲು ಅಥವಾ ತೆರಿಗೆ ವಿನಾಯಿತಿ ಪಡೆಯಲು ಯಾವುದೇ ಒಂದು ಮಾನದಂಡ ಎಂಬುವುದು ಇಲ್ಲ. ಒಂದು ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡಬೇಕೇ ಅಥವಾ ತೆರಿಗೆ ಮುಕ್ತಗೊಳಿಸಬೇಕೇ ಎಂದು ನಿರ್ಧಾರ ಮಾಡುವುದು ರಾಜ್ಯ ಸರ್ಕಾರವಾಗಿದೆ. ಚಲನಚಿತ್ರವನ್ನು ತೆರಿಗೆ ಮುಕ್ತಗೊಳಿಸುವುದು ಎಂದರೆ ನೀವು ಉಚಿತವಾಗಿ ಟಿಕೆಟ್ ಪಡೆಯುತ್ತೀರಿ ಎಂದಲ್ಲ. ಆದಾಗ್ಯೂ ಇದು ನಿರ್ಮಾಪಕರು ಅಥವಾ ಚಿತ್ರಮಂದಿರಗಳಲ್ಲಿ ಚಿತ್ರವನ್ನು ಪ್ರದರ್ಶಿಸುವವರ ನಿರ್ಧಾರವಾಗಿರುತ್ತದೆ.
ಸಿನಿಮಾವನ್ನು ತೆರಿಗೆ ಮುಕ್ತ ಎಂದು ಘೋಷಿಸಿದಾಗ ಟಿಕೆಟ್ ದರವು ಅಗ್ಗವಾಗುತ್ತದೆ. ಇದರ ಅರ್ಥವೇನೆಂದರೆ ಈ ತೆರಿಗೆ ಮುಕ್ತ ಘೋಷಣೆ ಮಾಡಿದ ರಾಜ್ಯವು ಮನರಂಜನಾ ತೆರಿಗೆಯನ್ನು ಮನ್ನಾ ಮಾಡಿದೆ ಎಂದರ್ಥ. ಆದ್ದರಿಂದ ಟಿಕೆಟ್ಗಳು ರಿಯಾಯಿತಿಯಲ್ಲಿ ಲಭ್ಯವಿರುತ್ತವೆ. ಭಾರತದಲ್ಲಿ, ರಾಜ್ಯಗಳು ಚಲನಚಿತ್ರಗಳ ಪ್ರದರ್ಶನದ ಮೇಲೆ ತೆರಿಗೆಯನ್ನು ವಿಧಿಸುತ್ತವೆ ಮತ್ತು ಈ ವೆಚ್ಚವನ್ನು ಟಿಕೆಟ್ಗೆ ಸೇರಿಸಲಾಗುತ್ತದೆ.
ಸರಕು ಮತ್ತು ಸೇವಾ ತೆರಿಗೆಯ ಅಡಿಯಲ್ಲಿ, ಚಲನಚಿತ್ರ ಟಿಕೆಟ್ಗಳಿಗೆ ಶೇಕಡಾ 18 (₹ 100 ಕ್ಕಿಂತ ಹೆಚ್ಚು ವೆಚ್ಚವಾಗಿದ್ದರೆ) ಅಥವಾ ಶೇಕಡಾ 12 (₹ 100 ಕ್ಕಿಂತ ಕಡಿಮೆ ಬೆಲೆಯಿದ್ದರೆ) ತೆರಿಗೆ ವಿಧಿಸಲಾಗುತ್ತದೆ.
ರಾಜ್ಯ ಸರ್ಕಾರವು ಒಂದು ಸಿನಿಮಾವನ್ನು ತೆರಿಗೆ ಮುಕ್ತ ಎಂದು ಘೋಷಣೆ ಮಾಡಿದಾಗ ರಾಜ್ಯದ ಜಿಎಸ್ಟಿ ಮಾತ್ರ ಕಡಿತವಾಗುತ್ತದೆ. ಕೇಂದ್ರ ಸರ್ಕಾರದ ಜಿಎಸ್ಟಿ ಹಾಗೆಯೇ ಇರುತ್ತದೆ. ಟಿಕೆಟ್ ದರದ ಆಧಾರದಲ್ಲಿ ಸುಮಾರು ಶೇಕಡ 6ರಿಂದ ಶೇಕಡ 9ರವರೆಗೆ ತೆರಿಗೆ ವಿನಾಯಿತಿ ಲಭ್ಯವಾಗಲಿದೆ.
ಮೇಲೆ ಗಮನಿಸಿದಂತೆ, ರಾಜ್ಯಗಳು ಈ ನಿರ್ಧಾರವನ್ನು ಪರಸ್ಪರ ಮತ್ತು ಕೇಂದ್ರದಿಂದ ಸ್ವತಂತ್ರವಾಗಿ ತೆಗೆದುಕೊಳ್ಳಬಹುದು. ರಾಜ್ಯ ಸರ್ಕಾರವು ಆ ಸಿನಿಮಾದಲ್ಲಿ ಯಾವ ವಿಚಾರವನ್ನು ಪ್ರಸ್ತುತಪಡಿಸಲಾಗಿದೆ ಎಂಬ ಆಧಾರದಲ್ಲಿ ಸಿನಿಮಾವನ್ನು ತೆರಿಗೆ ಮುಕ್ತ ಎಂದು ಘೋಷಣೆ ಮಾಡುತ್ತದೆ.
ಸಾಮಾನ್ಯವಾಗಿ ಒಂದು ಸಿನಿಮಾವು ಸಾಮಾಜಿಕವಾಗಿ, ಸ್ಪೂರ್ತಿದಾಯಕ ಕಥೆ, ಪ್ರವಾಸೋದ್ಯಮ ಅಥವಾ ಸ್ಥಳೀಯ ಉದ್ಯಮದ ಪ್ರಚಾರದಂತಹ ಸಿನಿಮಾಗಳಲ್ಲಿ ರಾಜ್ಯ ಸರ್ಕಾರವು ಸಿನಿಮಾವನ್ನು ತೆರಿಗೆ ವಿನಾಯಿತಿ ಅಥವಾ ತೆರಿಗೆ ಮುಕ್ತ ಎಂದು ಘೋಷಣೆ ಮಾಡಬಹುದು.
ಒಂದು ಸಿನಿಮಾಕ್ಕೆ ಸರ್ಕಾರವು ತೆರಿಗೆ ವಿನಾಯಿತಿ ಘೋಷಣೆ ಮಾಡಿದಾಗ ಆ ಸಿನಿಮಾದ ಇಮೇಜ್ ಮತ್ತು ಪ್ರಚಾರ ಹೆಚ್ಚಾಗಲಿದೆ. ಈ ಸ್ಥಿತಿಯು ಚಿತ್ರದ ಆರ್ಥಿಕ ಯಶಸ್ಸಿನ ಮೇಲೆ ನೇರ ಪರಿಣಾಮ ಬೀರದಿರಬಹುದು ಆದರೆ ಇದರಿಂದ ಚಲನಚಿತ್ರೋದ್ಯಮ ಗಮನಾರ್ಹವಾದ ಉತ್ತೇಜನವನ್ನು ಕಾಣಬಹುದು.
the kerala story movie tax free in some states what is tax free declaration.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm