ಬ್ರೇಕಿಂಗ್ ನ್ಯೂಸ್
17-03-23 02:16 pm Source: news18 ಸಿನಿಮಾ
ಅಪ್ಪು ಅಗಲಿಕೆ ನಂತರ ಅಭಿಮಾನಿಗಳು ಇಂದು ಎರಡನೇ ವರ್ಷ ಪುನೀತ್ ಬರ್ತ್ಡೇ ಆಚರಿಸುತ್ತಿದ್ದಾರೆ. ಅದ್ದೂರಿಯಾಗಿ ಅಪ್ಪು ಉತ್ಸವ ಆಚರಿಸುತ್ತಿರುವ ಅಭಿಮಾನಿಗಳು ಹಲವು ಸಮಾಜಮುಖಿ ಕಾರ್ಯಗಳನ್ನೂ ಮಾಡುತ್ತಿದ್ದಾರೆ.
ಅಪ್ಪು ಉತ್ಸವಕ್ಕೆ ಅಭಿಮಾನಿಗಳ ಸಿದ್ದತೆ
ಕಂಠೀರವ ಸ್ಟೂಡಿಯೋ ಬಳಿ ಅಪ್ಪು ಉತ್ಸವಕ್ಕೆ ಅಭಿಮಾನಿಗಳ ಸಿದ್ದತೆ ಕೂಡಾ ನಡೆದಿದೆ. ಅಪ್ಪು ಸಮಾಧಿ ದರ್ಶನ ಪಡೆಯಲು ಬೆಳಗ್ಗಿನಿಂದಲೇ ಕಂಠೀರವ ಬಳಿ ಅಭಿಮಾನಿಗಳು ಸೇರಿದ್ದಾರೆ. ಅಪ್ಪು ಜನ್ಮದಿನದ ಅಂಗವಾಗಿ ಅಭಿಮಾನಿಗಳಿಗೆ ಅನ್ನದಾನ ಕೂಡಾ ವ್ಯವಸ್ಥೆ ಮಾಡಲಾಗಿದೆ. ಗಂಧದಗುಡಿ ಕನಸು ಕಂಡಿದ್ದ ಅಪ್ಪು ನೆನಪಲ್ಲಿ 3000 ಗಿಡಗಳ ವಿತರಣೆ ಮಾಡಲಾಗಿದ್ದು ರಾಘವೇಂದ್ರ ರಾಜ್ಕುಮಾರ್ ತಮ್ಮನ ನೆನಪಲ್ಲಿ ಗಿಡಗಳ ಉಡುಗೊರೆ ಕೊಡಲಿದ್ದಾರೆ.

ಸಂಜೆ 6ಗಂಟೆ ವೇಳೆಗೆ ರಸಮಂಜರಿ ಕಾರ್ಯಕ್ರಮ ಹಾಗು ಸಮಾಧಿ ಬಳಿ ವಿದ್ಯುತ್ ದೀಪಾಲಂಕಾರ ಕೂಡಾ ವ್ಯವಸ್ಥೆ ಮಾಡಲಾಗಿದೆ. ಅಪ್ಪು ಮಾಲೆ ಧರಿಸಿ ಪವರ್ಸ್ಟಾರ್ ಫ್ಯಾನ್ಸ್ ಸಮಾಧಿ ಬಳಿ ಬರುತ್ತಿದ್ದಾರೆ. ಸ್ಮಾರಕದ ಬಳಿ ಬೆಳಗ್ಗೆ 10 ಗಂಟೆಯಿಂದ ನಿರಂತರವಾಗಿ ಅನ್ನದಾನ ನಡೆಯುತ್ತಿದೆ.
ಮಾಲೆ ಧರಿಸಿ ಬಂದ ಅಪ್ಪು ಫ್ಯಾನ್ಸ್
ಅಪ್ಪು ಮಾಲೆಧರಿಸಿ ಅಭಿಮಾನಿಗಳು ಹೊಸಪೇಟೆಯಿಂದ ಕಾಲ್ನಡಿಗೆಯಲ್ಲಿ ಬಂದಿದ್ದಾರೆ. ಮೂರುದಿನಗಳು ಪಾದಯಾತ್ರೆಯ ಮೂಲಕ ಕಂಠೀರವ ಸಮಾಧಿ ಬಳಿ ಬಂದಿರುವ ಅಪ್ಪು ಅಭಿಮಾನಿ ಅಪ್ಪು ನೆನಪಲ್ಲಿ ಹಗಲು ರಾತ್ರಿ ಪಾದಯಾತ್ರೆ ಮಾಡಿದ್ದಾರೆ. ವಿವಿಧ ಹೂಗಳಿಂದ ಅಪ್ಪು ಸ್ಮಾರಕಕ್ಕೆ ಅಲಂಕಾರ ಮಾಡಲಾಗಿದೆ. 10ಗಂಟೆ ವೇಳೆಗೆ ಅಪ್ಪು ಸಮಾಧಿಗೆ ಕುಟುಂಬಸ್ಥರು ಪೂಜೆ ಸಲ್ಲಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹುಟ್ಟು ಹಬ್ಬ ಹಿನ್ನಲೆ ಅವರ ಅಭಿಮಾನಿ ಸುಮಿತ್ರ ಭಾಯಿ ಕಡಲೆಪುರಿ ಹಾರ ತಂದಿದ್ದಾರೆ. ಕಳೆದ ಎರಡು ವರ್ಷಗಳಿಂದ ಅಪ್ಪು ಅವರಿಗೆ ಕಡಲೆ ಪುರಿ ಹಾರ ತರುತ್ತಿದ್ದಾರೆ ಈ ಅಭಿಮಾನಿ.
ಕಬ್ಜ ನಟ ಉಪೇಂದ್ರ ಅವರು ಇತ್ತೀಚೆಗೆ ಕಬ್ಜ ಸಿನಿಮಾದ ಮೂರನೇ ಹಾಡು ರಿಲೀಸ್ ಸಂದರ್ಭ ಅಪ್ಪು ಅವರ ಬಗ್ಗೆ ಮಾತನಾಡಿದ್ದರು. ಚಂದ್ರು ನಿರ್ದೇಶನದ ಸಿನಿಮಾ ಕಬ್ಜದಲ್ಲಿ ಉಪೇಂದ್ರ ಅವರ ಹೊಸ ಅವತಾರ ರಿವೀಲ್ ಆಗಿದ್ದು ಮೂರನೇ ಸಾಂಗ್ನಲ್ಲಿ ಉಪ್ಪಿ ಹಾಗೂ ತಾನ್ಯಾ ಡ್ಯಾನ್ಸ್ ಮಾಡಿದ್ದಾರೆ.
ಆ್ಯಕ್ಷನ್ ಕಟ್ ಹೇಳೋ ಆಸೆ ಹಾಗೆಯೇ ಉಳಿಯಿತು
ಈ ಹಾಡಿನ ಲಾಂಚ್ ಸಂದರ್ಭ ಉಪ್ಪಿ ಅಪ್ಪುವನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ. ವೇದಿಕೆಯಲ್ಲಿ ಪುನೀತ್ ರಾಜ್ಕುಮಾರ್ ಬಗ್ಗೆ ಮಾತನಾಡಿದ ನಟ, ನಾನು ಪುನೀತ್ ರಾಜ್ಕುಮಾರ್ಗೆ ಆ್ಯಕ್ಷನ್ ಕಟ್ ಎಂದು ಹೇಳಲು ಬಯಸಿದ್ದೆ. ಆದರೆ ಸಾಧ್ಯವಾಗಲಿಲ್ಲ. ಆದರೆ ಶೀಘ್ರ ಶಿವಣ್ಣ ಅವರಿಗೆ ಆ್ಯಕ್ಷನ್ ಕಟ್ ಹೇಳಿ ಅವರ ಬ್ಯಾನರ್ನಲ್ಲಿ ಸಿನಿಮಾ ಮಾಡುವ ಗೀತಕ್ಕ ಅವರ ಕನಸು ನನಸು ಮಾಡುತ್ತೇನೆ ಎಂದಿದ್ದಾರೆ. ಕಿಚ್ಚ ಸುದೀಪ್, ಶಿವರಾಜ್ಕುಮಾರ್ ಅವರ ಜೊತೆ ಮಲ್ಟಿಸ್ಟಾರರ್ ಸಿನಿಮಾದಲ್ಲಿ ಉಪೇಂದ್ರ ಪ್ರೇಕ್ಷಕರ ಮುಂದೆ ಬರಲಿದ್ದು ಇದು ಪ್ರೇಕ್ಷಕರಿಗೆ ಸಿನಿ ಹಬ್ಬವಾಗಲಿದೆ.
karnataka people remembers puneeth rajkumar on his birthday.
15-09-26 04:46 pm
HK News Staffer
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 05:29 pm
HK News Staffer
U T Khader, KDP Meeting, Sudheer Reddy Ips: :...
15-09-26 05:27 pm
ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ’ ಹೆಸರು...
15-09-26 12:50 pm
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm