ಬ್ರೇಕಿಂಗ್ ನ್ಯೂಸ್
14-02-23 02:22 pm Source: news18 ಸಿನಿಮಾ
ಕನ್ನಡ ಸಿನಿಮಾಗಳು ದೂರದ ವಿದೇಶಗಳಲ್ಲೂ ರಿಲೀಸ್ ಆಗುತ್ತಿವೆ. ಕನ್ನಡ ಜನತೆ ಎಲ್ಲಿದ್ದಾರೆ ಅಲ್ಲಿ ಕನ್ನಡ ಸಿನಿಮಾಗಳನ್ನ ತಲುಪಿಸೋ ಕೆಲಸ ಆಗುತ್ತಿದೆ. ಹಾಗೆ ಮುಂದೆ ಬಂದೋರಿಗೆ ಕನ್ನಡ ಸಿನಿಮಾ ನಿರ್ಮಾಪಕರು ಸಪೋರ್ಟ್ ಮಾಡುತ್ತಿದ್ದಾರೆ.
ಕೆನಡಾದಲ್ಲೂ ಈಗ ಕನ್ನಡ ಸಿನಿಮಾ ರಿಲೀಸ್
ಕನ್ನಡ ಸಿನಿಮಾ ಪ್ರೇಮಿಗಳು ದೇಶ-ವಿದೇಶದಲ್ಲಿ ಎಲ್ಲಡೆ ಇದ್ದಾರೆ. ಆದರೆ ಅವರಿಗೆ ಸಿನಿಮಾಗಳು ತಲುಪುತ್ತಿರಲಿಲ್ಲ. ಕೆಜಿಎಫ್ ಚಿತ್ರ ಬಂದ್ಮೇಲೆ ಅದು ಎಲ್ಲರಿಗೂ ತಲುಪಿತು ನೋಡಿ. ಇದಾದ್ಮೇಲೆ ಕನ್ನಡದ ಕಾಂತಾರ ಆ ದಾರಿಯನ್ನ ಇನ್ನಷ್ಟು ವಿಸ್ತಾರ ಮಾಡಿದೆ.

ಕನ್ನಡದ ಸಿನಿಮಾಗಳು ಕೆನಡಾದಲ್ಲಿ ರಿಲೀಸ್ ಆಗೋದು ಕಡಿಮೆ. ಆದರೆ ಈಗ ಅದು ಸಾಧ್ಯವಾಗುತ್ತಿದೆ. ಅಲ್ಲಿಯ ಕನ್ನಡ ಸಿನಿಪ್ರೇಮಿಗಳಿಗೆ ಕನ್ನಡ ಸಿನಿಮಾಗಳು ಸಿಗುತ್ತಿವೆ.
ಆ ಲೆಕ್ಕದಲ್ಲಿ ಡಾಲಿ ಧನಂಜಯ್ ಅಭಿನಯದ ಹೊಯ್ಸಳ ಚಿತ್ರದ ಸಿನಿಮಾ ಕೆನಡಾದಲ್ಲಿ ರಿಲೀಸ್ ಆಗುತ್ತಿದೆ. ಇದೇನೋ ಮೊನ್ನೆಯ ವಿಷಯ ಆಯಿತು. ಆದರೆ ಕನ್ನಡದ ಪ್ಯಾನ್ ಇಂಡಿಯಾ ಕಬ್ಜ ಸಿನಿಮಾ ಕೂಡ ಇದೇ ಕೆನಡಾ ದೇಶದಲ್ಲಿ ರಿಲೀಸ್ ಆಗುತ್ತಿದೆ.
![]()
ಕೆನಡಾದಲ್ಲಿ ಕಬ್ಜ ಸಿನಿಮಾ ಪ್ರೀಮಿಯರ್ ಶೋ
ಕೆನಡಾದಲ್ಲಿ ಕಬ್ಜ ಚಿತ್ರದ ಇನ್ನೂ ಒಂದು ಕೆಲಸ ಆಗುತ್ತಿದೆ. ಮಾರ್ಚ್-17 ರಂದು ರಾಜ್ಯ-ದೇಶ-ವಿದೇಶ ಹೀಗೆ ಎಲ್ಲೆಡೆ ಕಬ್ಜ ಸಿನಿಮಾ ರಿಲೀಸ್ ಆಗುತ್ತದೆ. ಅದಕ್ಕೂ ಮೊದಲೇ ಕಬ್ಜ ಸಿನಿಮಾದ ಒಂದು ವಿಶೇಷ ಶೋ ಕೂಡ ಇದೆ.
ಕೆನಡಾ ದೇಶದ ವಿಲೇಜ್ ಗ್ರೂಪ್ ಈ ಒಂದು ಸಿನಿಮಾವನ್ನ ಇಲ್ಲಿ ಒಂದು ದಿನದ ಮುಂಚೇನೆ ರಿಲೀಸ್ ಮಾಡುತ್ತಿದೆ. ಅದನ್ನ ಪ್ರೀಮಿಯರ್ ಶೋ ಅಂತಲೇ ಈಗಾಗಲೇ ಸುದ್ದಿ ಮಾಡಲಾಗುತ್ತಿದೆ.

ಕೆನಡಾದಲ್ಲಿ ಒಂದು ದಿನ ಮುಂಚೇನೆ ಕಬ್ಜ ರಿಲೀಸ್
ಕೆನಡಾ ದೇಶದಲ್ಲಿ ಕಬ್ಜ ಸಿನಿಮಾವನ್ನ ಇಲ್ಲಿಯ ಜನ ಒಂದು ದಿನ ಮುಂಚೆ ಅಂದ್ರೆ, ಮಾರ್ಚ್-16 ರಂದು ನೋಡಬಹುದಾಗಿದೆ. ಈಗಾಗಲೇ ಈ ಬಗ್ಗೆ ಮಾಹಿತಿ ಕೂಡ ಹೊರ ಬಂದಿದೆ.
ಸೋಷಿಯಲ್ ಮೀಡಿಯಾದಲ್ಲೂ ಈ ಪ್ರೀಮಿಯರ್ ಶೋ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಸಿನಿಮಾ ಪ್ರೇಮಿಗಳು ಒಂದು ದಿನದ ಮುಂಚೇನೆ ಕನ್ನಡದ ಕಬ್ಜ ಚಿತ್ರದ ಎಂಜಾಯ್ ಮಾಡಬಹುದಾಗಿದೆ.
![]()
ಕನ್ನಡದ ಪ್ಯಾನ್ ಇಂಡಿಯಾ ಕಬ್ಜ ಸಿನಿಮಾ
ನಿರ್ದೇಶಕ, ನಿರ್ಮಾಪಕ ಆರ್.ಚಂದ್ರು ತಮ್ಮ ಈ ಚಿತ್ರವನ್ನ ದೊಡ್ಡ ಮಟ್ಟದಲ್ಲಿಯೇ ರಿಲೀಸ್ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ಈ ವರ್ಷ ಕನ್ನಡದಲ್ಲಿ ಈ ಒಂದೇ ಒಂದು ಸಿನಿಮಾ ಇದೆ. ಹಾಗಾಗಿಯೇ ಈ ಚಿತ್ರದ ಬಗ್ಗೆ ತುಂಬಾನೇ ನಿರೀಕ್ಷೆ ಇದೆ.
ದಿನೇ ದಿನೇ ಚಿತ್ರದ ಹೊಸ ಹೊಸ ಸುದ್ದಿಗಳು ಹೊರ ಬೀಳುತ್ತಿವೆ. ಸಿನಿಮಾ ಪ್ರೇಮಿಗಳಲ್ಲೂ ರಿಯಲ್ ಸ್ಟಾರ್, ಕಿಚ್ಚ ಸುದೀಪ್ ಚಿತ್ರ ಪ್ರೇಮಿಗಳಿಗೂ ಸಿನಿಮಾ ಬಗ್ಗೆ ಇನ್ನಿಲ್ಲದಂತೆ ಕುತೂಹಲ ಮೂಡಿದೆ.
Kannada Movie Kabzaa Premiere show in Canada on March16.
15-09-26 04:46 pm
HK News Staffer
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 06:52 pm
HK News Staffer
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ’ ಹೆಸರು...
15-09-26 12:50 pm
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm