ಬ್ರೇಕಿಂಗ್ ನ್ಯೂಸ್
18-01-23 02:03 pm Source: news18 ಸಿನಿಮಾ
ಬಹುಭಾಷಾ ನಟಿ ಅಮಲಾ ಪೌಲ್ಗೆ ಎರ್ನಾಕುಳಂನಲ್ಲಿ ಕಹಿ ಅನುಭವವಾಗಿದೆ. ದೇವಾಲಯದ ಅಧಿಕಾರಿಗಳು ಅವರನ್ನು ದೇವಾಲಯಕ್ಕೆ ಪ್ರವೇಶಿಸದಂತೆ ತಡೆದಿದ್ದಾರೆ. ಇದಕ್ಕೆ ನಟಿ ಪ್ರತಿಕ್ರಿಯಿಸಿದ್ದಾರೆ.ಕೇರಳದ ಎರ್ನಾಕುಳಂನಲ್ಲಿರುವ ತಿರುವೈರಾನಿಕುಲಂ ಮಹಾದೇವ ದೇವಸ್ಥಾನದ ದೇವರ ದರ್ಶನಕ್ಕೆ ಬಂದ ಅಮಲಾ ಪೌಲ್ ಅವರನ್ನು ದೇವಾಲಯದ ಅಧಿಕಾರಿಗಳು ತಡೆದರು. ಅಮಲಾ ಪೌಲ್ ಕ್ರಿಶ್ಚಿಯನ್ ಆಗಿದ್ದರಿಂದ ದೇವಸ್ಥಾನದ ಅಧಿಕಾರಿಗಳು ಅವರಿಗೆ ದೇವಸ್ಥಾನಕ್ಕೆ ಪ್ರವೇಶ ನೀಡಲಿಲ್ಲ.
ಕೇರಳದ ಹಲವು ದೇವಾಲಯಗಳಲ್ಲಿ ಕೇವಲ ಹಿಂದೂಗಳಿಗೆ ಮಾತ್ರ ದೇವಿಯ ದರ್ಶನಕ್ಕೆ ಅವಕಾಶವಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ದೇವಿಯ ದರ್ಶನಕ್ಕೆ ಅವಕಾಶ ನಿರಾಕರಿಸಲಾಗಿದೆ ಎಂದು ವರದಿಯಾಗಿದೆ. ಇದಲ್ಲದೆ ಅವರನ್ನು ಹೊರಗಿನಿಂದಲೇ ದೇವರನ್ನು ನೋಡಿ ಹೋಗುವಂತೆ ಹೇಳಲಾಯಿತು. ದೇವಿಯ ದರ್ಶನ ಸಿಗದಿದ್ದರೂ ಸಂತೃಪ್ತಿಯಿಂದ ಮರಳುತ್ತಿದ್ದೇನೆ ಎಂದು ಅಮಲಾ ಪೌಲ್ ದೇವಸ್ಥಾನದ ಸಂದರ್ಶಕರ ನೋಂದಣಿಯಲ್ಲಿ ತಮ್ಮ ನಿರಾಸೆಯನ್ನು ತಿಳಿಸಿದ್ದಾರೆ.

2023ರಲ್ಲೂ ಇದೇನು ಧಾರ್ಮಿಕ ತಾರತಮ್ಯ ಎಂದು ಅಮಲಾ ಪೌಲ್ ಸಿಟ್ಟಿಗೆದ್ದಿದ್ದಾರೆ. ಶೀಘ್ರದಲ್ಲೇ ಈ ಧಾರ್ಮಿಕ ತಾರತಮ್ಯ ದೂರವಾಗಲಿ ಎಂದು ಬಯಸಿದ್ದಾರೆ. ಧರ್ಮದ ಆಧಾರದಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣುವ ದಿನ ಬರಲಿ ಎಂದು ಬಯಸಿದ್ದಾರೆ ಎಂದರು.

ಅಮಲಾಪಾಲ್ ದರ್ಶನ ನಿರಾಕರಿಸಿದ ನಂತರ ಕೇರಳದ ಎರ್ನಾಕುಳಂ ಮಹಾದೇವ ದೇವಸ್ಥಾನ ಮತ್ತೊಮ್ಮೆ ಸುದ್ದಿಯಾಗಿದೆ. ದೇವಸ್ಥಾನದಲ್ಲಿ ಶಿಷ್ಟಾಚಾರ ಪಾಲಿಸಿದ್ದಾರೆ. ಈ ದೇವಸ್ಥಾನದಲ್ಲಿ ಬೇರೆ ಧರ್ಮದವರಿಗೆ ಪ್ರವೇಶವಿಲ್ಲ ಎನ್ನಲಾಗಿದೆ. ದೇವಸ್ಥಾನಗಳು ಮಾತ್ರವಲ್ಲ ಮಸೀದಿಗಳಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ. ಈ ವಿಚಾರವಾಗಿ ಅಮಲಾ ಪೌಲ್ ಮಾತನಾಡಿದರೆ ಉತ್ತಮ ಎಂದು ಕೆಲ ನೆಟ್ಟಿಗರು ಅಮಲಾ ಪೌಲ್ ಗೆ ಕೌಂಟರ್ ನೀಡುತ್ತಿದ್ದಾರೆ.

ಮದುವೆಯ ನಂತರ ಸಾಮಾನ್ಯವಾಗಿ ಹೀರೋಯಿನ್ ಆಗುವ ಅವಕಾಶಗಳು ಕಡಿಮೆಯಾಗುತ್ತವೆ. ಆದರೆ ಅಮಲಾ ಪೌಲ್ ಅವರಂತಹ ಕೆಲವೇ ನಟಿಯರು ಮದುವೆಯಾಗಿ, ವಿಚ್ಛೇದನದ ನಂತರವೂ ವೃತ್ತಿಜೀವನದಲ್ಲಿ ಬ್ಯುಸಿಯಾಗಿದ್ದಾರೆ.
Religious Discrimination still exists actor Amala Paul claims entry Denied at Kerala Temple.
31-07-26 01:22 pm
HK News Staffer
ಶಟರ್ ಮುರಿದಿಲ್ಲ, ಕಳ್ಳನ ಸುಳಿವಿಲ್ಲ... CCTV ನೋಡಿದ...
30-07-26 09:27 pm
"ಸಿದ್ದರಾಮಯ್ಯ ರಾಜಕೀಯದಿಂದ ನಿವೃತ್ತಿಯಾಗಲಿ, ಕಾಂಗ್ರ...
30-07-26 10:28 am
ಎಸ್ಐಆರ್ ವ್ಯಾಪ್ತಿಗೆ ಬಾರದ 84.31 ಲಕ್ಷ ಮಂದಿ ; ಆ.8...
29-07-26 09:54 pm
ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಆರೋಪ ; ಸಂಸದ ಶಶಿಕಾಂತ...
29-07-26 01:52 pm
31-07-26 01:26 pm
HK News Staffer
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
31-07-26 10:58 pm
HK News Staffer
Mangalore Help Deeksha: ದಿಢೀರ್ ಮೆದುಳು ಜ್ವರಕ್ಕ...
31-07-26 07:03 pm
ರಾಜಸ್ಥಾನದಿಂದ ಮಂಗಳೂರಿಗೆ ಬಂದು ಬೀದಿಯಲ್ಲಿ ಅಲೆದಾಡು...
30-07-26 07:51 pm
ಎಡಪದವು ಬಳಿ ಹೊಸ ಚತುಷ್ಪಥ ಹೆದ್ದಾರಿ ಕುಸಿತ ; 35 ಅಡ...
30-07-26 04:06 pm
ಎಡಪದವು ಬಳಿ ಹೊಸ ಚತುಷ್ಪಥ ಹೆದ್ದಾರಿ ಕುಸಿತ ; 35 ಅಡ...
30-07-26 04:06 pm
31-07-26 10:53 pm
HK News Staffer
ಪಣಂಬೂರು ತೋಟ ಬೆಂಗ್ರೆ ಬೀಚ್ ನಲ್ಲಿ ಸಾಮೂಹಿಕ ಅತ್ಯಾಚ...
31-07-26 09:47 pm
Kundapura Murder, Latest Update: ಹಣಕಾಸು ದ್ವೇಷ...
31-07-26 08:30 pm
ಜೀವಾವಧಿ ಶಿಕ್ಷೆಗೀಡಾಗಿದ್ದ ವಿನಯ್ ಕುಲಕರ್ಣಿಗೆ ಹೈಕೋ...
31-07-26 06:01 pm
ಕಾವೂರಿನಲ್ಲಿ ಮದರಂಗಿ ಶಾಸ್ತ್ರದಲ್ಲಿ ತಲವಾರು ಏಟು ;...
31-07-26 02:21 pm