ಬ್ರೇಕಿಂಗ್ ನ್ಯೂಸ್
02-01-23 01:05 pm Source: Vijayakarnataka ಸಿನಿಮಾ
ನಿರ್ದೇಶಕ ಪ್ರೇಮ್ ಪ್ರತಿ ಸಿನಿಮಾದಲ್ಲಿಯೂ ಏನಾದರೂ ಒಂದು ವಿಶೇಷತೆಯನ್ನು ಇಡುತ್ತಾರೆ. ತಮ್ಮ ಮೊದಲ ಸಿನಿಮಾದಿಂದಲೂ ಪ್ರಚಾರವನ್ನು ವಿಭಿನ್ನವಾಗಿ ಮಾಡಿಕೊಂಡು ಬಂದಿರುವ ಪ್ರೇಮ್ ಈಗ ಧ್ರುವ ಸರ್ಜಾ ಅವರಿಗೆ ‘ಕೆಡಿ’ ಎಂಬ ಸಿನಿಮಾ ಮಾಡುತ್ತಿದ್ದಾರೆ. ಅದರ ಟೈಟಲ್ ಲಾಂಚ್ ಅನ್ನು ಅದ್ಧೂರಿಯಾಗಿ ಮಾಡಿದ್ದ ಅವರು ಈಗ ಆ ಸಿನಿಮಾದ ಒಂದೊಂದೇ ಪಾತ್ರವನ್ನು ಪರಿಚಯಿಸುತ್ತಿದ್ದಾರೆ. ಆ ನಿಟ್ಟಿನಲ್ಲಿ ಪ್ರೇಮ್ ಪರಿಚಯ ಮಾಡಿರುವ ಮೊದಲ ಪಾತ್ರ ಅಣ್ಣಯ್ಯಪ್ಪ. ಈ ಪಾತ್ರವನ್ನು ಕ್ರೇಜಿ ಸ್ಟಾರ್ ರವಿಚಂದ್ರನ್ ನಿರ್ವಹಿಸುತ್ತಿದ್ದು, ಅವರ ಭರ್ಜರಿ ಲುಕ್ ಅನ್ನು ಹೊಸ ವರ್ಷದಂದು ಚಿತ್ರತಂಡ ರಿವೀಲ್ ಮಾಡಿದೆ.
‘ಕೆಡಿ’ ರೆಟ್ರೋ ಸ್ಟೈಲ್ನಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾ. ಈ ಸಿನಿಮಾದಲ್ಲಿ ಧ್ರುವ ಸರ್ಜಾ ರೌಡಿಯಾಗಿ ನಟಿಸುತ್ತಿದ್ದಾರೆ ಎಂಬುದು ಟೈಟಲ್ ಟೀಸರ್ನಲ್ಲಿ ಗೊತ್ತಾಗಿತ್ತು. ಈ ಕೆಡಿಯ ಜತೆ ಇನ್ನಷ್ಟು ಕೆಡಿಗಳು ನಟಿಸುತ್ತಾರೆ ಎಂಬುದು ಸಹ ಈಗಾಗಲೇ ಗೊತ್ತಾಗಿದೆ. ಚಿತ್ರತಂಡವೇ ಹೇಳಿರುವ ಪ್ರಕಾರ ಸಂಜಯ್ ದತ್ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಇದರ ನಡುವೆ ಕ್ರೇಜಿ ಸ್ಟಾರ್ ರವಿಚಂದ್ರನ್ ಸಹ ನಟಿಸಲಿದ್ದಾರೆ ಎಂಬುದು ಪೋಸ್ಟರ್ನಿಂದ ಗೊತ್ತಾಗುತ್ತಿದೆ. ರವಿಚಂದ್ರನ್ ರೆಟ್ರೋ ಸ್ಟೈಲ್ನ ಕಾಸ್ಟ್ಯೂಮ್ ಮತ್ತು ಹೇರ್ ಸ್ಟೈಲ್ನಿಂದ ಮಿಂಚುತ್ತಿದ್ದಾರೆ.
'ಸದ್ಯಕ್ಕೆ ಸಿನಿಮಾದ ಪಾತ್ರಗಳನ್ನು ಮಾತ್ರ ಪರಿಚಯ ಮಾಡುತ್ತಿದ್ದೇವೆ. ಆ ಪಾತ್ರದ ಹಿನ್ನೆಲೆ, ವಿವರ ಎಲ್ಲವೂ ತೆರೆಮೇಲೆ ನೋಡಿದಾಗಷ್ಟೇ ತಿಳಿಯುತ್ತದೆ. ರವಿಚಂದ್ರನ್ ಅವರದ್ದು ಪ್ರಮುಖ ಪಾತ್ರ ಎಂದಷ್ಟೇ ಹೇಳುತ್ತೇನೆ. ಅವರ ಫೋಟೋ ಶೂಟ್ ಮಾಡಿದ್ದೇವೆ. ಬಹಳ ಚೆನ್ನಾಗಿ ಮೂಡಿ ಬಂತು. ರವಿಚಂದ್ರನ್ ಅವರು ಇದುವರೆಗೂ ಈ ರೀತಿಯ ಪಾತ್ರದಲ್ಲಿ ಕಾಣಿಸಿಕೊಂಡಿಲ್ಲ’ ಎಂದಿದ್ದಾರೆ ನಿರ್ದೇಶಕ ಪ್ರೇಮ್.
ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಪ್ರೇಮ್ ಸಿದ್ಧರಿಲ್ಲ. ‘ಈ ಸಿನಿಮಾದಲ್ಲಿ ಭಾರತದ ವಿವಿಧ ಭಾಷೆಗಳ ಪ್ರಮುಖ ಕಲಾವಿದರು ನಟಿಸಲಿದ್ದು, ಪ್ರತಿಯೊಬ್ಬರ ಪಾತ್ರವನ್ನು ಹೀಗೆ ಪರಿಚಯಿಸುತ್ತಾ ಹೋಗುತ್ತೇವೆ. ಸಿನಿಮಾದ ಬಗ್ಗೆ ಸದ್ಯಕ್ಕೆ ಬೇರೆ ಯಾವುದೇ ಮಾಹಿತಿ ನೀಡುವುದಿಲ್ಲ. ಈಗ ಏನಾದರೂ ಮಾಹಿತಿ ಹೇಳಿದರೆ ತೆರೆಮೇಲೆ ನಾವು ಹೇಳುವುದಾದರೂ ಏನು? ಯಾವ ಪಾತ್ರ ಏನು ಮಾಡುತ್ತದೆ ಎಂದು ಕೇಳಿದರೆ ಸಿನಿಮಾ ನೋಡಿ ಎಂದಷ್ಟೇ ನಾನು ಹೇಳುತ್ತೇನೆ. ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ಮಹತ್ವವಂತೂ ಇರುತ್ತದೆ. ಇದಿನ್ನೂ ಆರಂಭ, ಮುಂದಿನ ದಿನಗಳಲ್ಲಿಇನ್ನೂ ಅದ್ಭುತವಾದ ಪಾತ್ರಗಳನ್ನು ಪರಿಚಯಿಸುತ್ತಾ ಹೋಗುತ್ತೇನೆ. ಜನರಿಗೆ ಕಂಪ್ಲೀಟ್ ಮನರಂಜನೆ ನೀಡಬೇಕು ಎಂಬುದಷ್ಟೇ ನನ್ನ ಉದ್ದೇಶ’ ಎಂದಿದ್ದಾರೆ ಪ್ರೇಮ್.
ಈ ಸಿನಿಮಾ ಕನ್ನಡ, ತೆಲಗು, ತಮಿಳು, ಹಿಂದಿ , ಮಲಯಾಳಂ ಭಾಷೆಗಳಲ್ಲಿ ಸಿದ್ಧವಾಗುತ್ತಿತ್ತು. ಇದಕ್ಕಾಗಿ ಧ್ರುವ ಸರ್ಜಾ ತಮ್ಮ ದೇಹತೂಕವನ್ನು ಕೊಂಚ ಕಡಿಮೆ ಮಾಡಲಿದ್ದಾರಂತೆ. ಜತೆಗೆ ಲುಕ್ ಮೇಲೂ ಕೆಲಸವಾಗುತ್ತಿದ್ದು, ಅದು ಕೂಡ ವಿಭಿನ್ನವಾಗಿರಲಿದೆ ಎಂಬುದು ಚಿತ್ರತಂಡದ ಅಭಿಪ್ರಾಯ. ವಿಲಿಯಂ ಡೇವಿಡ್ ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡುತ್ತಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಲಿದ್ದಾರೆ.
Director Jogi Prem Talks About Ravichandrans Role In Kd Movie.
15-03-25 12:33 pm
HK News Desk
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 12:35 pm
Mangalore Correspondent
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
Mangalore Accident, Kapikad, Murder: ನೆರೆಮನೆ...
13-03-25 09:20 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm