ಬ್ರೇಕಿಂಗ್ ನ್ಯೂಸ್
29-12-22 12:14 pm Source: Vijayakarnataka ಸಿನಿಮಾ
ಸ್ಯಾಂಡಲ್ವುಡ್ನಲ್ಲಿ ಈಗ ಹೊಸ ಹೊಸ ಮಾದರಿಯ ಸಿನಿಮಾಗಳದ್ದೇ ಹವಾ. ಸದ್ಯ ಇಲ್ಲೊಂದು ಹೊಸ ತಂಡ 'ಕಾಕ್ಟೈಲ್' ಹೆಸರಿನ ಹೊಸ ಸಿನಿಮಾವನ್ನು ಮಾಡಿದೆ. ಜನವರಿ 6ರಂದು ಈ ಸಿನಿಮಾ ತೆರೆಗೆ ಬರಲಿದೆ. ಆಕ್ಷನ್, ಕ್ರೈಮ್, ಸೆಂಟಿಮೆಂಟ್, ಲವ್, ಸಸ್ಪೆನ್ಸ್, ಥ್ರಿಲ್ಲರ್ ಎಲ್ಲ ಮಾದರಿಯ ಅಂಶಗಳು 'ಕಾಕ್ಟೈಲ್' ಸಿನಿಮಾದಲ್ಲಿವೆಯಂತೆ. ಈ ಸಿನಿಮಾ ಸಿದ್ಧವಾಗಲು ಡಾ. ಪುನೀತ್ ರಾಜ್ಕುಮಾರ್ ಅವರು ಕಾರಣ ಎನ್ನುತ್ತಾರೆ ಸಿನಿಮಾದ ನಿರ್ಮಾಪಕ ಡಾ. ಶಿವಪ್ಪ. 'ಕಾಕ್ಟೈಲ್' ಸಿನಿಮಾದ ಟ್ರೇಲರ್ ಅನ್ನು ಈಚೆಗೆ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಹಾರೈಸಿದರು.
ಈ ಸಿನಿಮಾಗೆ ಶ್ರೀರಾಮ್ ಎಂಬುವವರು ನಿರ್ದೇಶನ ಮಾಡಿದ್ದಾರೆ. 'ಚಿತ್ರರಂಗದೊಂದಿಗೆ ನನಗೆ 15 ವರ್ಷಗಳಿಂದ ಜೊತೆ ನಂಟು ಇದೆ. 'ಕಾಕ್ಟೈಲ್' ಸಿನಿಮಾವು ವಿಭಿನ್ನ ಕಥಾಹಂದರ ಹೊಂದಿದೆ. ಈ ಚಿತ್ರದಲ್ಲಿ ಲವ್, ಹಾರರ್, ಸೆಂಟಿಮೆಂಟ್, ಸಸ್ಪೆನ್ಸ್, ಥ್ರಿಲ್ಲರ್ ಎಲ್ಲವೂ ಇದೆ. ಇದು ಒಂದು ಜಾನರ್ನ ಚಿತ್ರವಲ್ಲ. ಕನ್ನಡದಲ್ಲಿ ಇಂಥದ್ದೊಂದು ಪ್ರಯತ್ನ ಹೊಸದಾಗಿದೆ. ಇತ್ತೀಚೆಗೆ ಈ ಚಿತ್ರವನ್ನು ವೀಕ್ಷಿಸಿದ ಕೆಲವು ಸ್ನೇಹಿತರು ಸಹ ಮೆಚ್ಚುಗೆ ಸೂಚಿಸಿದರು. ಚಿತ್ರ ಉತ್ತಮವಾಗಿ ಬರಲು ಕಾರಣ ನನ್ನ ತಂಡ ಎಂದು ಹೇಳುತ್ತೇನೆ. ನಮ್ಮ ಸಿನಿಮಾದ ನಿರ್ಮಾಪಕರಾದ ನಿವೃತ್ತ ಐಎಎಸ್ ಅಧಿಕಾರಿ ಡಾ. ಶಿವಪ್ಪ ಅವರ ಮಗ ವೀರೆನ್ ಕೇಶವ್ ಈ ಚಿತ್ರದ ಮೂಲಕ ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಈ ಚಿತ್ರಕ್ಕೆ ಜನರ ಪ್ರೋತ್ಸಾಹ ಸಿಕ್ಕರೆ, ಮುಂದಿನ ದಿನಗಳಲ್ಲಿ 'ಕಾಕ್ಟೈಲ್' ಪಾರ್ಟ್ 2 ಮಾಡುತ್ತೇವೆ..' ಎಂದರು ನಿರ್ದೇಶಕ ಶ್ರೀರಾಮ್.
'ಕಾಕ್ಟೈಲ್'ಗೆ ವೀರೆನ್ ಕೇಶವ್ ಹೀರೋ
ಈ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ಹೀರೋ ವೀರೆನ್ ಕೇಶವ್, 'ನಾಲ್ಕೈದು ಡ್ರಿಂಕ್ಸ್ಗಳ ಮಿಶ್ರಣಕ್ಕೆ 'ಕಾಕ್ಟೈಲ್ ಎನ್ನುತ್ತಾರೆ. ನಮ್ಮ ಸಿನಿಮಾದಲ್ಲೂ ಹಾಗೆ ಇದೆ. ಇಲ್ಲಿ ಲವ್ ಇದೆ, ಆದರೆ ಇದು ಲವ್ ಸ್ಟೋರಿ ಸಿನಿಮಾ ಅಲ್ಲ... ಸೆಂಟಿಮೆಂಟ್ ಇದೆ, ಆದರೆ ಸೆಂಟಿಮೆಂಟ್ ಸಿನಿಮಾ ಅಲ್ಲ. ಎಲ್ಲಾ ಅಂಶಗಳನ್ನು ಒಳಗೊಂಡಿರುವ ಬೇರೆಯದೇ ರೀತಿಯ ಸಿನಿಮಾ ಇದು. ವಿಕ್ರಮ್ ಎಂಬುದು ನನ್ನ ಪಾತ್ರದ ಹೆಸರು. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಧನ್ಯವಾದಗಳು..' ಎಂದರು.
ನಿರ್ಮಾಪಕ ಡಾ. ಶಿವಪ್ಪ, 'ನಾನು ಈ ಸಮಯದಲ್ಲಿ ಮೊದಲು ನೆನಪಿಸಿಕೊಳ್ಳುವುದು ಪುನೀತ್ ರಾಜ್ಕುಮಾರ್ ಅವರನ್ನು. ನನ್ನ ಮಗನನ್ನು ಸಿನಿಮಾಗೆ ಪರಿಚಯಿಸುವುದರಿಂದಿಡಿದು ನಮ್ಮ ಚಿತ್ರದ ಕುರಿತಾದ ಎಲ್ಲಾ ವಿಷಯಗಳನ್ನು ಅವರ ಬಳಿ ಹಂಚಿಕೊಳ್ಳುತ್ತಿದ್ದೆ. ಅವರು ಸೂಕ್ತ ಮಾರ್ಗದರ್ಶನ ನೀಡುತ್ತಿದ್ದರು. 'ನಿಮ್ಮೊಂದಿಗೆ ನಾನು ಇರುತ್ತೇನೆ..' ಎಂದು ಧೈರ್ಯ ತುಂಬುತ್ತಿದ್ದರು. ಈ ಸಿನಿಮಾದ ಬಿಡುಗಡೆಯ ಹೊತ್ತಿಗೆ ಅವರಿ ಇಲ್ಲದಿರುವುದು ತುಂಬಾ ನೋವು ನೀಡುತ್ತಿದೆ..' ಎಂದರು.
ಈ ಸಿನಿಮಾದಲ್ಲಿ ನಾಯಕಿಯಾಗಿ ಚರಿಶ್ಮಾ ಕಾಣಿಸಿಕೊಂಡಿದ್ದು, ಹಾಡುಗಳಿಗೆ ಲೋಕಿ ತವಸ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಜಯಲಕ್ಷ್ಮಿ ಕಂಬೈನ್ಸ್ ಲಾಂಛನದಲ್ಲಿ ಡಾ. ಶಿವಪ್ಪ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಅಶ್ವಿನಿ ಪುನೀತ್ ರಾಜ್ಕುಮಾರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ. ಮ. ಹರೀಶ್ ಆಗಮಿಸಿದ್ದರು.
Viren Keshav Charishma Starrer Cocktail Kannada Movie Trailer Released By Ashwini Puneeth Rajkumar.
15-03-25 12:33 pm
HK News Desk
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 12:35 pm
Mangalore Correspondent
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
Mangalore Accident, Kapikad, Murder: ನೆರೆಮನೆ...
13-03-25 09:20 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm