ಬ್ರೇಕಿಂಗ್ ನ್ಯೂಸ್
28-12-22 06:03 pm Source: Vijayakarnataka ಸಿನಿಮಾ
ಚಂದನ್ ಶೆಟ್ಟಿ ಈಗಾಗಲೇ ಗಾಯಕರಾಗಿ, ಗೀತ ರಚನಕಾರರಾಗಿ, ಸಂಗೀತ ನಿರ್ದೇಶಕರಾಗಿ ಸಖತ್ ಫೇಮಸ್ ಆಗಿದ್ದಾರೆ. ಇದೆಲ್ಲದರ ಜೊತೆಗೆ ನಟನೆಯನ್ನೂ ಅವರು ಕೂಡ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಸದ್ಯ ಅವರು 'ಸೂತ್ರಧಾರಿ' ಅನ್ನೋದ ಸಿನಿಮಾದಲ್ಲಿ ಹೀರೋ ಆಗಿದ್ಧಾರೆ. ಈ ಸಿನಿಮಾದ ಒಂದು ಹಾಡು ಈಚೆಗೆ ರಿಲೀಸ್ ಆಗಿದೆ. ನ್ಯೂ ಇಯರ್ ಸೆಲೆಬ್ರೇಷನ್ ಮೂಡ್ನಲ್ಲಿ ಇರುವವರಿಗೆ ಈ ಹಾಡು ಸಖತ್ ಕಿಕ್ ನೀಡುವುದರಲ್ಲಿ ಸಂಶಯವೇ ಇಲ್ಲ. 'ಡ್ಯಾಶ್ ಸಾಂಗ್..' ಎಂದೇ ಇದನ್ನು ಚಂದನ್ ಶೆಟ್ಟಿ ಕರೆದಿದ್ದಾರೆ.
ಈ ಹಾಡಿನ ಬಗ್ಗೆ ಮಾಹಿತಿ ಹಂಚಿಕೊಂಡ ಚಂದನ್ ಶೆಟ್ಟಿ, 'ಹೊಸ ವರ್ಷಕ್ಕೆ ನಮ್ಮ 'ಸೂತ್ರಧಾರಿ' ಸಿನಿಮಾದಿಂದ 'ಡ್ಯಾಶ್' ಹಾಡು ಬಿಡುಗಡೆಯಾಗಿದೆ. ಇದನ್ನು ಹೊಸ ವರ್ಷಕ್ಕೆ ಉಡುಗೊರೆ ಎಂದುಕೊಳ್ಳಬಹುದು. 'ಡ್ಯಾಶ್..' ಎಂದರೆ ಏನು ಅಂತ ಎಲ್ಲಾ ಕೇಳುತ್ತಿದ್ದಾರೆ. ಡ್ಯಾಶ್ ಎಂದರೆ ಖಾಲಿ ಜಾಗ. ಅಲ್ಲಿ ನೀವು ಏನು ಬೇಕಾದರೂ ಬರೆದುಕೊಳ್ಳಬಹುದು. ಈ ಹಾಡಿಗೆ 'ಭಜರಂಗಿ' ಮೋಹನ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಸಂಜನಾ ಆನಂದ್ ಈ ಹಾಡಿಗೆ ನನ್ನ ಜೊತೆ ಹೆಜ್ಜೆ ಹಾಕಿದ್ದಾರೆ. ನಿರ್ಮಾಪಕ ನವರಸನ್ ಅದ್ದೂರಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ನಾನು ಹಾಗೂ ಚೇತನ್ ಕುಮಾರ್ ಈ ಹಾಡನ್ನು ಬರೆದಿದ್ದೇವೆ. ನಾನೇ ಸಂಗೀತ ನೀಡಿದ್ದೇನೆ' ಎಂದು ಮಾಹಿತಿ ನೀಡಿದ್ದಾರೆ.
ಒಂದೇ ದಿನಕ್ಕೆ ಈ ಹಾಡು 1.6 ಮಿಲಿಯನ್ ವೀವ್ಸ್ ಪಡೆದುಕೊಂಡಿರುವುದು ವಿಶೇಷ. ಈ ಹಾಡಿನಲ್ಲಿ ಕಾಣಿಸಿಕೊಂಡ ಖುಷಿಯಲ್ಲಿದ್ದರು ನಟಿ ಸಂಜನಾ ಆನಂದ್. 'ನಾನು ಮೊದಲ ಬಾರಿಗೆ ಸ್ಪೆಷಲ್ ಸಾಂಗ್ ಒಂದರಲ್ಲಿ ನಟಿಸಿದ್ದೇನೆ. ಚಂದನ್ ಶೆಟ್ಟಿ ಅವರ ಜೊತೆ ಡ್ಯಾನ್ಸ್ ಮಾಡಿರುವುದು ಖುಷಿಯಾಗಿದೆ. ಈ ಹಾಡು ತುಂಬ ಅದ್ಭುತವಾಗಿ ಮೂಡಿಬಂದಿದೆ..' ಎಂದರು ಸಂತೋಷ ಹಂಚಿಕೊಂಡರು ಸಂಜನಾ ಆನಂದ್.
ಚಿತ್ರದ ನಿರ್ಮಾಪಕ ನವರಸನ್ ಮಾತನಾಡಿ, 'ಚಂದನ್ ಶೆಟ್ಟಿ ಅವರು ಹೊಸ ವರ್ಷಕ್ಕೆ ಹೊಸ ಹಾಡೊಂದನ್ನು ಬಿಡುಗಡೆ ಮಾಡುತ್ತಾರೆ. ಈ ಬಾರಿ ನಮ್ಮ ಚಿತ್ರದ ಹಾಡೊಂದನ್ನು ಹೊಸ ವರ್ಷಕ್ಕೆ ಬಿಡುಗಡೆ ಮಾಡುವ ಆಸೆಯಿತ್ತು. ಆದರೆ ಸಮಯ ಕಡಿಮೆ ಇತ್ತು. ಚಂದನ್ ಶೆಟ್ಟಿ ಅವರ ಬಳಿ ಈ ವಿಷಯ ಹೇಳಿದೆ. ಕೇವಲ ಎರಡು ದಿನಗಳ ಹಿಂದೆ ಈ ಹಾಡಿನ ಚಿತ್ರೀಕರಣವಾಗಿ ಈಗ ಬಿಡುಗಡೆಯಾಗಿದೆ. ಈ ಚಿತ್ರಕ್ಕೆ ನಾಯಕಿಯಾಗಿ ಅಪೂರ್ವ ಕಾಣಿಸಿಕೊಂಡಿದ್ದಾರೆ. ಆದರೆ ಈ ವಿಶೇಷ ಹಾಡಿಗೆ ಚಂದನ್ ಶೆಟ್ಟಿ ಅವರ ಜೊತೆ ಸಂಜನಾ ಆನಂದ್ ಹೆಜ್ಜೆ ಹಾಕಿದ್ದಾರೆ..' ಎಂದು ಮಾಹಿತಿ ಹಂಚಿಕೊಂಡರು.
ಈ ಸಿನಿಮಾಗೆ ಕಿರಣ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಛಾಯಾಗ್ರಹಣವನ್ನು ಪಿ.ಕೆ.ಹೆಚ್ ದಾಸ್ ಮಾಡಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ. ಮ. ಹರೀಶ್, ನಿರ್ಮಾಪಕ ಸಂಜಯ್ ಗೌಡ, ರವಿ ಗೌಡ, ಗೋವಿಂದರಾಜು, ರಾಜೇಶ್ ಮುಂತಾದವರು 'ಸೂತ್ರಧಾರಿ' ಚಿತ್ರದ ಹಾಡಿನ ಬಿಡುಗಡೆ ಸಮಾರಂಭಕ್ಕೆ ಆಗಮಿಸಿ ಹಾರೈಸಿದರು. ಕಿರುತೆರೆ ಸೂಪರ್ ಸ್ಟಾರ್ ಎಂದು ಖ್ಯಾತರಾಗಿರುವ ಬೇಬಿ ವಂಶಿಕಾ ಅಂಜನಿ ಕಶ್ಯಪ ಕೆಲವು ಸಮಯ ಕಾರ್ಯಕ್ರಮದ ನಿರೂಪಣೆ ಮಾಡಿದ್ದು ವಿಶೇಷವಾಗಿತ್ತು.
Chandan Shetty Sanjana Anand Starrer Suthradaari Kannada Movie Dash Song Released.
14-03-25 11:11 pm
Bangalore Correspondent
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
ಕುದುರೆಮುಖ ರಾಷ್ಟ್ರೀಯ ಅರಣ್ಯಕ್ಕೆ ಬೆಂಕಿ ; ಸ್ಥಳೀಯರ...
13-03-25 02:56 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
14-03-25 10:35 pm
Mangalore Correspondent
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
Mangalore Accident, Kapikad, Murder: ನೆರೆಮನೆ...
13-03-25 09:20 pm
PFI, Mangalore Crime, Police: ಪಿಎಫ್ಐ ಮುಖಂಡರಿಗ...
13-03-25 08:46 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm