ಬ್ರೇಕಿಂಗ್ ನ್ಯೂಸ್
21-12-22 01:18 pm Source: Vijayakarnataka ಸಿನಿಮಾ
ಭಾವನಾತ್ಮಕ ಟ್ರೇಲರ್ನಿಂದ ಗಮನ ಸೆಳೆಯುತ್ತಿರುವ ‘ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿ ಗುಡ್ಡ’ ಸಿನಿಮಾದಲ್ಲಿ ಕನ್ನಡದ ಹಲವು ಪ್ರತಿಭಾವಂತ ನಟರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರತಿಯೊಂದು ಪಾತ್ರವೂ ಇಲ್ಲಿ ಕಥೆಗೆ ಕೊಂಡಿಯಾಗುತ್ತದೆ ಎಂದಿದ್ದಾರೆ ನಿರ್ದೇಶಕರು.
ಈ ಸಿನಿಮಾದಲ್ಲಿ ಭಾವನಾ ರಾಮಣ್ಣ, ಪ್ರಕಾಶ್ ಬೆಳವಾಡಿ, ನಂದಗೋಪಾಲ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತು ಪ್ರಮುಖವಾಗಿ ಕಾಣಿಸಿಕೊಂಡಿದ್ದಾರೆ. ಈ ಎಲ್ಲಾ ಪಾತ್ರಗಳು ನಾಯಕ ನಟ ಧನಂಜಯ ಅವರ ಪಾತ್ರಕ್ಕೆ ಕನೆಕ್ಟ್ ಆಗಿರುತ್ತವೆ. ಈ ಪಾತ್ರಗಳೇ ಸಿನಿಮಾವನ್ನು ನೋಡಿಸಿಕೊಂಡು ಹೋಗುತ್ತವೆ.
ಸ್ಪಾ ಓನರ್ ಭಾವನಾ
ಭಾವನಾ ರಾಮಣ್ಣ ಹಲವು ವರ್ಷಗಳಿಂದ ವಿವಿಧ ರೀತಿಯ ಪಾತ್ರಗಳನ್ನು ನಿರ್ವಹಿಸಿದ್ದು, ಈ ಸಿನಿಮಾದಲ್ಲಿ ಅವರು ಸ್ಪಾ ಒಂದರ ಓನರ್ ಆಗಿ ನಟಿಸಿದ್ದಾರೆ. ಬಹಳ ದಿನಗಳ ನಂತರ ತೆರೆಮೇಲೆ ಅವರು ಬರುತ್ತಿದ್ದಾರೆ. ಉತ್ತರ ಭಾರತದಿಂದ ಬಂದು ಕರ್ನಾಟಕದಲ್ಲಿ ಸ್ಪಾ ನಡೆಸುತ್ತಾ ಜೀವನ ಮಾಡುತ್ತಿರುವ ಪಾತ್ರ ಅವರದು. ‘ನನಗೆ ಹಲವರು ಹಲವು ಪಾತ್ರಗಳಿಗೆ ಆಫರ್ ಮಾಡಿದ್ದರು. ಆದರೆ ನಾನು ಒಪ್ಪಿಕೊಂಡಿರಲಿಲ್ಲ. ಕುಶಾಲ್ ಗೌಡ ಬಂದು ನನ್ನ ಪಾತ್ರವನ್ನು ವಿವರಿಸಿದಾಗ ನನಗೆ ಈ ಸ್ಕಿ್ರಪ್ಟ್ನಲ್ಲಿ ನಟಿಸಬೇಕು ಎನಿಸಿತು. ಸಿನಿಮಾದ ಮೇಕಿಂಗ್ ಸಹ ವಿಭಿನ್ನವಾಗಿತ್ತು’ ಎಂದಿದ್ದಾರೆ ಭಾವನಾ.
‘ಪಾಯಲ್ ಎನ್ನುವ ಪಾತ್ರ ನನ್ನದು, ಸಿಕ್ಕಾಪಟ್ಟೆ ಗಟ್ಟಿಗಿತ್ತಿ ಆಕೆ. ಈ ರೀತಿಯ ಪಾತ್ರಗಳು ನನಗೆ ಬಹಳ ಇಷ್ಟವಾಗುತ್ತವೆ. ಧನಂಜಯ, ಅದಿತಿ ಸೇರಿದಂತೆ ಎಲ್ಲರ ಜತೆ ನಟಿಸಿದ್ದು ನನಗೆ ಖುಷಿ ತಂದಿದೆ. ಇಡೀ ಸಿನಿಮಾ 90ರ ದಶಕದಲ್ಲಿ ನಡೆಯಲಿದೆ. ಬಹಳ ದಿನಗಳ ನಂತಹ ಒಂದೊಳ್ಳೆ ಸಿನಿಮಾದಲ್ಲಿ ನಟಿಸಿದ ಖುಷಿ ನನ್ನದಾಗಿದೆ’ ಎಂದಿದ್ದಾರೆ ಭಾವನಾ.
ಪೊಲೀಸ್ ಅಧಿಕಾರಿ ಬೆಳವಾಡಿ
ಭಾರತೀಯ ಚಿತ್ರರಂಗದ ಹಲವು ಭಾಷೆಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟ ಪ್ರಕಾಶ್ ಬೆಳವಾಡಿ ಈ ಸಿನಿಮಾದಲ್ಲಿ ಹಿರಿಯ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ‘ಪ್ರಕಾಶ್ ಬೆಳವಾಡಿಯವರೇ ಈ ಪಾತ್ರಕ್ಕೆ ಸೂಕ್ತ ಎಂದು ನಾನು ಸ್ಕಿ್ರಪ್ಟ್ ಬರೆಯುವಾಗಲೇ ನಿರ್ಧರಿಸಿದ್ದೆ. ಭಾವನಾ ಮತ್ತು ಪ್ರಕಾಶ್ ಅವರ ಪಾತ್ರಗಳೂ ಕಥೆಯ ಓಟಕ್ಕೆ ವಿಭಿನ್ನವಾದ ತಿರುವು ನಿಡುತ್ತದೆ. ಬೆಳವಾಡಿಯವರೊಂದಿಗೆ ಚಿತ್ರೀಕರಣದ ಅನುಭವವೇ ವಿಶಿಷ್ಟವಾಗಿತ್ತು. ಪ್ರತಿಯೊಂದು ದೃಶ್ಯಕ್ಕೂ ಅವರು ಇದನ್ನು ಯಾಕೆ ಹೀಗೆ ಬರೆದಿದ್ದೀರಿ ಎಂಬ ಹಿನ್ನೆಲೆ ಕೆಳಿಕೊಂಡು ನಟಿಸುತ್ತಿದ್ದರು. ಮೊಹಮ್ಮದ್ ಶಕೀಲ್ ಎಂಬುದು ಅವರ ಪಾತ್ರದ ಹೆಸರು’ ಎಂದಿದ್ದಾರೆ ನಿರ್ದೇಶಕ ಕುಶಾಲ್.
ಪೊಲೀಸ್ ಅಧಿಕಾರಿಗಳು
ಬಿಗ್ ಬಾಸ್ ಖ್ಯಾತಿಯ ನಂದಗೋಪಾಲ್ ಮತ್ತು ಕಾನ್ಸ್ಟೆಬಲ್ ಸರೋಜಾ ಖ್ಯಾತಿಯ ನಟಿ ತ್ರಿವೇಣಿ ರಾವ್ ಸಹ ‘ಜಮಾಲಿಗುಡ್ಡ’ದ ಪೊಲೀಸ್ ಅಧಿಕಾರಿಗಳು. ನಂದಗೋಪಾಲ್ ಅವರದ್ದು ವ್ಯವಸ್ಥೆಯೊಳಗಿನ ಗೋಮುಖ ವ್ಯಾಘ್ರನ ರೀತಿಯ ಪಾತ್ರ. ತ್ರಿವೇಣಿಯವರದ್ದು ಹೊಸ ರೀತಿಯ ಪಾತ್ರವಾಗಿದ್ದು ಅದನ್ನು ಸಿನಿಮಾದಲ್ಲಿಯೇ ನೋಡಬೇಕು ಎನ್ನುವುದು ನಿರ್ದೇಶಕರ ಮಾತು. ಇವರ ಜತೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತು, ಭಾಸ್ಕರ್ ಹೀಗೆ ಹಲವರು ನಟಿಸಿದ್ದಾರೆ.
"ಪ್ರತಿಯೊಂದು ಪಾತ್ರವೂ ಕಥೆಗೆ ಲಿಂಕ್ ಕೊಡುತ್ತಾ ಹೋಗುತ್ತದೆ. ಎಲ್ಲವೂ ವಿಭಿನ್ನವಾಗಿದ್ದು, ಹೊಸ ರೀತಿಯ ನಿರೂಪಣೆ ಚಿತ್ರದಲ್ಲಿದೆ. ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ಹಿನ್ನೆಲೆ ಇರುತ್ತದೆ. ಭಾವನಾ ಮತ್ತು ಪ್ರಕಾಶ್ ಬೆಳವಾಡಿಯವರ ಪಾತ್ರಗಳು ಕಥೆಗೆ ಟ್ವಿಸ್ಟ್ ಕೊಡುತ್ತವೆ" ಎಂದಿದ್ದಾರೆ ನಿರ್ದೇಶಕ ಕುಶಾಲ್ ಗೌಡ
Dhananjaya Starrer Once Upon A Time In Jamaligudda Movie Characters.
14-03-25 11:11 pm
Bangalore Correspondent
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
ಕುದುರೆಮುಖ ರಾಷ್ಟ್ರೀಯ ಅರಣ್ಯಕ್ಕೆ ಬೆಂಕಿ ; ಸ್ಥಳೀಯರ...
13-03-25 02:56 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
14-03-25 10:35 pm
Mangalore Correspondent
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
Mangalore Accident, Kapikad, Murder: ನೆರೆಮನೆ...
13-03-25 09:20 pm
PFI, Mangalore Crime, Police: ಪಿಎಫ್ಐ ಮುಖಂಡರಿಗ...
13-03-25 08:46 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm