ಬ್ರೇಕಿಂಗ್ ನ್ಯೂಸ್
14-12-22 01:47 pm Source: Vijayakarnataka ಸಿನಿಮಾ
'ಮೆಗಾ ಸ್ಟಾರ್' ಚಿರಂಜೀವಿ ಅವರ ಅಳಿಯ, ನಟ ಸಾಯಿ ಧರಮ್ ತೇಜ್ ಅವರಿಗೆ ಕಳೆದ ವರ್ಷ ಅಪಘಾತವಾಗಿತ್ತು. ಅದರಲ್ಲಿ ಅವರಿಗೆ ವಿಪರೀತ ಪೆಟ್ಟು ಬಿದ್ದಿತ್ತು. ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗಿತ್ತು. ಆನಂತರ ಒಂದಷ್ಟು ದಿವಸ ಅವರು ಆಸ್ಪತ್ರೆಯಲ್ಲೇ ಇದ್ದರು. ಸಾಯಿ ಧರಮ್ ತೇಜ್ ಇನ್ಮೇಲೆ ಸಿನಿಮಾ ಮಾಡ್ತಾರಾ ಅನ್ನೋ ಅನುಮಾನ ಕೂಡ ಇತ್ತು. ಇದೀಗ ಅದಕ್ಕೆಲ್ಲ ಉತ್ತರ ಸಿಕ್ಕಿದೆ. ಹೊಸದೊಂದು ಸಿನಿಮಾವನ್ನು ಅವರು ಮಾಡಿದ್ದು, ಅದಕ್ಕೆ 'ವಿರೂಪಾಕ್ಷ' ಟೈಟಲ್ ಕೂಡ ಇಡಲಾಗಿದ್ದು, ಬಿಡುಗಡೆ ದಿನಾಂಕ ಕೂಡ ಘೋಷಣೆ ಆಗಿದೆ. ಈ ಸಿನಿಮಾದ ಮೂಲಕ ಅವರು ಕನ್ನಡಕ್ಕೂ ಎಂಟ್ರಿ ನೀಡಲಿದ್ದಾರೆ.
ಸಾಯಿ ಧರಮ್ ತೇಜ್ ಅಭಿನಯದ 'ವಿರೂಪಾಕ್ಷ' ಪ್ಯಾನ್ ಇಂಡಿಯಾ ಸಿನಿಮಾವಾಗಿದೆ. 'ವಿರೂಪಾಕ್ಷ' ಚಿತ್ರವು ಮುಂದಿನ ವರ್ಷ ಏಪ್ರಿಲ್ 21ರಂದು ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ವಿಶ್ವದಾದ್ಯಂತ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಸದ್ಯ ರಿಲೀಸ್ ಆಗಿರುವ ಟೈಟಲ್ ಗ್ಲಿಂಪ್ಸ್ಗೆ ಮೆಚ್ಚುಗೆ ಕೂಡ ಸಿಕ್ಕಿದೆ.
ಜೂನಿಯರ್ ಎನ್ಟಿಆರ್ ಸಾಥ್
ಈ ಸಿನಿಮಾದ ಶೂಟಿಂಗ್ ಈ ಹಿಂದೆಯೇ ಶುರುವಾಗಿತ್ತು. ಆದರೆ ಸಿನಿಮಾದ ಟೈಟಲ್ ಏನು ಎಂಬುದು ಮಾತ್ರ ಬಹಿರಂಗವಾಗಿರಲಿಲ್ಲ. ಇದೀಗ ಅದಕ್ಕಾಗಿಯೇ ಒಂದು ಟೀಸರ್ ಮಾಡಿ, ಚಿತ್ರತಂಡ ಅದನ್ನು ಘೋಷಣೆ ಮಾಡಿದೆ. ಸದ್ಯ ಟೈಟಲ್ ಟೀಸರ್ನಲ್ಲಿ ಎನ್ಟಿಆರ್ ಅವರ ಧ್ವನಿ ಕೂಡ ಇದೆ. ತಮ್ಮ ಕಂಠದಾನ ಮಾಡುವ ಮೂಲಕ ಸಾಯಿ ಧರಮ್ ತೇಜ್ಗೆ ಅವರು ಸಾಥ್ ನೀಡಿದ್ದಾರೆ.
ಈ ಸಿನಿಮಾಗೆ ನಿರ್ದೇಶಕರು ಯಾರು?
'ವಿರೂಪಾಕ್ಷ' ಸಿನಿಮಾಗೆ ಕಾರ್ತಿಕ್ ದಂಡು ನಿರ್ದೇಶನ ಮಾಡುತ್ತಿದ್ದು, 'ರಂಗಸ್ಥಲಂ', 'ಪುಷ್ಪ' ಖ್ಯಾತಿಯ ನಿರ್ದೇಶಕ ಸುಕುಮಾರ್ ಈ ಸಿನಿಮಾಗೆ ಸ್ಕ್ರಿಪ್ಟ್ ಬರೆದಿರುವುದು ವಿಶೇಷ. ಸುಕುಮಾರ್ ರೈಟಿಂಗ್ಸ್ ಸಹಯೋಗದಲ್ಲಿ ಶ್ರೀ ವೆಂಕಟೇಶ್ವರ ಸಿನಿ ಚಿತ್ರ ಎಲ್ಎಲ್ಪಿ ಬ್ಯಾನರ್ ಅಡಿಯಲ್ಲಿ 'ವಿರೂಪಾಕ್ಷ' ಸಿನಿಮಾವನ್ನು ಈ ಚಿತ್ರವನ್ನು ಖ್ಯಾತ ನಿರ್ಮಾಪಕ ಬಿ.ವಿ.ಎಸ್.ಎನ್. ಪ್ರಸಾದ್ ನಿರ್ಮಿಸಿದರೆ, ಬಾಪಿನೀಡು ಪ್ರಸ್ತುತಪಡಿಸಿದ್ದಾರೆ. ವಿಶೇಷವೆಂದರೆ, ಈ ವರ್ಷ ವಿಕ್ರಾಂತ್ ರೋಣ, ಕಾಂತಾರ, ಗುರು ಶಿಷ್ಯರು ಸಿನಿಮಾಗಳಿಗೆ ಸಂಗೀತ ನೀಡಿ ಸದ್ದು ಮಾಡಿರುವ ಅಜನೀಶ್ ಲೋಕನಾಥ್ ಅವರು 'ವಿರೂಪಾಕ್ಷ' ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ.
'ವಿರೂಪಾಕ್ಷ' ಸಿನಿಮಾದ ಕಥೆ ಏನು?
ಇದು 1990ರ ಕಾಲಘಟ್ಟದಲ್ಲಿ ನಡೆಯುವ ಕಥೆಯಾಗಿದ್ದು, ಕಾಡಿಗೆ ಅಂಟಿಕೊಂಡಿರುವ ಹಳ್ಳಿಯೊಂದರಲ್ಲಿ ಮೂಢನಂಬಿಕೆಗಳ ಹೆಸರಿನಲ್ಲಿ ನಡೆಯುವ ಕೆಲವು ವಿಲಕ್ಷಣ ಘಟನೆಗಳನ್ನು ನಾಯಕ ಹೇಗೆ ನಿಭಾಯಿಸುತ್ತಾನೆ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ರಸ್ತೆ ಅಪಘಾತದಿಂದ ಚೇತರಿಸಿಕೊಂಡಿರುವ ಸಾಯಿ ಧರಮ್ ತೇಜ್ ಈ ಚಿತ್ರದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು, ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Sai Dharam Tej Starrer Virupaksha Movie Will Release On April 21st.
15-03-25 03:55 pm
HK News Desk
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 01:47 pm
Mangalore Correspondent
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm