ಬ್ರೇಕಿಂಗ್ ನ್ಯೂಸ್
13-12-22 05:59 pm Mangalore Correspondent ಸಿನಿಮಾ
ಮಂಗಳೂರು, ಡಿ.13: ಬಾಲಿವುಡ್ಡಿನಲ್ಲಿ ತ್ರೀ ಈಡಿಯಟ್ಸ್ ಎನ್ನುವ ಕಾಮೆಡಿ ಚಿತ್ರ ಸಿನಿರಸಿಕರ ಮನ ಗೆದ್ದಿತ್ತು. ಅದೇ ಮಾದರಿಯಲ್ಲಿ ಕನ್ನಡ, ತಮಿಳಿನಲ್ಲಿಯೂ ಚಿತ್ರಗಳು ಬಂದಿದ್ದವು. ಇದೀಗ, ಅದೇ ರೀತಿ ಮೂವರು ಹೀರೋಗಳನ್ನು ಬಳಸ್ಕೊಂಡು ತುಳುವಿನಲ್ಲಿ ಲಾಸ್ಟ್ ಬೆಂಚ್ ಹೆಸರಿನಲ್ಲಿ ಚಿತ್ರ ತಯಾರಾಗಿದೆ. ಕಾಲೇಜು ದಿನಗಳನ್ನು ನೆನಪಿಸುವ ಈ ಚಿತ್ರ ಇದೇ ಡಿಸೆಂಬರ್ 16ರಂದು ತೆರೆಗೆ ಬರಲಿದೆ.
ದಿಯಾ ಖ್ಯಾತಿಯ ಪೃಥ್ವಿ ಅಂಬರ್, ರೂಪೇಶ್ ಶೆಟ್ಟಿ, ವಿನೀತ್ ಕುಮಾರ್ ಮುಖ್ಯ ಭೂಮಿಕೆಯಲ್ಲಿದ್ದು, ಈ ಮೂವರು ಪೋಕರಿ ಹುಡುಗರ ಕಾಲೇಜು ದಿನಚರಿ ಆಧರಿಸಿ ಸಿನಿಮಾವನ್ನು ಹೆಣೆಯಲಾಗಿದೆ. ವಿಐಪೀಸ್ ಲಾಸ್ಟ್ ಬೆಂಚ್ ಎಂಬ ಹೆಸರಿನ ಈ ಚಿತ್ರದಲ್ಲಿ ಕಾಮೆಡಿಯ ಜೊತೆಗೆ ಒಳ್ಳೆಯ ಕಥೆಯನ್ನೂ ತೋರಿಸಲಾಗಿದೆ. ತುಳು ಸಿನಿಮಾ ಅಂದರೆ ಕೇವಲ ಕಾಮೆಡಿ ಮಾತ್ರ ಎಂಬ ಟೀಕೆಗೆ ಇಲ್ಲಿ ಕಥೆಯನ್ನೂ ಕೊಡಲಾಗಿದೆ ಎಂದು ನಾಯಕ ನಟರಲ್ಲಿ ಒಬ್ಬರಾಗಿರುವ ವಿನೀತ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತ್ರೀ ಈಡಿಯಟ್ಸ್ ಚಿತ್ರದ ಪ್ರೇರಣೆ ಅಥವಾ ಅನುಕರಣೆ ಮಾಡಿದ್ದೀರಾ ಎಂಬ ಪ್ರಶ್ನೆಗೆ, ಅಂಥ ಯಾವುದೇ ಅನುಕರಣೆ ಮಾಡಿಲ್ಲ. ಇದು ಸ್ವಂತದ್ದೇ ಕತೆ. ಮೂವರು ಹುಡುಗರ ಕಾಲೇಜು ದಿನಗಳು, ಅಲ್ಲಿ ಆಗುವ ಪೋಕರಿತನಗಳು ಮತ್ತು ಅದರ ಜೊತೆಗೆ ಕಾಮೆಡಿ, ಕತೆ ಇದೆ. ಜನರಿಗೆ ಇಷ್ಟವಾಗುತ್ತೆ ಎಂದು ನಂಬುತ್ತೇವೆ ಎಂದು ಸಿನಿಮಾದ ನಿರ್ದೇಶಕ ಪ್ರಧಾನ್ ಎಂ.ಪಿ. ಹೇಳಿದ್ದಾರೆ. ಚಿತ್ರದಲ್ಲಿ ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ವಿಸ್ಮಯ ವಿನಾಯಕ್, ರವಿ ರಾಮಕುಂಜ, ಪ್ರವೀಣ್ ಮರ್ಕಮೆ, ಆರಾಧ್ಯ ಶೆಟ್ಟಿ, ನಿರೀಕ್ಷಾ ಶೆಟ್ಟಿ, ರೂಪಾ ವರ್ಕಾಡಿ, ಅನಿತಾ, ಐಸಿರಿ ಜೈನ್ ಹೀಗೆ ಬಹು ತಾರಾಗಣ ಇದೆ. ಮೂವರು ಹೀರೋಗಳನ್ನು ಜೊತೆಯಾಗಿಸಿ ತುಳುವಿನಲ್ಲಿ ಚಿತ್ರ ಮಾಡಿದ್ದು ಇದೇ ಮೊದಲು.
ಸಿನಿಮಾಕ್ಕೆ ಉಡುಪಿ ಮೂಲದ ಆಶಿಕಾ ಸುವರ್ಣ ನಿರ್ಮಾಪಕರಾಗಿದ್ದು, ಕಿರಣ್ ಶೆಟ್ಟಿ, ಕಿಶೋರ್ ಮತ್ತು ಮುರಳಿ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಮೊದಲಿಗೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 15 ಸೆಂಟರ್ ಗಳಲ್ಲಿ ರಿಲೀಸ್ ಮಾಡುತ್ತಿದ್ದೇವೆ. ಹೊರ ದೇಶದಲ್ಲಿಯೂ ಚಿತ್ರವನ್ನು ಬಿಡುಗಡೆ ಮಾಡುತ್ತೇವೆ. ಈಗಾಗಲೇ ಅದಕ್ಕೂ ತಯಾರಿ ನಡೆದಿದೆ ಎಂದು ಚಿತ್ರದ ವಿತರಣೆ ಮಾಡಲಿರುವ ಸಚಿನ್ ಉಪ್ಪಿನಂಗಡಿ ಹೇಳಿದರು.
College movie Last bench movie to be released on Dec 16.
15-03-25 03:55 pm
HK News Desk
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 01:47 pm
Mangalore Correspondent
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm