ಬ್ರೇಕಿಂಗ್ ನ್ಯೂಸ್
05-12-22 01:22 pm Source: Vijayakarnataka ಸಿನಿಮಾ
ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ ಅವರು ತಮ್ಮ ಬಹುಕಾಲದ ಗೆಳೆಯ ಸೊಹೇಲ್ ಕಥುರಿಯಾ ಜೊತೆಗೆ ಮದುವೆ ಆಗಿದ್ದಾರೆ. ಭಾನುವಾರ (ಡಿ.4) ಹನ್ಸಿಕಾ ಮೋಟ್ವಾನಿ ಅವರ ಮದುವೆಯು ರಾಜಸ್ಥಾನದ ಜೈಪುರದಲ್ಲಿರುವ ಮುಂದೊಟ ಫೋರ್ಟ್ನಲ್ಲಿ ಅದ್ದೂರಿಯಾಗಿ ನಡೆದಿದೆ. ಮದುವೆಯ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಇದೊಂದು ಡೆಸ್ಟಿನೇಶನ್ ವೆಡ್ಡಿಂಗ್ ಆಗಿದ್ದು, ಎರಡು ಕಡೆಯ ಕುಟುಂಬಸ್ಥರು, ಆತ್ಮೀಯರು ಮಾತ್ರ ಮದುವೆಗೆ ಸಾಕ್ಷಿಯಾಗಿದ್ದರು. ಡಿಸೆಂಬರ್ 2ರಂದು ವಿವಾಹ ಪೂರ್ವ ಕಾರ್ಯಕ್ರಮಗಳು ಶುರುವಾಗಿದ್ದವು. ಡಿಸೆಂಬರ್ 3ರಂದು ಸಂಗೀತ, ಮೆಹೆಂದಿ ಕಾರ್ಯಕ್ರಮವಿತ್ತು. ಡಿ.4ರಂದು ಈ ಜೋಡಿ ಸಪ್ತಪದಿ ತುಳಿದಿದೆ. ಅಂದಹಾಗೆ, ಸೊಹೇಲ್ ಅವರು ಮುಂಬೈ ಮೂಲದ ಉದ್ಯಮಿಯಾಗಿದ್ದಾರೆ. ಹನ್ಸಿಕಾ ಅವರಿಗೆ ಬ್ಯುಸಿನೆಸ್ ಪಾರ್ಟನರ್ ಕೂಡ ಹೌದು! ಒಂದಷ್ಟು ವರ್ಷಗಳಿಂದ ಇವರಿಬ್ಬರ ನಡುವೆ ಸ್ನೇಹ ಇತ್ತು. ಆನಂತರ ಇವರಿಬ್ಬರು ಒಟ್ಟಾಗಿ ಉದ್ಯಮ ಶುರುಮಾಡಿದರು. ಈಗ ಮದುವೆ ಆಗಿ, ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
ಐಫೆಲ್ ಟವರ್ ಎದುರು ಪ್ರಪೋಸ್
ಮದುವೆಗೂ ಮುನ್ನ ಪ್ಯಾರೀಸ್ನಲ್ಲಿರುವ ಐಫೆಲ್ ಟವರ್ ಮುಂದೆ ಸೊಹೇಲ್ ಕಥುರಿಯಾ ಅವರು ಮಂಡಿಯೂರಿ ಕೂತು ಹನ್ಸಿಕಾಗೆ, 'ಮದುವೆಯಾಗುತ್ತೀರಾ..' ಎಂದು ಪ್ರಶ್ನೆ ಮಾಡಿದ್ದರು. ಐಫೆಲ್ ಟವರ್ ಮುಂದೆ ಹೂವು, ಕ್ಯಾಂಡಲ್ ಹಚ್ಚಿ ಸಿಂಗಾರ ಕೂಡ ಮಾಡಲಾಗಿತ್ತು. ಪ್ರೇಮ ನಿವೇದನೆ ಮಾಡಿರುವ ಫೋಟೋಗಳನ್ನು ಹಂಚಿಕೊಂಡಿದ್ದ ಹನ್ಸಿಕಾ, ಎಂದೆಂದಿಗೂ ಜೊತೆಗೆ ಇರುವೆ ಎಂಬರ್ಥದಲ್ಲಿ ಕ್ಯಾಪ್ಷನ್ ನೀಡಿದ್ದರು.
31ರ ಹರೆಯದ ಹನ್ಸಿಕಾ ಮೋಟ್ವಾನಿ ಮೂಲತಃ ಉತ್ತರ ಭಾರತದವರಾದರು. ಆದರೆ ಅವರಿಗೆ ಸಿನಿಮಾರಂಗದಲ್ಲಿ ಹೆಚ್ಚು ಖ್ಯಾತಿ ಸಿಕ್ಕಿದ್ದು ದಕ್ಷಿಣ ಭಾರತದಲ್ಲಿ. ಬಾಲನಟಿಯಾಗಿ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ಅವರು, ಅಲ್ಲು ಅರ್ಜುನ್ ನಟನೆಯ 'ದೇಶಮುದುರು' ಸಿನಿಮಾದ ಮೂಲಕ ನಾಯಕಿಯಾದರು. ಆಗ ಅವರಿಗಿನ್ನೂ 16 ವರ್ಷ ವಯಸ್ಸು. ಆನಂತರ ಪುನೀತ್ ರಾಜ್ಕುಮಾರ್ ಅವರ 'ಬಿಂದಾಸ್'ನಲ್ಲಿ ನಟಿಸುವ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟರು. ಪ್ರಸ್ತುತ ಹನ್ಸಿಕಾ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. 'ಮೈ ನೇಮ್ ಈಸ್ ಶ್ರುತಿ', 'ರೌಡಿ ಬೇಬಿ', '105 ಮಿನಿಟ್ಸ್', 'ಗಾರ್ಡಿಯನ್' ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದು, ಅವೆಲ್ಲ ತೆರೆಗೆ ಬರಬೇಕಿದೆ. ಈ ಮಧ್ಯೆ 'ನಶಾ' ಮತ್ತು 'ಮೈ3' ಎಂಬೆರಡು ವೆಬ್ ಸಿರೀಸ್ನಲ್ಲೂ ಹನ್ಸಿಕಾ ನಟಿಸುತ್ತಿದ್ದಾರೆ.
ಸದ್ಯ ಸೊಹೇಲ್ ಜೊತೆಗೆ ಹೊಸ ಜೀವನ ಆರಂಭಿಸಿರುವ ಹನ್ಸಿಕಾ ಮುಂದಿನ ದಿನಗಳಲ್ಲಿ ಸಿನಿಮಾರಂಗದಲ್ಲಿ ಸಕ್ರಿಯರಾಗಿರುತ್ತಾರಾ? ಇಲ್ಲವಾ ಎಂಬುದನ್ನು ಕಾದುನೋಡಬೇಕು.
Actress Hansika Motwani And Sohail Kathuria Get Married In Jaipur.
15-03-25 03:55 pm
HK News Desk
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 01:47 pm
Mangalore Correspondent
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm