ಬ್ರೇಕಿಂಗ್ ನ್ಯೂಸ್
04-11-22 01:39 pm Source: Vijayakarnataka ಸಿನಿಮಾ
ರಮ್ಯಾ ಅವರು 8 ವರ್ಷದಿಂದ ನಟಿಸಿಲ್ಲ, ಈಗ ಅವರು ನಮ್ಮ ಸಿನಿಮಾದಲ್ಲಿ ನಟಿಸಬೇಕು. ರಮ್ಯಾ ( Ramya ) ನಮ್ಮ ಸಿನಿಮಾದಲ್ಲಿ ನಟಿಸಿಲ್ಲ ಅಂದ್ರೆ ದೇಹದಲ್ಲಿರುವ ರಕ್ತ ಕೊಡ್ತೀನಿ, ರಮ್ಯಾ ನೋಡದಿರುವ ಕಣ್ಣುಗಳನ್ನು ಕತ್ತರಿಸಿಹಾಕಿಬಿಡ್ತೀನಿ, ಕೈಕಾಲು ಕಟ್ ಮಾಡಿಕೊಳ್ತೀವಿ ಅಂತ ಹಾಸ್ಟೆಲ್ ಹುಡುಗರು ಬೇಡಿಕೆಯಿಟ್ಟಿದ್ದಾರೆ. ಆ ನಂತರ ರಮ್ಯಾ ಅವರು ಓಕೆ ಎಂದಿದ್ದಾರೆ. ಏನಿದು ಈ ರೀತಿ ಅಂತ ಕೆಲವರಿಗೆ ಸಂದೇಹ ಬಂದಿರಬಹುದು.
ಸ್ಯಾಂಡಲ್ವುಡ್ನ ಮೋಹಕ ತಾರೆ ರಮ್ಯಾ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಮೂಲಕ ಕಮ್ಬ್ಯಾಕ್ ಮಾಡುತ್ತಾರೆ ಎನ್ನಲಾಗಿತ್ತು. ಕೊನೆ ಕ್ಷಣದಲ್ಲಿ ರಮ್ಯಾ ಆ ಚಿತ್ರದಿಂದ ಹೊರ ಬಂದರು. ಈಗ ಅವರು ಇನ್ನೊಂದು ಚಿತ್ರದಲ್ಲಿಅತಿಥಿ ಪಾತ್ರದಲ್ಲಿ ನಟಿಸಿದ್ದಾರಂತೆ, ಅದು ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರ ( Hostel Hudugaru Bekagiddare ). ಆದರೆ ಚಿತ್ರತಂಡ, ರಮ್ಯ ಅವರು ನಟಿಸಿಲ್ಲ, ಬದಲಿಗೆ ಪ್ರೋಮೊದಲ್ಲಿ ಮಾತ್ರ ಇದ್ದಾರೆ ಎಂದಿದೆ.

ನಿತಿನ್ ಕೃಷ್ಣ ಮೂರ್ತಿ ಈ ಚಿತ್ರವನ್ನು ನಿರ್ದೇಶಿಸಿದ್ದು, ಇವರು ಮನರಂಜನಾ ವಾಹಿನಿಯೊಂದರಲ್ಲಿ ಮುಖ್ಯ ಹುದ್ದೆಯಲ್ಲಿದ್ದರು. ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಫನ್ ಕಾಮಿಡಿ ಜಾನರ್ನ ಚಿತ್ರ. ಇದರಲ್ಲಿ 300 ಜನ ಹೊಸ ಕಲಾವಿದರು ನಟಿಸಿದ್ದಾರೆ. ಒಂದು ಹಾಸ್ಟೆಲ್ನಲ್ಲಿ ನಡೆಯುವ ಘಟನೆಗಳೇ ಈ ಸಿನಿಮಾಗೆ ಸ್ಪೂರ್ತಿ. ಒಂದಿಡೀ ಹಾಸ್ಟೆಲ್ ಹಲವು ತಮಾಷೆಗಳ ಆಗರವಾಗಿರುತ್ತದೆ. ಅದನ್ನು ಹೇಗೆ ನಡೆಯುತ್ತದೋ ಹಾಗೆ ಸೆರೆ ಹಿಡಿದರೆ ಹೇಗಿರುತ್ತದೆ ಎಂಬುದರ ಫಾರ್ಮಾಟ್ ಈ ಚಿತ್ರ. ಇದನ್ನು ಫೌಂಡ್ ಪುಟೇಜ್ ಕಾಮಿಡಿ ಎಂದು ಸಹ ಕರೆಯುತ್ತಾರೆ’ ಎಂದಿದ್ದಾರೆ ನಿರ್ದೇಶಕ ನಿತಿನ್ ಕೃಷ್ಣಮೂರ್ತಿ.
‘ರಮ್ಯಾ ಅವರು ಸಿನಿಮಾದಲ್ಲಿ ನಟಿಸುತ್ತಾರಾ ಇಲ್ಲವಾ ಎಂಬುದನ್ನು ನಾವು ಹೇಳಿಲ್ಲ. ಆದರೆ ಈ ಪ್ರೋಮೊ ವಿಡಿಯೋದಲ್ಲಂತೂ ಅವರಿದ್ದಾರೆ. ಅಷ್ಟನ್ನು ಮಾತ್ರ ನಾನು ಹೇಳುತ್ತೇನೆ. ಹೊಸಬರಿಗೆ ರಮ್ಯಾ ಅವರಂತಹ ದೊಡ್ಡ ನಟಿಯ ಬೆಂಬಲ ಸಿಕ್ಕಿದ್ದು ನಮ್ಮ ಅದೃಷ್ಟ’ ಎಂದು ಅಡ್ಡ ಗೋಡೆಯ ಮೇಲೆ ದೀಪವನ್ನು ಇಟ್ಟಿದ್ದಾರೆ ನಿರ್ದೇಶಕರು. ಒಟ್ಟಾರೆ ರಮ್ಯಾ ಕಮ್ಬ್ಯಾಕ್ ಇನ್ನೂ ನಿರ್ಧಾರವಾಗಿಲ್ಲ. ಆದರೆ ಅವರ ನಟನೆಯ ಸಿನಿಮಾದ ಅಧಿಕೃತ ಅನೌನ್ಸ್ಮೆಂಟ್ ಆಗಲಿದೆ ಎಂಬ ಮಾತು ಕೇಳಿಬರುತ್ತಿದೆ. ಎಲ್ಲದಕ್ಕೂ ರಮ್ಯ ಅವರೇ ಉತ್ತರಿಸಬೇಕಿದೆ.
Actress Ramya Act In Hostel Hudugaru Bekagiddare Movie Promotional Video.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 07:46 pm
HK News Staffer
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ’ ಹೆಸರು...
15-09-26 12:50 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm