ಬ್ರೇಕಿಂಗ್ ನ್ಯೂಸ್
22-10-22 02:13 pm Source: Vijayakarnataka ಸಿನಿಮಾ
ಬೆಂಗಳೂರಿನ ಅರಮನೆ ಮೈದಾನದಲ್ಲಿ ಪುನೀತ್ ರಾಜ್ಕುಮಾರ್ ( Puneeth Rajkumar ) ಹೆಸರಿನಲ್ಲಿ 'ಪುನೀತ ಪರ್ವ' ಕಾರ್ಯಕ್ರಮ ( Puneeth Parva ) ನಡೆಯಿತು. ಆ ಸಂದರ್ಭದಲ್ಲಿ ಪುನೀತ್ ಅವರ ಕನಸಿನ ಪ್ರಾಜೆಕ್ಟ್ ಬಗ್ಗೆ ಪ್ರಕಾಶ್ ರೈ ಮಾತನಾಡಿದ್ದಾರೆ. ಅಪ್ಪುಗೆ ಕಾಡಿನ ಮೇಲಿದ್ದ ಪ್ರೀತಿ, ಗಂಧದ ಗುಡಿ ( Gandhada Gudi ) ಸಾಕ್ಷ್ಯಚಿತ್ರ, ಸಹಾಯ ಮಾಡುವ ಗುಣದ ಬಗ್ಗೆ ಪ್ರಕಾಶ್ ರೈ ( Prakash Raj ) ಮಾತನಾಡಿದ್ದಾರೆ.
ಪ್ರಕಾಶ ರೈ ಹೇಳಿದ್ದಿಷ್ಟು..
ಅಪ್ಪು ಈ ವೇದಿಕೆ ಮೇಲಿದ್ದಿದ್ದರೆ ಏನು ಹೇಳುತ್ತಿದ್ದರು ಅಂತ ಯೋಚನೆ ಮಾಡುತ್ತಿದ್ದೆ, ಅಪ್ಪು ಅವರ ಸೌಹಾರ್ದತೆ, ಹೃದಯ ವೈಶಾಲ್ಯತೆ ನನಗೆ ನೆನಪಾಯ್ತು. ಗಂಧದ ಗುಡಿ ಕಾರ್ಯಕ್ರಮದಲ್ಲಿ ಅಪ್ಪು ಇದ್ದಿದ್ದರೆ ಮೊದಲು ಕಾಂತಾರ ಎನ್ನುತ್ತಿದ್ದರು. ಕನ್ನಡದಲ್ಲಿ ಒಳ್ಳೆಯ ಪ್ರತಿಭೆ ಇದ್ದರೆ, ಒಳ್ಳೆಯ ಸಿನಿಮಾ ಬಂದರೆ ಅಪ್ಪು ತುಂಬ ಖುಷಿ ಪಡುತ್ತಿದ್ದರು.
ಅಪ್ಪು ನಿಜಕ್ಕೂ ಇಂದು ಕಾಂತಾರದ ಬಗ್ಗೆ ಮಾತನಾಡುತ್ತಿದ್ದರು, ತುಂಬ ಪ್ರೀತಿಸುವ ರಿಷಬ್ ಶೆಟ್ಟಿ ಅವರನ್ನು ತಬ್ಬಿಕೊಳ್ತಿದ್ದರು, ಹೊಂಬಾಳೆ ಫಿಲ್ಮ್ಸ್ನ ವಿಜಿಯನ್ನು ಅಪ್ಪಿಕೊಳ್ತಿದ್ದರು. ಅಪ್ಪು ಪರವಾಗಿ ನಾನು ಕಾಂತಾರ ತಂಡಕ್ಕೆ ಧನ್ಯವಾದ ಹೇಳುವೆ. ರಿಷಬ್ ಶೆಟ್ಟಿಗೆ ಥ್ಯಾಂಕ್ಯು. ಕನ್ನಡದ ಜನಪದವನ್ನು, ಈ ಮಣ್ಣಿನ ಶ್ರೀಮಂತಿಕೆಯನ್ನು, ಕನ್ನಡದ ಸೊಗಡನ್ನು ಇಡೀ ಪ್ರಪಂಚಕ್ಕೆ ಸಾರಿ ಹೇಳುತ್ತಿರುವ ಕಾಂತಾರಕ್ಕೆ ಧನ್ಯವಾದಗಳು.
ಅಪ್ಪು ಕಳೆದುಕೊಂಡಾಗ 4-5 ತಿಂಗಳು ನನಗೆ ನಿದ್ದೆ ಬರುತ್ತಿರಲಿಲ್ಲ. ನಾನು ಕರ್ನಾಟಕದಲ್ಲಿ ಮಾತ್ರ ಇರೋದಿಲ್ಲ, ಬೇರೆ ಕಡೆಯೂ ಹೋಗುತ್ತಿರುತ್ತೇನೆ. ಅಪ್ಪು ರೆಂಬೆ ಕೊಂಬೆಯ ಸೊಬಗು ಬೇರೆ ಕಡೆಗೂ ಹಬ್ಬಿರೋದರಿಂದ ಈ ಕಾರ್ಯಕ್ರಮಕ್ಕೆ ಪರಭಾಷಾ ಕಲಾವಿದರು ಆಗಮಿಸಿದ್ದಾರೆ.
ಅಪ್ಪುವನ್ನು ಹೊಗಳೋದೊಂದೇ ಅಲ್ಲ, ಅಪ್ಪು ಇಲ್ಲದ ಅನಾಥಭಾವ ನಮ್ಮನ್ನು ಕಾಡಬಾರದು, ಅದು ನಮಗೆ ಸ್ಫೂರ್ತಿಯಾಗಬೇಕು. ಪುನರ್ಜನ್ಮ ನಿರಂತರವಾಗಬೇಕು. 4 ತಿಂಗಳ ನಂತರದಲ್ಲಿ ಸುಮ್ಮನೆ ಮಾತನಾಡಬೇಡಿ ಸರ್, ಏನಾದರೂ ಮಾಡಿ ಅಂತ ಅಪ್ಪು ನನಗೆ ಹೇಳಿದ್ರು. ಆಮೇಲೆ ನಾನು ಶಿವಣ್ಣನ ಮನೆಗೆ ಹೋಗಿ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಅಪ್ಪು ಎಕ್ಸ್ಪ್ರೆಸ್ ಎಂಬ ಆಂಬುಲೆನ್ಸ್ ಓಡಬೇಕು ಅಂತ ಹೇಳಿದೆ. ಆಂಬುಲೆನ್ಸ್ಗೆ ಎಷ್ಟಾಗತ್ತೆ ಅಂತ ಗೊತ್ತಿಲ್ಲ ಅಂತ ನಾನು ಶಿವಣ್ಣನಿಗೆ ಹೇಳಿದಾಗ ಗೀತಕ್ಕ ಕೂಡ ನಾನು ಆಂಬುಲೆನ್ಸ್ ಕೊಡ್ತೀನಿ ಎಂದಿದ್ದಾರೆ.
ತಮಿಳು ನಟ ಸೂರ್ಯ ಅವರು ಸಾಕಷ್ಟು ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದಾರೆ. ನಾನು ಆಂಬುಲೆನ್ಸ್ ಕೊಡಬೇಕು ಎನ್ನುವ ಉದ್ದೇಶವನ್ನು ತಿಳಿದ, ಸೂರ್ಯ ಅವರು ಅಪ್ಪು ನಿಮ್ಮೊಬ್ಬರ ಆಸ್ತಿಯಲ್ಲ, ನಮ್ಮ ಆಸ್ತಿಯೂ ಹೌದು ಅಂತ ಹೇಳಿ ನಾನು ಕೊಡ್ತೀನಿ ಅಂತ ಒಂದು ಆಂಬುಲೆನ್ಸ್ ನೀಡಿದರು. ಚಿರಂಜೀವಿ ಕೂಡ ಒಂದು ಆಂಬುಲೆನ್ಸ್ ನೀಡಿದರು. ಒಬ್ಬ ವ್ಯಕ್ತಿ ಎಷ್ಟು ಜನರನ್ನು ಬೆಳೆಸುತ್ತಾನೆ ಎನ್ನೋದರ ಮೇಲೆ ಅವರ ಸಾಧನೆ ನಿರ್ಧರಿತವಾಗುತ್ತದೆ. ಈ ಹಿಂದೆ ನನಗೆ ಕಾಡು ಅಂದರೆ ತುಂಬ ಇಷ್ಟ ಎಂದು ಪುನೀತ್ ನನಗೆ ಹೇಳಿದ್ದರು. ಕಾಡು ರೊಮ್ಯಾಂಟಿಕ್ ವಿಷಯವಲ್ಲ. ಕಾಡು ತುಂಬ ನಿಗೂಢ. ಜೀವನಪ್ರೀತಿ ಇರೋರಿಗೆ ಮಾತ್ರ ಕಾಡಿನ ಮೇಲೆ ಪ್ರೀತಿ ಉಂಟಾಗುತ್ತದೆ. ನಾವು ಎರಡು ಕಣ್ಣಿನಿಂದ ಕಾಡು ನೋಡುತ್ತಿದ್ದರೆ, ನೂರು ಕಣ್ಣುಗಳು ನಮ್ಮನ್ನು ನೋಡುತ್ತಿರುತ್ತದೆ, ಅಂಥ ವಿಸ್ಮಯ ಇರುತ್ತದೆ.
ಅಪ್ಪು ಅವರು ಕಾಡಿನಲ್ಲಿ ಅಪ್ಪಾಜಿ ನೋಡೋಕೆ ಹೋದರೋ ಅಥವಾ ಏಕಾಂತ ಪಡೆಯಲು ಹೋದರೋ ಗೊತ್ತಿಲ್ಲ. ಒಂದು ವರ್ಷ ಅಪ್ಪು ಕಾಡಿನಲ್ಲಿ ಓಡಾಡಿದ್ದಾರೆ. ಗಂಧದ ಗುಡಿಯ ಬೆಟ್ಟ ಗುಡ್ಡ ಚಿರತೆ, ಆನೆ ಎಲ್ಲವನ್ನು ನೋಡಿ ನಮ್ಮಮುಂದೆ ಇಟ್ಟಿದ್ದಾರೆ. ಗಂಧದ ಗುಡಿ ಈಗ ನಮ್ಮ ಮುಂದಿದೆ. ಅಪ್ಪು ಜೀವನದಲ್ಲಿ ಅದ್ಭುತವಾದ ಕೆಲಸವನ್ನು ಮಾಡಿ ಹೋಗಿದ್ದಾರೆ. ಗಂಧದ ಗುಡಿ ಕೇವಲ ಸಿನಿಮಾವಲ್ಲ, ನಮ್ಮೆಲ್ಲರ ಪ್ರೀತಿಯ ಅಪ್ಪುವಿನ ಕೊನೆಯ ಕನಸು. ನಾವು ಆ ಕನಸನ್ನು ಸಾಕಾರಗೊಳಿಸಬೇಕು. ಈ ಹಿಂದೆ ಮೇಕಪ್ನಲ್ಲಿ, ಪಾತ್ರಗಳಲ್ಲಿ ಅಪ್ಪುವನ್ನು ನೋಡಿದ್ದೆವು, ಗಂಧದ ಗುಡಿಯಲ್ಲಿ ಪುನೀತ್ ಅವರಾಗಿ ಕಾಣಿಸಿಕೊಂಡಿದ್ದಾರೆ. 46ನೇ ವರ್ಷಕ್ಕೆ ಪ್ರಬುದ್ಧತೆಯಿಂದ ಕಾಡಿನ ಬೇರೆ ಬೇರೆ ಆಯಾಮಗಳನ್ನು ನಮಗೆ ತೋರಿಸಿದ್ದಾರೆ. ಎಲ್ಲರೂ ಗಂಧದ ಗುಡಿಯನ್ನು ಅಕ್ಟೋಬರ್ 28ಕ್ಕೆ ನೋಡಿ..
Prakash Raj Speaks About Puneeth Rajkumar Dream Project Gandhada Gudi Release.
15-03-25 03:55 pm
HK News Desk
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 08:32 pm
Mangalore Correspondent
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm