ಬ್ರೇಕಿಂಗ್ ನ್ಯೂಸ್
20-10-22 01:31 pm Source: Vijayakarnataka ಸಿನಿಮಾ
ಹಿರಿಯ ನಟ ಅನಂತ್ನಾಗ್ ಈಗ ತಿಮ್ಮಯ್ಯನಾಗಿದ್ದಾರೆ. ಹೌದು, ಅವರ ನಟನೆಯ ಹೊಸ ಸಿನಿಮಾಗೆ 'ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯ' ಎಂದು ಹೆಸರಿಡಲಾಗಿದೆ. ಒಂದು ತಿಮ್ಮಯ್ಯ ಅನಂತ್ ನಾಗ್ ಆದರೆ, ಇನ್ನೊಂದು ತಿಮ್ಮಯ್ಯ ದೂದ್ ಪೇಡ ದಿಗಂತ್. ಸಂಜಯ್ ಶರ್ಮ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಈ ಸಿನಿಮಾದಲ್ಲಿ ಐಂದ್ರಿತಾ ರೇ, ಶುಭ್ರ ಅಯ್ಯಪ್ಪ, ಅಂಬುಜಾಕ್ಷಿ, ಪ್ರಕಾಶ್ ತುಮ್ಮಿನಾಡು, ವಿನೀತ್ ಕುಮಾರ್, ಮಿಮಿಕ್ರಿ ಗೋಪಿ ಮುಂತಾದವರು ಅಭಿನಯಿಸಿದ್ದಾರೆ.
ಮತ್ತೊಮ್ಮೆ ಜೊತೆಯಾದ ದಿಗಂತ್ ಮತ್ತು ಅನಂತ್ ನಾಗ್
ಇದೊಂದು ತಾತ ಮೊಮ್ಮಗನ ಕಥೆಯಾಗಿದ್ದು, ಅನಂತ್ ನಾಗ್ ಮತ್ತು ದಿಗಂತ್ ತಾತ ಮೊಮ್ಮಗನಾಗಿ ನಟಿಸುತ್ತಿದ್ದಾರೆ. ವಿಶೇಷ ಎಂದರೆ 'ದೇವ್ ಸನ್ ಆಫ್ ಮುದ್ದೇಗೌಡ', 'ಪಂಚರಂಗಿ', 'ಗಾಳಿಪಟ', 'ಗಾಳಿಪಟ 2' ಸೇರಿದಂತೆ ಹಲವು ಸಿನಿಮಾಗಳಲ್ಲಿ ಅನಂತ್ ನಾಗ್ ಜತೆ ದಿಗಂತ್ ನಟಿಸಿದ್ದರು. ಈಗ ಮತ್ತೆ ಒಂದಾಗಿದ್ದಾರೆ. 'ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯ ತಾತ ಮತ್ತು ಮೊಮ್ಮಗನ ಕಥೆ. ಇವರಿಬ್ಬರೂ ಮೂವತ್ತು ವರ್ಷದಿಂದ ಭೇಟಿ ಆಗಿರುವುದಿಲ್ಲ. ಆದರೆ ಭೇಟಿಯಾಗಿ ಜತೆಗೆ ಯಾವುದೋ ಒಂದು ವಿಷಯಕ್ಕೆ ಇಬ್ಬರು ಮೂರು ತಿಂಗಳು ಒಟ್ಟಿಗೆ ಇರಬೇಕೆಂದು ಒಪ್ಪಂದವಾಗುತ್ತದೆ. ಹೀಗೆ ಜತೆಯಲ್ಲಿದ್ದಾಗ, ಇವರ ನಡುವೆ ಆಗುವ ಜಗಳ, ತರಲೆ, ತಮಾಷೆಗಳೇ ಸಿನಿಮಾದ ಜೀವಾಳ’ಎಂದು ಮಾಹಿತಿ ನೀಡಿದ್ದಾರೆ.
'ಈ ಸಿನಿಮಾ ಪ್ರೇಕ್ಷಕರಿಗೆ ಬಹಳ ಇಷ್ಟವಾಗಲಿದೆ’ಎಂದ ದಿಗಂತ್
‘ಸಂಜಯ್ ಶರ್ಮ ಅವರು ಜಾಹೀರಾತು ಕ್ಷೇತ್ರದಲ್ಲಿ ಬಹಳ ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಅವರ ಕಥೆ ನನಗೆ ಬಹಳ ಇಷ್ಟವಾಯಿತು. ಅನಂತ್ ಅವರ ಮೊಮ್ಮಗನಾಗಿ ನಟಿಸಿದ್ದು ನನಗೆ ಖುಷಿಯ ವಿಚಾರ. ಅವರು ನಟನೆಯಲ್ಲಿ ಬಹಳ ದೊಡ್ಡ ಅನುಭವ ಇರುವವರು. ಪಾತ್ರವೊಂದಕ್ಕೆ ಅವರ ತಯಾರಿ ಎಲ್ಲವೂ ಅದ್ಭುತವಾಗಿರುತ್ತದೆ. ನನ್ನ ಹೆಸರು ಮತ್ತು ಅನಂತ್ ಸರ್ ಅವರ ಹೆಸರು ಒಂದೇ ಆಗಿರುತ್ತದೆ. ಕೊಡಗಿನಲ್ಲಿ ತಾತ ಮತ್ತು ಮೊಮ್ಮಕ್ಕಳ ಹೆಸರು ಸಾಮಾನ್ಯವಾಗಿ ಒಂದೇ ಆಗಿರುತ್ತದೆ. ಅದೇ ರೀತಿ ಈ ಚಿತ್ರದಲ್ಲಿಯೂ ಹೆಸರಿಟ್ಟುಕೊಂಡಿದ್ದೇವೆ. ಸಿನಿಮಾ ಪ್ರೇಕ್ಷಕರಿಗೆ ಬಹಳ ಇಷ್ಟವಾಗಲಿದೆ’ಎನ್ನುವುದು ದಿಗಂತ್ ಅವರ ಮಾತು.
ಈ ಚಿತ್ರಕ್ಕೆ ಜಯಂತ್ ಕಾಯ್ಕಿಣಿ, ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ. ಅನೂಪ್ ಸೀಳಿನ್ ಸಂಗೀತ ನೀಡಿದ್ದು, ಬೆಂಗಳೂರು, ಕೊಡಗು ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸದ್ಯ ಪೋಸ್ವ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿ ಆಗಿದೆ. ರಾಜೇಶ್ ಶರ್ಮಾ ಈ ಸಿನಿಮಾಗೆ ಹಣ ಹಾಕಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ವಿನೀತಾ ಕಪೂರ್ ಶರ್ಮಾ ಕೆಲಸ ಮಾಡಿದ್ದಾರೆ.
ಕೋಟ್:
ಮೂವತ್ತು ವರ್ಷಗಳ ನಂತರ ಭೇಟಿಯಾಗುವ ತಾತ ಮೊಮ್ಮಗನ ಕಥೆ ರಿಯಲಿಸ್ಟಿಕ್ ಆಗಿ ಮೂಡಿ ಬಂದಿದೆ. ಹೀಗೆ ಹಲವು ವರ್ಷಗಳ ನಂತರ ಭೇಟಿಯಾದಾಗ ಇಬ್ಬರ ನಡುವೆ ನಡೆಯುವ ಘಟನೆಗಳು ಪ್ರೇಕ್ಷಕರಿಗೆ ನಗು ಹುಟ್ಟಿಸುತ್ತದೆ.
Diganth And Anant Nag Join Hands For Thimayya And Thimayya Movie.
15-03-25 03:55 pm
HK News Desk
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 08:32 pm
Mangalore Correspondent
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm