ಬ್ರೇಕಿಂಗ್ ನ್ಯೂಸ್
15-10-22 02:44 pm Source: Vijayakarnataka ಸಿನಿಮಾ
ನಾವು ಯಾವಾಗ ನಮ್ಮ ನೆಲದ ಕಥೆಗಳನ್ನು ನೋಡಬಹುದು ಎಂದು ಕಾಯುತ್ತಿದ್ದ ಪ್ರೇಕ್ಷಕರಿಗೆ ಒಂದರ ಹಿಂದೆ ಒಂದರಂತೆ ಸಿನಿಮಾಗಳು ಬರುತ್ತಿವೆ. ಮೊನ್ನೆಯಷ್ಟೇ ಬಿಡುಗಡೆಯಾದ 'ಗುರು ಶಿಷ್ಯರು', 'ಕಾಂತಾರ' ಸಿನಿಮಾಗಳು ಅಚ್ಚ ಕನ್ನಡದ ಕಥೆಗಳನ್ನು ಹೊಂದಿ ಗಮನ ಸೆಳೆದಂಥವು. ಈಗ ಅದೇ ಸಾಲಿಗೆ ಸೇರಲು ಸಿದ್ಧವಾಗಿದೆ ಅಭಿ ನಿರ್ದೇಶನದ 'ಸೋಮು ಸೌಂಡ್ ಇಂಜಿನಿಯರ್'. ಸಾಕಷ್ಟು ಭರವಸೆ ಮೂಡಿಸಿರುವ ಈ ಸಿನಿಮಾದ ಟೀಸರ್ ಇಂದು ಸಂಜೆ ಬಿಡುಗಡೆಯಾಗಲಿದ್ದು, ಅದರ ಎಕ್ಸ್ಕ್ಲೂಸಿವ್ ವಿವರ ಇಲ್ಲಿದೆ.
'ಸೋಮು ಸೌಂಡ್ ಇಂಜಿನಿಯರ್' ಚಿತ್ರೀಕರಣ ಆರಂಭಿಸುವುದಕ್ಕೆ ಮುನ್ನವೇ ಸದ್ದು ಮಾಡಿದ ಸಿನಿಮಾ. ಅದಕ್ಕೆ ಮುಖ್ಯ ಕಾರಣ ಚಿತ್ರದ ತಂತ್ರಜ್ಞರು. ಈ ಚಿತ್ರವನ್ನು ತಂತ್ರಜ್ಞರ ಸಿನಿಮಾ ಎನ್ನಬಹುದು. ಕನ್ನಡದ ಎರಡು ಸೂಪರ್ ಹಿಟ್ ಸಿನಿಮಾಗಳಾದ 'ಸಲಗ' ಮತ್ತು 'ಟಗರು' ಚಿತ್ರಗಳ ತಂತ್ರಜ್ಞರು ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ.
'ಸೋಮು ಸೌಂಡ್ ಇಂಜಿನಿಯರ್'ನಲ್ಲಿ ನಮ್ಮ ನೆಲದ ಕಥೆ ಇದೆ. ಉತ್ತರ ಕರ್ನಾಟಕದ ಹಳ್ಳಿಯೊಂದರಲ್ಲಿ ನಡೆಯುವ ಕಥೆ ಈ ಚಿತ್ರದಲ್ಲಿದ್ದು, ಇಳಕಲ್, ಗಂಜಿಹಾಳ ಮತ್ತು ಕೂಡಲ ಸಂಗಮದಲ್ಲಿ ಚಿತ್ರೀಕರಣ ಮಾಡಲಾಗಿದೆ. ಈ ಭಾಗದ ಸಂಸ್ಕೃತಿ, ಭಾಷೆ, ಉತ್ತರ ಕರ್ನಾಟಕದ ಜವಾರಿ ಸಂಗೀತ, ಸ್ಥಳೀಯ ಹಾಡುಗಳು ಜತೆಗೆ ಸ್ಥಳೀಯರನ್ನು ಬಳಸಿಕೊಂಡು ಸಿನಿಮಾ ಮಾಡಲಾಗಿದೆ. ಟೀಸರ್ನಲ್ಲಿ ಇವೆಲ್ಲದರ ಒಂದು ಝಲಕ್ ಇದೆ. ಜತೆಗೆ ಭಾವನಾತ್ಮಕ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗುತ್ತಿದೆ.
'ತಂತ್ರಜ್ಞರಿಗೆ ಇಂತಹದ್ದೊಂದು ಸಿನಿಮಾ ಮಾಡಲು ತಂಡದ ಸಹಕಾರ ಮತ್ತು ನಿರ್ಮಾಪಕರು ಬಹಳ ಮುಖ್ಯ. ಆ ವಿಚಾರದಲ್ಲಿ ನಾನು ಕೊಂಚ ಅದೃಷ್ಟವಂತ ಎನ್ನಬಹುದು. ಇಂತಹ ಒಂದು ಕಥೆಯನ್ನು ಮೆಚ್ಚಿ ಬಂಡವಾಳ ಹೂಡಿದ ನಮ್ಮ ನಿರ್ಮಾಪಕ ಕ್ರಿಸ್ಟೋಫರ್ ಕಿಣಿಯವರಿಗೆ ಧನ್ಯವಾದ ಹೇಳಬೇಕು' ಎಂದಿದ್ದಾರೆ ನಿರ್ದೇಶಕ ಅಭಿ.
'ಸೋಮು ಸೌಂಡ್ ಇಂಜಿನಿಯರ್' ಸಿನಿಮಾದಲ್ಲಿ ನಾಯಕರಾಗಿ ಶ್ರೇಷ್ಠ ನಟಿಸಿದ್ದಾರೆ. ಇವರು 'ಸಲಗ' ಸಿನಿಮಾದಲ್ಲಿ 'ಕೆಂಡ' ಎನ್ನುವ ಪಾತ್ರದಲ್ಲಿ ನಟಿಸಿದ್ದರು. ಶ್ರುತಿ ಪಾಟೀಲ್ ಎಂಬ ಯುವತಿ ನಾಯಕಿಯಾಗಿ ನಟಿಸಿದ್ದಾರೆ. ಜಹಾಂಗೀರ್, ಯಶ್ ಶೆಟ್ಟಿ ಎರಡು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇವರುಗಳ ಜತೆ ನಟಿಸಿರುವ ಕಲಾವಿದರಲ್ಲಿ ಶೇ.90ರಷ್ಟು ಮಂದಿ ಹೊಸಬರು. ಸಿನಿಮಾದ ಆಶಯಕ್ಕೆ ತಕ್ಕಂತೆ ಪ್ರತಿಯೊಬ್ಬರೂ ಸಹಜವಾಗಿ ನಟಿಸಿದ್ದಾರೆ. ಸ್ಯಾಂಡಲ್ವುಡ್ನ ಬಹು ಬೇಡಿಕೆಯ, ಖ್ಯಾತ ಸಂಕಲನಕಾರ ದೀಪು ಎಸ್. ಕುಮಾರ್ ಈ ಚಿತ್ರಕ್ಕೆ ಸಂಕಲನ ಮಾಡಿದ್ದಾರೆ. ಟಗರು, ಸಲಗ ಚಿತ್ರಗಳ ಯಶಸ್ವಿ ಸಂಗೀತ ನಿರ್ದೇಶಕ ಚರಣ್ ರಾಜ್ ಈ ಚಿತ್ರಕ್ಕೆ ಉತ್ತರ ಕರ್ನಾಟಕ ನೆಲದ ಸಂಗೀತವನ್ನೇ ಬಳಸಿಕೊಂಡು ಹಾಡುಗಳನ್ನು ಸಂಯೋಜಿಸಿದ್ದಾರೆ. ಈಗ ಬಿಡುಗಡೆಯಾಗಲಿರುವ ಟೀಸರ್ನಲ್ಲಿರುವ 'ಧರ್ಮಕ್ಕೂ ಕರ್ಮಕ್ಕೂ ಜಗಳ ನಡೆದೈತಿ' ಎಂಬ ಹಾಡು ಗಮನ ಸೆಳೆಯುತ್ತದೆ. ಸಲಗ, ಭೀಮ ಸಿನಿಮಾಗಳ ಸಿನಿಮಾಟೋಗ್ರಾಫರ್ ಶಿವಸೇನ ಚಿತ್ರದ ಕ್ಯಾಮೆರಾ ಕೆಲಸ ಮಾಡಿದ್ದಾರೆ. ಮಾಸ್ ಮತ್ತು ಕ್ಲಾಸ್ ಚಿತ್ರಗಳ ಸಂಭಾಷಣೆ ರಚಿಸುವುದರಲ್ಲಿ ಹೆಸರು ಮಾಡಿರುವ ಮಾಸ್ತಿ ಈ ಚಿತ್ರದಲ್ಲಿ ನಿರ್ದೇಶಕ ಅಭಿಯವರೊಂದಿಗೆ ಸೇರಿ ಸಂಭಾಷಣೆ ಬರೆದಿದ್ದಾರೆ. ಜತೆಗೆ ತಂಡದ ಮಾರ್ಗದರ್ಶಕರಾಗಿಯೂ ಕೆಲಸ ಮಾಡಿದ್ದಾರೆ.
Kannada Movie Somu Sound Engineer Teaser Yet To Release.
15-03-25 03:55 pm
HK News Desk
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 04:11 pm
Mangalore Correspondent
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm