ಬ್ರೇಕಿಂಗ್ ನ್ಯೂಸ್
01-10-22 01:46 pm Source: Vijayakarnataka ಸಿನಿಮಾ
ಹರೀಶ್ ಬಸವರಾಜ್
ಗಾಳಿಪಟ-2 ಸಿನಿಮಾದ ಯಶಸ್ಸಿನ ನಂತರ ಮತ್ತೆ ಬಹಳ ಜೋಶ್ನಲ್ಲಿರುವ ನಿರ್ದೇಶಕ ಯೋಗರಾಜ್ ಭಟ್ ತಮ್ಮ ಇನ್ನುಳಿದ ಸಿನಿಮಾಗಳ ಕೆಲಸಗಳನ್ನು ರಾಕೆಟ್ ವೇಗದಲ್ಲಿ ಮುಗಿಸುತ್ತಿದ್ದಾರೆ. ಮೊನ್ನೆಯಷ್ಟೇ 'ಕರಟಕ ದಮನಕ' ಸಿನಿಮಾದ ಚಿತ್ರೀಕರಣದ ಮೊದಲ ಶೆಡ್ಯೂಲ್ ಕಂಪ್ಲೀಟ್ ಮಾಡಿದ್ದಾರೆ. ಈಗ ಬಿ.ಸಿ.ಪಾಟೀಲ್ ನಿರ್ಮಾಣದ 'ಗರಡಿ' ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿದ್ದಾರೆ.
'ಗರಡಿ' ರಾಜ್ಯದ ಕೃಷಿ ಸಚಿವ ಬಿ.ಸಿ. ಪಾಟೀಲರ ಡ್ರೀಮ್ ಪ್ರಾಜೆಕ್ಟ್. ಬಹಳ ದಿನಗಳ ನಂತರ ಮುಖ್ಯ ಪಾತ್ರದಲ್ಲಿ ನಟಿಸುವುದರ ಜತೆಗೆ ಅವರೇ ನಿರ್ಮಾಣವನ್ನು ಮಾಡುತ್ತಿದ್ದಾರೆ. ಇನ್ನೊಂದು ಶೆಡ್ಯೂಲ್ ಚಿತ್ರೀಕರಣ ಮಾಡಿದರೆ ಗರಡಿ ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಗಲಿದೆ. ಸಮಯ ಇರುವ ಕಾರಣ ಭಟ್ಟರು ಡಬ್ಬಿಂಗ್ ಕೆಲಸಗಳನ್ನು ಆರಂಭಿಸಿದ್ದಾರೆ. ಬಿ.ಸಿ. ಪಾಟೀಲರು ತಮ್ಮ ರಾಜಕೀಯ ಜಂಜಾಟಗಳ ನಡುವೆಯೂ ಸಮಯ ಮಾಡಿಕೊಂಡು ಸಿನಿಮಾಗೆ ಡಬ್ಬಿಂಗ್ ಮಾಡಿಕೊಟ್ಟಿದ್ದಾರೆ.
'ಗರಡಿ ಸಿನಿಮಾ ಅಸಾಧಾರಣವಾಗಿ ಮೂಡಿ ಬಂದಿದೆ. ಪಾಟೀಲರು ತಮ್ಮ ಕೆಲಸದ ನಡುವೆಯೂ ನನಗೆ ಸಮಯ ಕೊಟ್ಟು ಡಬ್ಬಿಂಗ್ ಮಾಡಿದ್ದಾರೆ. ವಿಷುಯಲ್ಗಳನ್ನು ನೋಡಿ ಖುಷಿಯಿಂದ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ರಂಗಪ್ಪ ಎನ್ನುವ ಖಡಕ್ ಪಾತ್ರವನ್ನು ಬಿ.ಸಿ.ಪಾಟೀಲ್ ಅವರು ಮಾಡಿದ್ದಾರೆ. ಇದೊಂದು ಬೇರೆ ಜಾನರ್ನ ಸಿನಿಮಾ ಆಗಿರುವುದರಿಂದ ತಯಾರಿಯ ಅಗತ್ಯ ಬಹಳಷ್ಟಿತ್ತು. ಇದುವರೆಗೂ ಮಾಡಿರುವ ಚಿತ್ರೀಕರಣ ಅದ್ಭುತವಾಗಿ ಮೂಡಿ ಬಂದಿದೆ' ಎಂದಿದ್ದಾರೆ ನಿರ್ದೇಶಕ ಯೋಗರಾಜ್ ಭಟ್.
'ಇನ್ನೊಂದು ಶೆಡ್ಯೂಲ್ ಬಾಕಿ ಇದ್ದು, ಅದರಲ್ಲಿ ಎರಡು ಹಾಡುಗಳನ್ನು ಚಿತ್ರೀಕರಣ ಮಾಡುತ್ತೇವೆ. ಒಂದು ಐಟಂ ಹಾಡಾಗಿದ್ದು, ಅದರಲ್ಲಿ ಪ್ರಮುಖ ಕಲಾವಿದೆಯೊಬ್ಬರು ಕಾಣಿಸಿಕೊಳ್ಳಲಿದ್ದಾರೆ. ಅದನ್ನು ಸದ್ಯದಲ್ಲೆ ರಿವೀಲ್ ಮಾಡುತ್ತೇವೆ. ದರ್ಶನ್ ಅವರ ಡೇಟ್ಸ್ಗಾಗಿ ಕಾಯುತ್ತಿದ್ದೇವೆ. ಅದಕ್ಕಿಂತಲೂ ಮುನ್ನ ಉಳಿದ ಭಾಗದ ಚಿತ್ರೀಕರಣವನ್ನು ಮುಗಿಸಿಕೊಂಡು ಮುಂದಿನ ಕೆಲಸಗಳನ್ನು ಮಾಡಿಕೊಳ್ಳುತ್ತೇವೆ' ಎಂದು ಮಾಹಿತಿ ನೀಡಿದರು ಭಟ್ಟರು.
'ಅಕ್ಟೋಬರ್ನ ಮೊದಲ ವಾರದಿಂದ ಮುಂದಿನ ಶೆಡ್ಯೂಲ್ನ ಚಿತ್ರೀಕರಣ ಆರಂಭಿಸಲಿದ್ದೇವೆ. ಇದುವರೆಗಿನ ಚಿತ್ರೀಕರಣದ ದೃಶ್ಯಗಳನ್ನು ನೋಡಿದ್ದೇವೆ. ಬಹಳ ಚೆನ್ನಾಗಿ ಬಂದಿದೆ. ಅಪ್ಪಾಜಿಯವರು ಮೂರು ದಿನಗಳ ಕಾಲ ತಮ್ಮ ಪಾತ್ರದ ಡಬ್ಬಿಂಗ್ ಮಾಡಿದ್ದಾರೆ. ಸದ್ಯಕ್ಕೆ ದರ್ಶನ್ ಅವರ ಭಾಗವನ್ನು ಬಿಟ್ಟು ಉಳಿದೆಲ್ಲವನ್ನು ಮುಗಿಸಿಕೊಳ್ಳುತ್ತೇವೆ. ನಂತರ ಅವರ ಭಾಗದ ಚಿತ್ರೀಕರಣ ಆರಂಭಿಸುತ್ತೇವೆ. ಗರಡಿ ಸ್ಯಾಂಡಲ್ವುಡ್ನಲ್ಲೊಂದು ವಿಭಿನ್ನ ಕಥೆಯ ಸಿನಿಮಾವಾಗುತ್ತದೆ' ಎಂದಿದ್ದಾರೆ ಸಿನಿಮಾದ ಕಾರ್ಯಕಾರಿ ನಿರ್ಮಾಪಕಿ, ಬಿ.ಸಿ.ಪಾಟೀಲ್ ಅವರ ಪುತ್ರಿ ಸೃಷ್ಟಿ ಪಾಟೀಲ್.
ಈ ಸಿನಿಮಾದಲ್ಲಿ ನಟ ಸೂರ್ಯ ನಾಯಕನಾಗಿ ನಟಿಸಿದ್ದು, ಸೋನಲ್ ನಾಯಕಿಯಾಗಿದ್ದಾರೆ. ಸುಜಯ್ ಬೇಲೂರು ಎಂಬ ಹೊಸ ಕಲಾವಿದರು ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದು, ನಿರಂಜನ್ ಬಾಬು ಸಿನಿಮಾಟೋಗ್ರಫಿ ಮಾಡಿದ್ದಾರೆ.
Bc Patil S Dream Project Garadi Dubbing Begins.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm