ಬ್ರೇಕಿಂಗ್ ನ್ಯೂಸ್
13-09-22 03:50 pm Source: Vijayakarnataka ಸಿನಿಮಾ
ಕನ್ನಡ ಚಿತ್ರರಂಗದ ಸಂಗೀತಮಯ ಸಿನಿಮಾ ‘ಮಾನ್ಸೂನ್ ರಾಗ’ ಸಿನಿಮಾದಲ್ಲಿ ( Monsoon Raaga ) ಪ್ರತಿಭಾವಂತ ಕಲಾವಿದರ ದಂಡೇ ಇದೆ.
ಈಗಾಗಲೇ ಟೀಸರ್ನಲ್ಲಿರುವಂತೆ ಡಾಲಿ ಧನಂಜಯ, ರಚಿತಾ ರಾಮ್ ಮುಖ್ಯ ಪಾತ್ರದಲ್ಲಿದ್ದು, ಇವರ ಜತೆಗೆ ಸ್ಯಾಂಡಲ್ವುಡ್ನಲ್ಲಿ ಹೆಸರು ಮಾಡಿರುವ ಮತ್ತು ದಕ್ಷಿಣ ಭಾರತದ ಖ್ಯಾತ ಕಲಾವಿದರೂ ಇದ್ದಾರೆ. ಸೆಪ್ಟೆಂಬರ್ 16ಕ್ಕೆ ಸಿನಿಮಾ ಬಿಡುಗಡೆಯಾಗುತ್ತಿದ್ದು, ನಿರ್ದೇಶಕರು ಹೇಳುವ ಪ್ರಕಾರ ‘ಮಾನ್ಸೂನ್ ರಾಗ’ ಹೆಸರಿಗೆ ತಕ್ಕಂತೆ ಒಳ್ಳೆಯ ಪಾತ್ರಗಳೇ ಇರುವಂತಹ ಸಿನಿಮಾ.
ಹೃದಯವಂತ ಪಾತ್ರ
‘ಕನ್ನಡಿಗರಿಗೆ ಸುಹಾಸಿನಿ ಎಂದರೆ ಹಲವು ಪಾತ್ರಗಳು ಕಣ್ಣ ಮುಂದೆ ಬರುತ್ತವೆ. ಇದುವರೆಗೂ ಸುಹಾಸಿನಿ ನಿರ್ವಹಿಸಿರುವ ಪಾತ್ರಗಳು ಹಾಗಿವೆ. ಮಾನ್ಸೂನ್ ರಾಗ ಸಿನಿಮಾದ ಮೂಲಕ ಬಹಳ ವರ್ಷಗಳ ನಂತರ ಸುಹಾಸಿನಿ ಸ್ಯಾಂಡಲ್ವುಡ್ಗೆ ಮರಳಿ ಬಂದಿದ್ದಾರೆ. ‘ಮಾನ್ಸೂನ್ ರಾಗ’ದಲ್ಲಿ ಸುಹಾಸಿನ ಹೃದಯವಂತ ಪಾತ್ರದಲ್ಲಿ ನಟಿಸಿದ್ದಾರೆ ಎನ್ನಬಹುದು. ತಮ್ಮ ಜೀವನದಲ್ಲಿ ಯಾರಾರಯರನ್ನು ಭೇಟಿ ಮಾಡುತ್ತಾರೆ, ಅದರಿಂದ ಅವರಿಗೆ ಸಮಸ್ಯೆ, ಸಂತೋಷ ಎಲ್ಲವೂ ಆಗುತ್ತದೆ. ಅದು ಹೇಗೆ ಎಂಬುದನ್ನು ತೋರಿಸಿದ್ದೇವೆ. ಸುಹಾಸಿನಿ ರೀತಿಯ ಹಲವು ಹೆಣ್ಣು ಮಕ್ಕಳು ನಮ್ಮ ಸುತ್ತಮುತ್ತಲೇ ಇದ್ದಾರೆ. ಅವರೆಲ್ಲರಿಗೂ ಇದು ಕನೆಕ್ಟ್ ಆಗುತ್ತದೆ. ಸಿನಿಮಾದಲ್ಲಿಅವರನ್ನು ನೋಡಿದರೆ ಅಬ್ಬಾ ಎಂತಹ ಒಳ್ಳೆಯ ಮಹಿಳೆ ಇವರು ಎನಿಸುತ್ತದೆ’ಎನ್ನುತ್ತಾರೆ ನಿರ್ದೇಶಕ ರವೀಂದ್ರನಾಥ್.
ಸ್ನೇಹವೇ ಮುಖ್ಯ
ಕನ್ನಡ ಚಿತ್ರರಂಗದ ಪ್ರಮುಖ ಪೋಷಕ ನಟರಲ್ಲಿಅಚ್ಯುತ್ಕುಮಾರ್ ಅವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತದೆ. ‘ಮಾನ್ಸೂನ್ ರಾಗ’ದಲ್ಲಿಯೂ ಅಚ್ಯುತ್ಕುಮಾರ್ ಇದ್ದಾರೆ. ಅವರಿದ್ದ ಮೇಲೆ ಅಲ್ಲಿಲವಲವಿಕೆಯ ನಟನೆ ಇದ್ದೇ ಇರುತ್ತದೆ. ‘ಅಚ್ಯುತ್ ಕುಮಾರ್ ಅವರದ್ದು ಇಲ್ಲಿಜಾಲಿ ಪಾತ್ರ. ತಮ್ಮ ಜೀವನದಲ್ಲಿಎಲ್ಲರೀತಿಯ ಜನರನ್ನು ನೋಡಿರುತ್ತಾರೆ. ಯಾರನ್ನೇ ಆದರೂ ಬಹು ಬೇಗ ನಂಬುತ್ತಾರೆ. ಪ್ರತಿ ದಿನ ಒಂದಿಷ್ಟು ಜನರನ್ನು ಅಚ್ಯುತ್ ಅವರ ಪಾತ್ರ ನಿರಂತರವಾಗಿ ಭೇಟಿ ಮಾಡಿಕೊಂಡು ಮಾತನಾಡಿಕೊಂಡಿರುವಂಥದ್ದು. ಸ್ನೇಹ ಎಂಬುದು ಅಚ್ಯುತ್ ಅವರ ಪಾತ್ರಕ್ಕೆ ಬಹಳ ದೊಡ್ಡ ವಿಷಯ. ಇಡೀ ಸಿನಿಮಾದಲ್ಲಿ ತಾವೂ ಸಂತೋಷವಾಗಿರುತ್ತಾ, ತಮ್ಮ ಸುತ್ತಲಿರುವವರನ್ನು ಸಂತೋಷದಿಂದ ಇಟ್ಟುಕೊಂಡಿರುತ್ತಾರೆ’ ಎನ್ನುವುದು ನಿರ್ದೇಶಕರ ಮಾತು.
ರೆಬಲ್ ಹುಡುಗಿ
‘ಯಶಾ ಶಿವಕುಮಾರ್ ಸಹ ‘ಮಾನ್ಸೂನ್ ರಾಗ’ದಲ್ಲಿಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕಾಲೇಜಿನಲ್ಲಿ ಬಬ್ಲಿಯಾಗಿ ಆಡುತ್ತಾ, ರೆಬಲ್ ಹುಡುಗಿಯಾಗಿ ನಟಿಸಿದ್ದಾರೆ. ಏನೇ ಆದರೂ ಭಯಪಡದೆ ಎದುರಿಸುತ್ತಾ ಇರುವಂತಹ ಪಾತ್ರವದು. ಇಂತಹ ಹುಡುಗಿಯ ಬದುಕಿನಲ್ಲಿ ಪ್ರೀತಿ , ಪ್ರೇಮ ಎಂಬುದು ಬಂದಾಗ ಏನಾಗುತ್ತದೆ? ಅದನ್ನು ಹೇಗೆ ಎದುರಿಸುತ್ತಾಳೆ ಎಂಬುದನ್ನು ತೋರಿಸಿದ್ದೇವೆ’ ಎನ್ನುತ್ತಾರೆ ರವೀಂದ್ರನಾಥ್.
ಇಡೀ ಸಿನಿಮಾದಲ್ಲಿರುವ ಪಾತ್ರಗಳು ಒಳ್ಳೆಯ ಮನಸ್ಸಿರುವಂತಹದ್ದೇ ಆಗಿವೆ. ಎಲ್ಲವೂ ಚೆನ್ನಾಗಿದ್ದಾಗ ಸಿನಿಮಾ ಬಹಳ ಚೆನ್ನಾಗಿರುತ್ತದೆ. ಇವರೆಲ್ಲರ ಜತೆ ಇನ್ನೊಂದಿಷ್ಟು ಹೊಸ ಕಲಾವಿದರು ಸಿನಿಮಾದಲ್ಲಿದ್ದು ಎಲ್ಲರೂ ಉತ್ತಮವಾಗಿ ನಟಿಸಿದ್ದಾರೆ.
ಅಚ್ಯುತ್ಕುಮಾರ್, ಸುಹಾಸಿನಿ, ಯಶಾ ಶಿವಕುಮಾರ್ ಸೇರಿದಂತೆ ಎಲ್ಲಾಪಾತ್ರಗಳು ನಮ್ಮ ಸಿನಿಮಾದ ಹೈಲೈಟ್ಸ್. ಪ್ರತಿಯೊಂದು ಪಾತ್ರವೂ ಜೀವಂತಿಕೆಯಿಂದ ತುಂಬಿ ತುಳುಕುತ್ತದೆ. ಎಲ್ಲರನ್ನೂ ತೆರೆ ಮೇಲೆ ಇದುವರೆಗೂ ನೋಡಿರದೇ ಇರುವಂತಹ ರೀತಿ ತೋರಿಸುವ ಪ್ರಯತ್ನ ಮಾಡಿದ್ದೇವೆ ಎಂದಿದ್ದಾರೆ ನಿರ್ದೇಶಕ ರವೀಂದ್ರನಾಥ್
Dhananjaya Rachita Ram Starrer Monsoon Raaga Movie Release On September 16.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm