ಬ್ರೇಕಿಂಗ್ ನ್ಯೂಸ್
08-09-22 01:06 pm Source: Vijayakarnataka ಸಿನಿಮಾ
ಈಗಾಗಲೇ 'ಬಜಾರ್' ಮತ್ತು 'ಬೈ ಟು ಲವ್' ಸಿನಿಮಾಗಳಿಂದ ಸಖತ್ ಫೇಮಸ್ ಆಗಿರುವ ನಟ ಧನ್ವೀರ್. ಇದೀಗ ಅವರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಇಂದು (ಸೆ.8) ಅವರ ಹುಟ್ಟುಹಬ್ಬ. ಆ ಹಿನ್ನೆಲೆಯಲ್ಲಿ ಒಂದು ಸ್ಪೆಷಲ್ ಗಿಫ್ಟ್ ನೀಡಿದ್ದಾರೆ ಧನ್ವೀರ್. ಹೌದು, ಅವರು ನಟಿಸುತ್ತಿರುವ ಮುಂದಿನ ಸಿನಿಮಾ 'ಕೈವ'ದ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ಇದೊಂದು ನೈಜ ಘಟನೆಯಾಧರಿತ ಸಿನಿಮಾವಾಗಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ.
ವಿಶೇಷವೆಂದರೆ, ಈ ಫಸ್ಟ್ ಲುಕ್ ಪೋಸ್ಟರ್ ಅನ್ನು ಡಾ. ರಾಜ್ಕುಮಾರ್ ಮತ್ತು 'ಪವರ್ ಸ್ಟಾರ್' ಡಾ. ಪುನೀತ್ ರಾಜ್ಕುಮಾರ್ ಅವರಿಗೆ ಅರ್ಪಿಸುತ್ತಿದ್ದಾರೆ ಧನ್ವೀರ್. ಕಂಠೀರವ ಸ್ಟುಡಿಯೋದಲ್ಲಿರುವ ಡಾ. ರಾಜ್ಕುಮಾರ್ ಮತ್ತು ಡಾ. ಪುನೀತ್ ರಾಜ್ಕುಮಾರ್ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ, ಅಲ್ಲಿಯೇ ಫಸ್ಟ್ ಲುಕ್ ಲಾಂಚ್ ಮಾಡಲಿದ್ದಾರೆ.
ಏನಿದು 'ಕೈವ'?
'ಕೈವ' ಚಿತ್ರವು ನೈಜ ಘಟನೆ ಆಧಾರಿತ ಚಿತ್ರವಾಗಿದೆ. ಈ ಕುರಿತು ಒಂದು ಪೋಸ್ಟ್ ಹಾಕಿರುವ ಚಿತ್ರದ ನಿರ್ದೇಶಕ ಜಯತೀರ್ಥ, '1983ರ ಸೆಪ್ಟೆಂಬರ್ 13ರ ಮಧ್ಯಾಹ್ನ 3.20ಕ್ಕೆ ಒಂದು ದುರಂತ ನಡೆದಿತ್ತು. ಆಗ ಇಡೀ ಬೆಂಗಳೂರು ಬೆಚ್ಚಿ ಬಿದ್ದಿತ್ತು. ಆದರೆ ಕೈವ ಬಂದೇ ಬರುತ್ತಾನೆ ಎಂದು ಅವಳು ಕಾದಿದ್ದಳು. ಸತ್ಯಘಟನೆ.. ಪ್ರೇಮಕಥೆ.. ಮಾಸಿಗೆ ಮಾಸ್... ಕ್ಲಾಸಿಗೆ ಕ್ಲಾಸ್..' ಎಂದು ಬರೆದುಕೊಂಡಿದ್ದಾರೆ.
'ಕೈವ' ಚಿತ್ರದಲ್ಲಿ ಕರಗ
ಇದು 4 ದಶಕದ ಹಿಂದಿನ ಕಥೆಯನ್ನು ಆಧರಿಸಿದ ಸಿನಿಮಾವಾಗಿರುವುದರಿಂದ ಚಿತ್ರಕ್ಕಾಗಿ 1983ರ ಸಮಯದಲ್ಲಿದ್ದ ಬೆಂಗಳೂರನ್ನು ಮರು ಸೃಷ್ಟಿ ಮಾಡಲಾಗುತ್ತಿದೆ. 'ಕೈವ ಸಿನಿಮಾ ಸಂಪೂರ್ಣ ಬೆಂಗಳೂರಿನ ತಿಗಳರ ಪೇಟೆಯಲ್ಲಿ ನಡೆಯುವ ಕಥೆ. ಅಲ್ಲಿನ ಜನರ ಆಗಿನ ಜೀವನ ಶೈಲಿ, ಪರಿಸರ ಹೀಗೆ ಪ್ರತಿಯೊಂದನ್ನು ಸಿನಿಮಾದಲ್ಲಿ ತೋರಿಸಲಿದ್ದೇವೆ. ಆ ಭಾಗದ ಜನರಿಗೆ ಕರಗ ಎಂಬುದು ಜೀವನದ ಒಂದು ಭಾಗವೇ ಆಗಿದೆ. ಈ ಸಿನಿಮಾದಲ್ಲಿಯೂ ಕರಗ ಬರುತ್ತದೆ. ಅದಕ್ಕಾಗಿ ಕರಗವನ್ನು ಮರುಸೃಷ್ಟಿ ಮಾಡುತ್ತಿದ್ದೇವೆ. ಕರಗ ಯಾವ ರೀತಿ ನಡೆಯುತ್ತದೆ. ಅದರ ತಯಾರಿ ಹೇಗಿರುತ್ತದೆ ಎಂಬೆಲ್ಲ ಸಂಗತಿಗಳನ್ನು ಇತ್ತೀಚೆಗೆ ನಡೆದ ಕರಗವನ್ನು ನೋಡಿ ಅಧ್ಯಯನ ಮಾಡಿದ್ದೇವೆ' ಎನ್ನುತ್ತಾರೆ ನಿರ್ದೇಶಕ ಜಯತೀರ್ಥ.
ಧನ್ವೀರ್ಗೆ ಜೊತೆ ಜೊತೆಯಲಿ ಮೇಘಾ ಶೆಟ್ಟಿ ನಾಯಕಿ
ಈ ಚಿತ್ರದಲ್ಲಿ ಧನ್ವೀರ್ಗೆ ನಾಯಕಿಯಾಗಿ ಮೇಘಾ ಶೆಟ್ಟಿ ನಟಿಸುತ್ತಿದ್ದಾರೆ. ನಾಯಕನನ್ನು ಅಗಾಧವಾಗಿ ಪ್ರೀತಿಸುವ ಹುಡುಗಿಯಾಗಿ ಮೇಘಾ ಕಾಣಿಸಿಕೊಳ್ಳುತ್ತಿದ್ದಾರೆ. ಆ ಕಾಲದ ಹುಡುಗಿಯಾಗಿ ಅವರನ್ನು ನಾವು ತೋರಿಸಲಾಗುತ್ತಿದೆ. ಈ ಚಿತ್ರದಲ್ಲಿ ಧನ್ವೀರ್ ಲುಕ್ ಸಂಪೂರ್ಣ ಬದಲಾಗಲಿದ್ದು, ರೆಟ್ರೋ ಲುಕ್ನಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ನಾಯಕ ಮತ್ತು ನಾಯಕಿ ಇಬ್ಬರೂ ಬಡವರಾಗಿದ್ದು, ಇವರಿಗೆ ಶ್ರೀಮಂತ ವರ್ಗ ತೊಂದರೆ ಕೊಟ್ಟಾಗ ಮತ್ತು ಅವರಲ್ಲಿರುವ ಆ ಮುಗ್ಧತೆಯನ್ನು ಕೆರಳಿಸಿದಾಗ ಏನಾಗುತ್ತದೆ ಎಂಬುದೇ 'ಕೈವ' ಸಿನಿಮಾದ ಕಥೆ ಎನ್ನುತ್ತದೆ ಚಿತ್ರತಂಡ.
Dhanveer Megha Shetty Jayatheerthas Kaiva Movie First Look Released.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm