ಬ್ರೇಕಿಂಗ್ ನ್ಯೂಸ್
14-05-22 07:24 pm HK Desk News ದೇಶ - ವಿದೇಶ
ಲಕ್ನೋ, ಮೇ 14 : ವಿಶ್ವವಿಖ್ಯಾತ ತಾಜಮಹಲ್ ಹಿಂದೆ ಶಿವನ ದೇವಸ್ಥಾನ ಆಗಿತ್ತು, ಅದರ ಹೆಸರು ತೇಜೋ ಮಹಾಲಯ ಎಂಬುದಾಗಿತ್ತು ಎಂಬ ವಾದ ಕೇಳಿಬಂದಿರುವಾಗಲೇ ಅಲ್ಲಿನ ಮುಚ್ಚಿದ ಕೋಣೆಗಳ ಬಗ್ಗೆ ಊಹಾಪೋಹ ಎದ್ದಿತ್ತು. ಕೋಣೆಗಳನ್ನು ತೆರೆದು ಪರಿಶೀಲನೆಗೆ ಅವಕಾಶ ನೀಡಬೇಕೆಂದು ಕೋರ್ಟಿಗೂ ಅರ್ಜಿ ಸಲ್ಲಿಸಲಾಗಿತ್ತು. ಇದೀಗ ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿಯೊಬ್ಬರು, ಅಲ್ಲಿನ ಮುಚ್ಚಿದ ಕೋಣೆಗಳಲ್ಲಿ ಹಿಂದು ವಿಗ್ರಹಗಳಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಈ ಕುರಿತ ಅರ್ಜಿಯನ್ನು ಅಲಹಾಬಾದ್ ಉಚ್ಚ ನ್ಯಾಯಾಲಯ ಇತ್ತೀಚೆಗಷ್ಟೇ ತಿರಸ್ಕರಿಸಿದ್ದು ಈ ರೀತಿಯ ಇತಿಹಾಸದ ಪ್ರಶ್ನೆಗಳಿಗೆ ಉತ್ತರ ಹುಡುಕಲು ಪಿಐಎಲ್ ಹಾಕುವುದು ಸರಿಯಾದ ಕ್ರಮವಲ್ಲ. ಅದರ ಬಗ್ಗೆ ಅಧ್ಯಯನ ಕೈಗೊಳ್ಳಿ ಎಂದು ಹೇಳಿತ್ತು. ಇದರ ಬೆನ್ನಲ್ಲೇ ಭಾರತೀಯ ಪುರಾತತ್ವ ಇಲಾಖೆಯ (ಎಎಸ್ಐ) ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ತಾಜ್ ಮಹಲ್ ಒಳಗಿನ ಮುಚ್ಚಿದ 22 ಕೋಣೆಗಳೊಳಗೆ ಹಿಂದೂ ದೇವರ ವಿಗ್ರಹಗಳಿಲ್ಲ. ಹಾಗೆಯೇ ಆ ಕೋಣೆಗಳನ್ನು ಶಾಶ್ವತವಾಗಿ ಮುಚ್ಚಿಯೂ ಇಲ್ಲ. ಕೆಲವೊಮ್ಮೆ ಕೋಣೆಗಳನ್ನು ತೆಗೆದು ಕಟ್ಟಡದ ಸಂರಕ್ಷಣೆಗೆ ಅಗತ್ಯ ಕಾರ್ಯಗಳನ್ನು ಕೈಗೊಂಡು ಬರಲಾಗಿದೆ ಎಂದು ಹೇಳಿದ್ದಾರೆ.
ತಾಜ್ ಮಹಲ್ ನೆಲಮಾಳಿಗೆಯಲ್ಲಿ ಒಟ್ಟು 100 ಸಾರ್ವಜನಿಕ ಕೋಣೆಗಳಿವೆ. ಇವುಗಳೆಲ್ಲ ವಿವಿಧ ವಿನ್ಯಾಸಗಳನ್ನು ಹೊಂದಿದ್ದು ಅವುಗಳನ್ನು ಭದ್ರತಾ ಕಾರಣಗಳಿಗಷ್ಟೆ ಮುಚ್ಚಲಾಗಿದೆ. ಜನರು ಹಾಳು ಮಾಡಬಾರದೆನ್ನುವುದೇ ಇದರ ಹಿಂದಿನ ಕಾಳಜಿ ಎಂದು ಅಧಿಕಾರಿ ಹೇಳಿದ್ದಾರೆ.
ಇಲಾಖೆಯ ಮಾಜಿ ಪ್ರಾದೇಶಿಕ ನಿರ್ದೇಶಕ ಕೆ.ಕೆ.ಮೊಹಮ್ಮದ್ ಈ ಬಗ್ಗೆ ಪ್ರತಿಕ್ರಿಯಿಸಿ, ತಾನು ಅಲ್ಲಿ ಉಸ್ತುವಾರಿಯಾಗಿದ್ದಾಗ ಆ ಕೊಠಡಿಗಳಲ್ಲಿ ಯಾವುದೇ ಧಾರ್ಮಿಕ ಸಂಕೇತಗಳನ್ನು ಕಂಡಿಲ್ಲ ಎಂದಿದ್ದಾರೆ.
Archaeological Survey of India (ASI) officials have denied allegations by Hindu groups that the Taj Mahal was once a Hindu temple known as 'Tejo Mahalaya'. ASI officials said there were no idols in the 22 unopened rooms on the ground floor of the Taj Mahal. A person named Rajneesh Singh had filed a petition in the Allahabad High Court seeking the opening up of 22 permanently locked rooms in the Taj Mahal.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm