ಬ್ರೇಕಿಂಗ್ ನ್ಯೂಸ್
12-05-22 06:40 pm HK Desk News ದೇಶ - ವಿದೇಶ
ಕೋಝಿಕ್ಕೋಡ್, ಮೇ 12: ಆಕೆ 21 ಹರೆಯದ ಸುರ ಸುಂದರಾಂಗಿ. ಒಮ್ಮೆ ನೋಡಿದರೆ ನೋಡುತ್ತಿರಲೇಬೇಕು ಅನ್ನುವ ರೀತಿಯ ಸೌಂದರ್ಯ. ಹಾಗಾಗಿಯೇ ಆಕೆ ನಡೆಸಿಕೊಡುತ್ತಿದ್ದ ಯೂಟ್ಯೂಬ್ ಪ್ರೋಗ್ರಾಂ ನೋಡಲು ಜನರು ಮುಗಿಬೀಳುತ್ತಿದ್ದರು. ಲಕ್ಷಾಂತರ ಜನರು ಆಕೆಯ ಯೂಟ್ಯೂಬ್ ಮೆಚ್ಚಿ ಸಬ್ ಸ್ಕ್ರೈಬ್ ಆಗಿದ್ದರು. ಇನ್ ಸ್ಟಾ ಗ್ರಾಮಿನಲ್ಲಿ ಲೆಕ್ಕವಿಲ್ಲದಷ್ಟು ಮಲಯಾಳಿಗಳು ಆಕೆಯ ಅಭಿಮಾನಿಗಳಾಗಿದ್ದರು. ಅಪ್ಪಟ ಮಲೆಯಾಳಿ ಮಾತುಗಳು, ನಡು ನಡುವೆ ಇಂಗ್ಲಿಷ್ ಮಿಶ್ರಿತ ವರ್ಣನೆಗಳು ಆಕೆಯನ್ನು ಕೆಲವೇ ಸಮಯದಲ್ಲಿ ಮಲಯಾಳಿ ಜನರ ಮನೆ ಮಗಳನ್ನಾಗಿಸಿತ್ತು.
ಹೌದು.. ಈ ಪರಿಯಲ್ಲಿ ಯೂಟ್ಯೂಬಲ್ಲಿ ಜನರನ್ನು ಹುಚ್ಚುಗಟ್ಟಿಸಿದ್ದ ಕೇರಳದ ಕೋಝಿಕ್ಕೋಡ್ ಮೂಲದ ಹೆಣ್ಮಗಳು ರಿಫಾ ಮೆನು ಈಗ ಇಲ್ಲ. ಆಕೆಯನ್ನು ಆರಾಧಿಸುತ್ತಿದ್ದ ಮಲಯಾಳಿಗಳಂತೂ ಆಕೆ ಇಲ್ಲ ಅನ್ನುವುದನ್ನು ಅರಗಿಸಿಕೊಳ್ಳುತ್ತಿಲ್ಲ. ಕಳೆದ ಮಾರ್ಚ್ 1ರಂದು ದುಬೈನಲ್ಲಿದ್ದಾಗಲೇ ತನ್ನ ಫ್ಲಾಟಿನಲ್ಲಿ ಆಕೆ ನಿಗೂಢ ಸಾವು ಕಂಡಿದ್ದಳು. ಇಷ್ಟೇ ಆಗಿರುತ್ತಿದ್ದರೆ, ಒಂದಷ್ಟು ದಿನ ಆಕೆಯನ್ನು ಆರಾಧಿಸುತ್ತಿದ್ದ ಜನರು ಮನಸ್ಸಿನಲ್ಲೇ ಗೊಣಗುಟ್ಟಿಕೊಂಡು ಜನ ಮರೆತು ಬಿಡುತ್ತಿದ್ದರು. ಆದರೆ, ಸುಂದರಾಂಗಿ ಯುವತಿಯನ್ನು ಆಕೆಯ ಗಂಡನೇ ಕೊಲೆ ಮಾಡಿ ನೇಣಿಗೇರಿಸಿದ್ದಾನೆ ಎನ್ನುವ ವದಂತಿ ಹರಡಿದ್ದು, ಅದಕ್ಕೆ ಪೂರಕವಾಗಿ ಯುವತಿ ಶವವನ್ನು ಹೊರತೆಗೆದು ಮರು ತನಿಖೆ ನಡೆಸಬೇಕೆಂದು ಆಕೆಯ ಹೆತ್ತವರು ಪೊಲೀಸ್ ದೂರು ನೀಡಿದ್ದಾರೆ.


ಹೀಗಾಗಿ ರಿಫಾ ಮೆನು ಗಂಡ, ಕಾಸರಗೋಡು ಮೂಲದ ಮೆನಾಸ್ ಎಂಬ ಯುವಕನ ವಿರುದ್ಧ ಕೋಝಿಕ್ಕೋಡ್ ನಲ್ಲಿ ಪೊಲೀಸರು ಐಪಿಸಿ 306 ಅಡಿ ಸಾವಿಗೆ ಪ್ರಚೋದನೆ ನೀಡಿದ್ದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದಾರೆ. ರಿಫಾ ತಾಯಿ ದೂರಿನಂತೆ, ಕಾಕ್ಕೂರು ಪೊಲೀಸ್ ಠಾಣೆಯಲ್ಲಿ ಎಪ್ರಿಲ್ 30ರಂದು ಮೆನಾಸ್ ವಿರುದ್ಧ ಪ್ರಕರಣ ದಾಖಲಾಗಿದೆ. ಇದಲ್ಲದೆ, ರಿಯಾ ಹೆತ್ತವರು ಪ್ರಕರಣದ ಬಗ್ಗೆ ರಾಜ್ಯ ಸರಕಾರಕ್ಕೂ ಮರು ತನಿಖೆ ನಡೆಸಬೇಕೆಂದು ಮನವಿ ನೀಡಿದ್ದಾರೆ. ಮಾರ್ಚ್ 1ರಂದು ತನ್ನ ಫ್ಲಾಟಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದ ರಿಯಾಳನ್ನು ಮಾರ್ಚ್ 3ರಂದು ಕೋಝಿಕ್ಕೋಡಿನ ಪಾವಂದೂರಿಗೆ ಕರೆತರಲಾಗಿತ್ತು. ಈ ವೇಳೆ, ದುಬೈನಲ್ಲಿಯೇ ಪೋಸ್ಟ್ ಮಾರ್ಟಂ ನಡೆಸಲಾಗಿದೆ ಎಂದು ಪತಿ ಮೆನಾಸ್ ಹೇಳಿದ್ದ. ಆದರೆ, ಪತ್ನಿಯ ಸಾವಿನ ಬಳಿಕ ಮೆನಾಸ್ ತಲೆತಪ್ಪಿಸಿಕೊಂಡು ಓಡಾಡುತ್ತಿದ್ದು, ಪತ್ನಿಯ ಕುಟುಂಬಸ್ಥರನ್ನು ಭೇಟಿಯಾಗಿದ್ದೂ ಇಲ್ಲ. ಇದರಿಂದ ಸಂಶಯಕ್ಕೀಡಾದ ಕುಟುಂಬಸ್ಥರು ರಿಯಾ ಪತಿಯ ವಿರುದ್ಧವೇ ಪೊಲೀಸ್ ದೂರು ನೀಡಿದ್ದಾರೆ.

ಹೂತಿದ್ದ ಶವ ಹೊರತೆಗೆದು ಪೋಸ್ಟ್ ಮಾರ್ಟಂ
ತನಿಖೆ ಕೈಗೆತ್ತಿಕೊಂಡಿರುವ ತಾಮರಶ್ಶೇರಿ ಡಿಎಸ್ಪಿ ಟಿ.ಕೆ. ಅಶ್ರಫ್, ಎರಡು ತಿಂಗಳ ಹಿಂದೆ ಸಮಾಧಿಯಾಗಿದ್ದ ಯುವತಿ ಶವವನ್ನು ಅಗೆದು ತೆಗೆದು ಮತ್ತೆ ಪೋಸ್ಟ್ ಮಾರ್ಟಂ ನಡೆಸಲು ಮುಂದಾಗಿದ್ದಾರೆ. ಕೋಝಿಕ್ಕೋಡ್ ಜಿಲ್ಲೆಯ ಪಾವಂದೂರು ಜುಮ್ಮಾ ಮಸೀದಿಯ ದಫನ ಭೂಮಿಯಲ್ಲಿ ಹೂತಿದ್ದ ಶವವನ್ನು ಮೇ 8ರಂದು ಹೊರತೆಗೆದು ಪರೀಕ್ಷೆಗೆ ಒಳಪಡಿಸಲಾಗಿದೆ. ಸರಕಾರಿ ಜಿಲ್ಲಾಸ್ಪತ್ಪೆಯ ವೈದ್ಯರು ಪೋಸ್ಟ್ ಮಾರ್ಟಂ ಪರೀಕ್ಷೆ ನಡೆಸಿದ್ದಾರೆ. ಯುವತಿ ಕುಟುಂಬಸ್ಥರ ಪ್ರಕಾರ, ದುಬೈನಲ್ಲಿ ಪೋಸ್ಟ್ ಮಾರ್ಟಂ ನಡೆಸಿಲ್ಲ. ಗಂಡ ಸುಳ್ಳು ಹೇಳಿದ್ದಾನೆ. ಪೋಸ್ಟ್ ಮಾರ್ಟಂ ನಡೆಸಿದ್ದರೆ, ಅದರ ವರದಿಯನ್ನು ತೋರಿಸಿಯೇ ಇಲ್ಲ ಎಂದು ಹೇಳಿದ್ದಾರೆ. ಹಾಗಾಗಿ, ಎಲ್ಲ ರೀತಿಯ ತಪಾಸಣೆಯನ್ನೂ ನಡೆಸಬೇಕು, ದುಬೈನಲ್ಲಿ ಆಕೆ ಇರುತ್ತಿದ್ದ ಕಚೇರಿ, ಮನೆ ಬಳಿಯ ಸಿಸಿಟಿವಿಗಳನ್ನು ಪಡೆದು ಆರೋಪಿ ಪತಿಯನ್ನು ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಲಕ್ಷಾಂತರ ಅಭಿಮಾನಿಗಳು, ಗಂಡನಿಗೆ ಹೊಟ್ಟೆಕಿಚ್ಚು!
ಮಾಹಿತಿ ಪ್ರಕಾರ, ರಿಫಾ ಮೆನುಗೆ ಸಿಕ್ಕಿದ್ದ ಅಪಾರ ಜನಬೆಂಬಲ, ಅಭಿಮಾನಿಗಳನ್ನು ಕಂಡು ಗಂಡ ಮೆನ್ಹಾಸ್ ಮತ್ಸರಗೊಂಡಿದ್ದ. ಅಭಿಮಾನಿಗಳಿಂದ ದೂರ ಇರುವಂತೆ ಮತ್ತು ಯಾರ ಜೊತೆಗೂ ಮಾತನಾಡದಂತೆ ಪತ್ನಿಗೆ ನಿರ್ಬಂಧಗಳನ್ನು ವಿಧಿಸುತ್ತಿದ್ದ. ಇದೇ ವಿಚಾರದಲ್ಲಿ ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದ ಬಗ್ಗೆ ಸಾವಿಗೂ ಹಿಂದೆಯೇ ರಿಫಾ ಮೆನು ತನ್ನ ಹೆತ್ತವರಲ್ಲಿ ಹೇಳಿಕೊಂಡಿದ್ದಳು. ರಿಫಾ ನಡೆಸುತ್ತಿದ್ದ ಯೂಟ್ಯೂಬನ್ನು ಮೆಚ್ಚಿ ಲಕ್ಷಾಂತರ ಮಲಯಾಳಿಗಳು ಸಬ್ ಸ್ಕ್ರೈಬ್ ಆಗಿದ್ದರು. ದಿನಕ್ಕೆ ಸಾವಿರಾರು ಮಂದಿ ಮೆಸೇಜ್ ಮಾಡಿ ಹಾರೈಸುತ್ತಿದ್ದರು. ಹೀಗಾಗಿ ಕಡಿಮೆ ಅವಧಿಯಲ್ಲಿ ಸೂಪರ್ ಸ್ಟಾರ್ ಮಲಯಾಳಿ ಬ್ಲಾಗರ್ ಆಗಿ ರಿಫಾ ಖ್ಯಾತಿ ಗಳಿಸಿದ್ದಳು. ಇದೇ ಕಾರಣಕ್ಕೆ ಹೊಟ್ಟೆಕಿಚ್ಚು ಪಟ್ಟಿದ್ದ ಗಂಡ ಮೆನಾಸ್, ಆಕೆಯನ್ನು ಮನೆಯಲ್ಲಿ ಕೂಡಿ ಹಾಕುತ್ತಿದ್ದ. ಸಾಮಾಜಿಕ ಮಾಧ್ಯಮಗಳಿಂದ ದೂರ ಇರುವಂತೆ ಒತ್ತಡ ಹೇರುತ್ತಿದ್ದ.

ಮಾರ್ಚ್ 1ರಂದು ರಿಫಾ ಮೆನು ತನ್ನ ಕಚೇರಿಗೆ ಬಂದು ಹೊರ ಹೋಗುತ್ತಿದ್ದಾಗ ಅಳುತ್ತಾ ತೆರಳಿದ್ದು ಸಿಸಿಟಿವಿಯಲ್ಲಿ ದಾಖಲಾಗಿತ್ತು. ಆನಂತರ, ಮನೆಯಲ್ಲಿ ಗಂಡ- ಹೆಂಡತಿ ನಡುವೆ ಜಗಳ ಆಗಿತ್ತಾ..? ಜಗಳದಲ್ಲಿ ಕೊಲ್ಲಲ್ಪಟ್ಟು ಶವ ನೇಣಿಗೇರಿಸಲಾಗಿತ್ತಾ ಎನ್ನುವ ಬಗ್ಗೆ ಕುಟುಂಬಸ್ಥರಲ್ಲಿ ಶಂಕೆ ಮೂಡಿದೆ. ಎರಡು ತಿಂಗಳ ಹಿಂದೆ ಖ್ಯಾತ ಬ್ಲಾಗರ್ ದುಬೈನಲ್ಲಿ ಸಾವಿಗೀಡಾಗಿದ್ದಾಳೆ ಎಂಬ ಸುದ್ದಿ ಹಬ್ಬಿದರೂ, ಗಂಡನೂ ಜೊತೆಗಿದ್ದ ಅನ್ನುವ ಕಾರಣಕ್ಕೆ ಹೆಚ್ಚು ಸುದ್ದಿ ಆಗಿರಲಿಲ್ಲ. ಅಲ್ಲದೆ, ಆತನೇ ಪತ್ನಿ ಸಾವನ್ನಪ್ಪಿದ ಸುದ್ದಿಯನ್ನು ವಿಡಿಯೋ ಮಾಡಿ ಹಂಚಿಕೊಂಡಿದ್ದ. ಆದರೆ ತಿಂಗಳ ನಂತರ ಮನೆಯವರು ಗಂಡನ ವಿರುದ್ಧವೇ ಕಿರುಕುಳ ಆರೋಪ ಹೊರಿಸಿ, ಪ್ರಕರಣ ಮರು ತನಿಖೆ ನಡೆಸಬೇಕೆಂದು ದೂರು ನೀಡಿದ ಬೆನ್ನಲ್ಲೇ ಕೇರಳದಲ್ಲಿ ಬ್ಲಾಗರ್ ಯುವತಿಯ ಸಾವು ದೊಡ್ಡ ಸಂಚಲನ ಎಬ್ಬಿಸಿದೆ. ಸುರ ಸುಂದರಾಂಗಿಯಾಗಿದ್ದ ಯುವತಿಯನ್ನು ಸಮಾಧಿ ಮಾಡಲಾಗಿದ್ದ ಸ್ಥಳದಿಂದ ಅಗೆದು ತೆಗೆದು ಪೋಸ್ಟ್ ಮಾರ್ಟಂ ನಡೆಸುವ ಸುದ್ದಿಯೇ ಆಕೆಯ ಅಭಿಮಾನಿಗಳನ್ನು ಹೌಹಾರುವಂತೆ ಮಾಡಿದೆ.


ಪತಿ- ಪತ್ನಿ ಜೊತೆಯಾಗೇ ಕಾಣಿಸಿಕೊಳ್ತಿದ್ದರು !
ರಿಫಾ ಯೂಟ್ಯೂಬ್ ಮತ್ತು ಇನ್ ಸ್ಟಾ ಗ್ರಾಮ್ ನಲ್ಲಿ ಫೇಮಸ್ ಆಗಿದ್ದರೂ, ತಾನೊಬ್ಬಳೇ ಕಾಣಿಸಿಕೊಳ್ತಿರಲಿಲ್ಲ. ಪತಿ- ಪತ್ನಿ ಇಬ್ಬರೂ ಜೊತೆಯಾಗೇ ಇನ್ ಸ್ಟಾ ಗ್ರಾಮ್ ಪೇಜ್ ನಲ್ಲಿ ಅಡುಗೆ ಇನ್ನಿತರ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು. ಸಾಯುವುದಕ್ಕೆ ಎರಡು ದಿನಗಳ ಮುನ್ನ ಫೆ.28ರಂದು ಮೆನು ಫ್ಯಾಮಿಲಿ ಎನ್ನುವ ಇನ್ ಸ್ಟಾ ಗ್ರಾಮ್ ಪೇಜ್ ನಲ್ಲಿ ದುಬೈನಲ್ಲಿ ಹೊಟೇಲ್ ಒಂದರಲ್ಲಿ ನಾನ್ ವೆಜ್ ಐಟಂ ತಿನ್ನುವ ವಿಡಿಯೋ ಷೇರ್ ಮಾಡಿದ್ದರು. ಇದಲ್ಲದೆ, ಮಾರ್ಚ್ 29ರ ಸಂಜೆ ಹೆತ್ತವರಿಗೆ ವಿಡಿಯೋ ಕರೆ ಮಾಡಿದ್ದ ರಿಫಾ ತನ್ನ ಒಂದು ವರ್ಷದ ಮಗುವಿನ ಜೊತೆ ಕಾಣಿಸಿಕೊಂಡಿದ್ದಳು. ಮರುದಿನ ಸಾಯುವ ಯೋಚನೆ ಇರುತ್ತಿದ್ದರೆ, ಅಂತಹ ಯಾವುದೇ ಮುನ್ಸೂಚನೆ ನೀಡಿರಲಿಲ್ಲ. ನಗು ನಗುತ್ತಲೇ ಮಾತನಾಡಿದ್ದರು ಎಂದು ಹೇಳ್ತಾರೆ, ಕುಟುಂಬಸ್ಥರು.
The body of Keralite vlogger Rifa Mehnu, who was found hanging under suspicious circumstances at a flat in Dubai two months ago, was exhumed from a cemetery here for a postmortem as part of further probe, police said on Saturday.
17-01-26 08:02 pm
HK News Desk
ದೇವನಹಳ್ಳಿ - ಬೂದಿಗೆರೆ ರಸ್ತೆಯಲ್ಲಿ ಭೀಕರ ಅಪಘಾತ ; ...
17-01-26 05:53 pm
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
17-01-26 03:08 pm
HK News Desk
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ...
16-01-26 06:33 pm
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
17-01-26 05:12 pm
Mangalore Correspondent
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm