ಬ್ರೇಕಿಂಗ್ ನ್ಯೂಸ್
10-05-22 09:14 pm HK Desk News ದೇಶ - ವಿದೇಶ
ನವದೆಹಲಿ, ಮೇ 10 : ಪಾಕಿಸ್ತಾನದ ಮಾಜಿ ಸ್ಪಿನ್ನರ್ ಡ್ಯಾನಿಶ್ ಕನೇರಿಯಾ ತನ್ನ ಸಹ ಆಟಗಾರ ಮತ್ತು ಮಾಜಿ ನಾಯಕ ಶಾಹಿದ್ ಅಫ್ರಿದಿ ವಿರುದ್ಧ ಮತ್ತೆ ಮತಾಂತರ ಯತ್ನದ ಆರೋಪ ಮಾಡಿದ್ದಾರೆ. ಕಳೆದ ವಾರ ಕನೇರಿಯಾ, 'ಅಫ್ರಿದಿ ನನ್ನನ್ನು ಇಸ್ಲಾಂಗೆ ಮತಾಂತರಗೊಳ್ಳಲು ಒತ್ತಾಯಿಸಿದ್ದರು. ಆದರೆ ನಾನು ನನ್ನ ಧರ್ಮವನ್ನೇ ನಂಬಿದ್ದೆ' ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಅಫ್ರಿದಿ, ಕನೇರಿಯಾ ಹಣ ಮತ್ತು ಪ್ರಚಾರಕ್ಕೆ ಈ ರೀತಿ ಹೇಳುತ್ತಿದ್ದಾರೆ. ಶತ್ರು ದೇಶಕ್ಕೆ ಧಾರ್ಮಿಕ ಭಾವನೆ ಕೆರಳಿಸುವ ಹೇಳಿಕೆ ನೀಡುತ್ತಿದ್ದಾರೆ' ಎಂದಿದ್ದರು.
ಸೋಮವಾರ ಮತ್ತೆ ಈ ಬಗ್ಗೆ ಟ್ವೀಟ್ ಮಾಡಿದ ದಾನೀಶ್ ಕನೇರಿಯಾ, 'ಒತ್ತಾಯದ ಮತಾಂತರದ ವಿರುದ್ಧ ಧ್ವನಿ ಎತ್ತಿದಾಗ ನನ್ನ ಕ್ರಿಕೆಟ್ ಬದುಕು ಅಂತ್ಯಗೊಳಿಸುವ ಬೆದರಿಕೆ ಹಾಕಲಾಗಿತ್ತು. ಭಾರತ ನಮ್ಮ ಶತ್ರು ರಾಷ್ಟ್ರವಲ್ಲ. ಹಾಗೆ ಪರಿಗಣಿಸಿದರೆ ನೀವು ಭಾರತೀಯ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಬೇಡಿ' ಎಂದು ಅಫ್ರಿದಿಯನ್ನು ಕುಟುಕಿದ್ದಾರೆ.
ಭಾರತವು ನಮ್ಮ ಶತ್ರು ರಾಷ್ಟ್ರವಲ್ಲ. ನಮ್ಮ ನಿಜವಾದ ಶತ್ರುಗಳೆಂದರೆ, ಧರ್ಮದ ಹೆಸರಿನಲ್ಲಿ ಜನರಿಗೆ ಪ್ರಚೋದನೆ ಮಾಡುವವರು. ಹಾಗೊಂದು ವೇಳೆ ನೀವು ಭಾರತವನ್ನು ಶತ್ರು ರಾಷ್ಟ್ರ ಎಂದು ಕರೆಯುವುದಾದರೆ, ನೀವು ಯಾವತ್ತೂ ಭಾರತೀಯ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಹೋಗಬೇಡಿ ಎಂದು ಶಾಹಿದ್ ಅಫ್ರಿದಿಗೆ ಸವಾಲೆಸೆದಿದ್ದಾರೆ.
ಈ ಹಿಂದೆ ದಾನಿಶ್ ಕನೇರಿಯಾ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ್ದ ಶಾಹಿದ್ ಅಫ್ರಿದಿ, ಅವರಿಗೆ ಈ ರೀತಿಯ ತೊಂದರೆಯಾಗಿದ್ದರೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ದೂರು ನೀಡಬೇಕಿತ್ತು, ಅದನ್ನು ಬಿಟ್ಟು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವುದಲ್ಲ ಎಂದು ಪಾಕಿಸ್ತಾನದ ಮಾಜಿ ನಾಯಕ ಅಫ್ರಿದಿ ಹೇಳಿದ್ದರು.
ನನ್ನ ವರ್ತನೆ ತಪ್ಪಾಗಿದ್ದರೆ, ನೀವ್ಯಾಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ದೂರು ನೀಡಲಿಲ್ಲ. ಅವರು ನಮ್ಮ ಶತ್ರು ರಾಷ್ಟ್ರದಲ್ಲಿ ಧಾರ್ಮಿಕ ಭಾವನೆಗಳನ್ನು ಇಟ್ಟುಕೊಂಡು ಸಂದರ್ಶನ ನೀಡುತ್ತಿದ್ದಾರೆ. ನಮ್ಮ ಮೇಲೆ ಇಷ್ಟೆಲ್ಲ ಆರೋಪ ಮಾಡುವ ಇವರು ತಮ್ಮದೇ ಚಾರಿತ್ರ್ಯವನ್ನು ನೋಡಿಕೊಳ್ಳಲಿ ಎಂದು ಕನೇರಿಯಾ ಅವರಿಗೆ ಅಫ್ರಿದಿ ತಿರುಗೇಟು ನೀಡಿದ್ದರು.
Former Pakistan leg-spinner Danish Kaneria has accused Shahid Afridi of instigating people in the name of religion. “India is not our enemy. Our enemies are those who instigate people in the name of religion. If you consider India as your enemy, then don’t ever go to any Indian media channel,” tweeted Kaneria on Monday. The spinner has bagged 261 wickets in 61 Test matches for Pakistan.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm