ಬ್ರೇಕಿಂಗ್ ನ್ಯೂಸ್
10-05-22 01:50 pm HK Desk News ದೇಶ - ವಿದೇಶ
ನವದೆಹಲಿ, ಮೇ 10: ಭಾರತದ ಕೊರೊನಾ ಸನ್ನಿವೇಶಗಳನ್ನು ಹಿಡಿದಿಟ್ಟ ಖ್ಯಾತ ಫೋಟೋ ಜರ್ನಲಿಸ್ಟ್ ಆಗಿದ್ದ ದಿವಂಗತ ಡ್ಯಾನಿಶ್ ಆಲಿಗೆ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ ನೀಡಲಾಗಿದೆ. ರಾಯ್ಟರ್ಟ್ ಸುದ್ದಿ ಸಂಸ್ಥೆಯ ಪತ್ರಕರ್ತರಾದ ಅದ್ನಾನ್ ಅಬಿದಿ, ಸನ್ನಾ ಇರ್ಶಾದ್ ಮಟ್ಟೂ ಮತ್ತು ಅಮಿತ್ ದವೆ ಅವರಿಗೂ ಪುಲಿಟ್ಜರ್ ಪ್ರಶಸ್ತಿ ಘೋಷಿಸಲಾಗಿದೆ.
ಭಾರತ ಮೂಲದ ಡ್ಯಾನಿಶ್ ಆಲಿ ರಾಯ್ಟರ್ಟ್ ಸಂಸ್ಥೆಯಲ್ಲಿ ಸೀನಿಯರ್ ಫೋಟೋಗ್ರಾಫರ್ ಆಗಿದ್ದರು. ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಕಾಲೇಜಿನಲ್ಲಿ ಪದವಿ ಪಡೆದಿದ್ದ ಡ್ಯಾನಿಶ್, ಆಬಳಿಕ ಸಮೂಹ ಸಂವಹನ ವಿಚಾರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.
2018ರಲ್ಲಿ ರೋಹಿಂಗ್ಯಾ ನಿರಾಶ್ರಿತರ ಕುರಿತು ಡ್ಯಾಕ್ಯುಮೆಂಟರಿ ಮಾಡಿದ ಡ್ಯಾನಿಶ್ ಆಲಿ ನೇತೃತ್ವದ ತಂಡಕ್ಕೆ ಫೀಚರ್ ಫೋಟೋಗ್ರಫಿಗಾಗಿ ಪುಲಿಟ್ಜರ್ ಪ್ರಶಸ್ತಿ ನೀಡಲಾಗಿತ್ತು. 2021ರಲ್ಲಿ ಅಫ್ಘಾನಿಸ್ತಾನ- ತಾಲಿಬಾನಿಗಳ ಸಂಘರ್ಷದ ಕವರೇಜ್ ಮಾಡುವುದಕ್ಕಾಗಿ ತೆರಳಿದ್ದ ಡ್ಯಾನಿಶ್ ಆಲಿಯನ್ನು ತಾಲಿಬಾನಿ ಉಗ್ರರು ಹತ್ಯೆ ಮಾಡಿದ್ದರು. ಪಾಕಿಸ್ಥಾನ ಗಡಿಭಾಗ ಸ್ಪಿನ್ ಬೋಲ್ಡಾಕ್ ಎಂಬ ಪ್ರದೇಶದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಡ್ಯಾನಿಶ್ ಆಲಿ, ಜರ್ಮನ್ ಮೂಲದ ಯುವತಿಯನ್ನು ಮದುವೆಯಾಗಿದ್ದು ಇಬ್ಬರು ಮಕ್ಕಳನ್ನು ಹೊಂದಿದ್ದರು.
ಡ್ಯಾನಿಶ್ ಆಲಿ, ರಾಯ್ಟರ್ಸ್ ಸಂಸ್ಥೆಯಲ್ಲಿ ಫೋಟೋಗ್ರಾಫರ್ ಆಗಿದ್ದುಕೊಂಡು ಜಾಗತಿಕ ವಿದ್ಯಮಾನಗಳ ಛಾಯಾಗ್ರಹಣಕ್ಕಾಗಿ ನಾನಾ ದೇಶಗಳನ್ನು ಸುತ್ತಿದ್ದರು. ಅಫ್ಘಾನಿಸ್ತಾನ, ಇರಾಕ್ ಯುದ್ಧಗಳು, ರೋಹಿಂಗ್ಯಾ ಮುಸ್ಲಿಮರ ಸಂಘರ್ಷ, ಹಾಂಗ್ ಕಾಂಗ್ ಪ್ರತಿಭಟನೆ, ನೇಪಾಳಿ ಭೂಕಂಪ ಹೀಗೆ ಜಾಗತಿಕ ಪ್ರಮುಖ ವಿದ್ಯಮಾನಗಳ ಛಾಯಾಗ್ರಹಣದ ಮೂಲಕ ವಿಶ್ವದ ಗಮನ ಸೆಳೆದಿದ್ದರು. ಇದೀಗ ಕೋವಿಡ್ ಸಂದರ್ಭದಲ್ಲಿ ಭಾರತದ ದೆಹಲಿ ಮತ್ತಿತರ ಕಡೆ ಎದುರಾಗಿದ್ದ ಸನ್ನಿವೇಶಗಳ ಫೀಚರ್ ಫೋಟೋಗ್ರಫಿಗಾಗಿ ಡ್ಯಾನಿಶ್ ಆಲಿಗೆ ಮರಣೋತ್ತರವಾಗಿ ಪುಲಿಟ್ಜರ್ ಪ್ರಶಸ್ತಿ ಘೋಷಿಸಲಾಗಿದೆ.
Journalist Danish Siddiqui, who lost his life while covering the conflict situation in Afghanistan, has been awarded the Pulitzer Prize for feature photography for his coverage of the Covid situation in India. Along with him, Reuters journalists Adnan Abidi, Sanna Irshad Mattoo, and Amit Dave were also honoured with the Pulitzer Prize.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm