ಬ್ರೇಕಿಂಗ್ ನ್ಯೂಸ್
10-05-22 01:18 pm HK Desk News ದೇಶ - ವಿದೇಶ
ನವದೆಹಲಿ, ಮೇ 10: ದೇಶಾದ್ಯಂತ ಸದ್ದು ಮಾಡಿರುವ ಕಾಶ್ಮೀರಿ ಪಂಡಿತರ ನರಮೇಧ ಕುರಿತ ದಿ ಕಾಶ್ಮೀರ್ ಫೈಲ್ಸ್ ಚಿತ್ರಕ್ಕೆ ಸಿಂಗಾಪುರದಲ್ಲಿ ನಿಷೇಧದ ಬರೆ ಬೀಳುವ ಸಾಧ್ಯತೆ ಕಂಡುಬಂದಿದೆ. ಚಿತ್ರದಲ್ಲಿ ಒಂದು ವರ್ಗವನ್ನು ಟಾರ್ಗೆಟ್ ಮಾಡಲಾಗಿದ್ದು, ಸಮುದಾಯಗಳ ನಡುವೆ ದ್ವೇಷ ಹರಡುವ ರೀತಿ ತೋರಿಸಲಾಗಿದೆ ಎಂದು ಸಿಂಗಾಪುರದ ಅಧಿಕಾರಿಗಳು ತಿಳಿಸಿದ್ದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಕಾಶ್ಮೀರ್ ಫೈಲ್ಸ್ ಚಿತ್ರವು ಸಿಂಗಾಪುರದ ಸಿನಿಮಾ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಬಿಂಬಿತವಾಗಿಲ್ಲ. ಸೂತ್ರಗಳಿಗೆ ಹೊರತಾದ ವಿಚಾರಗಳನ್ನು ತೋರಿಸುತ್ತಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. 1990ರಲ್ಲಿ ಕಾಶ್ಮೀರದಲ್ಲಿನ ಹತ್ಯಾಕಾಂಡಕ್ಕೆ ಬಲಿಯಾದ ಕುಟುಂಬದ ಕುಡಿ ಬೆಳೆದು ದೆಹಲಿಯ ಯುನಿವರ್ಸಿಟಿ ಒಂದರಲ್ಲಿ ಓದುತ್ತಿರುವುದು, ಹೆತ್ತವರ ಸಾವಿನ ಬಗ್ಗೆ ಹುಡುಕಾಟದ ಚಿತ್ರಣ ಕಾಶ್ಮೀರ್ ಫೈಲ್ಸ್ ಚಿತ್ರದಲ್ಲಿದೆ. ಹಳೆಯ ನೆನಪುಗಳನ್ನು ಮೆಲುಕು ಹಾಕುವ ನೆಪದಲ್ಲಿ ಹತ್ಯಾಕಾಂಡದ ಚಿತ್ರಣಗಳನ್ನು ತೋರಿಸಲಾಗಿತ್ತು. ಚಿತ್ರಕ್ಕೆ ಪ್ರಬಲ ವಿರೋಧ ಕೇಳಿಬಂದರೂ, ಭಾರತದಲ್ಲಿ ಆಡಳಿತ ಪಕ್ಷ ಬೆಂಬಲಿಸಿದ್ದರಿಂದ ದೇಶಾದ್ಯಂತ ಕಾವೇರಲು ಮತ್ತು ವಿವಾದಕ್ಕೂ ಕಾರಣವಾಗಿತ್ತು.

ಚಿತ್ರವನ್ನು ಸಿಂಗಾಪುರದಲ್ಲಿ ಪ್ರದರ್ಶನಕ್ಕೆ ಅಂಗೀಕರಿಸಲು ಸಾಧ್ಯವಿಲ್ಲ. ಕಾಶ್ಮೀರದ ಪ್ರಸಕ್ತ ಸನ್ನಿವೇಶವನ್ನು ತೋರಿಸುವ ನೆಪದಲ್ಲಿ ಚಿತ್ರದಲ್ಲಿ ಒಂದು ವರ್ಗವನ್ನು ತುಚ್ಛವಾಗಿಸಲಾಗಿದೆ. ಇದರಿಂದ ಸಮಾಜದಲ್ಲಿ ಸಮುದಾಯಗಳ ನಡುವೆ ದ್ವೇಷ ಹರಡಲು ಕಾರಣವಾಗುತ್ತದೆ. ಸಿಂಗಾಪುರದ ಬಹು ವೈವಿಧ್ಯದ ಸಮುದಾಯಗಳು, ಸಂಸ್ಕೃತಿ ಇರುವ ಪ್ರದೇಶದಲ್ಲಿ ಸಾಮರಸ್ಯಕ್ಕೆ ಧಕ್ಕೆ ಬರಬಹುದು. ಯಾವುದೇ ವಿಚಾರವನ್ನು ಮತ, ಧರ್ಮದ ಆಧಾರದಲ್ಲಿ ತಾರತಮ್ಯ ನೆಲೆಯಲ್ಲಿ ತೋರಿಸುವುದಕ್ಕೆ ಸಿಂಗಾಪುರದಲ್ಲಿ ನಿಷೇಧ ಇದೆ ಎಂದು ಅಲ್ಲಿನ ಅಧಿಕಾರಿಗಳು ನ್ಯೂಸ್ ಏಶಿಯಾ ಚಾನೆಲ್ ಗೆ ತಿಳಿಸಿದ್ದಾರೆ. ಆದರೆ ಸಿಂಗಾಪುರದ ಸರಕಾರ ಈ ಬಗ್ಗೆ ಅಧಿಕೃತವಾಗಿ ಯಾವುದನ್ನೂ ಹೇಳಿಕೊಂಡಿಲ್ಲ.
The Kashmir Files, directed by Vivek Agnihotri, will be banned in multi-racial Singapore now, reported PTI. The authorities have assessed the film to be 'beyond Singapore’s film classification guidelines'. The Kashmir Files, which released in India on March 11, tells the story of a university student who learns that his Kashmiri Hindu parents were killed during the Kashmir insurgency in 1990. Ever since its release, the film has created a huge noise among the audience.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 10:34 pm
HK News Desk
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
16-10-26 11:04 am
HK News Staffer
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm
Mangaluru Valencia St. Vincent Church Priest...
14-10-26 09:09 pm