ಬ್ರೇಕಿಂಗ್ ನ್ಯೂಸ್
09-05-22 06:00 pm HK Desk News ದೇಶ - ವಿದೇಶ
ಕೊಲಂಬೋ, ಮೇ 9: ತುರ್ತು ಪರಿಸ್ಥಿತಿಯನ್ನೂ ಲೆಕ್ಕಿಸದೆ ಜನರು ಹಿಂಸಾಚಾರಕ್ಕಿಳಿದ ಬೆನ್ನಲ್ಲೇ ಶ್ರೀಲಂಕಾ ಪ್ರಧಾನಿ ಮಹೀಂದ್ರಾ ರಾಜಪಕ್ಸ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ರಾಜಧಾನಿ ಕೊಲಂಬೋ ಸೇರಿದಂತೆ ಪ್ರಮುಖ ನಗರಗಳಲ್ಲಿ ಭಾರೀ ಪ್ರತಿಭಟನೆ, ದಂಗೆ ಎದ್ದಿರುವ ಘಟನೆಗಳು ನಡೆದಿದ್ದು ಸರಕಾರದ ಬೆಂಬಲಿಗರು ಮತ್ತು ವಿರೋಧಿ ಪ್ರತಿಭಟನಾಕಾರರು ನಡುವೆ ಹಿಂಸಾಚಾರ ನಡೆದು ನೂರಾರು ಮಂದಿ ಗಾಯಗೊಂಡಿದ್ದಾರೆ.
76 ವರ್ಷದ ಪ್ರಧಾನಿ ಮಹೀಂದ್ರಾ ರಾಜಪಕ್ಸ ಅವರು ತನ್ನ ತಮ್ಮ ಅಧ್ಯಕ್ಷ ಸ್ಥಾನದಲ್ಲಿರುವ ಗೊಟಬಾಯ ರಾಜಪಕ್ಸ ಅವರಿಗೆ ಪತ್ರದಲ್ಲಿ ಪ್ರಧಾನಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಇದೇ ವೇಳೆ, ಒಮ್ಮತದ ಸರಕಾರ ರಚಿಸುವುದಕ್ಕೆ ಒಲವು ತೋರಿದ್ದಾರೆ. ಸೋಮವಾರ ಬೆಳಗ್ಗೆ ಪ್ರತಿಭಟನೆ, ಹಿಂಸಾಚಾರದ ನಡುವೆಯೂ ಅಧಿಕಾರ ಬಿಟ್ಟು ಕೊಡಲ್ಲ ಎಂದು ಮಹೀಂದ್ರಾ ರಾಜಪಕ್ಸ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ರಾಜಿನಾಮೆ ರವಾನಿಸಿ ನೂತನ ಸರಕಾರ ರಚಿಸಲು ಅನುವು ಮಾಡುತ್ತಿರುವುದಾಗಿ ಹೇಳಿರುವುದು ಅಚ್ಚರಿ ಮೂಡಿಸಿದೆ.

ಈಗಿನ ಸನ್ನಿವೇಶಕ್ಕೆ ಕಾರಣವಾಗಿರುವ ಪ್ರಧಾನಿ ಮತ್ತು ಅಧ್ಯಕ್ಷರು ರಾಜಿನಾಮೆ ಕೊಟ್ಟು ತೊಲಗಬೇಕೆಂದು ಎರಡು ತಿಂಗಳಿಂದ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ದೇಶದಲ್ಲಿ ಜೀವನಾವಶ್ಯಕ ವಸ್ತುಗಳ ಬೆಲೆ ದಿಢೀರ್ ಏರಿಕೆ ಆಗಿರುವುದರಿಂದ ಜನರು ಬದುಕಲು ಕಷ್ಟ ಪಡುತ್ತಿದ್ದಾರೆ. ಪೆಟ್ರೋಲ್, ಡೀಸೆಲ್ ಸಿಗದೆ ಜನರು ಪರದಾಡುತ್ತಿದ್ದಾರೆ. ಜನರು ಒಂದೇ ಸಮನೆ ಪ್ರತಿಭಟನೆ, ಹಿಂಸಾಚಾರಕ್ಕೆ ಇಳಿದಿರುವುದರಿಂದ ವಾರದ ಹಿಂದೆ ಮತ್ತೆ ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿತ್ತು.
ಇಪ್ಪತ್ತು ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಶ್ರೀಲಂಕಾದಲ್ಲಿ ಒಂದೇ ಕುಟುಂಬದ ಅಧಿಪತ್ಯ ಇದೆ. ಈ ಅವಧಿಯಲ್ಲಿ ಜನರನ್ನು ಓಲೈಸುತ್ತಾ ರಾಜಕಾರಣ ನಡೆಸಿರುವುದರಿಂದ ಶ್ರೀಲಂಕಾ ರೂಪಾಯಿ ಬೆಲೆ ಕಳಕೊಂಡಿದೆ. ಇದರಿಂದಾಗಿ ಜನರು ಸರಕಾರದ ವಿರುದ್ಧ ದಂಗೆ ಎದ್ದಿದ್ದು, ಇನ್ನಾದರೂ ಕುಟುಂಬ ರಾಜಕಾರಣಕ್ಕೆ ಇತಿಶ್ರೀ ಬಿದ್ದೀತಾ ಎನ್ನುವ ಆಶಯ ಉಂಟಾಗಿದೆ. ಮಹೀಂದ್ರಾ ರಾಜಪಕ್ಸ ಅವರೇ ಬಹುಕಾಲದಿಂದ ತನ್ನ ಕುಟುಂಬ ಸದಸ್ಯರನ್ನು ಪ್ರಮುಖ ಸ್ಥಾನಗಳಲ್ಲಿ ಇಟ್ಟುಕೊಂಡು ಒಟ್ಟು ಸರಕಾರವನ್ನು ನಿಯಂತ್ರಿಸುತ್ತಿದ್ದರು.
Amid the worst economic crisis the country has seen since independence, Sri Lankan Prime Minister Mahinda Rajapaksa resigned from his post on Monday. Sri Lanka's health minister Prof Channa Jayasumana has also handed over his letter of resignation to the President.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 10:34 pm
HK News Desk
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
16-10-26 11:04 am
HK News Staffer
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm
Mangaluru Valencia St. Vincent Church Priest...
14-10-26 09:09 pm