ಬ್ರೇಕಿಂಗ್ ನ್ಯೂಸ್
30-04-22 12:10 pm HK Desk News ದೇಶ - ವಿದೇಶ
ನವದೆಹಲಿ, ಎ.30: ಇನ್ನು ಕೆಲವೇ ವರ್ಷಗಳಲ್ಲಿ ಜಗತ್ತಿನಲ್ಲಿ ತೀವ್ರವಾಗಿ ಆಹಾರದ ಬಿಕ್ಕಟ್ಟು ಎದುರಾಗಲಿದೆ ಎಂದು ಸಮೀಕ್ಷೆಯೊಂದು ಹೇಳಿದೆ. ಕೆಲವೇ ವರ್ಷಗಳಲ್ಲಿ ಜಗತ್ತಿನಲ್ಲಿರುವ ಆಹಾರ ಪದಾರ್ಥಗಳೆಲ್ಲ ಸಂಪೂರ್ಣ ಖಾಲಿಯಾಗಲಿದ್ದು ನೀರು ಮತ್ತು ಆಹಾರಕ್ಕಾಗಿ ಮನುಷ್ಯ ಕಾದಾಡುವ ಸ್ಥಿತಿ ಬರಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.
2050ರ ವೇಳೆಗೆ ಆಹಾರ ಖಾಲಿ !
ಸಾಮಾಜಿಕ ಮತ್ತು ಆರ್ಥಿಕ ದತ್ತಾಂಶಗಳ ಮೇಲೆ ನಿಗಾ ಇಡುವ ಸಂಸ್ಥೆಯಾದ ʼದಿ ವರ್ಲ್ಡ್ ಕೌಂಟ್ʼ ವರದಿ ಪ್ರಕಾರ, ಇಡೀ ಪ್ರಪಂಚದಲ್ಲಿ ಆಹಾರ ಬಿಕ್ಕಟ್ಟು ಸೃಷ್ಟಿಯಾಗಲಿದೆ. 2050ರ ವೇಳೆಗೆ ಜಗತ್ತಿನಲ್ಲಿ ಆಹಾರ ಧಾನ್ಯಗಳು ಖಾಲಿಯಾಗಲಿವೆ. ದಿ ವರ್ಲ್ಡ್ ಕೌಂಟ್ ತನ್ನ ವೆಬ್ಸೈಟ್ನಲ್ಲಿ ಧಾನ್ಯಗಳ ಕೊರತೆ ಕುರಿತ ಅಂಕಿ-ಅಂಶಗಳನ್ನು ಪ್ರಕಟಿಸಿದೆ. ಈ ಸಮೀಕ್ಷೆ ಪ್ರಕಾರ ಭೂಮಿ ಮೇಲಿನ ಧಾನ್ಯಗಳೆಲ್ಲ ಖರ್ಚಾಗಿ ಹೋಗಲು ಕೇವಲ 27 ವರ್ಷಗಳು ಬಾಕಿ ಇದೆಯಂತೆ.
2050ರ ವೇಳೆಗೆ ವಿಶ್ವದ ಜನಸಂಖ್ಯೆಯು ಸಾವಿರ ಕೋಟಿ ದಾಟಲಿದೆ ಎಂದು ದಿ ವರ್ಲ್ಡ್ ಕೌಂಟ್ ವರದಿಯಲ್ಲಿ ತಿಳಿಸಿದೆ. ಹಾಗಾಗಿ 2050ರ ವೇಳೆಗೆ ಆಹಾರಕ್ಕೆ ಬೇಡಿಕೆ ಕೂಡ 2017ಕ್ಕೆ ಹೋಲಿಸಿದ್ರೆ ಶೇ.70ರಷ್ಟು ಹೆಚ್ಚಾಗಲಿದೆ. ಭೂಮಿಯು ಪ್ರತಿ ವರ್ಷ 7500 ಮಿಲಿಯನ್ ಟನ್ ಫಲವತ್ತಾದ ಮಣ್ಣನ್ನು ಕಳೆದುಕೊಳ್ಳುತ್ತಿದೆ. ಜಗತ್ತಿನಲ್ಲಿ ಕಳೆದ 40 ವರ್ಷಗಳಲ್ಲಿ, ಒಟ್ಟು ಭೂಮಿಯ ಮೂರನೇ ಒಂದು ಭಾಗದಷ್ಟು ಕಡಿಮೆಯಾಗಿದೆ.
![]()
ಆಹಾರದ ಕೊರತೆಗೆ ಇದು ಪ್ರಮುಖ ಕಾರಣ. ಮುಂದಿನ 40 ವರ್ಷಗಳಲ್ಲಿ ಭೂಮಿ ಮೇಲಿರುವ ಜೀವಿಗಳ ಆಹಾರದ ಅಗತ್ಯವನ್ನು ಪೂರೈಸಲು, ಕಳೆದ 8 ಸಾವಿರ ವರ್ಷಗಳಲ್ಲಿ ಮಾಡದಿರುವಷ್ಟು ಧಾನ್ಯವನ್ನು ಉತ್ಪಾದಿಸಬೇಕಾಗುತ್ತದೆ. ಆದ್ರೆ ಫಲವತ್ತಾದ ಭೂಮಿಯೇ ಕಡಿಮೆಯಾಗ್ತಿರೋದ್ರಿಂದ ಇದು ಅಸಾಧ್ಯದ ಮಾತು. ಧಾನ್ಯ ಖಾಲಿಯಾದಾಗ ಮಾಂಸವನ್ನು ತಿನ್ನುವ ಆಯ್ಕೆ ಕೂಡ ಮಾನವರ ಮುಂದಿಲ್ಲ. ಯಾಕಂದ್ರೆ ಮಾಂಸವನ್ನು ತಯಾರಿಸಲು ಹೆಚ್ಚು ಶಕ್ತಿ ಬೇಕು.
2030ರ ವೇಳೆಗೆ ಅಕ್ಕಿಯ ಬೆಲೆ ಶೇ.130ರಷ್ಟು ಮತ್ತು ಮೆಕ್ಕೆಜೋಳದ ಬೆಲೆ ಶೇ.180 ಪ್ರತಿಶತದಷ್ಟು ಹೆಚ್ಚಾಗುತ್ತದೆ ಎಂದು ದಿ ವರ್ಲ್ಡ್ ಕೌಂಟ್ ಭವಿಷ್ಯ ನುಡಿದಿದೆ. ಆಹಾರ ಮತ್ತು ನೀರಿಗಾಗಿ ಯುದ್ಧವೇ ನಡೆದ್ರೂ ಅಚ್ಚರಿಯಿಲ್ಲ. ಒಂದ್ಕಡೆ ಆಹಾರ ಧಾನ್ಯಗಳ ಕೊರತೆಯಾದ್ರೆ ಮತ್ತೊಂದ್ಕಡೆ ನೀರು ಮತ್ತು ಆಹಾರವನ್ನು ವ್ಯರ್ಥ ಮಾಡಿದ್ರೆ ಇನ್ನೂ ಕಠಿಣ ಪರಿಸ್ಥಿತಿಗಳು ಎದುರಾಗಬಹುದು.
ಕಳೆದ ವರ್ಷ ವಿಶ್ವಸಂಸ್ಥೆ ಬಿಡುಗಡೆ ಮಾಡಿದ ವರದಿ ಪ್ರಕಾರ 2019ರಲ್ಲಿ ವಿಶ್ವಾದ್ಯಂತ 93 ಮಿಲಿಯನ್ ಟನ್ಗಳಿಗಿಂತ ಹೆಚ್ಚು ಆಹಾರವನ್ನು ವ್ಯರ್ಥ ಮಾಡಲಾಗಿದೆ. ವೇಸ್ಟ್ ಮಾಡಿರೋ ಆಹಾರ ಒಟ್ಟಾರೆ ಲಭ್ಯವಿರೋ ಆಹಾರದ ಶೇ.17ರಷ್ಟಿದೆ. ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಯೂ ಪ್ರತಿ ವರ್ಷ 121 ಕೆಜಿ ಆಹಾರವನ್ನು ವ್ಯರ್ಥ ಮಾಡುತ್ತಾನೆ ಎಂದು ಅಂಕಿ ಅಂಶಗಳು ಹೇಳುತ್ತವೆ.
Food On Earth Will Finish In Next 27 Years, Man works hard day and night for two times’ bread. He sheds blood and sweat so that he and his family can get bread for just two times. But now this bread is going to end in just a few years and there is going to be such a food crisis in the world that it will be difficult for a person to get food even for 1 time, leave it for 2 times. Even after passing crores of rupees, a person may not be able to buy food.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 10:34 pm
HK News Desk
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
16-10-26 11:04 am
HK News Staffer
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm
Mangaluru Valencia St. Vincent Church Priest...
14-10-26 09:09 pm