ಬ್ರೇಕಿಂಗ್ ನ್ಯೂಸ್
26-04-22 10:05 pm HK News Desk ದೇಶ - ವಿದೇಶ
ಕರಾಚಿ, ಎ.26: ಪಾಕಿಸ್ಥಾನದ ಕರಾಚಿ ಯೂನಿವರ್ಸಿಟಿ ಕ್ಯಾಂಪಸ್ ಸಮೀಪದಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, ಮೂವರು ಚೀನಾ ಪ್ರಜೆಗಳು ಸೇರಿ ನಾಲ್ವರು ಸ್ಥಳದಲ್ಲೇ ಸಾವು ಕಂಡಿದ್ದಾರೆ. ಮಹಿಳೆಯೊಬ್ಬಳು ತನ್ನನ್ನು ಆತ್ಮಹತ್ಯಾ ಬಾಂಬರ್ ಆಗಿ ಸ್ಫೋಟಿಸಿಕೊಂಡಿದ್ದಾಳೆ ಎನ್ನಲಾಗುತ್ತಿದ್ದು ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.
ಕರಾಚಿ ಯೂನಿವರ್ಸಿಟಿ ಸಮೀಪದ ಕನ್ಫ್ಯೂಶಿಯಸ್ ಇನ್ಸಿಟ್ಯೂಟ್ ಕಟ್ಟಡದ ಬಳಿ ವ್ಯಾನ್ ನಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಪ್ರತ್ಯೇಕವಾದಿ ಸಂಘಟನೆ ಕೃತ್ಯ ನಡೆಸಿರುವುದಾಗಿ ಪಾಕಿಸ್ಥಾನದ ಡಾನ್ ನ್ಯೂಸ್ ಟಿವಿ ವರದಿ ಮಾಡಿದೆ. ವ್ಯಾನ್ ನಲ್ಲಿ ಚೀನಾ ಮೂಲದ ಮೂವರು ಉಪನ್ಯಾಸಕರನ್ನು ಕರಾಚಿ ಯೂನಿವರ್ಸಿಟಿಯಿಂದ ಕರೆತರಲಾಗುತ್ತಿತ್ತು. ಚೀನಾದ ಉಪನ್ಯಾಸಕರು ಯೂನಿವರ್ಸಿಟಿಯಲ್ಲಿ ಚೀನೀ ಭಾಷೆಯನ್ನು ಬೋಧಿಸುತ್ತಿದ್ದರು. ಕೆಲಸ ಮುಗಿಸಿ ವ್ಯಾನಿನಲ್ಲಿ ಮರಳುತ್ತಿದ್ದಾಗ ಬಾಂಬ್ ಸ್ಫೋಟ ನಡೆದಿದೆ. ವ್ಯಾನ್ ನಲ್ಲಿ ಏಳರಿಂದ ಎಂಟು ಮಂದಿ ಇದ್ದರೆಂದು ಸ್ಥಳೀಯ ಪೊಲೀಸರು ತಿಳಿಸಿದ್ದು, ಮೃತರ ಸಂಖ್ಯೆ ಖಚಿತಗೊಂಡಿಲ್ಲ. ಜಂಗ್ ಎನ್ನುವ ಉರ್ದು ಪತ್ರಿಕೆಯೊಂದು ರಿಮೋಟ್ ಕಂಟ್ರೋಲ್ ಮೂಲಕ ಬಾಂಬ್ ಸ್ಫೋಟಿಸಲಾಗಿದೆ ಎಂದು ಹೇಳಿದೆ.
ಕಳೆದ ಜುಲೈ ತಿಂಗಳಲ್ಲಿ ಚೀನೀಯರಿದ್ದ ಬಸ್ಸಿನಲ್ಲಿ ಬಾಂಬ್ ಸ್ಫೋಟಗೊಂಡು 9 ಮಂದಿ ಚೀನೀಯರು ಮೃತಪಟ್ಟಿದ್ದರು. ಬಸ್ಸಿನಲ್ಲಿ ಚೀನಾದ ಇಂಜಿನಿಯರ್ ಗಳನ್ನು ಖೈಬರ್ ಪಂಕ್ತುಕ್ವಾ ಪ್ರಾಂತದ ಡ್ಯಾಮ್ ಪ್ರದೇಶಕ್ಕೆ ಒಯ್ಯುತ್ತಿದ್ದಾಗ ಬಾಂಬ್ ದಾಳಿ ಆಗಿತ್ತು. ಘಟನೆಯಲ್ಲಿ 9 ಚೀನೀಯರು ಸೇರಿ 13 ಜನ ಸತ್ತಿದ್ದರು. ಆನಂತರ, ಕೆಲವು ದಿನಗಳ ಬಳಿಕ ಮೋಟರ್ ಸೈಕಲ್ ನಲ್ಲಿ ತೆರಳುತ್ತಿದ್ದ ಇಬ್ಬರು ಚೀನೀಯರ ಮೇಲೆ ಬೆಂಕಿ ಹಾಕಿ, ಸುಡಲಾಗಿತ್ತು. ಇಬ್ಬರು ಕೂಡ ಜೀವಂತ ಸಾವು ಕಂಡಿದ್ದರು. ಪಾಕಿಸ್ಥಾನದಲ್ಲಿ ಚೀನೀಯರು ರಸ್ತೆ ಮಾರ್ಗ, ಬಂದರು ನಿರ್ಮಿಸುತ್ತಿರುವುದರಿಂದ ಅಲ್ಲಿನ ಸ್ಥಳೀಯ ಪ್ರತ್ಯೇಕತವಾದಿ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು ಚೀನೀಯರನ್ನು ಟಾರ್ಗೆಟ್ ಮಾಡಿ ಕೊಲ್ಲುತ್ತಿದ್ದಾರೆ.
Four people, including three Chinese nationals, were killed and several others injured in an explosion in a van near the Confucius Institute at Pakistan's Karachi University on Tuesday, reports said. The attack was carried out by a woman suicide bomber, according to news agency AFP.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm