ಬ್ರೇಕಿಂಗ್ ನ್ಯೂಸ್
19-04-22 05:02 pm HK Desk news ದೇಶ - ವಿದೇಶ
ಭಟ್ಕಳ, ಎ.19: ರಾಜ್ಯಾಂಗವನ್ನು ಶುದ್ಧೀಕರಣ ಮಾಡುವುದಕ್ಕಾಗಿ ಸ್ವಾಮೀಜಿಗಳು ರಾಜಕೀಯಕ್ಕೆ ಇಳಿಯಬೇಕಾಗಿದೆ. ಮುಂದಿನ ಚುನಾವಣೆಯಲ್ಲಿ ನಾವು 50 ಸಂತರು ವಿಧಾನಸಭಾ ಚುನಾವಣೆಗೆ ಇಳಿಯಲಿದ್ದೇವೆ ಎಂದು ಬೆಳ್ತಂಗಡಿಯ ಕನ್ಯಾಡಿ ಮಠದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ.
ಭಟ್ಕಳದ ಶಿರಾಲಿ ಹಳೆಕೋಟೆ ಹನುಮಂತ ದೇವಸ್ಥಾನದ ಪುನರ್ ಪ್ರತಿಷ್ಠಾನದ ಕಾರ್ಯಕ್ರಮದಲ್ಲಿ ಸ್ವಾಮೀಜಿ ಮಾರ್ಮಿಕ ಮಾತುಗಳನ್ನು ಆಡಿದ್ದಾರೆ. ನಾವು ಪ್ರಧಾನಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಸ್ಫೂರ್ತಿ ಎಂದು ತಿಳಿಯುತ್ತೇವೆ. ಆದರೆ, ಯಾವುದೇ ರಾಜ್ಯದಲ್ಲಿ ನಾಲ್ಕನೇ ಕ್ಲಾಸ್ ಕಲಿತವರು ನಮ್ಮನ್ನು ಆಳುವಂತಾಗಬಾರದು. ಶಾಸಕ, ಮಂತ್ರಿಯಾಗುವನು ಕನಿಷ್ಠ ಪದವಿ ಓದಿರಬೇಕು. ಕಾನೂನಿನ ಬಗ್ಗೆ ಜ್ಞಾನ ಇದ್ದವನಷ್ಟೇ ಮಂತ್ರಿಯಾಗಬೇಕು. ನಮಗೆ ಸರಕಾರದಿಂದ ಯಾವುದೇ ಸಂಬಳ, ಭತ್ಯೆಗಳು ಬೇಡ. ಕೇವಲ ಉಣ್ಣಲು ಊಟ ಕೊಟ್ಟರೆ ಸಾಕು. ಶಾಸಕನಾಗಿ ಮಾಜಿಯಾದರಿಗೂ ಭತ್ಯೆ ಪಡೆಯುವುದನ್ನು ನಿರಾಕರಿಸುತ್ತೇವೆ ಎಂದು ಹೇಳಿದರು.
ಕನಿಷ್ಠ ಜ್ಞಾನ ಇಲ್ಲದವರು ಶಾಸಕರಾಗಿ ಆಯ್ಕೆ ಆಗಬಾರದು. ನಮಗೂ ಈ ದೇಶದ ಸಂವಿಧಾನದ ಬಗ್ಗೆ ಗೌರವ ಇದೆ. ಹಾಗೆಂದು, ಈಗಿನ ಸ್ಥಿತಿಯಲ್ಲಿ ಕಾನೂನಿನ ಬಗ್ಗೆ ತಿಳುವಳಿಕೆ ಇಲ್ಲದಿರುವ ವ್ಯಕ್ತಿ ಕಾನೂನು ರೂಪಿಸುವ ಶಾಸಕನಾಗಿ ಅಪಮಾನ. ಐಎಎಸ್, ಐಪಿಎಸ್ ಕಲಿತು ಬಂದವರು ಇಂಥವರ ಮುಂದೆ ಕೈಕಟ್ಟಿ ನಿಲ್ಲುವುದು ಅಪಮಾನ. ಹಾಗಾಗಿ ಶಾಸಕರಾಗುವ ಮಂದಿಗೆ ಕನಿಷ್ಠ ವಿದ್ಯಾರ್ಹತೆ ಮಟ್ಟ ರೂಪಿಸಬೇಕು. ಇದನ್ನು ನಾವು ನಿರೀಕ್ಷಿಸಿದರಷ್ಟಕ್ಕೆ ರಾಜಕೀಯ ಸರಿಯಾಗದು. ಈಗ ಎಲ್ಲದರಲ್ಲೂ ದುಡ್ಡೇ ಮುಖ್ಯ ಅನ್ನುವಂತಾಗಿದೆ. ರಾಜಕೀಯ ಮತ್ತು ಧರ್ಮ ಒಟ್ಟೊಟ್ಟಿಗೆ ಸಾಗಬೇಕಾಗಿದೆ. ಇದನ್ನು ಹಿಂದೆ ಭೀಷ್ಮರೇ ಹೇಳಿದ್ದರು.
ಜನರ ತೆರಿಗೆಯ ಹಣದಲ್ಲಿ ಶಾಸಕರು ಮೆರೆದಾಡುವುದನ್ನು ವಿರೋಧಿಸಬೇಕು. ಈಗಿನ ಸ್ಥಿತಿ ಹೇಗಿದೆಯಂದ್ರೆ, ಜನರ ದುಡ್ಡಿನಲ್ಲಿ ಶಾಸಕರು ಸ್ಟಾರ್ ಹೊಟೇಲುಗಳಲ್ಲಿ ಮೆರೆದಾಡುತ್ತಾರೆ. ಅಮೆರಿಕಕ್ಕೆ ಹೋಗಿ ಒಂದು ದಿನಕ್ಕೆ ಲಕ್ಷಾಂತರ ವ್ಯಯಿಸಿ ಸ್ಟಾರ್ ಹೊಟೇಲ್ ಗಳಲ್ಲಿ ಉಳಿಯುತ್ತಾರೆ. ಒಂದು ದಿನ ಮಲಗಲು 500 ರೂ. ಕೊಠಡಿ ಸಾಕಾಗುತ್ತದೆ. ಯಾಕೆ, ಲಕ್ಷ ತೆರುವ ಕೊಠಡಿಗಳು ಬೇಕು. ಜನರ ದುಡ್ಡಲ್ಲಿ ಯಾಕೆ ಮೆರೆದಾಟ ಬೇಕು. ಈಗಿನ ರಾಜಕಾರಣಿಗಳು ಜನರ ದುಡ್ಡನ್ನು ಅನಗತ್ಯವಾಗಿ ಪೋಲು ಮಾಡುತ್ತಿದ್ದಾರೆ. ನಾವು ಯಾವುದೇ ಪಕ್ಷದಿಂದ ಸ್ಪರ್ಧಿಸುವುದಿಲ್ಲ. ನಮಗೆ ಭಗವದ್ಗೀತೆಯೇ ಚಿಹ್ನೆ. ಸನಾತನ ಹಿಂದು ಧರ್ಮದ ಪರವಾಗಿ ಚುನಾವಣೆ ಸ್ಪರ್ಧೆ ಮಾಡುತ್ತೇವೆ. ನಮಗೆ ಪ್ರಚಾರಕ್ಕಾಗಿ ಉತ್ತರ ಭಾರತದಿಂದ ಐದು ಲಕ್ಷ ನಾಗಾ ಸಾಧುಗಳು ಬರಲಿದ್ದಾರೆ ಎಂದು ಸಚಿವ ಸುನಿಲ್ ಕುಮಾರ್, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಮ್ಮುಖದಲ್ಲಿಯೇ ಕನ್ಯಾಡಿ ಸ್ವಾಮೀಜಿ ಘೋಷಣೆ ಮಾಡಿದ್ದಾರೆ.
ರಾಜಕೀಯ ವ್ಯವಸ್ಥೆಯಿಂದ ಬೇಸತ್ತು ಹೋಗಿದ್ದೇವೆ. ಇದು ಸರಿಯಾಗುತ್ತೆ ಎಂದು ನಿರೀಕ್ಷೆ ಮಾಡಿದರೆ ಸರಿ ಆಗೋದು ಕಾಣುವುದಿಲ್ಲ. ಪಕ್ಷ ಯಾರು ಬಂದರೂ, ಅಷ್ಟೇ. ಮೇಲಿರುವ ಮೋದಿ, ಯೋಗಿ ಆದಿತ್ಯನಾಥ್ ಅವರನ್ನು ಆದರ್ಶ ಆಗಿಟ್ಟುಕೊಂಡು ನಾವು ಚುನಾವಣೆ ರಾಜಕೀಯಕ್ಕೆ ಇಳಿಯಲಿದ್ದೇವೆ. ಕನಿಷ್ಠ 50 ಸ್ಥಾನಗಳಿಗೆ ಸ್ಪರ್ಧಿಸಲಿದ್ದೇವೆ. ಇದನ್ನು ಭಟ್ಕಳದಿಂದಲೇ ಆರಂಭಿಸಲಿದ್ದೇವೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.
ಕನ್ಯಾಡಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಈಡಿಗ ಮತ್ತು ಬಿಲ್ಲವ ಸೇರಿ ಹಿಂದುಳಿದ ವರ್ಗದ ಸಮಾಜದ ಪ್ರಬಲ ಸ್ವಾಮೀಜಿಯಾಗಿದ್ದು, ಲಕ್ಷಾಂತರ ಜನರು ಅವರನ್ನು ಅನುಸರಿಸುತ್ತಾರೆ. ಕರಾವಳಿ ಮತ್ತು ಮಲೆನಾಡಿನ 20ಕ್ಕೂ ಹೆಚ್ಚು ಸಮುದಾಯಗಳು ಕನ್ಯಾಡಿ ಶ್ರೀಗಳನ್ನು ತಮ್ಮ ಸ್ವಾಮೀಜಿಯೆಂದು ನಂಬುತ್ತಾರೆ. ಹಿಂದುಳಿದ ವರ್ಗದ ಸ್ವಾಮೀಜಿಗಳು ಚುನಾವಣೆ ಕಣಕ್ಕಿಳಿದರೆ, ರಾಜಕೀಯ ಪಕ್ಷಗಳಿಗೆ ದೊಡ್ಡ ಪೆಟ್ಟು ಬೀಳಲಿದೆ.
Politicians are running kingly life using peoples tax money, 50 saints to content in coming elections slams Kanyadi shree.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm