ಬ್ರೇಕಿಂಗ್ ನ್ಯೂಸ್
06-04-22 07:27 pm HK Desk news ದೇಶ - ವಿದೇಶ
ನವದೆಹಲಿ, ಎ.6: ಕರ್ನಾಟಕದ ಮಂಡ್ಯದಲ್ಲಿ ಹಿಜಾಬ್ ವಿಚಾರದ ಪ್ರತಿಭಟನೆಯ ಸಂದರ್ಭದಲ್ಲಿ ಮುಸ್ಕಾನ್ ಎಂಬ ವಿದ್ಯಾರ್ಥಿನಿ ಆಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದ ಘಟನೆ ಬಗ್ಗೆ ಜಗತ್ತಿನ ಅತಿದೊಡ್ಡ ಉಗ್ರ ಸಂಘಟನೆ ಅಲ್ ಖೈದಾ ಮುಖ್ಯಸ್ಥ ಪ್ರಶಂಸೆ ವ್ಯಕ್ತಪಡಿಸಿ ವಿಡಿಯೋ ಬಿಡುಗಡೆ ಮಾಡಿದ್ದಾನೆ.
2011ರಲ್ಲಿ ಒಸಾಮಾ ಬಿನ್ ಲಾಡೆನ್ ಹತ್ಯೆ ಬಳಿಕ ಅಲ್ ಖೈದಾ ಮುಖ್ಯಸ್ಥನಾಗಿದ್ದ ಅಯಮಾನ್ ಅಲ್ ಜವಾಹಿರಿ 2020ರಲ್ಲಿ ಹತ್ಯೆಯಾಗಿದ್ದಾನೆ ಎಂದು ವದಂತಿ ಹಬ್ಬಿತ್ತು. ಇದೀಗ ಅಲ್ ಖೈದಾ ಸಂಘಟನೆಯ ಅಸ್ ಸಹಾಬ್ ಎನ್ನುವ ಅಧಿಕೃತ ಮೀಡಿಯಾ ವಿಂಗ್ ವೆಬ್ ಸೈಟ್ ನಲ್ಲಿ ಆತನ ಹೇಳಿಕೆಯ ವಿಡಿಯೋ ಪ್ರಕಟವಾಗಿದ್ದು, ಇದನ್ನು ಅಮೆರಿಕದ ಸೈಟ್ ಗುಪ್ತಚರ ಸಂಸ್ಥೆಯವರು ದೃಢಪಡಿಸಿದ್ದಾರೆ. ಅಲ್ ಜವಾಹಿರಿ ಜಗತ್ತಿನ ಮೋಸ್ಟ್ ವಾಂಟೆಡ್ ಉಗ್ರನಲ್ಲಿ ಒಬ್ಬನಾಗಿದ್ದು ನಿಗೂಢ ಜಾಗದಲ್ಲಿದ್ದುಕೊಂಡು ವಿಡಿಯೋ ಬಿಡುಗಡೆ ಮಾಡಿದ್ದಾನೆ. ಸತ್ತಿದ್ದಾನೆಂದು ಹೇಳಲಾಗಿದ್ದ ವ್ಯಕ್ತಿ ತಾನು ಬದುಕಿದ್ದೇನೆ ಎನ್ನುವುದನ್ನೂ ಈ ಮೂಲಕ ಆತ ತೋರಿಸಿದ್ದಾನೆ.
ಮಂಡ್ಯ ಜಿಲ್ಲೆಯ ವಿದ್ಯಾರ್ಥಿನಿ ಮುಸ್ಕಾನ್ ಖಾನ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ, ಅಲ್ ಜವಾಹಿರಿ 9 ನಿಮಿಷಗಳ ವಿಡಿಯೋ ಬಿಡುಗಡೆ ಮಾಡಿದ್ದಾನೆ. ಅದರಲ್ಲಿ ಹಿಂದು ಹುಡುಗರ ಮಧ್ಯೆ ಅಲ್ಲಾಹು ಅಕ್ಬರ್ ಕೂಗಿದ್ದನ್ನು ದಿಟ್ಟ ಮಹಿಳೆ ಎಂದು ಕೊಂಡಾಡಿದ್ದಾನೆ. ಅಲ್ಲದೆ, ಮುಸ್ಕಾನ್ ದಿಟ್ಟತನದ ಬಗ್ಗೆ ಕವನ ರೂಪದಲ್ಲಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು ಪೂರ್ತಿಯಾಗಿ ಅರಬ್ ಭಾಷೆಯಲ್ಲಿದ್ದು ಪ್ರಶಂಸೆಯ ಮಾತುಗಳನ್ನಾಡಿದ್ದಾನೆ.
ಫ್ರಾನ್ಸ್, ಹಾಲೆಂಡ್, ಸ್ವಿಜರ್ಲೆಂಡ್ ನಲ್ಲಿಯೂ ಹಿಜಾಬ್ ನಿಷೇಧಿಸಿದ್ದಾಗ ಜನರು ತಿರುಗಿ ಬಿದ್ದಿದ್ದರು. ಅದೇ ರೀತಿ ಭಾರತದಲ್ಲಿಯೂ ವಿರೋಧ ವ್ಯಕ್ತವಾಗಿದೆ. ಇಸ್ಲಾಮಿನ ವಿರೋಧಿಗಳೆಲ್ಲರೂ ಒಂದೇ. ಇಸ್ಲಾಮಿಕ್ ಷರಿಯಾ ಮತ್ತು ಹಿಜಾಬ್ ಬಗ್ಗೆ ವಿರೋಧ ಮಾಡುವವರು ಎಲ್ಲರೂ ಒಂದೇ. ಇದು ಇಸ್ಲಾಮ್ ವಿರುದ್ಧದ ಯುದ್ಧ. ನಾವು ಚೀನಾದಿಂದ ಸೋಮಾಲಿಯದ ವರೆಗೂ ಒಂದಾಗಿ ಇದರ ವಿರುದ್ಧ ಹೋರಾಡಬೇಕು. ಅಲ್ಲಾ ಒಬ್ಬನೇ. ಅದನ್ನು ಸಾಬೀತುಪಡಿಸಲು ನಾವೆಲ್ಲ ಒಂದಾಗಬೇಕು ಎಂದು ಹೇಳಿದ್ದಾನೆ.
ಭಾರತದಲ್ಲಿ ಬೆಂಬಲ ಗಳಿಸುವ ಷಡ್ಯಂತ್ರ
ಹಿಜಾಬ್ ವಿಚಾರದಲ್ಲಿ ಭಾರತದ ಜನರ ಬೆಂಬಲ ಪಡೆಯುವುದಕ್ಕಾಗಿ ಅಲ್ ಖೈದಾ ಈ ರೀತಿಯ ಹೇಳಿಕೆ ಬಿಡುಗಡೆ ಮಾಡಿದೆ. ಇದರ ಹಿಂದೆ ಭಾರೀ ಷಡ್ಯಂತ್ರ ಅಡಗಿದೆ ಎಂದು ಗುಪ್ತಚರ ಏಜನ್ಸಿ ಮೂಲಗಳು ಸಂಶಯ ವ್ಯಕ್ತಪಡಿಸಿವೆ. ಈ ಹಿಂದೆ ಅಲ್ ಖೈದಾ ಟಾರ್ಗೆಟ್ ಕೇವಲ ಕಾಶ್ಮೀರ ಆಗಿತ್ತು. ಇದೀಗ ಭಾರತದ ಬೆಳವಣಿಗೆಯ ಬಗ್ಗೆ ನಿರ್ದಿಷ್ಟ ವಿಚಾರ ಮುಂದಿಟ್ಟು ಪ್ರತಿಕ್ರಿಯೆ ನೀಡಿದ್ದು ನಿರ್ದಿಷ್ಟ ವರ್ಗದ ಜನರ ಬೆಂಬಲ ಗಳಿಸುವುದಕ್ಕಾಗಿ ಈ ಹೇಳಿಕೆ ಬಿಡುಗಡೆ ಮಾಡಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಅಂತಾರಾಷ್ಟ್ರೀಯ ಷಡ್ಯಂತ್ರ ಸಾಬೀತು
ಇದೇ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿರುವ ಕರ್ನಾಟಕದ ಗೃಹ ಸಚಿವ ಆರಗ ಜ್ಞಾನೇಂದ್ರ, ನಾವು ಮೊದಲಿನಿಂದಲೂ ಹೇಳುತ್ತಿದ್ದೆವು. ಹಿಜಾಬ್ ವಿವಾದದ ಹಿಂದೆ ಕಾಣದ ಕೈಗಳಿವೆ, ಅಂತಾರಾಷ್ಟ್ರೀಯ ಷಡ್ಯಂತ್ರ ಇದೆಯೆಂದು. ಈಗ ಅಲ್ ಖೈದಾ ಸಂಘಟನೆಯವರು ಹೇಳಿಕೆ ಬಿಡುಗಡೆ ಮಾಡಿ ಅಂತಾರಾಷ್ಟ್ರೀಯ ಷಡ್ಯಂತ್ರವನ್ನು ಸಾಬೀತುಪಡಿಸಿದ್ದಾರೆ ಎಂದು ಹೇಳಿದ್ದಾರೆ.
As-Sahab is the official media wing of Al-Qaeda. Zawahiri’s video was verified by SITE Intelligence, an American non-governmental organization that tracks online activity of white supremacist and jihadist organizations.In the video titled ‘the Noble Woman of India’, al-Zawahiri chimed into the hijab row which originated in Karnataka and praised Bibi Muskan Zainab Khan, a college student from Udupi who took a prominent part in pro-hijab protests and became known for shouting ‘Allahu Akbar’ slogans to counter a group of boys who were chanting ‘Jai Shree Ram’.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm