ಬ್ರೇಕಿಂಗ್ ನ್ಯೂಸ್
04-04-22 01:00 pm HK Desk news ದೇಶ - ವಿದೇಶ
ನವದೆಹಲಿ, ಎ.4 : ಒಂದು ವೇಳೆ ಭಾರತದಲ್ಲಿ ಮುಸ್ಲಿಂ ಧರ್ಮದವರು ಪ್ರಧಾನಿಯಾದರೆ 50 ಶೇಕಡಾ ಹಿಂದೂಗಳು ಮತಾಂತರಗೊಳ್ಳುತ್ತಾರೆ, 40 ಪ್ರತಿಶತದಷ್ಟು ಮಂದಿ ಹತ್ಯೆಯಾಗುತ್ತಾರೆ ಮತ್ತು 10 ಪ್ರತಿಶತ ಜನರು ದೇಶ ಬಿಟ್ಟು ಹೋಗುತ್ತಾರೆ ಎಂದು ಹಿಂದು ಧಾರ್ಮಿಕ ಮುಖಂಡ ಯತಿ ನರಸಿಂಗಾನಂದ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಭಾನುವಾರ ದೆಹಲಿಯಲ್ಲಿ ನಡೆದ ಹಿಂದೂ ಮಹಾಪಂಚಾಯತ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಯತಿ ನರಸಿಂಗಾನಂದ್, 2029 ಅಥವಾ 2034ರಲ್ಲಿ ಅಥವಾ 2039ರ ಚುನಾವಣೆಯಲ್ಲಿ ದೇಶದಲ್ಲಿ ಮುಸ್ಲಿಂ ಪ್ರಧಾನಿಯಾಗಲಿದ್ದಾರೆ. ಒಮ್ಮೆ ಮುಸಲ್ಮಾನನೊಬ್ಬ ಪ್ರಧಾನಿಯಾದರೆ ದೇಶದಲ್ಲಿ ಶೇಕಡಾ 50 ರಷ್ಟು ಹಿಂದೂಗಳು ಮತಾಂತರಗೊಳ್ಳಬೇಕಾಗುತ್ತದೆ. ಶೇಕಡಾ 40 ರಷ್ಟು ಜನರು ಕೊಲ್ಲಲ್ಪಡುತ್ತಾರೆ ಮತ್ತು ಉಳಿದ ಶೇಕಡಾ 10 ರಷ್ಟು ಜನರು ಮುಂದಿನ 20 ವರ್ಷಗಳಲ್ಲಿ ನಿರಾಶ್ರಿತರ ಶಿಬಿರಗಳಲ್ಲಿ ಅಥವಾ ಇತರ ದೇಶಗಳಿಗೆ ತೆರಳಿ ನೆಲೆಸಬೇಕಾಗುತ್ತದೆ. ಇದು ಮುಂದಿನ ಹಿಂದೂಗಳ ಭವಿಷ್ಯ. ನೀವು ಇದನ್ನು ತಪ್ಪಿಸಲು ಬಯಸಿದರೆ, ಮನುಷ್ಯನಾಗಿ ಮತ್ತು ಶಸ್ತ್ರಾಸ್ತ್ರಗಳನ್ನು ಕೈಗೆ ತೆಗೆದುಕೊಳ್ಳಿ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.
ಯತಿಯ ವಿವಾದಾತ್ಮಕ ಭಾಷಣದ ಬಗ್ಗೆ, ಸೆಕ್ಷನ್ 153 ಎ ಅಡಿಯಲ್ಲಿ ಧರ್ಮಗಳ ನಡುವೆ ದ್ವೇಷ ಬಿತ್ತುವ ವಿಚಾರದಲ್ಲಿ ಎಫ್ಐಆರ್ ದಾಖಲಾಗಿದೆ. ಮತ್ತು ಭಾರತೀಯ ದಂಡ ಸಂಹಿತೆಯ 188 ಅನ್ನು ದೆಹಲಿ ಪೊಲೀಸರು ದಾಖಲಿಸಿದ್ದಾರೆ.
ಈ ಹಿಂದೆ, 2021 ರ ಡಿಸೆಂಬರ್ನಲ್ಲಿ ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್ ನಲ್ಲಿ ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ್ದಕ್ಕಾಗಿ ಯತಿ ನರಸಿಂಹಾನಂದ ಅವರನ್ನು ಬಂಧಿಸಲಾಗಿತ್ತು. ಭಾನುವಾರ ನಡೆದ ಹಿಂದು ಮಹಾಪಂಚಾಯತ್ ಕಾರ್ಯಕ್ರಮ ಸಂಬಂಧಿಸಿ ಪೊಲೀಸರು ಮೂರು ಎಫ್ಐಆರ್ ಗಳನ್ನು ದಾಖಲಿಸಿದ್ದಾರೆ. ಒಂದು ಎಫ್ಐಆರ್ ದ್ವೇಷ ಭಾಷಣದ ಆರೋಪಕ್ಕೆ ಸಂಬಂಧಿಸಿದ್ದು ಮತ್ತು ಇನ್ನೆರಡು ಪತ್ರಕರ್ತರು ನೀಡಿದ ದೂರುಗಳ ಮೇಲೆ ದಾಖಲಾಗಿವೆ. ಕಾರ್ಯಕ್ರಮದಲ್ಲಿ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಪತ್ರಕರ್ತರು ಹೇಳಿದ್ದಾರೆ.
Yati Narsinghanand was booked along with other speakers on Sunday for alleged hate speeches made at a “Hindu Mahapanchayat” that “50 per cent of Hindus will convert” in 20 years if a Muslim becomes the prime minister of the country.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am