ಬ್ರೇಕಿಂಗ್ ನ್ಯೂಸ್
29-03-22 12:36 pm HK Desk news ದೇಶ - ವಿದೇಶ
ನವದೆಹಲಿ, ಮಾ.29: ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್, ಬಿಜೆಪಿಯ ಹಿಂದುತ್ವದ ರಾಜಕಾರಣವನ್ನು ಟೀಕಿಸಿದ್ದಾರೆ. ನಾನು ರಾಮಾಯಣ, ಗೀತೆಯಲ್ಲಿ ಹೇಳಿರುವ ಹಿಂದುತ್ವವನ್ನು ನಂಬುತ್ತೇನೆ. ರಾಮಾಯಣ ಮತ್ತು ಗೀತೆಯಲ್ಲಿ ಏನು ಹೇಳಲಾಗಿದೆಯೋ ಅದು ಹಿಂದುತ್ವ. ರಾಮಾಯಣದಲ್ಲಿ ಶ್ರೀರಾಮ ಏನು ಹೇಳಿದ್ದಾನೋ ಅದು ಹಿಂದುತ್ವ. ಅದನ್ನು ಮಾತ್ರ ನಾನು ನಂಬುತ್ತೇನೆ ಎಂದು ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ಶ್ರೀರಾಮಚಂದ್ರ ಯಾವತ್ತೂ ನಮ್ಮ ನಡುವೆ ದ್ವೇಷ ಹರಡುವುದನ್ನು ಹೇಳಿಲ್ಲ. ಆದರೆ ಬಿಜೆಪಿಯವರು ದಲಿತರನ್ನು ತುಳಿಯುವ, ನಮ್ಮ ನಡುವಿದ್ದವರನ್ನೇ ಹಳಿಯುವ ಕೆಲಸ ಮಾಡುತ್ತಿದ್ದಾರೆ. ಇದು ಹಿಂದುತ್ವವೇ ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಹಿಂದುತ್ವರ ರಾಜಕಾರಣ ಮುಂದಿಟ್ಟು ಗೆದ್ದಿದ್ದಾರಲ್ಲಾ ಎಂಬ ಪ್ರಶ್ನೆಗೆ, ಅಲ್ಲಿ ಪ್ರತಿಸ್ಪರ್ಧಿಗಳೇ ಇರಲಿಲ್ಲ. ಹಾಗಾಗಿ ಗೆದ್ದಿದ್ದಾರೆ ಎಂದು ಹೇಳಿದ್ದಾರೆ.
ಪಂಜಾಬ್ ನಲ್ಲಿ ಐತಿಹಾಸಿಕ ಜಯ ಗಳಿಸಿದ ಬಳಿಕ ಕೇಜ್ರಿವಾಲರ ಪಕ್ಷ ಗುಜರಾತ್ ನತ್ತ ಕಣ್ಣು ನೆಟ್ಟಿದೆ. ಮುಂದಿನ ವರ್ಷ ಗುಜರಾತ್ ನಲ್ಲಿ ಚುನಾವಣೆ ನಡೆಯಲಿದ್ದು, ಆಪ್ ಸ್ಪರ್ಧಿಸಲು ತಯಾರಿ ನಡೆಸಿದೆ. ಗುಜರಾತಿನಲ್ಲಿ ನೀವು ನರೇಂದ್ರ ಮೋದಿಯನ್ನು ಎದುರಿಸಲು ಸಿದ್ಧತೆ ನಡೆಸುತ್ತಿದ್ದೀರಾ ಎಂಬ ಪ್ರಶ್ನೆಗೆ, ನರೇಂದ್ರ ಮೋದಿಯನ್ನು ನಾನು ಟಾರ್ಗೆಟ್ ಮಾಡೋದು ಹೇಗೆ. ಅವರು ನಮ್ಮ ಪ್ರಧಾನಿ. ಇಡೀ ದೇಶದ ಪ್ರಧಾನಿ ಎಂದು ಹೇಳಿದ್ದಾರೆ.
ಬಿಜೆಪಿ ನಾಯಕರು ಕಾಶ್ಮೀರ್ ಫೈಲ್ಸ್ ಸಿನಿಮಾ ಹೆಸರಲ್ಲಿ ರಾಜಕಾರಣ ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆಗೆ, ಬಿಜೆಪಿ ಸ್ಥಿತಿ ನೋಡಿ ನನಗೆ ನಗು ಬರುತ್ತಿದೆ. ಕಾಶ್ಮೀರಿ ಪಂಡಿತರಿಗೆ ಪುನರ್ವಸತಿ ಕಲ್ಪಿಸುವ ಬದಲು ಅವರು ಗಿಮಿಕ್ ಮಾಡುತ್ತಿದ್ದಾರೆ. ಪಂಡಿತರನ್ನು ಅಣಕಿಸುತ್ತಿದ್ದಾರೆ. ಬಿಜೆಪಿ ಮತ್ತು ಅದರ ಕಾರ್ಯಕರ್ತರು ಕಾಶ್ಮೀರ್ ಫೈಲ್ಸ್ ಸಿನಿಮಾದ ಪೋಸ್ಟರ್ ಅಂಟಿಸುತ್ತಿದ್ದಾರೆ. ಇದು ಯಾವ ರೀತಿಯ ಹೊಸ ರಾಜಕಾರಣವನ್ನು ತೋರಿಸುತ್ತಿದ್ದಾರೆ ಎಂದು ಕೇಜ್ರಿವಾಲ್ ಪ್ರಶ್ನೆ ಮಾಡಿದ್ದಾರೆ.
32 ವರ್ಷದಲ್ಲಿ ಪುನರ್ವಸತಿ ಮಾಡಕ್ಕಾಗಿಲ್ಲ
ಬಿಜೆಪಿಯ ಕೇಂದ್ರ ನಾಯಕರು ಸಿನಿಮಾ ನಿರ್ಮಾಣ ಮಾಡಿದ್ದಾರೆಯೇ.. ಅವರು ಸಿನಿಮಾ ತಯಾರಿ ಕಾರ್ಯ ಮಾಡಿಲ್ಲ ಎಂದಾದರೆ ಇವರು ಯಾಕೆ ಪೋಸ್ಟರ್ ಹಂಚಬೇಕು. ಪ್ರಮೋಟ್ ಮಾಡಬೇಕು. ನಾನು ಕೂಡ ಸಿನಿಮಾವನ್ನು ಮೆಚ್ಚಿದ್ದೇನೆ. ಅದನ್ನು ಟ್ಟೀಟ್ ಮಾಡಿ ತಿಳಿಸಿದ್ದೇನೆ. ಆದರೆ ಬಿಜೆಪಿ ನಾಯಕರಿಂದ ತೊಡಗಿ ಕಾರ್ಯಕರ್ತರೆಲ್ಲ ಸಿನಿಮಾವನ್ನು ಪ್ರಚಾರ ಮಾಡುತ್ತಿದ್ದಾರೆ. ಕಾಶ್ಮೀರಿ ಪಂಡಿತರಿಗಾದ ಸ್ಥಿತಿಯ ಬಗ್ಗೆ ನೋವಿದೆ. 32 ವರ್ಷ ಕಳೆದರೂ ಏನೂ ಮಾಡೋಕೆ ಆಗಿಲ್ಲ ಅನ್ನುವುದರ ಬಗ್ಗೆ ನೋವು ಇದೆ. ನಾನು ಏನು ಮಾಡೋದಿದ್ದರೂ ದೆಹಲಿ ಒಳಗೆ ಮಾತ್ರ ಮಾಡಬಹುದು. ಕೇಂದ್ರದಲ್ಲಿ ಅಧಿಕಾರದಲ್ಲಿ ಇರುತ್ತಿದ್ದರೆ ಸಿನಿಮಾ ಮಾಡುತ್ತಿರಲಿಲ್ಲ. ಬದಲಿಗೆ, ಕಾಶ್ಮೀರಿ ಪಂಡಿತರ ಕೈ ಹಿಡಿದು ಅವರಿಗೆ ಪುನರ್ವಸತಿ ಮಾಡುತ್ತಿದ್ದೆ ಎಂದು ಮಾರ್ಮಿಕ ಉತ್ತರ ನೀಡಿದ್ದಾರೆ.
CM Arvind Kejriwal said, “I believe in Hindutva that’s in Ramayan, Gita. Whatever is mentioned in Ramayan and Gita is Hindutva. Whatever Lord Ram said in Ramayan is Hindutva.”“Lord Ram never taught us enmity amongst ourselves. But these people are getting Dalits lynched,” CM Kejriwal added.
17-01-26 05:53 pm
HK News Desk
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
ಕೆಲಸದ ಒತ್ತಡ ; ಮಕ್ಕಳಿಗೆ ಪಾಠ ಮಾಡಿ ಶಾಲಾ ಕೊಠಡಿಯಲ್...
15-01-26 05:56 pm
17-01-26 03:08 pm
HK News Desk
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ...
16-01-26 06:33 pm
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
17-01-26 05:12 pm
Mangalore Correspondent
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm