ಬ್ರೇಕಿಂಗ್ ನ್ಯೂಸ್
26-03-22 09:19 pm HK Desk news ದೇಶ - ವಿದೇಶ
ಚಂಡೀಗಢ, ಮಾ.26: ಇತ್ತೀಚೆಗೆ ಪಂಜಾಬ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಭಗವಂತ್ ಮಾನ್ ಮತ್ತೊಂದು ಕ್ರಾಂತಿಕಾರಕ ನಡೆ ಮುಂದಿಟ್ಟಿದ್ದು ಜನರ ಗಮನ ಸೆಳೆಯುವ ಕಾರ್ಯ ಮಾಡಿದ್ದಾರೆ.
ಪಂಜಾಬ್ ನಲ್ಲಿ ಇನ್ಮುಂದೆ ಮಾಜಿ ಶಾಸಕರು ಒಂದು ಅವಧಿಗೆ ಮಾತ್ರ ಪಿಂಚಣಿ ಪಡೆಯಲಿದ್ದಾರೆ ಎಂದು ಭಗವಂತ್ ಮಾನ್ ಕೂ ಅಂತರ್ಜಾಲ ತಾಣದಲ್ಲಿ ಟ್ವೀಟ್ ಮಾಡಿದ್ದಾರೆ. ಮಾಜಿ ಶಾಸಕರಾದವರು ಒಂದು ಅವಧಿಗೆ ಮಾತ್ರ ಪಿಂಚಣಿ ಪಡೆಯಬೇಕು ಅನ್ನುವುದು ನಮ್ಮ ಸರಕಾರದ ನಿರ್ಧಾರ. ಕೆಲವು ಶಾಸಕರು ಮೂರು ಬಾರಿ, ಐದು ಬಾರಿ, ಹತ್ತು ಸಲ ಗೆದ್ದವರೂ ಇದ್ದಾರೆ. ಅವರೆಲ್ಲ ಪ್ರತಿ ಅವಧಿಯ ಲೆಕ್ಕದಲ್ಲಿ ಪ್ರತ್ಯೇಕ ಪಿಂಚಣಿ ಪಡೆಯುತ್ತಿದ್ದಾರೆ. ಟಿಕೆಟ್ ಸಿಗದೆ ಸೋತು, ಮನೆಯಲ್ಲಿ ಕುಳಿತವರೂ ಹೀಗೆ ಲಕ್ಷಾಂತರ ರೂ. ಪಿಂಚಣಿ ಪಡೆಯುತ್ತಿರುವವರಲ್ಲಿ ಇದ್ದಾರೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ದೊಡ್ಡ ಹೊರೆಯಾಗುತ್ತಿದೆ ಎಂದು ಭಗವಂತ್ ಮಾನ್ ಹೇಳಿದ್ದಾರೆ.
ಇನ್ಮುಂದೆ ಒಬ್ಬರು ಎಷ್ಟು ಬಾರಿ ಶಾಸಕರಾದರೂ ಒಂದು ಅವಧಿಗೆ ಮಾತ್ರ ಪಿಂಚಣಿ ಪಡೆಯಲಿದ್ದಾರೆ. ಹೆಚ್ಚೆಂದರೆ ಪ್ರತಿ ತಿಂಗಳಿಗೆ 75 ಸಾವಿರ ರೂ. ಪಿಂಚಣಿ ಪಡೆಯಲಿದ್ದಾರೆ. ಹಳೆಯ ಪದ್ಧತಿಯನ್ನು ರದ್ದುಪಡಿಸಲಿದ್ದು ಇದರಿಂದ ಪಂಜಾಬ್ ಸರಕಾರಕ್ಕೆ ರೂ. 80 ಕೋಟಿ ಉಳಿತಾಯ ಆಗಲಿದೆ ಎನ್ನಲಾಗುತ್ತಿದೆ. ಚುನಾವಣೆಯಲ್ಲಿ ಸೋತರೂ ಎರಡು - ಮೂರು ಬಾರಿ ಶಾಸಕರಾದ ನೆಲೆಯಲ್ಲಿ ಲಕ್ಷಾಂತರ ರೂ. ಪಿಂಚಣಿ ಪಡೆಯುವ ಮಂದಿ ಇದ್ದಾರೆ. ಒಂದು ಅವಧಿಗೆ 75 ಸಾವಿರ ಅಲ್ಲದೆ, ಪ್ರತೀ ಅವಧಿಗೆ 66 ಶೇ. ಹೆಚ್ಚುವರಿ ಸೇರಿಸಿ ಕೊಡಲಾಗುತ್ತದೆ. ಇದರ ಪ್ರಕಾರ ಮೂರ್ನಾಲ್ಕು ಲಕ್ಷ ರೂ. ತಿಂಗಳಿಗೆ ಪಿಂಚಣಿ ಪಡೆಯುವ ಪದ್ಧತಿ ಜಾರಿಯಲ್ಲಿದ್ದು ಅದನ್ನು ರದ್ದುಪಡಿಸಲು ಮಾನ್ ಮುಂದಾಗಿದ್ದಾರೆ.
ಇದೇ ಪದ್ಧತಿ ದೇಶದ ಬಹುತೇಕ ರಾಜ್ಯಗಳಲ್ಲಿ ಜಾರಿಯಲ್ಲಿದ್ದು, ಈ ಪದ್ಧತಿಯನ್ನು ಹರಿಯಾಣ ಸರಕಾರ ಕಳೆದ ವರ್ಷ ತೆಗೆದುಹಾಕಿತ್ತು. ಅಲ್ಲಿನ ಕೆಲವು ಶಾಸಕರು ಸ್ವಯಂಪ್ರೇರಣೆಯಿಂದ ಪಿಂಚಣಿ ಬೇಡ ಎಂದಿದ್ದರು. ಪಂಜಾಬಲ್ಲಿ ಆಮ್ ಆದ್ಮಿ ಪಕ್ಷದ ಭಗವಂತ್ ಮಾನ್ ನಿರ್ಧಾರಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ದು, ಶಿರೋಮಣಿ ಅಕಾಲಿದಳ ಸ್ವಾಗತಿಸಿದೆ. ಭಗವಂತ್ ಮಾನ್ ಸರಕಾರ ಇತ್ತೀಚೆಗೆ ಭಗತ್ ಸಿಂಗ್ ಬಲಿದಾನ ದಿನದಂದು ಸರಕಾರಿ ರಜೆ ಘೋಷಣೆ ಮಾಡಿದ್ದಲ್ಲದೆ, ಭ್ರಷ್ಟಾಚಾರ ತಡೆಗೆ ಸಹಾಯವಾಣಿ ಆರಂಭಿಸಿದ್ದರು. ಆಮೂಲಕ ಭ್ರಷ್ಟಾಚಾರ ತಡೆಗೆ ಆಪ್ ಸರಕಾರ ಮೊದಲ ಹೆಜ್ಜೆ ಇಟ್ಟಿತ್ತು.
Punjab chief minister Bhagwant Mann has announced that former MLAs in the state would now get a pension for one term only and that family allowances of MLAs would also be reduced so that the money saved can be spent on the welfare of the people.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am