ಬ್ರೇಕಿಂಗ್ ನ್ಯೂಸ್
21-03-22 10:22 am HK Desk news ದೇಶ - ವಿದೇಶ
ನವದೆಹಲಿ, ಮಾ.20 : ಒಂದು ಕಾಲದಲ್ಲಿ ಫುಟ್ಬಾಲ್ ಆಡುತ್ತಾ, ಅದೇ ಅರ್ಹತೆ ಇಟ್ಟುಕೊಂಡು ಬಿಎಸ್ಎಫ್ ಯೋಧನಾಗಿ ಗಡಿಯಲ್ಲಿ ಬಂದೂಕು ಹಿಡಿದು ನಿಂತಿದ್ದ, ಆನಂತರ ಪತ್ರಕರ್ತನಾಗಿ ಮಿಂಚು ಹರಿಸಿದ್ದ ನಂಗ್ತೊಂಬಾಮ್ ಬೀರೇನ್ ಸಿಂಗ್ ಮಣಿಪುರದಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ನೇಮಕ ಆಗಿದ್ದಾರೆ.
ಕೇಂದ್ರೀಯ ವೀಕ್ಷಕರಾಗಿ ಸಚಿವರಾದ ನಿರ್ಮಲಾ ಸೀತಾರಾಮನ್ ಮತ್ತು ಕಿರಣ್ ರಿಜಿಜು ಮಣಿಪುರಕ್ಕೆ ತೆರಳಿ, ಅಲ್ಲಿನ ಶಾಸಕರ ಜೊತೆ ಮಾತುಕತೆ ನಡೆಸಿದ ಬಳಿಕ ಬೀರೇನ್ ಸಿಂಗ್ ಅವರನ್ನೇ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಘೋಷಣೆ ಮಾಡಿದ್ದಾರೆ. ಭಾನುವಾರ ನಡೆದ ಶಾಸಕಾಂಗ ಸಭೆಯಲ್ಲಿ ಪಾಲ್ಗೊಂಡ ಬಳಿಕ ಈ ವಿಚಾರವನ್ನು ಸಚಿವೆ ನಿರ್ಮಲಾ ಸೀತಾರಾಮನ್ ಇಂಫಾಲ್ ನಲ್ಲಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ತನ್ನನ್ನು ಸಿಎಂ ಪದವಿಗೆ ಆಯ್ಕೆ ಮಾಡಿದ್ದಕ್ಕಾಗಿ ಬೀರೇನ್ ಸಿಂಗ್, ಪ್ರಧಾನಿ ಮೋದಿ, ಅಮಿತ್ ಷಾ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಅವರಿಗೆ ಅಭಿನಂದನೆ ತಿಳಿಸಿದ್ದಾರೆ. ಮತ್ತೊಬ್ಬ ಹಿರಿಯ ನಾಯಕ ಬಿಸ್ವಜಿತ್ ಸಿಂಗ್ ಮುಖ್ಯಮಂತ್ರಿ ಪದವಿಯ ಆಕಾಂಕ್ಷಿಯಾಗಿದ್ದರಿಂದ ಸಿಎಂ ಯಾರು ಅನ್ನುವುದರ ಬಗ್ಗೆ ಸಣ್ಣ ಮಟ್ಟಿನ ಕುತೂಹಲ ಇತ್ತು.
ಮಣಿಪುರ್ ಯೂನಿವರ್ಸಿಟಿಯಲ್ಲಿ ಬಿಎ ಪದವಿ ಪಡೆದು ಫುಟ್ಬಾಲ್ ಆಟಗಾರನಾಗಿ ವೃತ್ತಿ ಜೀವನ ಆರಂಭಿಸಿದ್ದ ಬೀರೇನ್ ಸಿಂಗ್, ಅದೇ ಅರ್ಹತೆಯಲ್ಲಿ ಬಿಎಸ್ಎಫ್ ಯೋಧನಾಗಿ ದೇಶ ಸೇವೆಗೆ ಸೇರಿದ್ದರು. ಮಣಿಪುರದ ಗಡಿಯಲ್ಲಿ ಬಿಎಸ್ಎಫ್ ಸೇವೆಯಲ್ಲಿದ್ದಾಗಲೇ ಅದೇ ತಂಡವನ್ನು ಪ್ರತಿನಿಧಿಸಿ ಫುಟ್ಬಾಲ್ ಆಡುತ್ತಿದ್ದರು. ಡ್ಯೂರಾಂಡ್ ಕಪ್ ಟೂರ್ನಮೆಂಟಿನಲ್ಲಿ ಹಲವಾರು ಬಾರಿ ಆಡಿ ತಂಡಕ್ಕೆ ಕಪ್ ಗಿಟ್ಟಿಸಿಕೊಟ್ಟಿದ್ದರು. 1992ರಲ್ಲಿ ಬಿಎಸ್ಎಫ್ ಸೇವೆಯಿಂದ ನಿವೃತ್ತಿ ಪಡೆದು ಪತ್ರಕರ್ತನಾಗಿ ಕೆಲಸ ಆರಂಭಿಸಿದ್ದ ಬೀರೇನ್ ಸಿಂಗ್, ನಹರೋಲ್ಗಿ ಥೌಡಾಂಗ್ ಎಂಬ ದಿನ ಪತ್ರಿಕೆಯಲ್ಲಿ ಸಂಪಾದಕನಾಗಿ 2001ರ ವರೆಗೆ ಕೆಲಸ ಮಾಡಿದ್ದರು. 2002ರಲ್ಲಿ ಮಣಿಪುರದ ಪ್ರಾದೇಶಿಕ ಪಕ್ಷ ಡೆಮಾಕ್ರಟಿಕ್ ರೆವಲ್ಯುಶನರಿ ಪೀಪಲ್ಸ್ ಪಾರ್ಟಿ ಮೂಲಕ ರಾಜಕೀಯ ಜೀವನ ಆರಂಭಿಸಿದ್ದರು.
2003ರಲ್ಲಿ ಮೊದಲ ಬಾರಿಗೆ ಶಾಸಕರಾಗಿದ್ದಲ್ಲದೆ, ಸಚಿವರೂ ಆಗಿದ್ದರು. ವಿಜಿಲೆನ್ಸ್ ವಿಭಾಗದ ಜೊತೆಗೆ ಅರಣ್ಯ ಮತ್ತು ಪರಿಸರ ಖಾತೆಯ ಹೆಚ್ಚುವರಿ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರು. 2007ರಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿ ಅದೇ ಕ್ಷೇತ್ರದಿಂದ ಮತ್ತೆ ಆಯ್ಕೆಯಾಗಿದ್ದಲ್ಲದೆ, ನಂತರದ ಕಾಂಗ್ರೆಸ್ ಸರಕಾರದಲ್ಲಿ ನೀರಾವರಿ ಸಚಿವರಾಗಿ ಕೆಲಸ ಮಾಡಿದ್ದರು. 2012ರಲ್ಲಿ ಮೂರನೇ ಬಾರಿಗೆ ಶಾಸಕರಾಗಿದ್ದ ಬೀರೇನ್ ಸಿಂಗ್, 2016ರಲ್ಲಿ ಕಾಂಗ್ರೆಸಿನ ಓಕ್ರಮ್ ಇಬೋಬಿ ಸಿಂಗ್ ವಿರುದ್ಧ ಬಂಡಾಯ ಎದ್ದು ಬಿಜೆಪಿ ಸೇರಿದ್ದರು. 2017ರಲ್ಲಿ ಹೀಂಗಾಂಗ್ ಕ್ಷೇತ್ರದಿಂದ ನಾಲ್ಕನೇ ಬಾರಿಗೆ ಗೆದ್ದ ಬೀರೇನ್ ಸಿಂಗ್ ಮಣಿಪುರದಲ್ಲಿ ಮೊಟ್ಟಮೊದಲ ಬಾರಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದರು. ಮೊದಲ ಬಾರಿಗೆ ಮುಖ್ಯಮಂತ್ರಿಯೂ ಆಗಿದ್ದರು.
2022ರಲ್ಲಿ ಬೀರೇನ್ ಸಿಂಗ್ ನೇತೃತ್ವದಲ್ಲಿಯೇ ಬಿಜೆಪಿ ಚುನಾವಣೆ ಎದುರಿಸಿತ್ತು. ಚುನಾವಣೆ ಸಮಯದಲ್ಲಿ ಸೇನೆಯ ವಿಶೇಷಾಧಿಕಾರವನ್ನು ರಾಜ್ಯದಲ್ಲಿ ತೆಗೆದು ಹಾಕುವುದಾಗಿ ಭರವಸೆ ನೀಡಿದ್ದರು. ಇದರ ಪರಿಣಾಮ ಇಂಫಾಲ್ ಜಿಲ್ಲೆಯ ಪೂರ್ವ ಭಾಗದ ಹೀಂಗಾಂಗ್ ಕ್ಷೇತ್ರದಲ್ಲಿ 18 ಸಾವಿರ ಮತಗಳಿಂದ ಪ್ರತಿಸ್ಪರ್ಧಿ ಕಾಂಗ್ರೆಸಿನ ಪಿ.ಶರತ್ಚಂದ್ರ ಸಿಂಗ್ ಅವರನ್ನು ಸೋಲಿಸಿದ್ದರು. ಈ ಬಾರಿಯೂ ಬೀರೇನ್ ಸಿಂಗ್ ಅವರೇ ಮುಖ್ಯಮಂತ್ರಿಯಾಗುವುದು ಖಚಿತವಾಗಿತ್ತು. ಅದನ್ನೀಗ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ. ಹೋಳಿ ಹಬ್ಬದ ಬಳಿಕ ಬೀರೇನ್ ಸಿಂಗ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ
Once a football player, a BSF jawan deployed at Manipur borders and a journalist, Nongthombam Biren Singh was picked as the chief minister of Manipur for the second time on Sunday after Union finance minister Nirmala Sitharaman and Union law and justice minister Kiren Rijiju went to Imphal as central observers. Singh’s name was chosen after he was unanimously elected as the CM at the BJP Legislative Party meeting held at BJP headquarters in the state capital this afternoon.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am