ಬ್ರೇಕಿಂಗ್ ನ್ಯೂಸ್
14-03-22 09:23 pm HK Desk news ದೇಶ - ವಿದೇಶ
ನವದೆಹಲಿ, ಮಾ.14: ಕಾಶ್ಮೀರ ಪಂಡಿತರ ಕುಟುಂಬಗಳನ್ನು ಹೀನಾಯವಾಗಿ ಹತ್ಯೆಗೈದು ಚಿತ್ರಹಿಂಸೆ ನೀಡಿ ಪಲಾಯನಗೈಯುವಂತೆ ಮಾಡಿದ್ದ 1990ರ ಕಾಲದ ನೈಜ ಕತೆಯನ್ನು ಆಧರಿಸಿದ ಕಾಶ್ಮೀರ್ ಫೈಲ್ಸ್ ಚಿತ್ರ ದೇಶಾದ್ಯಂತ ತೀವ್ರ ಸದ್ದು ಮಾಡ್ತಿದೆ. ಹಿಂದುಗಳ ಮಾರಣಹೋಮದ ಕತೆಯನ್ನು ಹೊಂದಿರುವುದರಿಂದ ಸಹಜವಾಗಿಯೇ ಹಿಂದು ಸಂಘಟನೆಗಳ ಕಾರ್ಯಕರ್ತರ ಆಕರ್ಷಣೆಗೂ ಕಾರಣವಾಗಿದೆ. 1990ರಲ್ಲಿ ಆಗಿಹೋದ ರಕ್ತಸಿಕ್ತ ಅಧ್ಯಾಯದ ಕತೆಯನ್ನು ಜನರು ಚಿತ್ರದ ಮೂಲಕ ನೋಡಿ ಕಣ್ಣೀರು ಹರಿಸುತ್ತಿದ್ದರೆ, ಚಿತ್ರದ ಬಗ್ಗೆ ಹಿಂದು ಕಾರ್ಯಕರ್ತರು ಸ್ಟೇಟಸ್ ಮೂಲಕ ಪ್ರಚಾರ ನೀಡುತ್ತಿದ್ದಾರೆ.
ಸಾಮಾಜಿಕ ಜಾಲತಾಣದ ಎಲ್ಲಿ ನೋಡಿದರೂ, ಕಾಶ್ಮೀರ್ ಫೈಲ್ಸ್ ಚಿತ್ರದ ಪರ-ವಿರೋಧದ ಅಭಿವ್ಯಕ್ತಿಗಳೇ ಕಾಣಸಿಗುತ್ತಿವೆ. ಕಾಶ್ಮೀರಿ ಪಂಡಿತರನ್ನು ಮುಸ್ಲಿಂ ಭಯೋತ್ಪಾದಕರು ಹೀನಾಯವಾಗಿ ಕೊಂದು ಹಾಕಿದ್ದು, ಮನೆಮಂದಿಯ ಎದುರೇ ಪತ್ನಿ, ಮಕ್ಕಳ ಅತ್ಯಾಚಾರ, ಕೊಲೆಗಳನ್ನು ಕಣ್ಣಿಗೆ ಕಟ್ಟಿದ ರೀತಿ ಕೊಟ್ಟಿರುವ ಚಿತ್ರಣ ದೇಶಾದ್ಯಂತ ಹಿಂದು ಕಾರ್ಯಕರ್ತರನ್ನು ಬಡಿದೆಬ್ಬಿಸಿದೆ. ಇದೇ ವೇಳೆ, ಬಿಜೆಪಿ ಆಡಳಿತದ ರಾಜ್ಯ ಸರಕಾರಗಳು ಕಾಶ್ಮೀರ್ ಫೈಲ್ಸ್ ಚಿತ್ರದ ರಾಜ್ಯವಾರು ತೆರಿಗೆಯನ್ನು ತೆಗದು ಹಾಕಿದ್ದು ತೆರಿಗೆ ರಹಿತವಾಗಿ ಜನರಿಗೆ ತೋರಿಸುವಂತೆ ಸಲಹೆ ಮಾಡಿದೆ.
ಬರೋಬ್ಬರಿರ 30 ವರ್ಷಗಳ ಬಳಿಕ ದೆಹಲಿ, ಹರ್ಯಾಣದಲ್ಲಿ ನೆಲೆ ಕಂಡುಕೊಂಡಿದ್ದ ಕಾಶ್ಮೀರಿ ಪಂಡಿತರ ಕುಟುಂಬಗಳು ಮತ್ತೆ ಕಾಶ್ಮೀರದತ್ತ ಪಯಣ ಬೆಳೆಸಲು ಅವಕಾಶ ಸಿಕ್ಕಿರುವಾಗಲೇ ಈ ರೀತಿಯ ಚಿತ್ರ ಬಂದಿರುವುದು ವಿಶೇಷ. ಕಾಶ್ಮೀರದಲ್ಲಿ ಕಳೆದ ಎರಡು ವರ್ಷಗಳಲ್ಲಿ ಕೇಂದ್ರಾಡಳಿತ ಆಗಿ ಸೇನಾ ಕಾರ್ಯಾಚರಣೆ ಹೆಚ್ಚಿರುವುದರಿಂದ ಉಗ್ರರ ಉಪಟಳವನ್ನು ತಕ್ಕಮಟ್ಟಿಗೆ ನಿಗ್ರಹಿಸಲಾಗಿದೆ. ಇದರ ಜೊತೆಗೇ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಕಾಶ್ಮೀರದ ಮೂಲ ನಿವಾಸಿಗಳನ್ನು ಅಲ್ಲಿಯೇ ಪುನರ್ವಸತಿ ಮಾಡಿಕೊಳ್ಳಲು ಅವಕಾಶ ನೀಡಲಾಗುವುದು ಎಂದು ಹೇಳಿಕೆ ನೀಡಿದ್ದರು. ಹೀಗಾಗಿ ಅಳಿದುಳಿದ ಕಾಶ್ಮೀರಿ ಕುಟುಂಬಗಳು ತಮ್ಮ ಮೂಲವನ್ನು ಅರಸಿಕೊಂಡು ಹೊರಟಿವೆ. ಇಂಥ ಸಂದರ್ಭದಲ್ಲಿಯೇ ಕಾಶ್ಮೀರ್ ಫೈಲ್ಸ್ ಹೆಸರಲ್ಲಿ ಅಲ್ಲಿನ ಮಾರಣಹೋಮದ ಚಿತ್ರಣವನ್ನು ಕತೆಯಾಗಿಸಿ ಕಟ್ಟಿಕೊಟ್ಟು ಚಿತ್ರದ ಮೂಲಕ ಜನರಿಗೆ ನೀಡಲಾಗಿದೆ.
ಕಾಶ್ಮೀರದಲ್ಲಿದ್ದ ಪಂಡಿತರ ಕುಟುಂಬಗಳಿಗೆ ಯಾವ ರೀತಿ ಚಿತ್ರಹಿಂಸೆ ನೀಡಲಾಗಿತ್ತು, ಅವರು ಬಳಿಕ ತಮ್ಮ ಜೀವ ಉಳಿಸುವುದಕ್ಕಾಗಿ ಯಾಕಾಗಿ ಗುಳೇ ಎದ್ದು ಹೊರಟರು ಅನ್ನುವುದನ್ನೇ ಮುಖ್ಯ ಕತೆಯನ್ನಾಗಿಸಿ ತೋರಿಸಲಾಗಿದೆ. ಅಲ್ಲದೆ, ಆಗಿನ ರಾಜ್ಯ ಸರಕಾರ ಮತ್ತು ಕೇಂದ್ರದ ಆಡಳಿತಗಳು ಕಾಶ್ಮೀರಿಗಳ ನರಮೇಧಕ್ಕೆ ಯಾವ ರೀತಿ ಸಹಕಾರಿಯಾಗಿತ್ತು ಅನ್ನೋದನ್ನೂ ಪರೋಕ್ಷವಾಗಿ ತೋರಿಸಿದ್ದಾರೆ. ಹೀಗಾಗಿ ಒಂದು ಕಡೆಯಿಂದ ಎಡಪಂಥೀಯರು, ಮುಸ್ಲಿಂ ಸಂಘಟನೆಗಳಿಂದ ಆಕ್ರೋಶ ಕೇಳಿಬರುತ್ತಲೇ, ಮತ್ತೊಂದು ಕಡೆಯಿಂದ ಭಾರೀ ಜನಮೆಚ್ಚುಗೆಯೂ ಕೇಳಿಬಂದಿದೆ. ನೈಜಕತೆಯನ್ನು ಇದ್ದ ರೀತಿಯಲ್ಲೇ ತೋರಿಸಿದ ಗಂಡುಗಲಿ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮತ್ತು ಅದನ್ನು ಅಪ್ಟಟ ಚಿತ್ರವಾಗಿಸಿದ ಅನುಪಮ್ ಖೇರ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಬಿಜೆಪಿ ರಾಜ್ಯ ಸರಕಾರಗಳು ಆರು ತಿಂಗಳ ಮಟ್ಟಿಗೆ ಈ ಚಿತ್ರಕ್ಕೆ ತೆರಿಗೆ ಹಾಕಬೇಡಿ ಎಂದು ಹೇಳಿರುವುದು ಈ ಚಿತ್ರವನ್ನು ಜನರ ಮನಪಟಲಕ್ಕೆ ತಲುಪಿಸುವ ಮತ್ತು ಕೋಮು ಧ್ರುವೀಕರಣದ ತಂತ್ರಗಾರಿಕೆಯೂ ಇದರ ಹಿಂದಿರುವಂತೆ ಕಾಣುತ್ತಿದೆ.
Vivek Agnihotri’s The Kashmir Files opened to a massive opening in the box office when it released this Friday. Helmed by Anupam Kher, the film highlights the atrocities against Kashmiri Pandits in the 1990s when they were killed, persecuted and forced to leave their homes overnight.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am