ಬ್ರೇಕಿಂಗ್ ನ್ಯೂಸ್
12-03-22 07:42 pm HK Desk news ದೇಶ - ವಿದೇಶ
ನವದೆಹಲಿ, ಮಾ.12: ಐಸಿಸ್ ಉಗ್ರವಾದಿ ಸಂಘಟನೆಗೆ ಸೇರಿದ್ದ ಕೇರಳ ಮೂಲದ ಎಂಟೆಕ್ ಪದವೀಧರ ಯುವಕನೊಬ್ಬ ಅಫ್ಘಾನಿಸ್ತಾನದಲ್ಲಿ ಆತ್ಮಹತ್ಯಾ ಬಾಂಬರ್ ಆಗಿ ಸಾವಿಗೀಡಾಗಿದ್ದಾನೆ ಎಂದು ಇಸ್ಲಾಮಿಕ್ ಖೊರಸಾನ್ ಸ್ಟೇಟ್ ಪ್ರೊವಿನ್ಸ್ (ಐಕೆಎಸ್ ಪಿ) ಸಂಘಟನೆಯ ಮುಖವಾಣಿ ಹೇಳಿಕೊಂಡಿದೆ. ವಾಯ್ಸ್ ಆಫ್ ಖೊರಸಾನ್ ಎಂಬ ಆನ್ಲೈನ್ ಮ್ಯಾಗಜಿನ್ನಲ್ಲಿ 23 ವರ್ಷದ ನಜೀಬ್ ಅಲ್ ಹಿಂದಿ ಎಂಬ ಯುವಕ ಜಿಹಾದ್ ಆಗಿರುವ ಬಗ್ಗೆ ಹೇಳಲಾಗಿದೆ.
ಆದರೆ ನಜೀಬ್ ಅಲ್ ಹಿಂದ್ ಅಲಿಯಾಸ್ ಕೆ.ಪಿ.ನಜೀಬ್ 2018ರಲ್ಲಿಯೇ ಅಫ್ಘಾನಿಸ್ತಾನದಲ್ಲಿ ಮೃತಪಟ್ಟಿದ್ದ ಎನ್ನುವ ವರದಿಗಳಿದ್ದವು. ಆತನ ಜೊತೆಗೆ, ಅಫ್ಘಾನಿಸ್ತಾನಕ್ಕೆ ತೆರಳಿದ್ದವರು ನಜೀಬ್ ಸಾವಿನ ಬಗ್ಗೆ ಆಗಲೇ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ಈಗ ಖೊರಸಾನ್ ಉಗ್ರರು ನಜೀಬ್ ಸಾವನ್ನು ಅಧಿಕೃತವಾಗಿ ಹೇಳಿಕೊಂಡಿದ್ದಾರೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ಮಲಪ್ಪುರಂ ಮೂಲದ ಮಾಹಿತಿ ಆಧರಿಸಿ ವರದಿ ಮಾಡಿದೆ. ಕೆ.ಪಿ.ನಜೀಬ್ ಮಲಪ್ಪುರಂ ನಗರದ ನಿವಾಸಿಯಾಗಿದ್ದ. 2017ರಲ್ಲಿ ವೆಲ್ಲೂರು ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಎಂಟೆಕ್ ಕಲಿಯುತ್ತಿದ್ದಾಗಲೇ ನಜೀಬ್ ನಾಪತ್ತೆಯಾಗಿದ್ದ. ಈ ಬಗ್ಗೆ ಆತನ ತಾಯಿ ಮಲಪ್ಪುರಂ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದರು. ಅಲ್ಲದೆ, ಮಗ ಉಗ್ರವಾದಿ ಗುಂಪು ಸೇರಿರುವ ಶಂಕೆಯಿದೆ ಎಂದೂ ಹೇಳಿದ್ದರು.
ಆನಂತರ ಕೆಲವು ದಿನಗಳ ಬಳಿಕ ನಜೀಬ್ ಟೆಲಿಗ್ರಾಂ ಏಪ್ ಮೂಲಕ ತಾಯಿಗೆ ಮೆಸೇಜ್ ಕಳಿಸಿದ್ದ. ನಾನು ತಲುಪಬೇಕಾದ ಜಾಗಕ್ಕೆ ತಲುಪಿದ್ದೀನಿ. ನನ್ನನ್ನು ಇನ್ನು ಯಾವತ್ತೂ ಹುಡುಕುವುದು ಬೇಡ ಎಂದು ಹೇಳಿದ್ದ. ಅಬು ಬಶೀರ್ ಎನ್ನುವ ಹೆಸರಿನ ಟೆಲಿಗ್ರಾಂ ಖಾತೆಯಲ್ಲಿ ತಾಯಿಗೆ ಮೆಸೇಜ್ ಬಂದಿತ್ತು. ತನಿಖೆ ನಡೆಸಿದ ಪೊಲೀಸರು ನಜೀಬ್, ಹೈದರಾಬಾದ್ ಮೂಲಕ ಗಲ್ಫ್ ರಾಷ್ಟ್ರಕ್ಕೆ ತೆರಳಿ ಟೆಹ್ರಾನ್ ತಲುಪಿದ್ದ ಎಂದು ಶಂಕಿಸಿದ್ದರು. ಈ ಬಗ್ಗೆ ಖೊರಸಾನ್ ವಾಯ್ಸ್ ನಲ್ಲಿ ಉಲ್ಲೇಖಿಸಿದ್ದು, ನಜೀಬ್ ಭಾರೀ ಕಷ್ಟಪಟ್ಟು ಐಸಿಸ್ ಕೇಂದ್ರ ಸ್ಥಾನಕ್ಕೆ ಬಂದಿದ್ದ ಎಂದು ಉಲ್ಲೇಖಿಸಿದೆ.
ನಜೀಬ್ ಸಾವು ಪೈಗಂಬರ್ ಸಹವರ್ತಿಗೆ ಹೋಲಿಕೆ
ನಜೀಬ್ ಐಸಿಸ್ ಹೋರಾಟಗಾರನಾಗಿ ಮೃತಪಟ್ಟಿದ್ದನ್ನು ಪ್ರವಾದಿ ಪೈಗಂಬರ್ ಜೊತೆಗೆ ಸಹವರ್ತಿಯಾಗಿದ್ದ ಹನ್ಝಾಲಾ ಇಬ್ ಅಬಿ ಮೈರ್ ಎಂಬ ವ್ಯಕ್ತಿಯ ಪ್ರಾಣಾಹುತಿಗೆ ಉಗ್ರರು ಹೋಲಿಸಿಕೊಂಡಿದ್ದಾರೆ. ನಜೀಬ್, ಗೆಳೆಯರ ಒತ್ತಾಯದಂತೆ ಪಾಕಿಸ್ಥಾನಿ ಮಹಿಳೆಯನ್ನು ಮದುವೆಯಾಗಲು ಮುಂದಾಗಿದ್ದ. ಆದರೆ, ಮದುವೆಯ ದಿನವೇ ಕಾಫಿರರ ದಾಳಿ ಎದುರಾಗಿತ್ತು. ತನ್ನ ಮದುವೆಯನ್ನು ಬದಿಗಿಟ್ಟು ಹೋರಾಟಕ್ಕೆ ಹೋಗಿದ್ದ. ಹನ್ಝಾಲಾ ಕೂಡ ತನ್ನ ಮದುವೆಯ ದಿನವೇ ಸಾವು ಕಂಡಿದ್ದರು. ಅದೇ ರೀತಿ, ನಜೀಬ್ ಹುತಾತ್ಮನಾಗಿದ್ದಾನೆ. ಆತನಿಗೆ ಮದುವೆ ಇಷ್ಟವಿರಲಿಲ್ಲ. ಐಸಿಸ್ ಪರ ಹೋರಾಟವೇ ಗುರಿಯಾಗಿತ್ತು. ಕಾಫಿರ್ ಗಳ ವಿರುದ್ಧ ಆತ್ಮಾಹುತಿ ದಾಳಿ ಮಾಡಿ ಪ್ರಾಣ ಅರ್ಪಿಸಿಕೊಂಡಿದ್ದಾನೆ ಎಂದು ವಾಯ್ಸ್ ಆಫ್ ಖೊರಸಾನ್ ಬರೆದುಕೊಂಡಿದೆ. ಆದರೆ, ಯಾವ ಜಾಗದಲ್ಲಿ ಬಾಂಬ್ ಸ್ಫೋಟ ಆಗಿತ್ತು, ಅಲ್ಲಿ ಎಷ್ಟು ಜನ ಸತ್ತಿದ್ದಾರೆ, ಯುವಕನ ನೈಜ ವಿವರಗಳೇನು ಎಂಬ ಬಗ್ಗೆ ಪೋಸ್ಟ್ ನಲ್ಲಿ ಮಾಹಿತಿ ನೀಡಿಲ್ಲ.
ಕೇರಳದಲ್ಲಿ ಬೇರು ಬಿಟ್ಟಿದೆ ಐಸಿಸ್ ಜಾಲ
2014ರಲ್ಲಿ ಮೊದಲ ಬಾರಿಗೆ ಕೇರಳದ ಯುವಕ-ಯುವತಿಯರಿದ್ದ ಗುಂಪು ಸಿರಿಯಾ ಮೂಲದ ಐಸಿಸ್ ಸಂಘಟನೆ ಸೇರ್ಪಡೆಯಾಗಿರುವುದು ಬೆಳಕಿಗೆ ಬಂದಿತ್ತು. ಕಾಸರಗೋಡು ಜಿಲ್ಲೆಯ ವೈದ್ಯನ ಸಹಿತ ಉನ್ನತ ಶಿಕ್ಷಣ ಪಡೆದಿರುವ ಎರಡು ಕುಟುಂಬಗಳ ಸಹಿತ 21 ಮಂದಿ ಕಾಣೆಯಾಗಿದ್ದವರು ಐಸಿಸ್ ಸೇರಿದ್ದರು ಅನ್ನುವುದು ಎನ್ಐಎ ಅಧಿಕಾರಿಗಳ ತನಿಖೆಯಲ್ಲಿ ಕಂಡುಬಂದಿತ್ತು. ಆ ಘಟನೆಯ ನಂತರ ಕೇರಳದಲ್ಲಿ ಐಸಿಸ್ ಜಾಲದ ನೆಟ್ವರ್ಕ್ ಸಕ್ರಿಯವಾಗಿರುವುದು ಪತ್ತೆಯಾಗಿದ್ದು, ಈ ಬಗ್ಗೆ ಗುಪ್ತಚರ ದಳ, ಎನ್ಐಎ ತಂಡ ತನಿಖೆಯಲ್ಲಿ ತೊಡಗಿತ್ತು.
ಹಿಂದ್ ವಿಲಯಾ ಹೆಸರಲ್ಲಿ ಐಸಿಸ್ ಸೇರ್ಪಡೆ
2019ರ ವೇಳೆಗೆ ನೂರಕ್ಕೂ ಹೆಚ್ಚು ಮಂದಿ ಕೇರಳದ ಯುವಕರು ಐಸಿಸ್ ಉಗ್ರವಾದಿ ಸಂಘಟನೆ ಸೇರಿದ್ದಾರೆ ಎನ್ನುವ ಬಗ್ಗೆ ಮಾಹಿತಿಗಳಿದ್ದವು. ಈ ಬಗ್ಗೆ 2020ರಲ್ಲಿ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದ್ದಲ್ಲದೆ, ಭಾರತದ ದಕ್ಷಿಣ ಭಾಗದ ಕೇರಳದಲ್ಲಿ ಐಸಿಸ್ ಒಲವು ಹೆಚ್ಚುತ್ತಿದೆ, ಐಸಿಸ್ ಉಗ್ರರು ಹಿಂದ್ ವಿಲಯಾ (Hind Wilayah) ಎನ್ನುವ ಹೆಸರಲ್ಲಿ 200ಕ್ಕೂ ಹೆಚ್ಚು ಮಂದಿ ಯುವಕರನ್ನು ಸೇರ್ಪಡೆ ಮಾಡಿಕೊಂಡಿದ್ದಾರೆ ಎನ್ನುವ ವರದಿಯನ್ನು ಉಲ್ಲೇಖಿಸಿತ್ತು. ಈ ನಡುವೆ, ಐಸಿಸ್ ನೆಟ್ವರ್ಕ್ ಬಗ್ಗೆ ತನಿಖೆ ನಡೆಸುತ್ತಿದ್ದ ಎನ್ಐಎ ಅಧಿಕಾರಿಗಳು ವರ್ಷದ ಹಿಂದೆ ಕೇರಳದ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ದಾಖಲಿಸಿ ಮಹತ್ವದ ಅಂಶಗಳನ್ನು ಹೊರಗೆಡವಿದ್ದರು. ಆದರೆ ಕೇರಳದಿಂದ ಅಪ್ಘಾನಿಸ್ತಾನಕ್ಕೆ ತೆರಳಿದ್ದಾರೆ ಎನ್ನಲಾದ 200ಕ್ಕೂ ಹೆಚ್ಚು ಮಂದಿ ಯುವಕರು ಯಾರೆಲ್ಲ ? ಇವರು ಎಲ್ಲಿಯ ನಿವಾಸಿಗಳು ಎನ್ನುವ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.
The Islamic State (IS) has confirmed that one more Malayali was killed while “fighting to defend the caliphate” in Afghanistan in 2018. The recent issue of the IS magazine ‘Voice of Khurasan’ said that Najeeb al Hindi, alias K P Najeeb, from Malappuram was killed in the “fight against infidels” in the Afghanistan province of Nangarhar.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am