ಬ್ರೇಕಿಂಗ್ ನ್ಯೂಸ್
08-03-22 09:23 pm HK Desk news ದೇಶ - ವಿದೇಶ
ಚೆನ್ನೈ, ಮಾ.8: ತಮಿಳುನಾಡಿನ ಕೊಯಂಬತ್ತೂರು ಮೂಲದ 21ರ ಹರೆಯದ ಯುವಕನೊಬ್ಬ ಯುದ್ಧ ಪೀಡಿತ ಯುಕ್ರೇನಲ್ಲಿ ಪ್ಯಾರಾ ಮಿಲಿಟರಿ ಪಡೆಗೆ ಸೇರ್ಪಡೆಯಾಗಿದ್ದಾನೆ. ರಷ್ಯಾ ವಿರುದ್ಧ ಹೋರಾಡುವುದಕ್ಕೆ ಯುಕ್ರೇನ್ ಸರಕಾರ ಅಲ್ಲಿನ ಯುವಕರಿಗೆ ಆಫರ್ ನೀಡಿತ್ತು. ಅದರಂತೆ, ಯುಕ್ರೇನಿಗೆ ಏರೋನಾಟಿಕಲ್ ಇಂಜಿನಿಯರಿಂಗ್ ಕಲಿಯಲು ತೆರಳಿದ್ದ ಭಾರತದ ವಿದ್ಯಾರ್ಥಿ ಅಲ್ಲಿನ ಮಿಲಿಟರಿಗೆ ಸೇರಿ ಸುದ್ದಿಯಾಗಿದ್ದಾನೆ.
ಕೊಯಂಬತ್ತೂರು ಜಿಲ್ಲೆಯ ಸಾಯಿನಿಕೇಶ್ ರವಿಚಂದ್ರನ್ (21) ಯುಕ್ರೇನ್ ಪ್ಯಾರಾ ಮಿಲಿಟರಿ ಸೇರಿದ ಯುವಕ. 2018ರಲ್ಲಿ ಸಾಯಿನಿಕೇಶ್, ಯುಕ್ರೇನ್ ತೆರಳಿದ್ದು ರಾಜಧಾನಿ ಕೀವ್ ನಲ್ಲಿರುವ ಏರೋಸ್ಪೇಸ್ ಅಕಾಡೆಮಿಯಲ್ಲಿ ಶಿಕ್ಷಣ ಪಡೆಯುತ್ತಿದ್ದ. ಆತನ ಶಿಕ್ಷಣ 2022ರಲ್ಲಿ ಮುಗಿಯುವುದರಲ್ಲಿತ್ತು. ಇದಕ್ಕೂ ಮುನ್ನ ಭಾರತದ ಸೇನೆಗೆ ಸೇರಲು ಅರ್ಜಿ ಸಲ್ಲಿಸಿದ್ದ ಸಾಯಿನಿಕೇಶ್, ತಾಂತ್ರಿಕ ಕಾರಣದಿಂದ ನಿರಾಕರಿಸಲ್ಪಟ್ಟಿದ್ದ.
ಯುಕ್ರೇನಲ್ಲಿ ಯುದ್ಧ ಶುರುವಾದ ಬಳಿಕ ಸಾಯಿನಿಕೇಶ್ ಮನೆಯವರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಮನೆಮಂದಿ ಭಾರತದ ರಾಯಭಾರ ಕಚೇರಿಗೆ ತಿಳಿಸಿ, ಮಗನ ಬಗ್ಗೆ ಮಾಹಿತಿ ನೀಡುವಂತೆ ಕೋರಿದ್ದರು. ರಾಯಭಾರ ಕಚೇರಿ ಅಧಿಕಾರಿಗಳು ಆತನ ಬಗ್ಗೆ ಹುಡುಕಾಟ ನಡೆಸಿದಾಗ, ಸಾಯಿನಿಕೇಶ್ ಯುಕ್ರೇನ್ ಮಿಲಿಟರಿ ಸೇರಿರುವುದು ಕಂಡುಬಂದಿದೆ. ಭಾರತದ ಗುಪ್ತಚರ ಪಡೆ ಇದರ ಬಗ್ಗೆ ಮಾಹಿತಿ ಕಲೆಹಾಕಿದ್ದು, ಸಾಯಿನಿಕೇಶ್ ಯುಕ್ರೇನಿನ ಪ್ಯಾರಾ ಮಿಲಿಟರಿ ಜಾರ್ಜಿಯನ್ ನೇಶನಲ್ ಲೀಜಿಯನ್ ಎಂಬ ಹೆಸರಿನ ವಿಭಾಗಕ್ಕೆ ಸೇರ್ಪಡೆಯಾಗಿರುವುದನ್ನು ದೃಢಪಡಿಸಿದ್ದಾರೆ.
ಇದೇ ವೇಳೆ, ಗುಪ್ತಚರ ಅಧಿಕಾರಿಗಳು ಕೊಯಂಬತ್ತೂರು ಜಿಲ್ಲೆಯ ತುದಿಯಲೂರು ಸುಬ್ರಹ್ಮಣ್ಯಪಾಲಯಂ ನಲ್ಲಿರುವ ಸಾಯಿನಿಕೇಶ್ ಮನೆಗೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಭಾರತದ ಸೇನೆಗೆ ಸೇರಲು ಅರ್ಜಿ ಹಾಕಿರುವುದು, ಎತ್ತರ ಕಡಿಮೆಯಿದ್ದ ಕಾರಣಕ್ಕೆ ನಿರಾಕರಣೆ ಆಗಿದ್ದನ್ನು ಪತ್ತೆ ಮಾಡಿದ್ದಾರೆ. ಮನೆಯಲ್ಲಿ ಸೇನಾ ಯೋಧರ ಫೋಟೋಗಳನ್ನಿಟ್ಟು ತಾನು ಕೂಡ ಯೋಧನಾಗಬೇಕೆಂಬ ಕನಸು ಕಂಡಿದ್ದನ್ನು ಮನೆಯವರು ತಿಳಿಸಿದ್ದಾರೆ.
The central and state intelligence agencies are investigating the involvement of a student from Tamil Nadu’s Coimbatore in the Ukrainian paramilitary forces after officials revealed that the 21-year-old has joined the paramilitary forces to fight against Russian invasion.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am