ಬ್ರೇಕಿಂಗ್ ನ್ಯೂಸ್
05-03-22 06:51 pm HK Desk news ದೇಶ - ವಿದೇಶ
ನವದೆಹಲಿ, ಮಾ.5: ಪೋರ್ಶೆ, ಬೆಂಟ್ಲಿ, ಲ್ಯಾಂಬೋರ್ಗಿನಿ ಮುಂತಾದ 4000 ಐಷಾರಾಮಿ ಕಾರುಗಳನ್ನು ಹೊತ್ತು ಅಮೆರಿಕಕ್ಕೆ ತೆರಳುತ್ತಿದ್ದ ಕಾರ್ಗೋ ಹಡಗು ಪೋರ್ಚುಗಲ್ ಬಳಿಯ ಸಮುದ್ರ ಮಧ್ಯೆ ಬೆಂಕಿ ಹತ್ತಿಕೊಂಡು ಮುಳುಗಡೆಯಾಗಿದ್ದು, ಕೋಟ್ಯಂತರ ರೂಪಾಯಿ ನಷ್ಟವಾಗಿದೆ.
ಜರ್ಮನಿಯ ಫೋಕ್ಸ್ ವ್ಯಾಗನ್ ಗ್ರೂಪ್ ಕಂಪನಿಯಿಂದ ತಯಾರಿಸಲ್ಪಟ್ಟ ಐಷಾರಾಮಿ ಕಾರುಗಳನ್ನು ಹೊತ್ತ ಹಡಡು ಅಮೆರಿಕದತ್ತ ಪ್ರಯಾಣಿಸುತ್ತಿತ್ತು. ಈ ವೇಳೆ, ಫೆ.16ರಂದು ಹಡಗಿನಲ್ಲಿ ಶಾರ್ಟ್ ಸರ್ಕಿಟ್ ಆಗಿ ಬೆಂಕಿ ಹತ್ತಿಕೊಂಡಿದ್ದು, ಇಲೆಕ್ಟ್ರಿಕ್ ಕಾರುಗಳ ಬ್ಯಾಟರಿಗೆ ಬೆಂಕಿ ಹೊತ್ತಿಕೊಂಡು ಉರಿಯಲಾರಂಭಿಸಿದೆ. ಅದರಲ್ಲಿದ್ದ 22 ಸಿಬಂದಿಯನ್ನು ಪೋರ್ಚುಗಿಲ್ ವಾಯುಪಡೆಯ ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಲಾಗಿದೆ.
ಆನಂತರ, ಬೆಂಕಿ ನಂದಿಸುವ ಯತ್ನ ನಡೆಸಿದ್ದಲ್ಲದೆ, ತೀರದತ್ತ ಎಳೆದು ತರುವ ಪ್ರಯತ್ನ ಮಾಡಲಾಗಿತ್ತು. ಆದರೆ ಬೆಂಕಿ ನಂದಿಸಲು ಸಾಧ್ಯವಾಗಿರಲಿಲ್ಲ. ಹಡಗನ್ನು ಟೋಯಿಂಗ್ ಮಾಡುತ್ತಿದ್ದಾಗ ಅದರೊಳಗೆ ನೀರು ನುಗ್ಗಿದ್ದು, ನಿಧಾನಕ್ಕೆ ಮುಳುಗ ತೊಡಗಿತ್ತು. ಮಾರ್ಚ್ 1ರಂದು ಪೂರ್ತಿಯಾಗಿ ಹಡಗು ಮುಳುಗಡೆ ಆಗಿರುವುದಾಗಿ ವಿದೇಶಿ ಪತ್ರಿಕೆಗಳು ವರದಿ ಮಾಡಿವೆ. ಹಡಗು ಅಟ್ಲಾಂಟಿಕ್ ಸಾಗರದಲ್ಲಿ 3500 ಮೀಟರ್ ಆಳಕ್ಕೆ ಮುಳುಗಿದೆ.
ಪೋರ್ಚುಗಲ್ ಸಮುದ್ರ ತೀರದಿಂದ 400 ಕಿಮೀ ದೂರದ ಆಜೋರ್ಸ್ ದ್ವೀಪ ಸಮೂಹದ ಬಳಿ ಹಡಗು ಮುಳುಗಡೆಯಾಗಿದೆ. 200 ಮೀಟರ್ ಉದ್ದದ ಹಡಗಿನಲ್ಲಿ ನಾಲ್ಕು ಸಾವಿರ ಕಾರುಗಳನ್ನು ಹೊತ್ತು ತರಬಲ್ಲ ಸಾಮರ್ಥ್ಯ ಹೊಂದಿತ್ತು. ಆದರೆ, ಅದರಲ್ಲಿ ನಾಲ್ಕು ಸಾವಿರ ಕಾರುಗಳು ಇತ್ತೇ, ಅದಕ್ಕಿಂತ ಕಡಿಮೆ ಇತ್ತೇ ಎಂಬ ಬಗ್ಗೆ ಯುರೋಪ್ ಕಾರು ಕಂಪನಿ ಮಾಹಿತಿ ನೀಡಿಲ್ಲ. ಹಡಗು ಮುಳುಗಡೆಯಾದ ಪ್ರದೇಶ ಪೋರ್ಚುಗೀಸ್ ಸಮುದ್ರ ವ್ಯಾಪ್ತಿಗಿಂತ ಹೊರಗಿನ ಪ್ರದೇಶವಾಗಿದ್ದು, ಆದರೂ ಹಡಗನ್ನು ರಕ್ಷಿಸುವ ಪ್ರಯತ್ನ ಮಾಡಿದ್ದು ಅದರಲ್ಲಿ ಸೋತಿದೆ.
ಹಡಗು ಮುಳುಗಡೆಯಾಗಿದ್ದರಿಂದ ಸಮುದ್ರ ಕಲುಷಿತ ಆಗುವ ಸಾಧ್ಯತೆ ಬಗ್ಗೆ ಅಲ್ಲಿನ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಹಡಗಿನಲ್ಲಿ ಎರಡು ಸಾವಿರ ಮೆಟ್ರಿಕ್ ಟನ್ ಡೀಸೆಲ್ ಮತ್ತು ಎರಡು ಸಾವಿರ ಮೆಟ್ರಿಕ್ ಟನ್ ಆಯಿಲ್ ಹೊಂದಿತ್ತು. ಇದಲ್ಲದೆ, ಕಾರು ಸಹಿತ ಇನ್ನಿತರ ಸಾಮಗ್ರಿ ಸೇರಿ ಒಟ್ಟು 17 ಸಾವಿರ ಮೆಟ್ರಿಕ್ ಟನ್ ಸರಕುಗಳಿದ್ದವು. ವಿದೇಶಿ ಪತ್ರಿಕೆಗಳ ವರದಿ ಪ್ರಕಾರ, 400 ಮಿಲಿಯನ್ ಡಾಲರ್ ಮೊತ್ತದ ಸರಕುಗಳು ಹಡಗಿನಲ್ಲಿದ್ದವು ಎನ್ನಲಾಗಿದೆ.
A large cargo vessel carrying luxury cars from Germany to the United States sank Tuesday in the mid-Atlantic, 13 days after a fire broke out on board, the ship's manager and the Portuguese navy said. The cars on board the Felicity Ace included Porsches, Lamborghinis and Bentleys, the Wall Street Journal reported.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am