ಬ್ರೇಕಿಂಗ್ ನ್ಯೂಸ್
04-03-22 09:49 pm HK Desk news ದೇಶ - ವಿದೇಶ
ನವದೆಹಲಿ, ಮಾ.4:ಯುದ್ಧ ಪೀಡಿತ ಯುಕ್ರೇನ್ ದೇಶದಿಂದ 20 ಸಾವಿರಕ್ಕೂ ಹೆಚ್ಚು ಭಾರತೀಯರು ಹೊರ ಬಂದಿದ್ದು, ಅಲ್ಲಿನ ಗಡಿದಾಟಿ ಹೊರಬಂದಿದ್ದಾರೆ. ಅವರನ್ನು ಪೂರ್ತಿಯಾಗಿ ಭಾರತಕ್ಕೆ ಸ್ಥಳಾಂತರ ಮಾಡಲಾಗುವುದು. ಮುಂದಿನ 24 ಗಂಟೆಗಳಲ್ಲಿ 16 ವಿಮಾನಗಳು ಭಾರತೀಯರನ್ನು ಹೊತ್ತು ತರಲು ತಯಾರಾಗಿವೆ ಎಂದು ವಿದೇಶಾಂಗ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ದಿನಗಳ ಹಿಂದೆ ಭಾರತದ ರಾಯಭಾರ ಕಚೇರಿ ಮೂಲಕ ಯುಕ್ರೇನಲ್ಲಿ ಸಿಕ್ಕಿಬಿದ್ದಿರುವ ಎಲ್ಲ ಭಾರತೀಯರು ತಾವಿರುವಲ್ಲಿಂದ ಹೊರಬರಬೇಕು. ಸಮೀಪದ ಸೂಚಿತ ಪ್ರದೇಶಗಳಿಗೆ ನಡೆದುಕೊಂಡಾದರೂ ಬರಬೇಕು ಎಂದು ಸೂಚನೆ ನೀಡಲಾಗಿತ್ತು. ಅದರಂತೆ, ಕೀವ್ ಮತ್ತು ಖಾರ್ಕೀವ್ ನಗರದಲ್ಲಿ ಬಂಕರಿನಡಿ ಅವಿತುಕೊಂಡಿದ್ದ ಸಾವಿರಾರು ಮಂದಿ ಅಲ್ಲಿಂದ ಹೊರಬಂದು ನಡೆದುಕೊಂಡೇ ಸೂಚಿತ ಪ್ರದೇಶಗಳಿಗೆ ಬಂದಿದ್ದರು. ಅವರನ್ನು ರೈಲು, ಬಸ್ ಮೂಲಕ ಗಡಿ ಪ್ರದೇಶಗಳಿಗೆ ಕರೆತಂದು ಅಲ್ಲಿಂದ ಭಾರತಕ್ಕೆ ಸ್ಥಳಾಂತರಿಸಲು ಯೋಜನೆ ಹಾಕಲಾಗಿತ್ತು.
ಈ ನಡುವೆ, ಕೀವ್ ನಗರದಿಂದ ಹೊರಬರುತ್ತಿರುವ ಭಾರತೀಯರಿಗೆ ಯಾವುದೇ ಅಪಾಯ ಎದುರಾದರೂ, ಸ್ಥಳೀಯ ಗಡಿಗಳಲ್ಲಿರುವ ಗಾರ್ಡ್ ಗಳಿಗೆ ತಿಳಿಸುವಂತೆ ಇಂಡಿಯನ್ ಎಂಬಸ್ಸಿ ಕೋರಿದೆ. ಅಲ್ಲಿ ನಿಮ್ಮ ನೆರವಿಗೆ ಅಂಬುಲೆನ್ಸ್ ರೆಡಿ ಇದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ, ಕೀವ್ ನಗರದಿಂದ ಪಾರಾಗಿ ಬರುತ್ತಿರುವ ಕೇರಳ ಮೂಲದ ನವ ದಂಪತಿ ಭಾರತ ಸರಕಾರದ ಆಪರೇಶನ್ ಗಂಗಾ ಕಾರ್ಯಾಚರಣೆಗೆ ಕೃತಜ್ಞತೆ ಹೇಳಿದ್ದಾರೆ. ಅಲ್ಲದೆ, ತಮ್ಮನ್ನು ಪಾರು ಮಾಡಿದ್ದಕ್ಕೆ ಕೃತಜ್ಞತೆ ಸೂಚಿಸುವುದಕ್ಕಾಗಿ ತಮ್ಮ ಹುಟ್ಟಬೇಕಾದ ಮಗುವಿಗೆ ಗಂಗಾ ಹೆಸರನ್ನೇ ಇಡುವುದಾಗಿ ತಿಳಿಸಿದ್ದಾರೆ.
ಇದೇ ವೇಳೆ, ಭಾರತದ ತೆರವು ಕಾರ್ಯಾಚರಣೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಬಾಂಗ್ಲಾದೇಶ ಮತ್ತು ನೇಪಾಳದಿಂದಲೂ ತಮ್ಮ ಜನರನ್ನು ಯುಕ್ರೇನ್ ದೇಶದಿಂದ ಪಾರು ಮಾಡುವಂತೆ ಮನವಿ ಕೇಳಿಬಂದಿದೆ. ಈ ಬಗ್ಗೆ ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಾಗ್ಚಿ, ಅಲ್ಲಿನ ದೇಶಗಳ ಅಧಿಕಾರಿಗಳು ಮನವಿ ಮಾಡಿರುವುದಾಗಿ ಹೇಳಿದ್ದಾರೆ.
ಯುಕ್ರೇನ್ ಅಣು ಸ್ಥಾವರಕ್ಕೆ ದಾಳಿ
ಹಾಗಿದ್ದರೂ, ಯುಕ್ರೇನ್ ಮೇಲೆ ರಷ್ಯಾದ ದಾಳಿ ನಿಂತಿರಲಿಲ್ಲ. ನಿರ್ದಿಷ್ಟ ಪ್ರದೇಶ, ಕಟ್ಟಡಗಳನ್ನು ಗುರಿಯಾಗಿಸಿ ಬಾಂಬ್ ದಾಳಿ ನಡೆಸಲಾಗಿತ್ತು. ಶುಕ್ರವಾರ ಬೆಳಗ್ಗೆ ಯುರೋಪ್ ಖಂಡದಲ್ಲಿಯೇ ಅತಿ ದೊಡ್ಡದು ಎನ್ನಲಾದ ಯುಕ್ರೇನಿನ ಝಿಪೋರಿಜಿಯಾ ನಗರದಲ್ಲಿರುವ ಅಣು ಸ್ಥಾವರಕ್ಕೆ ರಷ್ಯಾ ಮಿಲಿಟರಿ ಬಾಂಬ್ ದಾಳಿ ನಡೆಸಿದೆ. ಇದರಿಂದ ಸ್ಥಳದಲ್ಲಿ ಬೆಂಕಿಯುಂಡೆಗಳು ಎದ್ದಿದ್ದು, ಅಣು ವಿಕಿರಣದಿಂದ ಭಾರೀ ಹಾನಿಯಾಗುವ ಸಾಧ್ಯತೆ ವ್ಯಕ್ತವಾಗಿದೆ. ಘಟನೆಯಲ್ಲಿ ಮೂವರು ಯುಕ್ರೇನ್ ಯೋಧರು ಮೃತಪಟ್ಟಿದ್ದಾರೆ ಎನ್ನಲಾಗುತ್ತಿದ್ದು ಇತರರು ಎಷ್ಟು ಮಂದಿ ಸಾವಿಗೀಡಾಗಿದ್ದಾರೆ ಎನ್ನುವ ಮಾಹಿತಿಯಿಲ್ಲ.
ಮತ್ತೊಂದು ಸಿರಿಯಾ ಮಾಡಲು ಬಿಡಲ್ಲ
ಇದೇ ವೇಳೆ, ಯುಕ್ರೇನ್ ದೇಶದ ವಿದೇಶಾಂಗ ಮಂತ್ರಿ ಡಿಮಿಟ್ರೋ ಕುಲೆಬಾ, ಯುಕ್ರೇನನ್ನು ಮತ್ತೊಂದು ಸಿರಿಯಾ ಮಾಡುವುದಕ್ಕೆ ಬಿಡುವುದಿಲ್ಲ. ನಾವು ಹೋರಾಟ ನಿಲ್ಲಿಸುವುದಿಲ್ಲ. ಹೋರಾಟ ನಡೆಸಿಯೇ ತೀರುತ್ತೇವೆ. ಆದರೆ ನಮಗೆ ತಿರುಗೇಟು ನೀಡಲು ಸಹಕಾರವೂ ಎಲ್ಲ ಕಡೆಯಿಂದ ಬರಬೇಕು. ಅದಕ್ಕಾಗಿ ವಿಶ್ವ ಸಮುದಾಯದಿಂದ ಸಹಾಯವನ್ನು ನಿರೀಕ್ಷೆ ಮಾಡುತ್ತೇವೆ ಎಂದು ಹೇಳಿದ್ದಾರೆ.
India’s Ministry of External Affairs on Friday said over 20,000 Indians have left the Ukraine border since advisories were issued due to Russia’s military aggression against Ukraine, adding 16 flights are scheduled for evacuation of stranded Indian in the next 24 hours.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am