ಬ್ರೇಕಿಂಗ್ ನ್ಯೂಸ್
28-02-22 05:07 pm HK Desk news ದೇಶ - ವಿದೇಶ
ನವದೆಹಲಿ, ಫೆ.28 : ವಿಶ್ವ ರಾಷ್ಟ್ರಗಳ ಒತ್ತಡಕ್ಕೆ ಕೊನೆಗೂ ರಷ್ಯಾ ಮಣಿದಿರುವಂತೆ ತೋರುತ್ತಿದೆ. ರಷ್ಯಾದ ಪ್ರತಿನಿಧಿಗಳು ಯುಕ್ರೇನ್ ಜೊತೆ ಬೆಲಾರಸ್ ಗಡಿಯಲ್ಲಿ ಮಾತುಕತೆಗೆ ಮುಂದಾಗಿದ್ದಾರೆ. ಯುರೋಪ್, ಆಸ್ಟ್ರೇಲಿಯಾ, ಅಮೆರಿಕ ಸೇರಿದಂತೆ ಹತ್ತಕ್ಕೂ ಹೆಚ್ಚು ರಾಷ್ಟ್ರಗಳು ರಷ್ಯಾದ ವಿಮಾನಗಳ ಸಂಚಾರಕ್ಕೆ ತಮ್ಮ ವಾಯು ಪ್ರದೇಶದಲ್ಲಿ ಅವಕಾಶ ಕೊಡುವುದಿಲ್ಲ ಎಂಬ ನಿರ್ಬಂಧ ವಿಧಿಸಿದ ಬೆನ್ನಲ್ಲೆ ರಷ್ಯಾ ತನ್ನ ಪಟ್ಟನ್ನು ತಣ್ಣಗೆ ಸಡಿಲಿಸಿದಂತೆ ಕಂಡುಬಂದಿದೆ.
ರಷ್ಯಾದ ಜೊತೆಗೆ ಮಾತುಕತೆ ನಡೆಸುವುದಕ್ಕೆ ಯುಕ್ರೇನ್ ಮೊದಲಿಗೆ ನಿರಾಕರಣೆ ಮಾಡಿತ್ತು. ಆದರೆ, ರಷ್ಯಾ ಕೂಡಲೇ ಕದನ ವಿರಾಮ ಮಾಡುವುದಿದ್ದರೆ ಮಾತ್ರ ಮಾತುಕತೆಗೆ ಬರುವುದಾಗಿ ಯುಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಹೇಳಿದ್ದರು. ರಷ್ಯಾ ಮಿಲಿಟರಿ ನಮ್ಮನ್ನು ಸುತ್ತುವರಿದು ದಾಳಿ ನಡೆಸುತ್ತಿದ್ದರೆ ನಾವು ಮಾತುಕತೆ ನಡೆಸುವುದರಲ್ಲಿ ಅರ್ಥ ಏನಿದೆ ಎಂದು ಪ್ರಶ್ನೆ ಮಾಡಿದ್ದರು. ಇದೀಗ ಯುಕ್ರೇನ್ ಮತ್ತು ರಷ್ಯಾದ ವಿದೇಶಾಂಗ ಸಚಿವರು ಮತ್ತು ರಕ್ಷಣಾ ವಿಭಾಗದ ಪ್ರತಿನಿಧಿಗಳು ಬೆಲಾರಸ್ ಗಡಿಯಲ್ಲಿ ಮಾತುಕತೆ ನಡೆಸಲು ಆರಂಭಿಸಿದ್ದಾರೆ. ಯುಕ್ರೇನ್ ರಾಜಧಾನಿಯಲ್ಲಿ ಸ್ವಲ್ಪಮಟ್ಟಿಗೆ ಬಾಂಬು ದಾಳಿ ನಿಂತಿದ್ದು, ಸ್ಥಿತಿ ಶಾಂತವಾಗಿದೆ ಎನ್ನುವ ವರದಿಗಳಿವೆ.
ರಷ್ಯಾದ ದಾಳಿಯನ್ನು ಖಂಡಿಸಿ, ಆ ರಾಷ್ಟ್ರದ ವಿಮಾನ ಸಂಚಾರವನ್ನು ಕೆನಡಾ, ಬೆಲ್ಜಿಯಂ, ಫಿನ್ಲೇಂಡ್ ಸೇರಿದಂತೆ 13 ರಾಷ್ಟ್ರಗಳು ನಿರ್ಬಂಧಿಸಿವೆ. ಹೀಗಾಗಿ ರಷ್ಯಾದ ನಿವಾಸಿಗಳು ಈ ರಾಷ್ಟ್ರಗಳಿಗೆ ಪ್ರಯಾಣ ಮಾಡುವುದಿದ್ದರೂ ಇತರ ವಿಮಾನಗಳಲ್ಲಿಯೇ ಪ್ರಯಾಣಿಸಬೇಕು. ರಷ್ಯಾದ ಯಾವುದೇ ವಿಮಾನಗಳು ಈ ರಾಷ್ಟ್ರಗಳಿಗಾಗಲೀ, ಅವುಗಳಿಗೆ ಸಂಬಂಧಪಟ್ಟ ವಾಯುಮಾರ್ಗದ ಮೂಲಕ ಇತರ ರಾಷ್ಟ್ರಕ್ಕಾಗಲೀ ಸಂಚರಿಸುವುದಕ್ಕೆ ಸಾಧ್ಯವಿಲ್ಲ. ನ್ಯಾಟೋ ಸಂಘಟನೆಯಲ್ಲಿ 27 ರಾಷ್ಟ್ರಗಳು ಇದ್ದರೂ, ಎಲ್ಲ ರಾಷ್ಟ್ರಗಳು ವಿಮಾನ ಸಂಚಾರದ ಮೇಲೆ ನಿರ್ಬಂಧ ವಿಧಿಸಿಲ್ಲ. ದಿನದಿಂದ ದಿನಕ್ಕೆ ವಾಯು ಮಾರ್ಗದ ನಿರ್ಬಂಧ ವಿಧಿಸುತ್ತಿರುವ ದೇಶಗಳ ಸಾಲು ಹೆಚ್ಚುತ್ತಿರುವುದು ರಷ್ಯಾದ ಪಾಲಿಗೆ ದೊಡ್ಡ ಹಿನ್ನಡೆಯಾಗಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ರಷ್ಯಾ, ವಿಮಾನ ಸಂಚಾರ ನಿರ್ಬಂಧಿಸುವುದು ಆಯಾ ರಾಷ್ಟ್ರಗಳಿಗೆ ಬಿಟ್ಟ ವಿಚಾರ ಎಂದಿದೆ.
ಅಮೆರಿಕ, ಯುರೋಪ್ ರಾಷ್ಟ್ರಗಳು ಆರ್ಥಿಕ ನಿರ್ಬಂಧ, ವ್ಯಾಪಾರ- ವಹಿವಾಟಿನ ನಿರ್ಬಂಧ ವಿಧಿಸಿದ್ದರೂ, ಅದಕ್ಕೆ ರಷ್ಯಾ ಅಧ್ಯಕ್ಷ ಪುತಿನ್ ಸೊಪ್ಪು ಹಾಕಿರಲಿಲ್ಲ. ಈಗ ಒಂದೆಡೆ ನ್ಯಾಟೋ ರಾಷ್ಟ್ರಗಳಿಂದ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ರವಾನೆ, ಮತ್ತೊಂದು ಕಡೆ ಆರ್ಥಿಕ ನೆರವನ್ನೂ ಯುಕ್ರೇನ್ ಗೆ ನೀಡಲಾಗಿದೆ. ಆಸ್ಟ್ರೇಲಿಯಾ ತನ್ನ ಶಕ್ತಿಶಾಲಿ ಫೈಟರ್ ಜೆಟ್ ಗಳನ್ನು ಯುಕ್ರೇನ್ ಪರವಾಗಿ ಕಳಿಸಿಕೊಡುವುದಾಗಿ ಹೇಳಿದೆ. ಈ ಎಲ್ಲ ನೆಲೆಯಲ್ಲಿ ನೋಡಿದರೆ ರಷ್ಯಾ ಮೇಲ್ನೋಟಕ್ಕೆ ಏಕಾಂಗಿಯಾಗಿದೆ.
ಈ ನಡುವೆ, ಯುಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಪ್ರತಿಕ್ರಿಯೆ ನೀಡಿದ್ದು, ರಷ್ಯಾದ 4500ಕ್ಕೂ ಹೆಚ್ಚು ಸೈನಿಕರನ್ನು ಕೊಂದು ಹಾಕಿದ್ದೇವೆ ಎಂದಿದ್ದಾರೆ. ಇತ್ತ ರಷ್ಯಾ, ಯುಕ್ರೇನಿನ ನಾಗರಿಕರು ಸೇರಿ 600 ಮಂದಿಯಷ್ಟು ಮಿಲಿಟರಿಯನ್ನು ಕೊಂದಿರುವುದಾಗಿ ಹೇಳಿಕೊಂಡಿದೆ. ರಷ್ಯಾದ ಹಲವು ಫೈಟರ್ ಜೆಟ್ ಯುದ್ಧ ವಿಮಾನಗಳನ್ನು ಹೊಡೆದು ಹಾಕಿರುವುದರಿಂದ ರಷ್ಯಾ ಪಾಲಿಗೆ ದೊಡ್ಡ ನಷ್ಟ ಆಗಿದೆ ಎನ್ನಲಾಗುತ್ತಿದೆ. ಮಾತುಕತೆಯಲ್ಲಿ ಏನಾಗುತ್ತೆ ಅನ್ನುವುದು ಸದ್ಯದ ಕುತೂಹಲ.
It is the fifth day since Russian President Vladimir Putin declared war on Ukraine, leading to heavy fighting and airstrikes across the country. According to Ukraine, 352 civilians have been killed since Russia invaded the country. Russia-Ukraine talks have began at the Belarus border.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am