ಬ್ರೇಕಿಂಗ್ ನ್ಯೂಸ್
28-02-22 12:19 pm HK Desk news ದೇಶ - ವಿದೇಶ
ನವದೆಹಲಿ, ಫೆ.28 : ಯುದ್ಧ ಪೀಡಿತ ಉಕ್ರೇನ್ ದೇಶದಲ್ಲಿರುವ ಭಾರತೀಯರನ್ನು ಕರೆತರುವ ಬಗ್ಗೆ ಪ್ರಧಾನಿ ಮೋದಿ ನೇತೃತ್ವದಲ್ಲಿ ತುರ್ತಾಗಿ ಉನ್ನತ ಮಟ್ಟದ ಸಭೆ ನಡೆಸಲಾಗಿದ್ದು, ನಾಲ್ವರು ಕೇಂದ್ರ ಸಚಿವರನ್ನು ಇದಕ್ಕಾಗಿ ನಿಯೋಜನೆ ಮಾಡಲಾಗಿದೆ.
ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ, ಜ್ಯೋತಿರಾದಿತ್ಯ ಸಿಂಧಿಯಾ, ಕಿರಣ್ ರಿಜಿಜು ಮತ್ತು ಜನರಲ್ ವಿಕೆ ಸಿಂಗ್ ಅವರನ್ನು ಯುಕ್ರೇನ್ ಆಸುಪಾಸಿನ ರಾಷ್ಟ್ರಗಳಿಗೆ ಕಳುಹಿಸಲು ನಿರ್ಧರಿಸಲಾಗಿದೆ. ಯುಕ್ರೇನ್ ದೇಶದಲ್ಲಿ 15 ಸಾವಿರಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳಿದ್ದು, ಈಗಾಗ್ಲೇ ಅವರನ್ನು ಮರಳಿ ಕರೆತರಲು ಸಮರೋಪಾದಿ ಕಾರ್ಯ ನಡೆಯುತ್ತಿದೆ. ಆದರೆ, ಹೆಚ್ಚಿನ ಮಂದಿ ಅಲ್ಲಲ್ಲಿ ಸಿಕ್ಕಿಬಿದ್ದಿದ್ದು, ಬಂಕರಿನಡಿ ಜೀವ ರಕ್ಷಣೆ ಮಾಡಿಕೊಂಡಿದ್ದಾರೆ. ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಆಪರೇಶನ್ ಗಂಗಾ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ಮರಳಿ ಕರೆತರುವ ಕೆಲಸಕ್ಕೆ ಭಾರತ ಮುಂದಾಗಿದೆ.
ಈ ಬಗ್ಗೆ ಪ್ರಧಾನಿ ನೇತೃತ್ವದಲ್ಲಿ ಇಂದು ಬೆಳಗ್ಗೆ ಸಭೆ ನಡೆದಿದ್ದು, ವಿದೇಶಾಂಗ ಇಲಾಖೆ ಸಚಿವ ಜೈಶಂಕರ್, ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್, ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ, ಕಾನೂನು ಸಚಿವ ಕಿರಣ್ ರಿಜಿಜು ಪಾಲ್ಗೊಂಡಿದ್ದರು. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್, ತನ್ನ ಸೇನೆಯ ಜೊತೆಗೆ ಪರಮಾಣು ಶಸ್ತ್ರ ಪ್ರಯೋಗದ ವಿಶೇಷ ದಳವನ್ನೂ ಯುದ್ಧಕ್ಕೆ ನಿಯೋಜನೆ ಮಾಡಲು ಮುಂದಾಗಿರುವುದು ಭಾರತದ ಚಿಂತೆಗೆ ಕಾರಣವಾಗಿದೆ.
ಈಗಾಗಲೇ ಭಾರತಕ್ಕೆ ಐದು ವಿಮಾನಗಳಲ್ಲಿ ಭಾರತೀಯರನ್ನು ಕರೆತರಲಾಗಿದ್ದು, ವಿವಿಧ ರಾಜ್ಯಗಳಿಗೆ ಸೇರಿದ 1200ಕ್ಕೂ ಹೆಚ್ಚು ಮಂದಿ ಆಗಮಿಸಿದ್ದಾರೆ. ಆದರೆ ಭಾರೀ ಸಂಖ್ಯೆಯಲ್ಲಿ ಅನ್ನ, ನೀರಿಲ್ಲದೆ ಪರದಾಡುವ ಸ್ಥಿತಿ ಎದುರಾಗಿದೆ. ಯುದ್ಧದಿಂದ ಹೆಚ್ಚು ಹಾನಿಗೀಡಾಗಿರುವ ಕೀವ್ ಮತ್ತು ಕಾರ್ಕೀವ್ ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರಿದ್ದಾರೆ. ಸದ್ಯಕ್ಕೆ ನೆರೆ ರಾಷ್ಟ್ರಗಳಾದ ರೊಮೇನಿಯಾ, ಬೆಲಾರಸ್, ಪೋಲಂಡ್ ಮೂಲಕ ಭಾರತೀಯರನ್ನು ಕರೆತರಲು ಪ್ಲಾನ್ ಮಾಡಲಾಗಿದೆ. ಆದರೆ, ಕೀವ್ ಮತ್ತು ಕಾರ್ಕೀವ್ ನಗರದಿಂದ ರೊಮೇನಿಯಾ ಅಥವಾ ಬೆಲಾರಸ್ ಬರುವುದಕ್ಕೆ 1500 ಕಿಮೀ ದೂರವಿದ್ದು, ಇದರಿಂದಾಗಿ ಅವರನ್ನು ಕರೆತರುವುದು ಭಾರೀ ಕಷ್ಟದ ಸ್ಥಿತಿ ಉಂಟಾಗಿದೆ.
ಭಾರತೀಯರ ರಕ್ಷಣೆಗಾಗಿ ರಷ್ಯಾ ಅಧ್ಯಕ್ಷ ಮತ್ತು ಯುಕ್ರೇನ್ ಅಧ್ಯಕ್ಷರ ಜೊತೆಗೆ ಪ್ರಧಾನಿ ಮೋದಿ ಮಾತುಕತೆ ನಡೆಸಿದ್ದು ಇದೀಗ ಉನ್ನತ ಮಟ್ಟದ ಸಭೆಯಲ್ಲಿ ಭಾರತೀಯರ ರಕ್ಷಣೆಯೇ ಪ್ರಮುಖ ಅಜೆಂಡಾ ಎಂಬ ನಿರ್ಧಾರಕ್ಕೆ ಬರಲಾಗಿದೆ. ಇದರಂತೆ, ನಗರಗಳ ಮಧ್ಯೆ ಸಿಲುಕಿರುವ ಭಾರತೀಯರನ್ನು ಹೇಗೆ ಮರಳಿ ಕರೆತರಬಹುದು ಎಂಬ ನೆಲೆಯಲ್ಲಿ ಆಯಾ ಪ್ರದೇಶಗಳಿಗೆ ಸಚಿವರು ಮತ್ತು ಅಧಿಕಾರಿಗಳ ತಂಡ ತೆರಳಲಿದ್ದಾರೆ.
For the second day in a row, Prime Minister Narendra Modi chaired a high-level meeting on the ongoing crisis in Ukraine, with evacuation of Indian nationals from the country a top priority on the agenda.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am