ಬ್ರೇಕಿಂಗ್ ನ್ಯೂಸ್
26-02-22 11:31 am HK Desk news ದೇಶ - ವಿದೇಶ
ನವದೆಹಲಿ, ಫೆ.26 : ಉಕ್ರೇನ್ ಮೇಲೆ ರಷ್ಯಾ ದಾಳಿಯನ್ನು ಖಂಡಿಸಿ ಹಾಗೂ ಆ ದೇಶದಿಂದ ತಕ್ಷಣವೇ ಸೇನೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಿರ್ಣಯ ಕೈಗೊಳ್ಳುವ ವಿಚಾರದಲ್ಲಿ ಭಾರತ ಮತ್ತು ಚೀನಾ ಅಂತರ ಕಾಯ್ದುಕೊಂಡಿದೆ.
ಅಮೆರಿಕ ಮತ್ತು ಅಲ್ಬೇನಿಯಾ ನೇತೃತ್ವದಲ್ಲಿ ರಚನೆಯಾದ ಕರಡು ನಿರ್ಣಯದ ವಿಚಾರದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮತ ಚಲಾವಣೆ ನಡೆಯಿತು. ಆದರೆ ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರಗಳಾಗಿರುವ ಭಾರತ, ಚೀನಾ ಮತ್ತು ಯುಎಇ ಈ ನಿರ್ಣಯದಿಂದ ದೂರ ಉಳಿದು ತಟಸ್ಥ ನೀತಿ ಅನುಸರಿಸಿದೆ. ಇದೇ ವೇಳೆ, ಪೋಲೆಂಡ್, ಇಟಲಿ, ಜರ್ಮನಿ, ಎಸ್ಟೋನಿಯಾ, ಆಸ್ಟ್ರೇಲಿಯಾ, ಇಂಗ್ಲೆಂಡ್, ಲುಕ್ಸಂಬರ್ಗ್ ಮತ್ತು ನ್ಯೂಜಿಲೆಂಡ್ ಸೇರಿದಂತೆ 11 ರಾಷ್ಟ್ರಗಳು ನಿರ್ಣಯವನ್ನು ಬೆಂಬಲಿಸಿದೆ.
ವಿಶ್ವಸಂಸ್ಥೆಯಲ್ಲಿ ಅನೇಕ ರಾಷ್ಟ್ರಗಳು ರಷ್ಯಾ ವಿರುದ್ಧ ನಿರ್ಣಯ ಕೈಗೊಂಡರೂ, ಅದನ್ನು ಅಂಗೀಕರಿಸಲು ಸಾಧ್ಯವಾಗಿಲ್ಲ. ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರವಾಗಿರುವ ರಷ್ಯಾ ತನ್ನ ವೀಟೋ ಅಧಿಕಾರವನ್ನು ಚಲಾಯಿಸಿದ್ದು ತನ್ನ ನಡೆಯನ್ನು ವಿಶ್ವಸಂಸ್ಥೆಯಲ್ಲಿ ಸಮರ್ಥಿಸಿಕೊಂಡಿದೆ. ಫೆಬ್ರವರಿ ತಿಂಗಳಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷ ಗಿರಿಯೂ ಅದರದ್ದೇ ಆಗಿದೆ.
ನಿರ್ಣಯ ಮಂಡನೆ ವಿಚಾರದಲ್ಲಿ ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿಯಾಗಿರುವ ರಾಯಭಾರಿ ಟಿ.ಎಸ್.ತಿರುಮೂರ್ತಿ, ಭಾರತದ ಪರವಾಗಿ ಹೇಳಿಕೆಯನ್ನು ಓದಿ ಹೇಳಿದರು. ಉಕ್ರೇನ್ ನಲ್ಲಿ ಆಗಿರುವ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಭಾರತ ತೀವ್ರ ನಿರಾಸೆ ಹೊಂದಿದೆ. ಸಂಘರ್ಷ ಮತ್ತು ಮಾನವ ಜೀವ ಹಾನಿ ಸಮಸ್ಯೆಗೆ ಉತ್ತರವಾಗಲ್ಲ. ಹಿಂಸಾಚಾರ ಮತ್ತು ಹಗೆತನಗಳನ್ನು ಕೂಡಲೇ ಅಂತ್ಯಗೊಳಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸಬೇಕು ಎಂದು ಮನವಿ ಮಾಡುತ್ತೇವೆ ಎಂದಿದ್ದಾರೆ. ಭಿನ್ನಾಭಿಪ್ರಾಯ, ವಿವಾದಗಳನ್ನು ಬಗೆಹರಿಸಲು ಮಾತುಕತೆಯೇ ಉತ್ತರವಾಗಬೇಕು. ಆದರೆ ಉಕ್ರೇನ್- ರಷ್ಯಾ ಬಿಕ್ಕಟ್ಟಿನಲ್ಲಿ ರಾಜತಾಂತ್ರಿಕ ನಡೆಯನ್ನು ಹೊರತಾಗಿ ಸಂಘರ್ಷಕ್ಕೆ ಮುಂದಾಗಿರುವುದು ಬೇಸರದ ಸಂಗತಿ. ಇದಕ್ಕಾಗಿ ನಾವು ಈ ನಿರ್ಣಯದಿಂದ ದೂರ ನಿಲ್ಲುತ್ತೇವೆ ಎಂದು ಹೇಳಿದ್ದಾರೆ.
15 ಸದಸ್ಯ ರಾಷ್ಟ್ರಗಳ ಭದ್ರತಾ ಮಂಡಳಿ ಸಭೆಯಲ್ಲಿ ಖಂಡನಾ ನಿರ್ಣಯಕ್ಕೆ ಸೋಲಾದರೂ, ರಷ್ಯಾ ವಿರುದ್ಧ ಖಂಡಿಸುವ ವೇದಿಕೆ ಸೃಷ್ಟಿಸಲು ವಿಶ್ವ ರಾಷ್ಟ್ರಗಳು ಯಶಸ್ವಿಯಾಗಿವೆ. ಇಂಗ್ಲೆಂಡ್, ಜರ್ಮನಿ, ಅಮೆರಿಕದ ರಾಯಭಾರಿಗಳು ರಷ್ಯಾ ನಡೆಯನ್ನು ತೀವ್ರವಾಗಿ ಖಂಡಿಸಿ ಹೇಳಿಕೆ ನೀಡಿದ್ದಾರೆ. ರಷ್ಯಾ ಜೊತೆಗೆ ಮಿಲಿಟರಿ ಒಪ್ಪಂದ ಮಾಡಿಕೊಂಡಿರುವ ಭಾರತ ಮತ್ತು ರಷ್ಯಾದ ಆಪ್ತಮಿತ್ರನಾದ ಚೀನಾದ ನಡೆಯ ಬಗ್ಗೆ ಕುತೂಹಲ ಉಂಟಾಗಿತ್ತು.
Russia is waging war on Ukraine, calling it a military operation, Ukraine is ready for destruction. Russian troops confined to eastern Ukraine entered the capital Kiev on Friday. In the meantime, a decision has been taken at the United Nations Security Council to stop the attack on Ukraine and to force Russia to withdraw all its forces.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am