ಬ್ರೇಕಿಂಗ್ ನ್ಯೂಸ್
25-02-22 10:44 pm HK Desk news ದೇಶ - ವಿದೇಶ
ನವದೆಹಲಿ, ಫೆ.25 : ಯುಕ್ರೇನ್ ಮೇಲೆ ದಾಳಿ ಆರಂಭಿಸಿರುವ ರಷ್ಯಾ ಮಿಲಿಟರಿ ಪಡೆ ರಾಜಧಾನಿ ಕೀವ್ ನಗರವನ್ನು ಸುತ್ತುವರಿದಿದೆ. ಕೇವಲ 20 ಮೈಲು ಅಂತರದಲ್ಲಿ ರಷ್ಯಾದ ಮಿಲಿಟರಿಯಿದ್ದು, ಒಂದೇ ದಿನದಲ್ಲಿ ಯುಕ್ರೇನ್ ಮೇಲೆ ಅಧಿಪತ್ಯ ಸಾಧಿಸುವ ಸನ್ನಾಹದಲ್ಲಿದೆ. ಯುಕ್ರೇನ್ ದೇಶದ ರಾಜಧಾನಿ ಕೀವ್ ಸೇರಿದಂತೆ ನಾಲ್ಕು ನಗರಗಳನ್ನು ಗುರಿಯಾಗಿಸಿ ರಷ್ಯಾ ಬಾಂಬ್ ದಾಳಿ ನಡೆಸುತ್ತಿದ್ದು ಯುಕ್ರೇನ್ ಪೂರ್ತಿ ತತ್ತರಿಸಿದೆ.
ನಮ್ಮ ಸಹಾಯಕ್ಕೆ ಯಾರೂ ಬರಲಿಲ್ಲ. ವಿಶ್ವದ ದೊಡ್ಡಣ್ಣ ಅಮೆರಿಕವೂ ನಮ್ಮ ನೆರವಿಗೆ ಬಂದಿಲ್ಲ. ರಷ್ಯಾ ನನ್ನನ್ನೇ ಟಾರ್ಗೆಟ್ ಮಾಡಿದೆ ಎಂದು ಯುಕ್ರೇನ್ ಅಧ್ಯಕ್ಷ ಜೆಲೆನ್ಸ್ಕಿ ಅಳಲು ತೋಡಿಕೊಂಡಿದ್ದು, ರಷ್ಯಾ ಮಿಲಿಟರಿಗೆ ಕೈಗೆ ಸಿಗದಂತೆ ಬಂಕರ್ ಅಡಿ ಅಡಗಿಕೊಂಡಿದ್ದಾರೆ ಎನ್ನಲಾಗುತ್ತಿದೆ. ರಷ್ಯಾ ಒಂದೆಡೆ ದಾಳಿ ನಡೆಸುತ್ತಿದ್ದರೂ. ಯುಕ್ರೇನ್ ಸೈನಿಕರು ರಷ್ಯಾದ ಫೈಟರ್ ವಿಮಾನಗಳನ್ನು ಹೊಡೆದುರುಳಿಸುತ್ತಿದ್ದು ಅದರ ವಿಡಿಯೋ ವೈರಲ್ ಆಗುತ್ತಿದೆ. ಇದಲ್ಲದೆ, ಕೀವ್ ನಗರಕ್ಕೆ ಎಂಟ್ರಿ ಆಗುವ ಸೇತುವೆಯೊಂದನ್ನು ಯುಕ್ರೇನ್ ಸೈನಿಕರು ಹೊಡೆದು ಹಾಕಿದ್ದು, ರಷ್ಯನ್ ಪಡೆ ಒಳಗೆ ಬರದಂತೆ ತಡೆಯುವ ಪ್ರಯತ್ನ ಮಾಡಿದ್ದಾರೆ.
ಇದೇ ವೇಳೆ, ರಷ್ಯಾ ಯುಕ್ರೇನ್ ಮೇಲೆ ಅಪ್ರಚೋದಿತ ಬಾಂಬ್ ದಾಳಿ ನಡೆಸುತ್ತಿರುವ ಬಗ್ಗೆ ವಿಶ್ವ ರಾಷ್ಟ್ರಗಳಿಂದ ಖಂಡನೆ ವ್ಯಕ್ತವಾಗಿದೆ. ಅಮೆರಿಕ, ಯುರೋಪ್ ಸೇರಿದಂತೆ 27 ವಿವಿಧ ರಾಷ್ಟ್ರಗಳು ರಷ್ಯಾದ ಜೊತೆಗಿನ ವ್ಯವಹಾರವನ್ನು ಸ್ಥಗಿತಗೊಳಿಸಿ, ಆರ್ಥಿಕ ನಿರ್ಬಂಧ ಹೇರಿದೆ. ಇದೇ ಸಂದರ್ಭದಲ್ಲಿ ರಷ್ಯಾದ ರಾಜಧಾನಿ ಮಾಸ್ಕೋದಲ್ಲಿಯೇ ಸಾವಿರಾರು ಮಂದಿ ಅಧ್ಯಕ್ಷ ಪುತಿನ್ ನಡೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ. 1500ಕ್ಕೂ ಹೆಚ್ಚು ಮಂದಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದು, ಅವರನ್ನು ರಷ್ಯನ್ ಪೊಲೀಸರು ಬಂಧಿಸಿದ್ದಾರೆ. ರಷ್ಯಾದ ಮಾಜಿ ಚೆಸ್ ದಂತಕಥೆ, ಹಾಲಿ ರಾಜಕಾರಣಿಯಾಗಿರುವ ಗ್ಯಾರಿ ಕ್ಯಾಸ್ಪರೋವ್, ಅಧ್ಯಕ್ಷ ಪುತಿನ್ ನಡೆಗೆ ಕಿಡಿಕಾರಿದ್ದಾರೆ. ಸೋದರ ರಾಷ್ಟ್ರದ ಮೇಲೆ ಬಾಂಬು ದಾಳಿ ನಡೆಸುತ್ತಿರುವುದನ್ನು ಉಗ್ರವಾಗಿ ಖಂಡಿಸಿದ್ದಾರೆ.
ಕ್ರೀಡಾಕೂಟ ಬಹಿಷ್ಕರಿಸಿ- ಒಲಿಂಪಿಕ್ ಫೆಡರೇಶನ್
ವಿಶ್ವ ಒಲಿಂಪಿಕ್ ಫೆಡರೇಶನ್ ಕೂಡ ರಷ್ಯಾ ನಡೆಯನ್ನು ಖಂಡಿಸಿದ್ದು, ರಷ್ಯಾ ಮತ್ತು ಬೆಲಾರಸ್ ನಲ್ಲಿ ಆಯೋಜನೆಯಾಗಿರುವ ವಿವಿಧ ಸ್ಪೋರ್ಟ್ಸ್ ಕೂಟಗಳನ್ನು ಬಹಿಷ್ಕರಿಸುವಂತೆ ವಿವಿಧ ರಾಷ್ಟ್ರಗಳ ಸ್ಪೋರ್ಟ್ಸ್ ಫೆಡರೇಶನ್ ಗಳಿಗೆ ಕರೆ ನೀಡಿದೆ. ಮುಂದಿನ ವರ್ಷ ರಷ್ಯಾದಲ್ಲಿ ಆಯೋಜನೆಗೊಂಡಿರುವ ಕೂಟಗಳಲ್ಲಿ ಕ್ರೀಡಾಪಟುಗಳು ಭಾಗವಹಿಸಬಾರದೆಂದು ಹೇಳಿದೆ. ಇದೇ ವೇಳೆ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಜೊತೆಗೆ ಮಿತ್ರ ರಾಷ್ಟ್ರ ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದು, ಕದನ ವಿರಾಮ ಘೋಷಿಸುವಂತೆ ಹೇಳಿದ್ದಾರೆ. ಆದರೆ ಚೀನಾ ಸಲಹೆಗೆ ಪುತಿನ್, ಯುಕ್ರೇನ್ ಜೊತೆಗೆ ಉನ್ನತ ಮಟ್ಟದ ಮಾತುಕತೆಗೆ ಬಯಸುತ್ತಿರುವುದಾಗಿ ಹೇಳಿದ್ದಾರೆ.
ಮಾತುಕತೆಯಲ್ಲಿ ಸಮಸ್ಯೆ ಬಗೆಹರಿಸಿ- ಚೀನಾ
ಪೂರ್ವ ಯುಕ್ರೇನ್ ಸದ್ಯದ ಸ್ಥಿತಿ ಅಂತಾರಾಷ್ಟ್ರೀಯ ಸಮುದಾಯದ ಆತಂಕಕ್ಕೆ ಕಾರಣವಾಗಿದೆ. ಚೀನಾವು ರಷ್ಯಾ ಮತ್ತು ಯುಕ್ರೇನ್ ನಡುವಿನ ಕಲಹವನ್ನು ಮಾತುಕತೆ ಮೂಲಕ ಅಂತ್ಯಗೊಳಿಸಲು ಬಯಸುತ್ತದೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹೇಳಿದ್ದಾರೆ. ರಷ್ಯಾ ಜೊತೆಗಿನ ಹತ್ತಿರದ ಮಿತ್ರ ರಾಷ್ಟ್ರಗಳಲ್ಲಿ ಚೀನಾ ಒಂದಾಗಿದ್ದು, ಈ ಹಿಂದೆ ಸೋವಿಯತ್ ಯೂನಿಯನ್ ಇದ್ದಾಗಲೂ ಚೀನಾ ಅದರ ಜೊತೆಗಿತ್ತು. ಅಲ್ಲದೆ, ಎದುರಾಳಿ ಅಮೆರಿಕದ ಪ್ರತಿಸ್ಪರ್ಧಿಯೂ ಆಗಿದೆ.
ಇದೇ ವೇಳೆ, ರಷ್ಯಾ ವಿದೇಶಾಂಗ ಸಚಿವ ಹೇಳಿಕೆ ಬಿಡುಗಡೆ ಮಾಡಿದ್ದು, ಯುಕ್ರೇನ್ ಸೈನಿಕರು ಶಸ್ತ್ರ ಕೆಳಗಿಟ್ಟರೆ ಮಾತುಕತೆಗೆ ಸಿದ್ಧ ಎಂದು ಸಂದೇಶ ರವಾನಿಸಿದ್ದಾರೆ. ಆದರೆ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್, ಯುಕ್ರೇನ್ ಸೈನಿಕರಿಗೆ ನಿಮ್ಮ ನಾಯಕನನ್ನು ಕಿತ್ತೆಸೆಯಿರಿ, ಬೇರೊಬ್ಬ ವ್ಯಕ್ತಿಯನ್ನು ಆ ಹುದ್ದೆಗೆ ತನ್ನಿ ಎಂದು ಕರೆ ನೀಡಿದ್ದಾರೆ. ಅಲ್ಲದೆ, ಯುಕ್ರೇನ್ ಸರಕಾರದ ಆಡಳಿತಾಂಗವನ್ನು ಡ್ರಗ್ಸ್ ವ್ಯಸನಿಗಳ ಗ್ಯಾಂಗ್, ನಿಯೋಜಿ ನಾಜಿಗಳು ಎಂದು ಜರೆದಿದ್ದಾರೆ.
Russia's attacks on Ukraine is continuing unabated on the second day, and the capital Kyiv has been targeted in a series of explosions. Reports say Ukrainian forces are engaging with Russian soldiers just outside the capital city. The Ukrainian president has said that 137 people were killed on the first day of Russian invasion, including civilians. Pictures have emerged of some apartment blocks in Kyiv heavily damaged in air strikes.
13-09-25 10:38 pm
Bangalore Correspondent
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
Hassan truck Accident: ಅರಕಲಗೂಡು ; ಗಣೇಶ ಮೆರವಣಿ...
13-09-25 10:19 am
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
13-09-25 11:05 pm
Udupi Correspondent
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm