ಬ್ರೇಕಿಂಗ್ ನ್ಯೂಸ್
20-02-22 06:28 pm HK Desk news ದೇಶ - ವಿದೇಶ
ಕಾಸರಗೋಡು, ಫೆ.20 : ಆರೆಸ್ಸೆಸ್ ಕಾರ್ಯಕರ್ತ ಜ್ಯೋತಿಷ್ ಕುಮಾರ್ ಸಾವಿನ ಬಳಿಕ ಕಾಸರಗೋಡು ಜಿಲ್ಲಾ ಬಿಜೆಪಿ ಘಟಕದಲ್ಲಿ ಎದ್ದಿದ್ದ ಅಸಮಾಧಾನ ಈಗ ಭಿನ್ನಮತದ ಸ್ವರೂಪ ಪಡೆದಿದ್ದು, ತೀವ್ರ ರೀತಿಯಲ್ಲಿ ಸ್ಫೋಟಗೊಂಡಿದೆ. ಇಂದು ಕಾಸರಗೋಡು, ಕುಂಬಳೆ, ಮಂಜೇಶ್ವರ ಮತ್ತು ಉದುಮ ಭಾಗದ ನೂರಾರು ಬಿಜೆಪಿ ಕಾರ್ಯಕರ್ತರು ಜಿಲ್ಲಾ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿದ್ದು, ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ.
ಕೇರಳ ರಾಜ್ಯ ಕಾರ್ಯದರ್ಶಿ ಕೆ.ಶ್ರೀಕಾಂತ್, ಕೇರಳ ಉತ್ತರ ವಿಭಾಗದ ಕಾರ್ಯದರ್ಶಿ ಸುರೇಶ್ ಕುಮಾರ್ ಶೆಟ್ಟಿ, ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಮಣಿಕಂಠ ರೈ ವಿರುದ್ಧ ಕಾರ್ಯಕರ್ತರು ಧಿಕ್ಕಾರ ಕೂಗುತ್ತಾ ಪ್ರತಿಭಟನೆ ನಡೆಸಿದ್ದು, ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿದ್ದಾರೆ. ಈ ಮೂವರನ್ನೂ ಪಕ್ಷದಿಂದ ವಜಾ ಮಾಡಬೇಕೆಂದು ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಕಳೆದ 2020ರ ಡಿಸೆಂಬರ್ ತಿಂಗಳಲ್ಲಿ ಈ ಮೂವರ ವಿರುದ್ಧವೂ ಜಿಲ್ಲಾ ಬಿಜೆಪಿಯಲ್ಲಿ ಅಸಮಾಧಾನ ಉಂಟಾಗಿತ್ತು. ಆನಂತರ, ಚುನಾವಣೆ ಕಳೆದ ಬಳಿಕ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಪಕ್ಷದ ನಾಯಕರು ಹೇಳಿದ್ದರು. ಆದರೆ, ಇವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಅವರನ್ನೇ ಪಕ್ಷದ ಉನ್ನತ ಹುದ್ದೆಗಳಿಗೆ ನೇಮಕ ಮಾಡಲಾಗಿದೆ ಎಂದು ಧರಣಿ ನಿರತರು ಆರೋಪಿಸಿದ್ದಾರೆ.
ಭಿನ್ನಮತ ಸ್ಫೋಟಕ್ಕೇನು ಕಾರಣ ?
ಕುಂಬಳೆ ಪಂಚಾಯತ್ ಆಡಳಿತದಲ್ಲಿ ಇತ್ತೀಚೆಗೆ ಸ್ಥಾಯಿ ಸಮಿತಿ ಅಧ್ಯಕ್ಷ ಹುದ್ದೆಗೆ ಬಿಜೆಪಿ ಬೆಂಬಲದೊಂದಿಗೆ ಸಿಪಿಎಂ ಕಾರ್ಯಕರ್ತ ಕೊಗ್ಗು ಎಂಬಾತನ ಆಯ್ಕೆ ನಡೆದಿತ್ತು. ಆದರೆ, ಕೊಗ್ಗು ಎಂಬ ವ್ಯಕ್ತಿ ಬಿಜೆಪಿ ಕಾರ್ಯಕರ್ತ ವಿಜಯನ್ ಕೊಲೆ ಪ್ರಕರಣದ ಆರೋಪಿಯಾಗಿದ್ದು, ಕಾಸರಗೋಡು ಮತ್ತು ಕುಂಬಳೆ ಭಾಗದ ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ರಾಜಕೀಯ ವಿರೋಧಿಯಾಗಿರುವ ವ್ಯಕ್ತಿಗೆ ಬಿಜೆಪಿ ಬೆಂಬಲ ನೀಡಿದ್ದು, ಕಾರ್ಯಕರ್ತರಲ್ಲಿ ಆಕ್ರೋಶ ಮೂಡಿಸಿತ್ತು. ಇದಕ್ಕೆ ಸುರೇಶ್ ಕುಮಾರ್ ಶೆಟ್ಟಿ, ಆಗ ಜಿಲ್ಲಾಧ್ಯಕ್ಷರಾಗಿದ್ದ ಶ್ರೀಕಾಂತ್ ಕಾರಣ ಎಂಬ ಭಾವನೆ ಕಾರ್ಯಕರ್ತರಲ್ಲಿದ್ದು, ಕಾರ್ಯಕರ್ತರ ಭಾವನೆಗೆ ಬೆಲೆ ಕೊಡದೆ ನಿರ್ಧಾರಕ್ಕೆ ಬಂದಿರುವುದು ಮುನಿಸಿಗೆ ಕಾರಣವಾಗಿತ್ತು.
ಬಿಜೆಪಿ ನಾಯಕರ ಈ ರೀತಿಯ ವರ್ತನೆಯಿಂದ ಕಾಸರಗೋಡು ಅಣಂಗೂರಿನ ಜ್ಯೋತಿಷ್ ಕುಮಾರ್ ಎಂಬ ಕಾರ್ಯಕರ್ತ ತೀವ್ರ ನೊಂದಿದ್ದ. ಕಾಸರಗೋಡಿನ ಮಟ್ಟಿಗೆ ಹಿಂದು ಕಾರ್ಯಕರ್ತರ ಪರವಾಗಿ ಗಟ್ಟಿ ನಿಂತಿದ್ದ ಜ್ಯೋತಿಷ್ ಕುಮಾರ್, ಹಲವು ಬಾರಿ ಸಿಪಿಎಂ ಮತ್ತು ಲೀಗ್ ಕಾರ್ಯಕರ್ತರ ಜೊತೆಗಿನ ಜಟಾಪಟಿಯಲ್ಲಿ ತಲವಾರು ದಾಳಿಗೆ ಒಳಗಾಗಿದ್ದ. ಅಲ್ಲದೆ, ಸಾಕಷ್ಟು ಬಾರಿ ತಲವಾರು ಹಿಡಿದು ಬಿಜೆಪಿ ಕಾರ್ಯಕರ್ತರ ರಕ್ಷಣೆಗೂ ನಿಂತಿದ್ದ ಎನ್ನುವುದನ್ನು ಆತನ ಸಹವರ್ತಿಗಳು ಹೇಳುತ್ತಾರೆ. ಆದರೆ ಬಿಜೆಪಿ ನಾಯಕರು ಮಾತ್ರ ತನ್ನ ಮಾವ ವಿಜಯನ್ ಅವರನ್ನು ಕೊಂದಿದ್ದ ವ್ಯಕ್ತಿಗೆ ಪಂಚಾಯತ್ ಮಟ್ಟದಲ್ಲಿ ಅಧಿಕಾರ ಸ್ಥಾನ ದೊರಕಿಸಿದ್ದು ಜ್ಯೋತಿಷ್ ಗೆ ಆಘಾತ, ವೇದನೆಗೆ ಒಳಗಾಗಿದ್ದ. ಇದೇ ಚಿಂತೆಯಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ, ಕಾರ್ಯಕರ್ತರ ವಲಯದಲ್ಲಿ ಜೋ ಭಾಯ್ ಎಂದೇ ಗುರುತಿಸಲ್ಪಟ್ಟಿದ್ದ ಜ್ಯೋತಿಷ್ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದು ಕಾರ್ಯಕರ್ತರನ್ನು ಕೆರಳುವಂತೆ ಮಾಡಿತ್ತು.
ಜ್ಯೋತಿಷ್ ಸಾವಿನೊಂದಿಗೆ ಬಿಜೆಪಿ ಒಳಗಿನ ಜಿಲ್ಲಾ ನಾಯಕರ ಭಿನ್ನಮತ, ಅಸಮಾಧಾನ ಒಮ್ಮಿಂದೊಮ್ಮೆಲೇ ಭುಗಿಲೆದ್ದಿತ್ತು. ಜಿಲ್ಲಾ ಉಪಾಧ್ಯಕ್ಷ ಪಿ.ರಮೇಶ್ ಆದಿಯಾಗಿ ಹಲವು ಜಿಲ್ಲಾ ಮತ್ತು ಕುಂಬಳೆ, ಮಂಜೇಶ್ವರ ಮಂಡಲದ ನಾಯಕರು ಪಕ್ಷದ ಪದಾಧಿಕಾರಿ ಹುದ್ದೆಗೆ ರಾಜಿನಾಮೆ ನೀಡಿದ್ದರು. ಜ್ಯೋತಿಷ್ ಸಾವಿನಿಂದ ತೀವ್ರ ನೊಂದಿದ್ದ ಕಾರ್ಯಕರ್ತರು, ಪಕ್ಷದ ನಾಯಕರ ವಿರುದ್ಧ ಬಹಿರಂಗವಾಗಿಯೇ ಮಾತನಾಡಲು ಆರಂಭಿಸಿದ್ದರು. ಈ ಬಗ್ಗೆ ರಾಜ್ಯ ಬಿಜೆಪಿ ಅಧ್ಯಕ್ಷ ಸುರೇಂದ್ರನ್ ಬಂದು ಮಾತುಕತೆ ನಡೆಸಬೇಕು ಎನ್ನುವ ಬೇಡಿಕೆ ಮುಂದಿಡಲಾಗಿತ್ತು. ಆದರೆ, ಆರೋಪಕ್ಕೊಳಗಾದ ಶ್ರೀಕಾಂತ್ ಮತ್ತು ಸುರೇಶ್ ಕುಮಾರ್ ಶೆಟ್ಟಿ ರಾಜ್ಯ ಬಿಜೆಪಿಯಲ್ಲಿ ಸುರೇಂದ್ರನ್ ಬಣದಲ್ಲಿಯೇ ಗುರುತಿಸಲ್ಪಟ್ಟವರಾಗಿದ್ದು, ಇವರ ವಿರುದ್ಧದ ಅಸಮಾಧಾನದ ಬೇಡಿಕೆ ಸುರೇಂದ್ರನ್ ಪಾಲಿಗೆ ನುಂಗಲಾರದ ತುತ್ತಾಗಿತ್ತು. ಆದರೂ ಸುರೇಂದ್ರನ್ ಫೆ.20ರಂದು ಕಾಸರಗೋಡಿಗೆ ಬರಲಿದ್ದಾರೆ ಎಂಬ ಮಾಹಿತಿ ಇತ್ತಾದರೂ, ಕಾರ್ಯಕರ್ತರ ಆಕ್ರೋಶದ ಬಗ್ಗೆ ತಿಳಿದು ಬರುವುದನ್ನು ಕೊನೆಕ್ಷಣದಲ್ಲಿ ರದ್ದು ಮಾಡಿದ್ದರು.
ಇದರಿಂದ ತೀವ್ರ ಅಸಮಾಧಾನಗೊಂಡ ಕಾರ್ಯಕರ್ತರು ಜಿಲ್ಲೆಯ ವಿವಿಧೆಡೆಯಿಂದ ಕಾಸರಗೋಡು ಜಿಲ್ಲಾ ಕಚೇರಿಗೆ ಬಂದು ಇಂದು ದಿಢೀರ್ ಆಗಿ ಪ್ರತಿಭಟನಾ ಧರಣಿ ನಡೆಸಿದ್ದಾರೆ. ಬೆಳಗ್ಗೆ 9.30ಕ್ಕೆ ಕರಂದಕ್ಕಾಡ್ ನಲ್ಲಿ ಸೇರಿದ ಕಾರ್ಯಕರ್ತರು ಎರಡೂವರೆ ಗಂಟೆ ಕಾಲ ಧರಣಿ ನಡೆಸಿ, ಬಳಿಕ ಜಿಲ್ಲಾ ಕಚೇರಿಗೆ ಸರಪಣಿಯ ಮೂಲಕ ಬೀಗ ಜಡಿದಿದ್ದಾರೆ. ಪಕ್ಷದ ಕಾರ್ಯಕರ್ತರನ್ನೇ ಕೊಲೆಗೈದ ವ್ಯಕ್ತಿಗೆ ನಾಯಕರು ಬೆಂಬಲ ನೀಡುತ್ತಾರೆಂದರೆ ಏನರ್ಥ ? ಈ ಬಗ್ಗೆ ಸುರೇಂದ್ರನ್ ಬಂದು ತಮ್ಮ ಅಹವಾಲು ಕೇಳಬೇಕು, ನಾಯಕರ ವಿರುದ್ಧ ಕ್ರಮ ಜರುಗಿಸಬೇಕು. ನಮ್ಮ ಪ್ರತಿಭಟನೆ ಬಿಜೆಪಿ ವಿರುದ್ಧ ಅಲ್ಲ. ನಾಯಕರ ವಿರುದ್ಧ ಅಷ್ಟೇ ಎಂದು ಹೇಳಿದ್ದಾರೆ.
ರಾಜ್ಯ ಬಿಜೆಪಿಯ ಶಕ್ತಿಕೇಂದ್ರದಲ್ಲಿ ಭಿನ್ನಮತ
ಇಡೀ ಕೇರಳ ರಾಜ್ಯದಲ್ಲಿ ಬಿಜೆಪಿ ಪಾಲಿಗೆ ಸ್ವಲ್ಪ ಮಟ್ಟಿಗೆ ಬೇಸ್ ಇರುವುದು ಕಾಸರಗೋಡು ಜಿಲ್ಲೆಯಲ್ಲಿ ಮಾತ್ರ. ಕಳೆದ ಎರಡು-ಮೂರು ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಇಲ್ಲಿ ಗೆಲುವಿನ ಹತ್ತಿರ ಬಂದಿದ್ದಲ್ಲದೆ, ಪ್ರತಿಸ್ಪರ್ಧಿಗೆ ತೀವ್ರ ಪೈಪೋಟಿ ನೀಡಿತ್ತು. 2016ರಲ್ಲಿ ಮಂಜೇಶ್ವರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಸುರೇಂದ್ರನ್ ಕೇವಲ 89 ಮತಗಳಿಂದ ಸೋಲುಂಡಿದ್ದರು. ಅಲ್ಲದೆ, ಕಾಸರಗೋಡಿನಲ್ಲಿ ಕಮ್ಯುನಿಸ್ಟ್ ಮತಗಳು ಕೂಡ ಬಿಜೆಪಿಗೆ ಬಂದು ಲೀಗ್ ವಿರುದ್ಧ ಬಿಜೆಪಿಯೇ ಪ್ರತಿಸ್ಪರ್ಧಿ ಎಂಬಷ್ಟರ ಮಟ್ಟಿಗೆ ಪಕ್ಷ ಬೆಳೆದು ನಿಂತಿದೆ.
ಜಿಲ್ಲಾಧ್ಯಕ್ಷ ರವೀಶ ತಂತ್ರಿ ಮೌನ ಯಾಕೆ ?
ಇಷ್ಟೆಲ್ಲ ಬೆಳವಣಿಗೆ ನಡೆಯುತ್ತಿದ್ದರೂ, ಪಕ್ಷದ ಜಿಲ್ಲಾಧ್ಯಕ್ಷ ಹುದ್ದೆಯಲ್ಲಿರುವ ಕುಂಟಾರು ರವೀಶ ತಂತ್ರಿ ಮೌನವಾಗಿದ್ದಾರೆ. ಕಳೆದ ಬಾರಿ ಚುನಾವಣೆ ಸಂದರ್ಭದಲ್ಲಿ ಟಿಕೆಟ್ ಸಿಗದೆ ಅಸಮಾಧಾನಗೊಂಡಿದ್ದ ರವೀಶ ತಂತ್ರಿ, ತಾನು ಪಕ್ಷವನ್ನೇ ಬಿಡುವುದಾಗಿ ಹೇಳಿ ಬಿಜೆಪಿಗೆ ರಾಜಿನಾಮೆ ನೀಡಿದ್ದರು. ಆನಂತರ, ಚುನಾವಣೆಯಾಗಿ ಆರು ತಿಂಗಳಲ್ಲಿ ಮತ್ತೆ ಬಿಜೆಪಿ ಸೇರಿದ್ದ ರವೀಶ ತಂತ್ರಿ ಅವರನ್ನು ಆರೆಸ್ಸೆಸ್ ನಾಯಕರು ಪಕ್ಷದ ಜಿಲ್ಲಾಧ್ಯಕ್ಷನಾಗಿ ನೇಮಕ ಮಾಡಿದ್ದರು. ಜಿಲ್ಲಾ ಬಿಜೆಪಿಯಲ್ಲಿ ಶ್ರೀಕಾಂತ್ ವಿರೋಧಿಯಾಗಿ ಗುರುತಿಸಿರುವ ರವೀಶ ತಂತ್ರಿ ಅವರನ್ನು ನೇರವಾಗಿ ಜಿಲ್ಲಾಧ್ಯಕ್ಷ ಹುದ್ದೆಗೇರಿಸಿದ್ದೂ ಬಿಜೆಪಿ ಒಳಗೆ ಅಸಮಾಧಾನ ಮೂಡಿಸಿತ್ತು. ಚುನಾವಣೆ ಸಂದರ್ಭದಲ್ಲಿ ಪಕ್ಷದಿಂದ ದೂರ ನಿಂತು ಸೈಲಂಟ್ ಆಗಿದ್ದ ವ್ಯಕ್ತಿಯನ್ನು ಅಧ್ಯಕ್ಷ ಸ್ಥಾನಕ್ಕೇರಿಸಿದ್ದು ಆಕ್ಷೇಪಕ್ಕೆ ಕಾರಣವಾಗಿತ್ತು. ಇದೀಗ ಶ್ರೀಕಾಂತ್ ವಿರುದ್ಧವೇ ಮತ್ತೊಂದು ಬಣ ಸಿಟ್ಟಾಗಿದ್ದಲ್ಲದೆ, ರಾಜಿನಾಮೆ ಕೇಳುವಷ್ಟರ ಮಟ್ಟಿಗೆ ಬೆಳೆದಿದ್ದು ಪಕ್ಷದ ಒಳಗೇ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ಸೂಚಿಸಿದೆ.
Protesters in the kasaragod bjp district office party itself have locked up. the bjp workers protested against the cpm-bjp alliance in the kumbala panchayat standing committee elections. the activists protested demanding a solution to the issue by k surendran.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am