ಬ್ರೇಕಿಂಗ್ ನ್ಯೂಸ್
18-02-22 01:13 pm HK Desk news ದೇಶ - ವಿದೇಶ
ನವದೆಹಲಿ, ಫೆ.18 : ಕರ್ನಾಟಕದಲ್ಲಿ ಹಿಜಾಬ್, ಸ್ಕಾರ್ಫ್ ವಿವಾದ ತಾರಕಕ್ಕೇರಿರುವಾಗಲೇ ಬಾಂಗ್ಲಾದೇಶದ ಖ್ಯಾತ ಮುಸ್ಲಿಂ ಲೇಖಕಿ ತಸ್ಲೀಮಾ ನಸ್ರೀನ್, ಹಿಜಾಬ್, ಬುರ್ಖಾ, ನಿಕಾಬ್ ಈ ರೀತಿಯ ಪದ್ಧತಿಗಳು ಮುಸ್ಲಿಂ ಸಮಾಜದಲ್ಲಿ ಮಹಿಳೆಯರ ಮೇಲಿನ ದಬ್ಬಾಳಿಕೆಯ ಪ್ರತೀಕ. ಇದನ್ನು ಮುಸ್ಲಿಂ ಮಹಿಳೆಯರ ಮೇಲೆ ಏಳನೇ ಶತಮಾನದಲ್ಲಿ ಪರ ಪುರುಷರ ಕಣ್ಣಿನಿಂದ ದೂರವಿಡಲು ಹೇರಲಾಗಿತ್ತು ಎಂದು ಪ್ರತಿಪಾದಿಸಿದ್ದಾರೆ.
ಇಂಡಿಯಾ ಟುಡೇ ಟಿವಿಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮುಸ್ಲಿಮರ ಮೂಲಭೂತವಾದ, ಮಹಿಳಾ ಹಕ್ಕುಗಳ ಪರ ಹೋರಾಟ ನಡೆಸುತ್ತಾ ಬಂದಿರುವ ತಸ್ಲೀಮಾ ನಸ್ರೀನ್ ನಿಷ್ಠುರ ವಿಚಾರಗಳನ್ನು ಮುಂದಿಟ್ಟಿದ್ದಾರೆ. ಕರ್ನಾಟಕದ ಹಿಜಾಬ್ ವಿಚಾರದ ಚರ್ಚೆಯ ಬಗ್ಗೆ ಪ್ರತಿಕ್ರಿಯಿಸಿ, ಶಿಕ್ಷಣದ ಹಕ್ಕು ಮತ್ತು ಧಾರ್ಮಿಕ ಹಕ್ಕು ಎರಡೂ ಒಂದೇ. ಅವರೆಡೂ ಸಮಾನ ತಕ್ಕಡಿಯಲ್ಲಿ ಇರುವಂಥವು ಅನ್ನೋದು ನನ್ನ ಭಾವನೆ ಎಂದು ಹೇಳಿದ್ದಾರೆ.
ಕೆಲವು ಮುಸ್ಲಿಮರು ಹಿಜಾಬ್ ಇಸ್ಲಾಮಿನ ಅತ್ಯಗತ್ಯ ಧಾರ್ಮಿಕ ಆಚರಣೆ ಎಂದು ಹೇಳಿದರೆ, ಇನ್ನು ಕೆಲವರು ಅಗತ್ಯ ಧಾರ್ಮಿಕ ಆಚರಣೆ ಅಲ್ಲ ಎಂದು ಹೇಳುತ್ತಾರೆ. ಹಿಜಾಬ್ ಅನ್ನುವುದು ಏಳನೇ ಶತಮಾನದಲ್ಲಿ ಆಚರಣೆಗೆ ಬಂದ ಪದ್ಧತಿ. ಆ ಕಾಲದಲ್ಲಿ ಮಹಿಳೆಯರು ಅಂದರೆ ಕೇವಲ ಭೋಗದ ವಸ್ತು ಎಂದೇ ನೋಡುವ ಪರಿಪಾಠ ಇತ್ತು. ಆಗ ಮಹಿಳೆಯನ್ನು ಒಬ್ಬ ಪುರುಷ ಕಣ್ಣೆತ್ತಿ ನೋಡಿದ ಅಂದರೆ, ಆತನಿಗೆ ಆಕೆಯ ಮೇಲೆ ಲೈಂಗಿಕ ಸಂಬಂಧ ಹೊಂದಲು ಬಯಕೆ ಉಂಟಾಗಿದೆ ಎನ್ನುವ ಅರ್ಥ ಇತ್ತು. ಹಾಗಾಗಿ ಮಹಿಳೆಯರು ಪರ ಪುರುಷನ ಕಣ್ಣಿಗೆ ಬೀಳದಂತೆ ಹಿಜಾಬ್, ಬುರ್ಖಾ ಹಾಕಲು ಶುರು ಮಾಡಿದ್ದರು. ಮಹಿಳೆಯರನ್ನು ಪರ ಪುರುಷನಿಂದ ಕಾಪಾಡಿಕೊಳ್ಳಲು ಪುರುಷರೇ ಇಂಥ ಶೋಷಿತ ಪದ್ಧತಿಯನ್ನು ಜಾರಿಗೆ ತಂದಿದ್ದರು. ಪುರುಷನ ದಬ್ಬಾಳಿಕೆಯ ಕಾರಣಕ್ಕೆ ಅದು ಸಮಾಜದಲ್ಲಿ ಅನಿವಾರ್ಯವಾಗಿ ಹೋಗಿತ್ತು ಎಂದು ತಸ್ಲೀಮಾ ನಸ್ರೀನ್ ಹೇಳಿದ್ದಾರೆ.
ಆದರೆ 21ನೇ ಶತಮಾನದಲ್ಲಿ ಮಹಿಳೆ ಕೂಡ ಪುರುಷನಷ್ಟೇ ಸಮಾನಳು ಎನ್ನುವಂಥ ಭಾವನೆ ಇದೆ. ಅದೇ ರೀತಿ ಶಿಕ್ಷಣ ಪದ್ಧತಿಯೂ ಇದೆ. ಹೀಗಾಗಿ ಈಗಿನ ಕಾಲದಲ್ಲಿ ಬುರ್ಖಾ, ಹಿಜಾಬ್ ಧರಿಸಬೇಕು ಅನ್ನುವುದು ಪುರುಷನ ದಬ್ಬಾಳಿಕೆ ಅಷ್ಟೇ. ಮಹಿಳೆಯ ಅಂಗಗಳನ್ನು ಮುಚ್ಚಿಕೊಳ್ಳಲು ಬುರ್ಖಾ ತೊಡಬೇಕು. ಆದರೆ, ಅದನ್ನು ಮಹಿಳೆಯ ಮೇಲೆ ಹೇರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಜಾತ್ಯತೀತ ಸಮಾಜದಲ್ಲಿ ಶಿಕ್ಷಣವೇ ಧರ್ಮಕ್ಕಿಂತ ಮಿಗಿಲು. ಜಾತ್ಯತೀತ ಸರಕಾರ ಎಲ್ಲರಿಗೂ ಸಮಾನ ಆಗಬಲ್ಲ ಡ್ರೆಸ್ ಕೋಟ್ ಅನ್ನು ಜಾರಿಗೆ ತರಬೇಕು. ಶಾಲೆ, ಕಾಲೇಜುಗಳಲ್ಲಿ ನಿಶ್ಚಿತವಾಗಿರುವ ಸಮವಸ್ತ್ರಗಳನ್ನು ಮಾತ್ರ ಧರಿಸಲು ಅವಕಾಶ ಇರಬೇಕು. ಧಾರ್ಮಿಕ ಆಚರಣೆ, ನಂಬಿಕೆಗಳು ಏನೇ ಇದ್ದರೂ ಅದನ್ನು ಮನೆಯಲ್ಲೇ ಇಟ್ಟುಕೊಳ್ಳಬೇಕು. ಜಾತ್ಯತೀತ ಪದ್ಧತಿ ಪಾಲಿಸುವ ಶಿಕ್ಷಣ ಸಂಸ್ಥೆಗಳಲ್ಲಿ ಬೇರಾವುದೇ ಆಚರಣೆಗಳಿಗೆ ಅನುಮತಿ ಇರಬಾರದು ಎಂದು ತಸ್ಲೀಮಾ ಪ್ರತಿಪಾದಿಸಿದ್ದಾರೆ.
ಜಾತ್ಯತೀತ ಅನ್ನುವ ಪದದ ನೈಜ ಅರ್ಥ ಅಂದರೆ, ಯಾವುದೇ ಧರ್ಮದ ಜೊತೆಗೆ ಸಂಬಂಧ ಇರದೇ ಇರುವುದು. ಎಲ್ಲ ಕಡೆಗೂ ಸಮಾನ ರೀತಿಯ ನಾಗರಿಕ ಸಮಾಜ ಇರುವುದು ಮತ್ತು ಧರ್ಮದ ಜೊತೆಗೆ ಸಂಬಂಧ ಇರದಂತೆ ಕಾನೂನು ರೂಪಿಸುವುದು ಮತ್ತು ಅದನ್ನು ಪಾಲಿಸುವುದು ಆಗಿರುತ್ತದೆ. ಅಲ್ಲದೆ, ಒಬ್ಬ ವ್ಯಕ್ತಿಯ ಗುರುತಿಸುವಿಕೆ ಅನ್ನುವುದು ಆತನ ಧರ್ಮದ ಮೂಲಕ ಗುರುತಿಸುವಂತೆ ಇರಬಾರದು ಎಂದು ತಸ್ಲೀಮಾ ಹೇಳಿದ್ದಾರೆ.
Bangladeshi author Taslima Nasreen has waded into the row over wearing hijab in educational institutions. In an exclusive interview with India Today TV, Taslima Nasreen claimed that hijab, burqa, or niqab are symbols of oppression.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am