ಬ್ರೇಕಿಂಗ್ ನ್ಯೂಸ್
03-02-22 09:50 pm HK Desk news ದೇಶ - ವಿದೇಶ
ಲಕ್ನೋ, ಫೆ.2 : ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಚುನಾವಣೆಗೆ ತಯಾರಿ ನಡೆದಿದೆ. ಫೆ.10ರಂದು 11 ಜಿಲ್ಲೆಗಳ ವ್ಯಾಪ್ತಿಯ 58 ಕ್ಷೇತ್ರಗಳಿಗೆ ನಡೆಯುವ ಮೊದಲ ಹಂತದ ಚುನಾವಣೆಯಲ್ಲಿ 156 ಮಂದಿ ಅಪರಾಧ ಹಿನ್ನೆಲೆಯವರಿದ್ದಾರೆ. ಅದರಲ್ಲೂ 121 ಮಂದಿ ಗಂಭೀರ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.
ಮೊದಲ ಹಂತದಲ್ಲಿ 58 ಕ್ಷೇತ್ರಗಳಲ್ಲಿ 615 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, ಆ ಪೈಕಿ 156 (25 ಶೇ.) ಮಂದಿ ತಮ್ಮ ಅಫಿಡವಿಟ್ ನಲ್ಲಿ ಕ್ರಿಮಿನಲ್ ಕೇಸು ಇರುವ ಬಗ್ಗೆ ಹೇಳಿಕೊಂಡಿದ್ದಾರೆ. 121 ಮಂದಿ ಗಂಭೀರ ಕ್ರಿಮಿನಲ್ ಕೇಸು ಎದುರಿಸುತ್ತಿರುವುದಾಗಿ ಹೇಳಿದ್ದಾರೆ. ಈ ಪೈಕಿ 12 ಮಂದಿ ಮಹಿಳೆಯರ ಮೇಲಿನ ಕಿರುಕುಳ ಪ್ರಕರಣ ಎದುರಿಸುತ್ತಿದ್ದರೆ, ಒಬ್ಬ ಆರ್ ಎಲ್ ಡಿಯಿಂದ ಸ್ಪರ್ಧಿಸುವ ಮೊಹಮ್ಮದ್ ಯೂನುಸ್ ಅತ್ಯಾಚಾರ ಪ್ರಕರಣದ ಆರೋಪಿ. ಆರು ಮಂದಿ ಅಭ್ಯರ್ಥಿಗಳ ವಿರುದ್ಧ ಕೊಲೆ ಪ್ರಕರಣ, 30 ಮಂದಿ ವಿರುದ್ಧ ಕೊಲೆಯತ್ನ ಪ್ರಕರಣಗಳಿವೆ.
ಒಟ್ಟು 58 ಕ್ಷೇತ್ರಗಳ ಪೈಕಿ 31 ಕ್ಷೇತ್ರಗಳು ರೆಡ್ ಎಲರ್ಟ್ ಎದುರಿಸುತ್ತಿವೆ. ಇಲ್ಲೆಲ್ಲ ಮೂರರಿಂದ ನಾಲ್ಕು ಅಭ್ಯರ್ಥಿಗಳು ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದಾರೆ. ಮೀರಜ್ ಜಿಲ್ಲೆಯ ಶಿವಲ್ಕಾಸ್ ಕ್ಷೇತ್ರ ಮತ್ತು ಆಗ್ರಾ ಜಿಲ್ಲೆಯ ಖೇರಾಗಾತ್ ಕ್ಷೇತ್ರದಲ್ಲಿ ತಲಾ ಆರು ಮಂದಿ ಕ್ರಿಮಿನಲ್ ಗಳು ಕಣದಲ್ಲಿದ್ದಾರೆ. ಹಾಪುರ್ ಜಿಲ್ಲೆಯ ಧೋಲಾನಾ, ಗಾಜಿಯಾಬಾದ್ ಜಿಲ್ಲೆಯ ಲೋನಿ, ಶಾಮ್ಲಿಯ ಥಾನಾ ಭವನ್ ಮತ್ತು ಮೀರತ್ ಕ್ಷೇತ್ರದಲ್ಲಿ ತಲಾ ಐದು ಮಂದಿ ಕ್ರಿಮಿನಲ್ ಅಭ್ಯರ್ಥಿಗಳಿದ್ದಾರೆ. ಈ ಪೈಕಿ ಸಮಾಜವಾದಿ ಪಾರ್ಟಿಯ 75 ಶೇ. ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನೆಲೆಯವರು. ಆನಂತರ ಆರ್ ಎಲ್ ಡಿ ಪಕ್ಷದವರು ಹೆಚ್ಚಿದ್ದಾರೆ. ಸಮಾಜವಾದಿಯ 28 ಅಭ್ಯರ್ಥಿಗಳಲ್ಲಿ 21, ಆರ್ ಎಲ್ ಡಿ ಪಕ್ಷದ 29 ಮಂದಿಯಲ್ಲಿ 17 ಮತ್ತು ಬಿಜೆಪಿಯ 59 ಅಭ್ಯರ್ಥಿಗಳಲ್ಲಿ 29 ಮಂದಿ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾರೆ. ಕಾಂಗ್ರೆಸಿನ 58 ಮಂದಿಯಲ್ಲಿ 21 ಮಂದಿ ಕ್ರಿಮಿನಲ್ ಹಿನ್ನೆಲೆಯವರಿದ್ದಾರೆ.
UP elections 2022, As per a report by Uttar Pradesh Election Watch and Association for Democratic Reforms, 121 candidates in Phase 1 have declared serious criminal cases against themselves in their affidavits.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am