ಬ್ರೇಕಿಂಗ್ ನ್ಯೂಸ್
28-01-22 07:11 pm HK Desk news ದೇಶ - ವಿದೇಶ
ಭೋಪಾಲ್, ಜ.28 : ದೇವರು ನನ್ನ ಬ್ರಾ ಸೈಜ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿಕೆ ನೀಡಿ ವಿವಾದಕ್ಕೆ ಒಳಗಾಗಿರುವ ನಟಿ ಶ್ವೇತಾ ತಿವಾರಿ ವಿರುದ್ಧ ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಗರದ ಶ್ಯಾಮಲಾ ಹಿಲ್ಸ್ ಸ್ಟೇಶನ್ನಲ್ಲಿ ಪ್ರಕರಣ ದಾಖಲಾಗಿದೆ.
ಬಿಗ್ ಬಾಸ್ ಸೀಸನ್ –4ರ ವಿನ್ನರ್ ಶ್ವೇತಾ ತಿವಾರಿ, ತನ್ನ ಮುಂಬರುವ ವೆಬ್ ಸಿರೀಸ್ ಪ್ರಚಾರ ಕಾರ್ಯಕ್ರಮದಲ್ಲಿ ಈ ಹೇಳಿಕೆ ನೀಡಿದ್ದಾರೆ. ತಿವಾರಿ ಹೇಳಿಕೆಯ ವಿಡಿಯೋ ವೈರಲ್ ಆಗಿದ್ದು, ಧಾರ್ಮಿಕ ನಂಬಿಕೆಗೆ ಧಕ್ಕೆ ಮಾಡಿದ್ದಾರೆಂದು ಆಕ್ರೋಶ ವ್ಯಕ್ತವಾಗಿದೆ.
ಭೋಪಾಲ್ ನಲ್ಲಿ ನಡೆದ ವೆಬ್ ಸಿರೀಸ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟಿ ಶ್ವೇತಾ ತಿವಾರಿ, ತನ್ನ ಸಹ ನಟನ ಉದ್ದೇಶಿಸಿ ಈ ಹೇಳಿಕೆ ನೀಡಿದ್ದರು. ವೆಬ್ ಸಿರೀಸ್ ನಲ್ಲಿ ಆಕೆಯ ಹೀರೋ ಆಗಿ ಸೌರಭ್ ರಾಜ್ ಜೈನ್ ನಟಿಸುತ್ತಿದ್ದಾರೆ. ಸೌರಭ್ ಈ ಹಿಂದೆ ಮಹಾಭಾರತ ಸೀರಿಯಲ್ ನಲ್ಲಿ ಭಗವಾನ್ ಕೃಷ್ಣನ ಪಾತ್ರ ಮಾಡಿದ್ದರು. ಈಗ ವೆಬ್ ಸಿರೀಸ್ ಧಾರಾವಾಹಿಯಲ್ಲಿ ಸೌರಭ್ ಜೈನ್ ಬ್ರಾ ಫಿಟ್ಟರ್ ಪಾತ್ರ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸೌರಭ್ ಜೈನ್ ಉದ್ದೇಶಿಸಿ ತಿವಾರಿ ಈ ಹೇಳಿಕೆ ನೀಡಿದ್ದರು. ಮೇರೆ ಬ್ರಾ ಕಿ ಸೈಜ್ ಭಗವಾನ್ ಲೇ ರಹೇ ಹೈ ಎಂದು ಪ್ರಶ್ನೆಯೊಂದಕ್ಕೆ ಸಹ ನಟನನ್ನು ಕಿಚಾಯಿಸಿ ಹೇಳಿಕೆ ನೀಡಿದ್ದರು. ಸೌರಭ್ ಜೈನ್ ಈ ಹಿಂದೆ ಭಗವಾನ್ ಕೃಷ್ಣನ ಪಾತ್ರ ಮಾಡಿದ್ದು, ಈಗ ಬ್ರಾ ಸೈಜ್ ತೆಗೆದುಕೊಳ್ಳುವ ಪಾತ್ರ ಮಾಡುತ್ತಿದ್ದಾರೆ ಎಂದು ಅಣಕವಾಡಿದ್ದರು.
ತಿವಾರಿ ಹೇಳಿಕೆಯ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ, ಭೋಪಾಲ್ ಪೊಲೀಸ್ ಕಮಿಷನರ್ ಬಳಿಯಿಂದ ವರದಿ ಕೇಳಿದ್ದಾರೆ. ನಾನು ಆಕೆಯ ಮಾತುಗಳನ್ನು ಕೇಳಿದ್ದೇನೆ. ಈ ಬಗ್ಗೆ ತನಿಖೆ ನಡೆಸಿ 24 ಗಂಟೆಯಲ್ಲಿ ವರದಿ ಕೊಡುವಂತೆ ಪೊಲೀಸ್ ಕಮಿಷನರಿಗೆ ಸೂಚಿಸಿದ್ದೇನೆ. ಈ ಬಗ್ಗೆ ಯಾವ ರೀತಿಯ ಕ್ರಮ ತೆಗೆದುಕೊಳ್ಳಬೇಕೆಂದು ಆನಂತರ ನಿರ್ಧರಿಸುತ್ತೇನೆ ಎಂದು ನರೋತ್ತಮ್ ಮಿಶ್ರಾ ಹೇಳಿದ್ದಾರೆ.
ಶ್ವೇತಾ ತಿವಾರಿ ತನ್ನ ಗ್ಲಾಮರಸ್ ರೋಲ್ ಮತ್ತು ಟಿವಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡು ಉತ್ತರ ಭಾರತದಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಹಿಂದಿ ರಿಯಾಲಿಟಿ ಶೋಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ವೆಬ್ ಸಿರೀಸ್ ನಲ್ಲಿ ಮುಂಚೂಣಿ ಪಾತ್ರದಲ್ಲಿದ್ದು ಅದರ ಪ್ರಚಾರಾರ್ಥ ಭೋಪಾಲ್ ನಲ್ಲಿ ಸಹನಟರೊಂದಿಗೆ ಭೋಪಾಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ್ದರು. ಸಿರೀಸ್ ನಲ್ಲಿ ಸೌರಭ್ ರಾಜ್ ಜೈನ್, ರೋಹಿತ್ ರಾಯ್ ಸೇರಿದಂತೆ ಹಲವು ನಟರು ಅಭಿನಯಿಸಿದ್ದಾರೆ. ಶ್ವೇತಾ ತಿವಾರಿ ನಟಿಸುವ Show Stopper ಎಂಬ ಹೆಸರಿನ ವೆಬ್ ಸಿರೀಸ್ ಸದ್ಯದಲ್ಲೇ ಓಟಿಟಿ ಪ್ಲಾಟ್ ಫಾರಂನಲ್ಲಿ ತೆರೆಗೆ ಬರಲಿದೆ. ವೆಬ್ ಸಿರೀಸ್ ಬಹುತೇಕ ಭೋಪಾಲ್ ನಲ್ಲಿಯೇ ಶೂಟಿಂಗ್ ಆಗಿತ್ತು.
Following her ‘God is measuring my bra’ statement, an FIR has been lodged against actress Shweta Tiwari for allegedly hurting religious sentiments. The case was registered at Shyamala Hills police station in Bhopal Madhya Pradesh. For the uninitiated, the Bigg Boss 4 winner courted controversy over a statement she made during the promotion of her upcoming web series.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am