ಬ್ರೇಕಿಂಗ್ ನ್ಯೂಸ್
27-01-22 10:38 pm HK Desk news ದೇಶ - ವಿದೇಶ
ಚೆನ್ನೈ, ಜ.27 : ತಮಿಳುನಾಡಿನಲ್ಲಿ ಕ್ರಿಸ್ತಿಯನ್ ಮತಾಂತರಕ್ಕೆ ವಿದ್ಯಾರ್ಥಿನಿ ಬಲಿಯಾಗಿದ್ದಾಳೆಂಬ ಪ್ರಕರಣದ ಬಗ್ಗೆ ತೀವ್ರ ತನಿಖೆ ನಡೆದಿದ್ದು ಹೊಸ ವಿಚಾರಗಳು ಮುನ್ನೆಲೆಗೆ ಬಂದಿದೆ. ಮತಾಂತರ ವಿಚಾರ ಮುಂದಿಟ್ಟು ಬಿಜೆಪಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ವಿದ್ಯಾರ್ಥಿನಿ ಲಾವಣ್ಯ ಸಾವಿನ ವಿಚಾರದ ಬಗ್ಗೆ ರಾಜ್ಯ ಸರಕಾರ ತನಿಖೆಗೆ ಆದೇಶ ಮಾಡಿತ್ತು. ಯುವತಿ ಸಾವನ್ನಪ್ಪುವ ಎರಡು ದಿನ ಮೊದಲೇ ರೆಕಾರ್ಡ್ ಮಾಡಿದ್ದ ವಿಡಿಯೋ ವೈರಲ್ ಆಗಿದ್ದು ಮತಾಂತರದ ಬಗ್ಗೆ ಆಕ್ರೋಶ ಭುಗಿಲೇಳುವಂತೆ ಮಾಡಿತ್ತು. ವಿಡಿಯೋದಲ್ಲಿ ವಿದ್ಯಾರ್ಥಿನಿ ತನ್ನನ್ನು ಸಿಸ್ಟರ್ ಒಬ್ಬರು, ಮತಾಂತರಕ್ಕೆ ಯತ್ನಿಸಿದ್ದರು ಎಂಬ ಬಗ್ಗೆ ಹೇಳಿಕೆ ನೀಡಿದ್ದು ರಾದ್ಧಾಂತವನ್ನೇ ಸೃಷ್ಟಿಸಿತ್ತು.
ಈ ಬಗ್ಗೆ ಹೈಕೋರ್ಟಿಗೂ ದೂರು ದಾಖಲಾಗಿದ್ದು, ಯುವತಿ ಹೆತ್ತವರು ಸಿಐಡಿ ತನಿಖೆಗೆ ಆಗ್ರಹ ಮಾಡಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ವಿಡಿಯೋ ಚಿತ್ರೀಕರಿಸಿದ ವ್ಯಕ್ತಿಯನ್ನು ಪತ್ತೆ ಮಾಡುವಂತೆ ಆದೇಶ ಮಾಡಿತ್ತು. ಈ ಬಗ್ಗೆ ಹಿಂದುಸ್ತಾನ್ ಟೈಮ್ಸ್ ವಿಶೇಷ ವರದಿಯೊಂದನ್ನು ಪ್ರಕಟಿಸಿದ್ದು, ಅದರ ಪ್ರಕಾರ ಯುವತಿ ಸಾವನ್ನಪ್ಪಿದ ಎರಡು ದಿನ ಮೊದಲು ವಿಶ್ವ ಹಿಂದು ಪರಿಷತ್ ಸಂಘಟನೆಗೆ ಸೇರಿದ ವ್ಯಕ್ತಿಯೊಬ್ಬ ಆಕೆಯ ಹೇಳಿಕೆಯನ್ನು ರೆಕಾರ್ಡ್ ಮಾಡಿದ್ದಾನೆ. ಆ ವಿಡಿಯೋವನ್ನು ಯುವತಿ ಸಾವನ್ನಪ್ಪಿದ ಎರಡು ದಿನಗಳ ಬಳಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದ. ವಿದ್ಯಾರ್ಥಿನಿ ಸಾವಿಗೆ ಬಲವಂತದ ಮತಾಂತರ ಕಾರಣ ಎನ್ನುವ ಬಗ್ಗೆ ವಿಡಿಯೋ ವೈರಲ್ ಆಗುತ್ತಿದ್ದಂತೆ ಆಕ್ರೋಶ ಕೇಳಿಬಂದಿತ್ತು. ಅಲ್ಲದೆ, ಆ ವಿಡಿಯೋವನ್ನು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ ತನ್ನ ಟ್ವಿಟರ್ ಖಾತೆಯಲ್ಲಿ ಷೇರ್ ಮಾಡಿದ್ದರು.
2019ರಲ್ಲಿ ಕ್ರಿಸ್ತಿಯನ್ ಪಾದ್ರಿಗಳ ಮೇಲಿನ ಹಲ್ಲೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ವಿಶ್ವ ಹಿಂದು ಪರಿಷತ್ತಿನ ಮುತ್ತುವೇಲು ಎಂಬಾತ ವಿದ್ಯಾರ್ಥಿನಿಯನ್ನು ಜ.17ರಂದು ಆಸ್ಪತ್ರೆಯಲ್ಲಿ ಭೇಟಿಯಾಗಿದ್ದು, ಆಕೆಯ ಮಾತುಗಳನ್ನು ರೆಕಾರ್ಡ್ ಮಾಡಿದ್ದ. ಎರಡು ವರ್ಷಗಳ ಹಿಂದೆ ಸಿಸ್ಟರ್ ಒಬ್ಬರು ಭೇಟಿಯಾಗಿ ಕ್ರಿಸ್ತಿಯನ್ ಆಗಿ ಮತಾಂತರ ಆಗಲು ಒತ್ತಡ ಹೇರಿದ್ದು ಮತ್ತು ಮತಾಂತರಗೊಂಡರೆ ಉಚಿತ ಶಿಕ್ಷಣ ನೀಡುವುದಾಗಿ ಹೇಳಿದ್ದರೆಂಬ ವಿದ್ಯಾರ್ಥಿನಿಯ ಮಾತು ಅದರಲ್ಲಿತ್ತು. ಆದರೆ ಮತಾಂತರ ವಿಚಾರದ ಬಗ್ಗೆ ವಿಡಿಯೋ ರೆಕಾರ್ಡ್ ಮಾಡಿದ್ದ ವ್ಯಕ್ತಿ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ.
ಇದಕ್ಕೂ ಮುನ್ನ ಜ.16ರಂದು ಪೊಲೀಸರು, ತಹಸೀಲ್ದಾರ್ ಮತ್ತು ವೈದ್ಯರ ಸಮ್ಮುಖದಲ್ಲಿ ಯುವತಿಯ ಹೇಳಿಕೆ ದಾಖಲು ಮಾಡಿದ್ದರು. ಅದರಲ್ಲಿ ಹಾಸ್ಟೆಲ್ ನಲ್ಲಿ ವಾರ್ಡನ್ ಕಿರುಕುಳದ ಬಗೆಗಷ್ಟೇ ಹೇಳಿದ್ದಳು. ವಾರ್ಡನ್ ನನ್ನಲ್ಲಿ ಗುಡಿಸುವುದು ಇನ್ನಿತರ ಕೆಲಸಗಳನ್ನು ಮಾಡಿಸುತ್ತಿದ್ದರು. ಬೆಳಗ್ಗೆ ಮತ್ತು ಸಂಜೆ ಗೇಟ್ ಓಪನ್ ಮಾಡುವುದು, ಬಂದ್ ಮಾಡುವುದನ್ನು ಮಾಡಬೇಕಿತ್ತು. ಅಲ್ಲದೆ, ಹಾಸ್ಟೆಲಿನ ಲೆಕ್ಕಪತ್ರಗಳನ್ನು ನನ್ನಲ್ಲಿ ಮಾಡಿಸುತ್ತಿದ್ದರು. ಲೆಕ್ಕವನ್ನು ಸರಿಯಾಗಿ ಮಾಡಿಕೊಟ್ಟರೂ, ಅದು ಸರಿಯಾಗಿಲ್ಲವೆಂದು ಹೇಳಿ ಮತ್ತೊಮ್ಮೆ ಮಾಡುವಂತೆ ಒತ್ತಡ ಹೇರುತ್ತಿದ್ದರು. ನನಗೆ ಓದಲು ಇದೆಯೆಂದು ಹೇಳಿದರೂ, ಕೇಳುತ್ತಿರಲಿಲ್ಲ ಎಂದು ಹೇಳಿದ್ದಳು. ವಾರ್ಡನ್ ನನಗೆ ಹೊಡೆಯುತ್ತಿದ್ದರು. ಹೋಗಿ ಸಾಯು.. ಎಂದು ಗದರುತ್ತಿದ್ದರು. ನನ್ನ ಸಾವಿಗೆ ಆಕೆಯೇ ಕಾರಣ ಎಂದು ಯುವತಿ ಹೇಳಿಕೆ ನೀಡಿದ್ದು ಅದನ್ನು ಆಧರಿಸಿ ಹಾಸ್ಟೆಲ್ ವಾರ್ಡನನ್ನು ಪೊಲೀಸರು ಬಂಧಿಸಿದ್ದರು.
ಆದರೆ ಯುವತಿ ಸಾವಿನ ಎರಡು ದಿನಗಳ ಬಳಿಕ ಬೇರೆಯದ್ದೇ ವಿಡಿಯೋ ವೈರಲ್ ಆಗಿದ್ದಲ್ಲದೆ, ಕ್ರಿಸ್ತಿಯನ್ ಮತಾಂತರದ ಬಗ್ಗೆ ಆಕ್ರೋಶ ಎದ್ದಿತ್ತು. ಈಗ ಎರಡು ಮಾದರಿಯ ವಿಡಿಯೋ ವೈರಲ್ ಆಗಿದ್ದು, ಒಂದರಲ್ಲಿ ಪೊಲೀಸರಿಗೆ ನೀಡಿರುವ ಹೇಳಿಕೆಯ ಮಾದರಿಯಲ್ಲೇ ಹಾಸ್ಟೆಲ್ ವಾರ್ಡನ್ ಕಿರುಕುಳದ ಬಗ್ಗೆ ಹೇಳಿದ್ದಾಳೆ. ಮತ್ತೊಂದು 45 ಸೆಕೆಂಡಿನ ವಿಡಿಯೋದಲ್ಲಿ ಬಲವಂತದ ಮತಾಂತರ ಮತ್ತು ಈ ಬಗ್ಗೆ ಹೆತ್ತವರು ನಿರ್ಲಕ್ಷ್ಯ ವಹಿಸಿದ್ದ ಬಗ್ಗೆ ಮಾಹಿತಿಗಳಿದ್ದವು. ಈ ವಿಡಿಯೋವನ್ನು ಮೊಬೈಲ್ ಹಿಡಿದಿದ್ದ ವ್ಯಕ್ತಿಯೇ ಪ್ರಶ್ನೆ ಮಾಡಿ, ರೆಕಾರ್ಡ್ ಮಾಡಿದ್ದು ಮೇಲ್ನೋಟಕ್ಕೆ ಕಂಡುಬಂದಿತ್ತು. ವಿಡಿಯೋ ಮಾತ್ರ ತಮಿಳುನಾಡಿನಲ್ಲಿ ವಿವಾದವನ್ನೇ ಹುಟ್ಟುಹಾಕಿತ್ತು.
ಈಗಾಗ್ಲೇ ವಿಡಿಯೋ ರೆಕಾರ್ಡ್ ಮಾಡಿದ ಮೊಬೈಲನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮದ್ರಾಸ್ ಹೈಕೋರ್ಟ್, ಮೊಬೈಲನ್ನು ಫಾರೆನ್ಸಿಕ್ ಅಧ್ಯಯನಕ್ಕೆ ಒಳಪಡಿಸಲು ಸೂಚಿಸಿದ್ದು ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಹೇಳಿದೆ. ಆದರೆ ಪ್ರಕರಣದ ತನಿಖೆ ಸಾವಿನ ಕಾರಣವನ್ನು ಪತ್ತೆ ಮಾಡುವುದಷ್ಟೇ ಆಗಿರಬೇಕು ಎಂದು ಸೂಚನೆ ನೀಡಿದೆ. ಮುತ್ತುವೇಲು ಆಸ್ಪತ್ರೆಗೆ ಭೇಟಿ ನೀಡಿದ್ದಾಗ, ಮತಾಂತರದ ವಿಚಾರವನ್ನು ವಿದ್ಯಾರ್ಥಿನಿಯೇ ಹೇಳಿದ್ದಳಂತೆ. ಅದನ್ನು ಆಕೆಯ ಹೆತ್ತವರ ಸೂಚನೆಯಂತೆ ರೆಕಾರ್ಡ್ ಮಾಡಿದ್ದಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ಅಲ್ಲದೆ, ವಿದ್ಯಾರ್ಥಿನಿಯ ಮಾವ ಹಿಂದು ಸಂಘಟನೆಯ ಸದಸ್ಯರ ಗೆಳೆಯನಾಗಿದ್ದ. ಹಾಗಾಗಿ ಮುತ್ತುವೇಲು ವಿಷಯ ತಿಳಿದು ಗೆಳೆಯರ ಜೊತೆ ಆಸ್ಪತ್ರೆಗೆ ಭೇಟಿ ನೀಡಿದ್ದ ಎನ್ನುವುದನ್ನು ಪೊಲೀಸರು ಹೇಳುತ್ತಾರೆ.
ಪೊಲೀಸರು ರೆಕಾರ್ಡ್ ಮಾಡಿರುವ ವಿಡಿಯೋದಲ್ಲಿ ವಿದ್ಯಾರ್ಥಿನಿ ಕೀಟನಾಶಕ ಸೇವಿಸಿರುವ ಬಗ್ಗೆ ಹೇಳಿಕೆ ನೀಡಿದ್ದಳು. ಜನವರಿ 9ರಂದು ಹಾಸ್ಟೆಲ್ ನಲ್ಲಿದ್ದಾಗ ಕೀಟನಾಶಕ ಸೇವಿಸಿದ್ದೆ. ಆನಂತರ ವಾಂತಿ ಮಾಡಿದ್ದು, ಮರುದಿನ ನನ್ನನ್ನು ವಾರ್ಡನ್ ಮನೆಗೆ ಕಳಿಸಿಕೊಟ್ಟಿದ್ದರು. ಮನೆಯಲ್ಲೂ ವಾಂತಿ ಮಾಡಿದ್ದು, ಜನವರಿ 15ರಂದು ಆಸ್ಪತ್ರೆಗೆ ಒಯ್ದಿದ್ದಾರೆ. ಆದರೆ ನಾನು ಕೀಟನಾಶಕ ಸೇವಿಸಿದ್ದ ಬಗ್ಗೆ ಮನೆಯಲ್ಲಾಗಲೀ, ಹಾಸ್ಟೆಲಿನಲ್ಲಾಗಲೀ ಹೇಳಿರಲಿಲ್ಲ ಎಂಬುದಾಗಿ ಜನವರಿ 16ರಂದು ನೀಡಿದ್ದ ಹೇಳಿಕೆಯಲ್ಲಿ ದಾಖಲಾಗಿತ್ತು. ನಾಲ್ಕು ದಿನಗಳ ನಂತರ ಆಕೆ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಳು.
ಇದಲ್ಲದೆ, ಪೊಲೀಸರ ತನಿಖೆಯಲ್ಲಿ ಯುವತಿಯ ತಾಯಿ ತೀರಿಕೊಂಡಿದ್ದ ವಿಚಾರವೂ ಹೊರಬಂದಿದೆ. ಮನೆಯಲ್ಲಿ ತಂದೆ ಮೊದಲ ಪತ್ನಿ ತೀರಿಕೊಂಡ ಬಳಿಕ ಇನ್ನೊಬ್ಬಳನ್ನು ಮದುವೆಯಾಗಿದ್ದ. ಆದರೆ ಮಲತಾಯಿ, ಲಾವಣ್ಯಳನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಆಕೆಯ ಮೇಲೆ ಹಲ್ಲೆ ನಡೆಸುತ್ತಿದ್ದಳು. ಹೀಗಾಗಿ ಕಾಲೇಜಿಗೆ ರಜೆ ಇದ್ದರೂ, ಲಾವಣ್ಯ ಮನೆಗೆ ಹೋಗಲು ಬಯಸುತ್ತಿರಲಿಲ್ಲ. ಹಾಸ್ಟೆಲಿನಲ್ಲಿಯೇ ಇರುತ್ತಿದ್ದಳು. ಈ ಬಗ್ಗೆ ಸಹಪಾಠಿ ಗೆಳತಿಯರ ಜೊತೆ ಹೇಳಿಕೊಂಡಿದ್ದಳು. ಆಕೆ ತುಂಬ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದಳು. ಆಕೆಯಲ್ಲಿ ಹಾಸ್ಟೆಲ್ ಕೆಲಸಗಳನ್ನು ವಾರ್ಡನ್ ಮಾಡಿಸುತ್ತಿದ್ದರು ಎಂದು ಸಹವರ್ತಿ ವಿದ್ಯಾರ್ಥಿನಿಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಂಜಾವೂರಿನ ಕ್ರಿಸ್ತಿಯನ್ ವಸತಿ ಶಾಲೆಯಲ್ಲಿ ಲಾವಣ್ಯ ಪಿಯು ಕಲಿಯುತ್ತಿದ್ದಾಗ ಘಟನೆ ನಡೆದಿತ್ತು. ಹೀಗಾಗಿ ಬಿಜೆಪಿ ನಾಯಕರು, ಹಿಂದುಳಿದ ವರ್ಗದ ಹಿಂದುಗಳನ್ನು ಗುರಿಯಾಗಿಸಿ ಕ್ರಿಸ್ತಿಯನ್ ಮಿಶನರಿಗಳು ಮತಾಂತರ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಬಲವಂತದ ಮತಾಂತರದ ಕಾರಣ ವಿದ್ಯಾರ್ಥಿನಿ ಸಾವಿಗೆ ಶರಣಾಗಿದ್ದಾಳೆ ಎಂದು ಆರೋಪ ಮಾಡಿದ್ದರು. ಈ ರೀತಿಯ ಘಟನೆಗಳು ಕೆಲವು ಕಡೆ ನಡೆಯುತ್ತಿದ್ದರೂ, ವಿದ್ಯಾರ್ಥಿನಿ ಸಾವು ಮತಾಂತರ ಕಾರಣಕ್ಕಾಗಿ ನಡೆದಿರಲಿಲ್ಲ ಎನ್ನುವ ಅಂಶ ತನಿಖೆಯಲ್ಲಿ ಕಂಡುಬಂದಿದೆ. ಆದರೆ ಯುವತಿ ಹೆತ್ತವರು ಮಾತ್ರ ಹೈಕೋರ್ಟಿಗೆ ರಿಟ್ ಅರ್ಜಿ ಸಲ್ಲಿಸಿ, ಮತಾಂತರ ಕಾರಣಕ್ಕಾಗಿಯೇ ಮಗಳು ಸಾವನ್ನಪ್ಪಿದ್ದಾಗಿ ಹೇಳಿಕೆ ನೀಡಿದ್ದು, ಸಿಐಡಿ ತನಿಖೆಗೆ ಆಗ್ರಹ ಮಾಡಿದ್ದಾರೆ.
A video clip made two days before the death of a 17-year-old tribal girl in Tamil Nadu’s Ariyalur district, sparking claims by the Bharatiya Janata Party (BJP) that she died due to forced conversion, was filmed by P Muthuvel, a member of the Vishva Hindu Parishad (VHP), HT has found.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am