ಬ್ರೇಕಿಂಗ್ ನ್ಯೂಸ್
26-01-22 12:33 pm DK Desk news ದೇಶ - ವಿದೇಶ
ಹೊಸದಿಲ್ಲಿ, ಜ 26: ಮೈಕ್ರೋಸಾಫ್ಟ್ ಚೇರ್ಮ್ಯಾನ್ ಹಾಗೂ ಸಿಇಒ ಸತ್ಯ ನಾದೆಳ್ಲ ಹಾಗೂ ಆಲ್ಫಾಬೆಟ್ ಮತ್ತು ಗೂಗಲ್ ಸಿಇಒ ಸುಂದರ್ ಪಿಚ್ಚೈ ಅವರಿಗೆ ಭಾರತ ಸರ್ಕಾರ, ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಭೂಷಣ ಘೋಷಣೆ ಮಾಡಿದೆ. ಸದ್ಯ ಅಮೆರಿಕದ ಪ್ರಜೆಗಳಾಗಿರುವ ಇವರಿಬ್ಬರೂ ಕೂಡ ಭಾರತೀಯ ಮೂಲದವರು.
ಜನನವರಿ 25 ರಂದು ಪದ್ಮ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗಿದ್ದು, ಸತ್ಯ ನಾದೆಳ್ಲ ಹಾಗೂ ಸುಂದರ್ ಪಿಚ್ಚೈ ಅವರ ಹೆಸರೂ ಇದೆ. ಇವರೊಂದಿಗೆ ಟಾಟಾ ಸನ್ಸ್ ಸಂಸ್ಥೆಯ ಅಧ್ಯಕ್ಷ ನಟರಾಜನ್ ಚಂದ್ರಶೇಖರನ್, ಭಾರತದ ಪ್ರಮುಖ ಎರಡು ಕೋವಿಡ್ ಲಸಿಕೆಯ ಮುಖ್ಯಸ್ಥರಾದ ಸೀರಂ ಇನ್ಸ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸೈರಸ್ ಪೂನಾವಾಲ ಹಾಗೂ ಭಾರತ್ ಬಯೋಟೆಕ್ನ ಸುಚಿತ್ರಾ ಎಲ್ಲಾ ಅವರಿಗೂ ಪದ್ಮಭೂಷಣ ಪ್ರಾಪ್ತವಾಗಿದೆ.
ಭಾರತ ರತ್ನ, ಪದ್ಮ ವಿಭೂಷಣ ಪ್ರಶಸ್ತಿಗಳ ಬಳಿಕ ನಾಗರಿಕರಿಗೆ ಕೊಡ ಮಾಡುವ ಭಾರತದ ಮೂರನೇ ಸರ್ವೋಚ್ಚ ಪ್ರಶಸ್ತಿಯಾಗಿದೆ ಪದ್ಮಭೂಷಣ. ಹೈದರಾಬಾದ್ ಮೂಲದವರಾಗಿರುವ 54 ವರ್ಷದ ಸತ್ಯ ನಾದೆಳ್ಲ, 2014 ರಿಂದ ಮೈಕ್ರೋಸಾಫ್ಟ್ನ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಯಾಗಿದ್ದಾರೆ.
ಗೂಗಲ್ ಹಾಗೂ ಅಲ್ಫಾಬೆಟ್ನ ಸಿಇಒ ಆಗಿರುವ 49 ವರ್ಷದ ಸುಂದರ್ ಪಿಚ್ಚೈ ತಮಿಳುನಾಡಿನ ಚೆನ್ನೈ ಮೂಲದವರ. 2019ರಲ್ಲಿ ಗೂಗಲ್ ಹಾಗೂ ಆಲ್ಫಾಬೆಟ್ನ ಸಿಇಒ ಆಗಿ ಅಧಿಕಾರ ವಹಿಸಿಕೊಂಡಿರುವ ಪಿಚ್ಚೈ, ಗೂಗಲ್ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ವಿಶ್ವದಲ್ಲೇ ಅತೀ ಹೆಚ್ಚು ಮೌಲ್ಯ ಇರುವ ಕಂಪನಿಗಳ ಪೈಕಿ ಅಲ್ಫಾಬೆಟ್ ನಾಲ್ಕನೇ ಸ್ಥಾನದಲ್ಲಿದೆ.
ರಿಲಯನ್ಸ್ ಬಳಿಕ ದೇಶದ ಅತೀ ದೊಡ್ಡ ಕಂಪನಿಯಾಗಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ (ಟಿಸಿಎಸ್ನ) ಅಧ್ಯಕ್ಷರಾಗಿರುವ ಚಂದ್ರಶೇಖರ್ ಅವರಿಗೂ ಪದ್ಮಭೂಷಣ ಪ್ರಾಪ್ತವಾಗಿದೆ. ಅವರ ಅಧ್ಯಕ್ಷತೆಯಲ್ಲೇ ಟಾಟಾ ಸಮೂಹ ಸರ್ಕಾರಿ ಸ್ವಾಮ್ಯದಲ್ಲಿದ್ದ ದೇಶದ ಪ್ರಮುಖ ವಿಮಾನಯಾನ ಕಂಪನಿ ಏರ್ ಇಂಡಿಯಾವನ್ನು ಖರೀದಿ ಮಾಡಿತ್ತು.
ಕೋವಿಶೀಲ್ಡ್ ಲಸಿಕೆ ತಯಾರಿಸುವ ಹಾಗೂ ವಿಶ್ವದ ಅತೀ ದೊಡ್ಡ ಲಸಿಕೆ ತಯಾರಿಕಾ ಕಂಪನಿಯಾಗಿರುವ ಪುಣೆಯ ಸೀರಂ ಇನ್ಸ್ಸ್ಟಿಟ್ಯೂಟ್ ಆಫ್ ಇಂಡಿಯಾದ ಅಧ್ಯಕ್ಷ ಹಾಗೂ ಎಂಡಿ ಆಗಿರುವ ಸೈರಸ್ ಪೂನಾವಾಲ ಅವರಿಗೂ ಉದ್ಯಮ ವಿಭಾಗದಲ್ಲಿ ಪದ್ ಭೂಷಣ ಘೋಷಣೆಯಾಗಿದೆ.
ಕೋವ್ಯಾಕ್ಸಿನ್ ತಯಾರಿಸುವ ಭಾರತ್ ಬಯೋಟೆಕ್ನ ಅಧ್ಯಕ್ಷ ಹಾಗೂ ಎಂಡಿ ಆಗಿರುವ ಕೃಷ್ಣ ಎಲ್ಲಾ ಹಾಗೂ ಜಂಟಿ ಎಂಡಿ ಆಗಿರುವ ಸುಚಿತ್ರಾ ಎಲ್ಲಾ ಅವರೂ ಪದ್ಮಭೂಷಣ ಗೌರವಕ್ಕೆ ಪಾತ್ರರಾಗಿದ್ದಾರೆ.
The central government on Tuesday announced the names of Padma awardees. Among industry leaders, Microsoft CEO Satya Nadella, Google CEO Sundar Pichai, chairperson of Tata Group Natarajan Chandrasekaran were conferred Padma Bhushan, the third-highest civilian award. Olympic gold medallist Neeraj Chopra and singer Sonu Nigam received the Padma Shri.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am