ಬ್ರೇಕಿಂಗ್ ನ್ಯೂಸ್
26-01-22 12:11 pm HK Desk news ದೇಶ - ವಿದೇಶ
ನವದೆಹಲಿ, ಜ 26 : ಇತ್ತೀಚೆಗೆ ತುಮಕೂರಿನಲ್ಲಿ ರೈತನೊಬ್ಬ ಬೊಲೆರೋ ಪಿಕ್ಅಪ್ ಖರೀದಿಸಲು ಶೋರೂಮ್ಗೆ ಹೋಗಿದ್ದಾಗ ಅಲ್ಲಿನ ಸೇಲ್ಸ್ಮ್ಯಾನ್ ರೈತನ ಯೋಗ್ಯತೆ ಬಗ್ಗೆ ಪ್ರಶ್ನಿಸಿದ ಘಟನೆ ರಾಷ್ಟ್ರಮಟ್ಟದಲ್ಲಿ ದೊಡ್ಡಸುದ್ದಿಯಾಗಿತ್ತು.
ಇದೀಗ ಸ್ವತ ಮಹೀಂದ್ರ ಕಂಪನಿಯ ಸಿಇಒ ಆನಂದ್ ಮಹಿಂದ್ರಾ ಈ ವಿಚಾರವಾಗಿ ವಿಷಾದ ವ್ಯಕ್ತಪಡಿಸಿದ್ದು ಟ್ವೀಟ್ ನಲ್ಲಿ ತಮ್ಮ ಸಂದೇಶವನ್ನು ಹಂಚಿಕೊಂಡಿದ್ದಾರೆ.
ವ್ಯಕ್ತಿಯ ಘನತೆಯನ್ನು ಎತ್ತಿ ಹಿಡಿಯುವ ಮಹತ್ವದ ಬಗ್ಗೆ ಆನಂದ್ ಮಹಿಂದ್ರಾ ಒತ್ತಿ ಹೇಳಿದ್ದಾರೆ. ಮಹಿಂದ್ರಾ ಕಂಪನಿಯ ಮುಖ್ಯ ಉದ್ದೇಶ ಸಮುದಾಯ ಹಾಗೂ ಎಲ್ಲಾ ಪಾಲುದಾರರನ್ನು ಹೆಚ್ಚಿಸಲು ಅನುವು ಮಾಡಿ ಕೊಡುವುದು. ವ್ಯಕ್ತಿಯ ಘನತೆಯನ್ನು ಎತ್ತಿ ಹಿಡಿಯುವುದು ಒಂದು ಪ್ರಮುಖ ಮೌಲ್ಯವಾಗಿದೆ. ಘಟನೆಯ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ. ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ಗ್ರಾಹಕರನ್ನು ಗೌರವಿಸುವ ನಮ್ಮ ನಿಯಮದಿಂದ ಯಾವುದೇ ಡೀಲರ್ ದೂರ ಸರಿದಿರುವುದು ದೃಢಪಟ್ಟರೆ ನಮ್ಮ ಸಿಬ್ಬಂದಿಗೆ ತರಬೇತಿ ಕೊಡಿಸುವುದು, ಕೌನ್ಸೆಲಿಂಗ್ ಮಾಡಿಸುವುದು ಸೇರಿದಂತೆ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
The Core Purpose of @MahindraRise is to enable our communities & all stakeholders to Rise.And a key Core Value is to uphold the Dignity of the Individual. Any aberration from this philosophy will be addressed with great urgency. https://t.co/m3jeCNlV3w
— anand mahindra (@anandmahindra) January 25, 2022
ಕಳೆದ ವಾರ ತುಮಕೂರು ಮೂಲದ ರೈತನೊಬ್ಬ ಬೊಲೆರೋ ಪಿಕ್ಅಪ್ ಟ್ರಕ್ ಖರೀದಿಸಲು ಶೋರೂಮ್ಗೆ ತೆರಳಿದ್ದ. ಆದರೆ ಶೋರೂಮ್ನ ಸೇಲ್ಸ್ಮ್ಯಾನ್ 10 ಲಕ್ಷ ರೂ.ಯ ಕಾರ್ ಅನ್ನು ಖರೀದಿಸಲು 10 ರೂ. ನಿನ್ನ ಬಳಿ ಇಲ್ಲ ಎಂದು ವ್ಯಂಗ್ಯ ಮಾಡಿದ್ದ. ಇದನ್ನು ರೈತ ಸವಾಲಾಗಿ ತೆಗೆದುಕೊಂಡು ಕೇವಲ ಒಂದು ಗಂಟೆಯಲ್ಲಿ 10 ಲಕ್ಷ ರೂ. ಯೊಂದಿಗೆ ಶೋರೂಮ್ಗೆ ಮರಳಿದ್ದ. ಆಕ್ರೋಶಗೊಂಡಿದ್ದ ರೈತನ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿತ್ತು.
ಇನ್ನೂ ಟ್ವಿಟ್ಟರ್ನಲ್ಲಿ ಆನಂದ್ ಮಹಿಂದ್ರಾ ಅವರನ್ನು ಟ್ಯಾಗ್ ಮಾಡಿರುವ ಸಾವಿರಾರು ಮಂದಿ ಸೇಲ್ಸ್ ಮ್ಯಾನ್ ನನ್ನ ಕೂಡಲೇ ಅಮಾನತುಗೊಳಿಸಿ ನಿರ್ದಿಷ್ಟ ಕ್ರಮ ಕೈಗೊಳ್ಳುವಂತೆ ಟ್ವೀಟ್ ಮಾಡಿದ್ದಾರೆ.
Anand Mahindra Reaction on Tumkuru Show room incident, A farmer had gone to a car showroom to buy a vehicle when he was sent sneering by the staff. The customer, who was humiliated, paid Rs 10 lakh in one hour. He had taken it away.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am