ಬ್ರೇಕಿಂಗ್ ನ್ಯೂಸ್
23-01-22 01:27 pm HK Desk news ದೇಶ - ವಿದೇಶ
ಕಾಸರಗೋಡು, ಜ.23 : ಕೊಡುಗೈ ದಾನಿ, ಸಮಾಜಸೇವಕ, ಪರೋಪಕಾರವೇ ತನ್ನುಸಿರು ಎಂದು ಜೀವನದುದ್ದಕ್ಕೂ ಬಾಳಿದ್ದ ಸಾಯಿರಾಂ ಭಟ್ ಎಂದೇ ಹೆಸರಾಗಿದ್ದ ಕಿಳಿಂಗಾರು ಗೋಪಾಲಕೃಷ್ಣ ಭಟ್(85) ಶನಿವಾರ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಸತ್ಯಸಾಯಿ ಬಾಬಾ ಅವರ ಭಕ್ತರಾಗಿದ್ದ ಭಟ್ಟರು, ಸಾಯಿಬಾಬಾ ರೀತಿಯಲ್ಲೇ ಬಡವರು, ದೀನರಿಗೆ ಧರ್ಮ, ಭೇದ ಇಲ್ಲದೆ ನೆರವಾಗಿದ್ದರು. ಕುಂಬಳೆ, ಕಿಳಿಂಗಾರಿನಲ್ಲಿ 265 ಮನೆಗಳನ್ನು ಉಚಿತವಾಗಿ ಬಡವರಿಗೆ ನಿರ್ಮಿಸಿಕೊಟ್ಟಿದ್ದಾರೆ. ಹಿಂದು, ಮುಸ್ಲಿಂ, ಕ್ರಿಸ್ತಿಯನ್ ಎಂಬ ಭೇದ ಇಲ್ಲದೆ ಅಶಕ್ತರನ್ನು ಗುರುತಿಸಿ ಮನೆಗಳನ್ನು ದಾನ ಮಾಡಿದ್ದಾರೆ. ಪರಿಶಿಷ್ಟ ವರ್ಗದ ಅದೆಷ್ಟೋ ಮಂದಿ ಕಿಳಿಂಗಾರು ಭಟ್ಟರ ಆಶ್ರಯದಲ್ಲಿ ಸೂರು ಕಟ್ಟಿಕೊಂಡಿದ್ದಾರೆ.
ಕಿಳಿಂಗಾರಿನಲ್ಲಿ ಸತ್ಯಸಾಯಿ ಮಂದಿರವನ್ನು ಕಟ್ಟಿದ್ದ ಅಲ್ಲಿಯೇ ಪುಟ್ಟಪರ್ತಿಯ ರೀತಿಯಲ್ಲಿ ಬಾಬಾರ ಆರಾಧನೆ ಮಾಡುತ್ತಿದ್ದರು. ಅಶಕ್ತರಿಗಾಗಿ ಉಚಿತ ಆರೋಗ್ಯ ಶಿಬಿರಗಳನ್ನು ನಡೆಸುತ್ತಿದ್ದ ಸಾಯಿರಾಂ ಭಟ್ಟರು, ಅದರಿಂದಾಗಿಯೇ ಕಾಸರಗೋಡು ಜಿಲ್ಲೆಯಲ್ಲಿ ಜನಮೆಚ್ಚುಗೆ ಪಡೆದಿದ್ದರು. ಇವರ ಆರೋಗ್ಯ ಶಿಬಿರಗಳಿಂದ ಸಾವಿರಾರು ಮಂದಿ ಬಡವರು ಸಂಕಷ್ಟದಿಂದ ಪಾರಾಗಿದ್ದಾರೆ. ಎಂಡೋ ಸಲ್ಫಾನ್ ಪೀಡಿತರ ಸಂಕಷ್ಟ ನೋಡಿ ಮರುಗಿದ ಭಟ್ಟರು, 25 ವರ್ಷಗಳ ಹಿಂದೆಯೇ ಅವರಿಗಾಗಿ ತನ್ನೂರಲ್ಲೇ ದೊಡ್ಡ ಆಸ್ಪತ್ರೆಗಳ ವೈದ್ಯರನ್ನು ಕರೆಸಿ ಉಚಿತ ಆರೋಗ್ಯ ಶಿಬಿರ ನಡೆಸುತ್ತಿದ್ದರು.
1996ರಿಂದ 2015ರ ವರೆಗೆ 933 ಆರೋಗ್ಯ ಶಿಬಿರಗಳನ್ನು ನಡೆಸಿದ್ದ ಭಟ್ಟರು, ಉಚಿತವಾಗಿಯೇ ಆರೈಕೆ, ಚಿಕಿತ್ಸೆ, ಔಷಧಿಯನ್ನು ನೀಡುವಂತೆ ವ್ಯವಸ್ಥೆ ಮಾಡಿದ್ದರು. ಲಕ್ಷಾಂತರ ಮಂದಿಗೆ ಉಚಿತವಾಗಿ ವೈದ್ಯಕೀಯ ನೆರವು ಒದಗಿಸಿದ್ದು ಅಪರೂಪದ ಮಾನವೀಯ ಸೇವೆಯಾಗಿತ್ತು. 1937ರಲ್ಲಿ ನೀರ್ಚಾಲು ಸಮೀಪದ ಕಿಳಿಂಗಾರಿನ ಸಾಮಾನ್ಯ ಕುಟುಂಬದಲ್ಲಿ ಜನಿಸಿದ್ದ ಗೋಪಾಲಕೃಷ್ಣ ಭಟ್ಟರು, ಆರಂಭದಲ್ಲಿ ತಾಲೀಮು ತರಬೇತುದಾರರಾಗಿದ್ದರು. ಆನಂತರ ಸ್ಥಳೀಯವಾಗಿ ಬಸ್ ಗಳನ್ನು ಹಾಕಿಸಿ, ಜನ ಸೇವೆಗೆ ಮುಂದಾಗಿದ್ದರು.
ಆನಂತರ ಕೃಷಿಯ ಜೊತೆಗೆ ಸಮಾಜ ಸೇವೆಗೆ ಮುಂದಾಗಿದ್ದರು. ಬಂಡವರು, ದೀನರ ಸ್ಥಿತಿ ನೋಡಿ ಮರುಗುತ್ತಿದ್ದರು. ಅನಾರೋಗ್ಯ ಪೀಡಿತರು, ನಿರುದ್ಯೋಗದಿಂದ ಸಮಾಜದಲ್ಲಿ ಹಾಳಾಗುತ್ತಿದ್ದವರನ್ನು, ಮನೆ ಇಲ್ಲದೆ ಸಂಕಷ್ಟ ಪಡುತ್ತಿದ್ದವರ ಸಹಾಯಕ್ಕೆ ಮುಂದಾಗಿದ್ದರು. ಪ್ರತಿ ಆರೋಗ್ಯ ಶಿಬಿರಗಳಲ್ಲಿ 700ಕ್ಕೂ ಹೆಚ್ಚು ಜನರು ಪಾಲ್ಗೊಂಡು ಸೇವೆ ಪಡೆಯುತ್ತಿದ್ದರು. ಗೋಪಾಲಕೃಷ್ಣ ಭಟ್, ಪತ್ನಿ ಶಾರದಾ ಭಟ್, ಪುತ್ರ ಕೆ.ಎನ್. ಕೃಷ್ಣ ಭಟ್ ಸೇರಿದಂತೆ ಪುತ್ರಿ, ಮೊಮ್ಮಕ್ಕಳು, ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
KASARAGOD, Sairam Bhat, who made houses for the homeless and created livelihood opportunities for the poor, passed away at 85. Bhat, arguably the most revered and loved person in Badiadka panchayat, died in his sleep around 11:30 am on Saturday, said his son and panchayat member KN Krishna Bhat. He is survived by his son, and two daughters B Shyamala and B Vasanthi.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am