ಬ್ರೇಕಿಂಗ್ ನ್ಯೂಸ್
22-01-22 10:29 pm HK Desk news ದೇಶ - ವಿದೇಶ
ನವದೆಹಲಿ, ಜ.22 : ಕೇಂದ್ರ ಸರಕಾರ ಹೊಸತಾಗಿ ಸೋಶಿಯಲ್ ಮೀಡಿಯಾ ನೀತಿಸಂಹಿತೆ ಜಾರಿಗೊಳಿಸಿದ ತಿಂಗಳ ಅಂತರದಲ್ಲೇ ದೇಶದಲ್ಲಿ ದ್ವೇಷ ಹರಡುತ್ತಿದ್ದ ಯೂಟ್ಯೂಬ್, ವೆಬ್ ಸೈಟ್ ಸೇರಿ 35 ಯೂಟ್ಯೂಬ್ ಮಾಧ್ಯಮಗಳನ್ನು ಬ್ಲಾಕ್ ಮಾಡಿದೆ. ಇವು ಪಾಕಿಸ್ಥಾನದ ಮೂಲದಿಂದ ಭಾರತದಲ್ಲಿ ದೇಶ ವಿರೋಧಿ ಭಾವನೆ ಹರಡುವ ರೀತಿ ಕಾರ್ಯಾಚರಿಸುತ್ತಿದ್ದವು. ಇವು ಭಾರತ ವಿರೋಧಿ ವಿಚಾರಗಳನ್ನು ಹರಡುತ್ತಿದ್ದ ಬಗ್ಗೆ ಗುಪ್ತಚರ ಸಂಸ್ಥೆ ಸರಕಾರಕ್ಕೆ ವರದಿ ಮಾಡಿತ್ತು.
ಡಿಜಿಟಲ್ ಮೀಡಿಯಾದ ಮೂಲಕ ಈ ಚಾನೆಲ್ ಗಳು ಭಾರತದಲ್ಲಿ 100 ಕೋಟಿ ಜನರನ್ನು ತಲುಪುತ್ತಿದ್ದವು ಎನ್ನುವ ಮಾಹಿತಿಯನ್ನು ಐಟಿ ಸಚಿವಾಲಯವು ನೀಡಿದೆ. ಇದರ ಜೊತೆಗೆ ಎರಡು ವೆಬ್ ಸೈಟ್, ಎರಡು ಟ್ವಿಟರ್ ಖಾತೆ, ಎರಡು ಇನ್ ಸ್ಟಾ ಗ್ರಾಮ್ ಖಾತೆಗಳನ್ನೂ ಬ್ಲಾಕ್ ಮಾಡಲಾಗಿದೆ.
ಯೂಟ್ಯೂಬ್ ಮತ್ತಿತರ ಸೋಶಿಯಲ್ ಮೀಡಿಯಾಗಳ ಮೇಲೆ ಗುಪ್ತಚರ ಸಂಸ್ಥೆ ನಿಗಾ ಇಟ್ಟಿದ್ದು ಇದರ ಬಗ್ಗೆ ಕೇಂದ್ರ ಐಟಿ ಸಚಿವಾಲಯಕ್ಕೆ ಮಾಹಿತಿ ನೀಡಿತ್ತು. ಅದರಂತೆ, ಸಚಿವಾಲಯದಿಂದ ಐದು ಪ್ರತ್ಯೇಕ ಆದೇಶಗಳನ್ನು ಹೊರಡಿಸಿ ಚಾನೆಲ್ ಗಳನ್ನ ಬಂದ್ ಮಾಡಲಾಗಿದೆ. ಬ್ಲಾಕ್ ಆಗಿರುವ 35 ಖಾತೆಗಳು ಕೂಡ ಪಾಕಿಸ್ಥಾನದಿಂದಲೇ ಪ್ರಸಾರ ಆಗುತ್ತಿದ್ದವು. ನಾಲ್ಕು ಪ್ರತ್ಯೇಕ ನೆಟ್ವರ್ಕ್ ಗಳು ಇದರ ಹಿಂದೆ ಕೆಲಸ ಮಾಡುತ್ತಿದ್ದವು. ಅಪ್ನಾ ದುನಿಯಾ ನೆಟ್ವರ್ಕ್ ಎನ್ನುವ ಜಾಲದಡಿ 14 ಯೂಟ್ಯೂಬ್ ಚಾನೆಲ್, ತಲ್ಹಾ ಫಿಲ್ಮ್ಸ್ ನೆಟ್ವರ್ಕ್ 13 ಚಾನೆಲ್ ಗಳನ್ನು ಹೊಂದಿದ್ದವು. ಈ ಎಲ್ಲ ತಾಣಗಳಲ್ಲಿಯೂ ಭಾರತ ವಿರೋಧಿ ಮತ್ತು ಸುಳ್ಳು ಸುದ್ದಿಗಳನ್ನು ಹರಡುವುದೇ ಗುರಿಯಾಗಿತ್ತು.
ಈ ಎಲ್ಲ ನೆಟ್ವರ್ಕ್ ಜಾಲದಲ್ಲಿ ಸಾಮಾನ್ಯವಾಗಿ ಒಂದೇ ರೀತಿಯ ಹ್ಯಾಷ್ ಟ್ಯಾಗ್, ಒಂದೇ ರೀತಿಯ ಫಾಂಟ್, ಎಡಿಟಿಂಗ್ ಸ್ಟೈಲ್ ಹೊಂದಿದ್ದವು. ಕೆಲವದರಲ್ಲಿ ಪಾಕಿಸ್ಥಾನಿ ಟಿವಿ ಚಾನೆಲ್ ಗಳ ಆಂಕರ್ ಗಳು ಕೂಡ ಕಾಣಿಸಿಕೊಳ್ಳುತ್ತಿದ್ದರು. ಭಾರತದ ವೀಕ್ಷಕರನ್ನು ಗುರಿಯಾಗಿಸ್ಕೊಂಡು ಭಾರತದ ಬಗ್ಗೆಯೇ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದರು. ಭಾರತದಲ್ಲಿ ಧರ್ಮದ ಆಧಾರದಲ್ಲಿ ಪ್ರತ್ಯೇಕತಾ ಭಾವನೆ ಹಬ್ಬುವುದು, ಸಮಾಜದಲ್ಲಿ ದ್ವೇಷ ಹರಡುವ ರೀತಿ ಸುದ್ದಿಗಳ ನಿರೂಪಣೆ ಮಾಡುತ್ತಿದ್ದರು. ಕೆಲವು ಚಾನೆಲ್ ಗಳಿಗೆ ದೇಶದಲ್ಲಿ 1.2 ಕೋಟಿ ಸಬ್ ಸ್ಕ್ರೈಬ್ ಇದ್ದವು. ಈ ಮೂಲಕ ಕೆಲವು ಚಾನೆಲ್ಗಳು ದೇಶದ 130 ಕೋಟಿ ಜನರನ್ನು ತಲುಪುತ್ತಿದ್ದವು. ಇದು ದೇಶದ ವಿರುದ್ಧ ಪರೋಕ್ಷ ಯುದ್ಧ ಸಾರಿದಂತೆ ಎಂದು ಐಟಿ ಸಚಿವಾಲಯದ ಸೆಕ್ರಟರಿ ಅಪೂರ್ವ ಚಂದ್ರ ತಿಳಿಸಿದ್ದಾರೆ.
ಕಳೆದ ಡಿಸೆಂಬರ್ ತಿಂಗಳಲ್ಲಿ 20 ಯೂಟ್ಯೂಬ್ ಚಾನೆಲ್ ಗಳನ್ನು ಬಂದ್ ಮಾಡಲಾಗಿತ್ತು. ಇದೀಗ ಮತ್ತೆ 35 ಚಾನೆಲ್ ಬಂದ್ ಮಾಡಲಾಗಿದೆ. ಇವುಗಳಲ್ಲಿ ಜಮ್ಮು ಕಾಶ್ಮೀರದ ವಿಚಾರಗಳು, ಭಾರತೀಯ ಸೇನಾಪಡೆ, ಪ್ರತ್ಯೇಕತಾ ವಾದಿಗಳ ಅಜೆಂಡಾ, ಇತ್ತೀಚೆಗೆ ನಿಧನರಾದ ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಬಗ್ಗೆ ಇಲ್ಲ ಸಲ್ಲದ ವಿಚಾರಗಳನ್ನು ಪ್ರಸಾರ ಮಾಡಲಾಗುತ್ತಿತ್ತು. ಇವೆಲ್ಲ ಗಂಭೀರ ವಿಚಾರಗಳಾಗಿದ್ದು, ಈ ಬಗ್ಗೆ ಗುಪ್ತಚರ ಏಜೆನ್ಸಿಗಳು ದೇಶಾದ್ಯಂತ ನಿಗಾ ಇಟ್ಟಿವೆ. ಈಗಷ್ಟೇ ಈ ರೀತಿಯ ಪ್ರಕ್ರಿಯೆ ಆರಂಭಗೊಂಡಿದ್ದು, ಭವಿಷ್ಯದಲ್ಲಿ ಹಲವಾರು ವೆಬ್ ಚಾನೆಲ್ ಗಳು ಬಂದ್ ಆಗೋದು ಖಚಿತ. ಸಾರ್ವಜನಿಕರು ದೇಶ ವಿರೋಧಿ ವಿಚಾರಗಳನ್ನು ಹಬ್ಬುವ ಸೋಶಿಯಲ್ ಮೀಡಿಯಾ ತಾಣಗಳ ಬಗ್ಗೆ ಸಚಿವಾಲಯಕ್ಕೆ ಮಾಹಿತಿ ನೀಡಬಹುದು ಎಂದು ಅಪೂರ್ವ ಚಂದ್ರ ತಿಳಿಸಿದ್ದಾರೆ.
A month after it invoked new powers under the Information Technology (Intermediary Guidelines and Digital Media Ethics Code) Rules, 2021 to get 20 YouTube channels banned, the Information and Broadcasting Ministry on Friday said it has issued orders to ban 35 more channels on the online social media platform after receiving intelligence inputs against them.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am